ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಮೊಬೈಲ್ ಪ್ಲಾನ್‌ಗಳ ಮೇಲಿನ ಸುಂಕವನ್ನು ರಿಲಯನ್ಸ್ ಕಂಪನಿ ಹೆಚ್ಚಿಸಿದೆ. ಜುಲೈ 3ರಿಂದ ಪ್ರತಿ ರೀಚಾರ್ಜ್‌ಗಳ ಮೇಲೆ 20% ಸುಂಕ ಹೆಚ್ಚಳ ಮಾಡುವುದಾಗಿ ಜೂನ್ 27ರಂದು ರಿಲಯನ್ಸ್ ಘೋಷಿಸಿದೆ.
ಮೊಬೈಲ್ ರೀಚಾರ್ಜ್ ದರಗಳಲ್ಲಿ ಗಣನೀಯ ಏರಿಕೆಯಾಗಿದ್ದರೂ, ಕರೆ ನಿಮಿಷಗಳು, ಡೇಟಾ, ಉಚಿತ OTT ಚಂದಾದಾರಿಕೆಯಂತಹ ಪ್ರಯೋಜನೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಅವೆಲ್ಲವೂ ಹಿಂದಿನಂತೆಯೇ ಮುಂದುವರೆಯುತ್ತವೆ ಎಂದು ರಿಲಯನ್ಸ್ ಹೇಳಿದೆ.
ರಿಲಯನ್ಸ್ ಜಿಯೋ ಸುಮಾರು ಎರಡೂವರೆ ವರ್ಷಗಳ ನಂತರ ಮೊಬೈಲ್ ರೀಚಾರ್ಜ್ ಪ್ಲಾನ್‌ಗಳಲ್ಲಿ ಏರಿಕೆ ಮಾಡುವುದಾಗಿ ಘೋಷಿಸಿದೆ. ಹೊಸ ಘೋಷಣೆಯಿಂದಾಗಿ, 666 ರೂ.ಗಳ ಅತ್ಯಂತ ಜನಪ್ರಿಯ ರೀಚಾರ್ಜ್ ಪ್ಲಾನ್ 799 ರೂ.ಗಳಿಗೆ ಏರಿಕೆಯಾಗಿದೆ.
ಉದ್ಯಮದಲ್ಲಿ ಹೊಸ ಆವಿಷ್ಕಾರ ನಡೆಸಲು ಮತ್ತು 5G ಹಾಗೂ ಕೃತಕ ಬುದ್ಧಿಮತ್ತೆಯ ಮೇಲೆ ಹೂಡಿಕೆಯನ್ನು ಹೆಚ್ಚಿಸಲು ಈ ಬೆಲೆ ಏರಿಕೆಯು ಹೆಚ್ಚು ನೆರವಾಗಲಿದೆ ಎಂದು ರಿಲಯನ್ಸ್ ಹೇಳಿಕೊಂಡಿದೆ.
ಹೊಸ ಬೆಲೆಯಲ್ಲಿ ಜಿಯೋ ರೀಜಾರ್ಜ್ ಪ್ಲಾನ್ ಪಟ್ಟಿ ಹೀಗಿದೆ;
ಪ್ರಸ್ತುತ ಪ್ಲಾನ್ |
ಹೊಸ ಪ್ಲಾನ್ (ಶುಲ್ಕ ಏರಿಕೆ ಬಳಿಕ) |
ಅವಧಿ | ಪ್ರಯೋಜನೆಗಳು |
Monthly | |||
155 | 189 | 28 | Unlimited voice and SMS, 2 GB data |
209 | 249 | 28 | Unlimited voice and SMS, 1GB/day |
239 | 299 | 28 | Unlimited voice and SMS, 1.5 GB/day |
299 | 349 | 28 | Unlimited voice and SMS, 2GB/day |
349 | 399 | 28 | Unlimited voice and SMS, 2.5 GB/day |
399 | 449 | 28 | Unlimited voice and SMS, 3 GB/day |
Bi-monthly | |||
479 | 579 | 56 | Unlimited voice and SMS, 1.5 GB/day |
533 | 629 | 56 | Unlimited voice and SMS, 2GB/day |
3 Months Plan | |||
395 | 479 | 84 | Unlimited voice and SMS, 6 GB |
666 | 799 | 84 | Unlimited voice and SMS, 1.5 GB/day |
719 | 859 | 84 | Unlimited voice and SMS, 2GB/day |
999 | 1199 | 84 | Unlimited voice and SMS, 3 GB/day |
Annual | |||
1559 | 1899 | 336 | Unlimited voice and SMS, 24 GB |
2999 | 3599 | 365 | Unlimited voice and SMS, 2.5 GB/day |
Postpaid Plans | |||
299 | 349 | bill cycle | Unlimited voice and SMS, 30 GB |
399 | 449 | bill cycle | Unlimited voice and SMS, 75 GB |