ʼರನ್ನಿಂಗ್ ಶವರ್, ಒದ್ದೆ ಟವೆಲ್ʼ; ದೆಹಲಿ ಅಗ್ನಿ ದುರಂತದಲ್ಲಿ ನೈಜೀರಿಯಾ ದಂಪತಿ ಪಾರಾಗಿದ್ದು ಹೇಗೆ?

Date:

ದೆಹಲಿಯ ಹೌಜ್ ರಾಣಿಯ ‘ಫ್ಲರಿಶ್ ಸ್ಟೇಸ್’ (Flourish Stays) ಬೆಡ್ ಅಂಡ್ ಬ್ರೇಕ್‌ಫಾಸ್ಟ್ ಹೋಟೆಲ್‌ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಶಾರ್ಟ್ ಸರ್ಕ್ಯೂಟ್ ಅಗ್ನಿ ಅನಾಹುತದಲ್ಲಿ 21 ಜನ ಸಜೀವ ದಹನವಾಗಿದ್ದಾರೆ. ಈ ಮೃತ್ಯುಕೂಪದಿಂದ ನೈಜೀರಿಯಾ ದಂಪತಿ ವಿಡಿಯೋವೊಂದರಲ್ಲಿ ನೋಡಿದ್ದ ಫೈರ್ ಡ್ರಿಲ್ ಟಿಪ್ಸ್ ಬಳಸಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ.

- Advertisement -

ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಬದುಕುಳಿದ ನೈಜೀರಿಯಾ ದಂಪತಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ರೂಮಿನ ತುಂಬೆಲ್ಲಾ ದಟ್ಟ ಹೊಗೆ ಆವರಿಸಿತ್ತು. ಆ ಸಮಯದಲ್ಲಿ ಗಾಬರಿಯಾಗದೇ, ತಾವು ಈ ಹಿಂದೆ ನೋಡಿದ್ದ “ಬೆಂಕಿಯ ಅನಾಹುತದಿಂದ ಬದುಕುಳಿಯುವುದು ಹೇಗೆ?” ಎಂಬ ವಿಡಿಯೋವನ್ನು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಬೆಂಕಿ ಬಿದ್ದಾಗ ಹೊಗೆ ಯಾವಾಗಲೂ ಕೋಣೆಯ ಮೇಲ್ಭಾಗಕ್ಕೆ ಏರುತ್ತದೆ ಮತ್ತು ಕೆಳಭಾಗದಲ್ಲಿ ಆಮ್ಲಜನಕ ಇರುತ್ತದೆ ಎಂಬ ವೈಜ್ಞಾನಿಕ ಸತ್ಯ ಅವರಿಗೆ ನೆನಪಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ದಂಪತಿ ಕೆಲ ಟ್ರಿಕ್ಸ್‌ ಫಾಲೋ ಮಾಡಿದ್ದಾರೆ.

ದಂಪತಿ ತಕ್ಷಣವೇ ಬಾತ್ ರೂಮ್ ಒಳಗೆ ನುಗ್ಗಿದ್ದಾರೆ. ಬಾತ್ ರೂಮ್‌ನ ಶವರ್ ಮತ್ತು ನೀರಿನ ನಲ್ಲಿಗಳನ್ನು ಪೂರ್ತಿಯಾಗಿ ಆನ್ ಮಾಡಿದ್ದಾರೆ. ನೆಲದ ಮೇಲೆ ಟವೆಲ್‌ಗಳನ್ನು ಹರಡಿ ಅವು ಪೂರ್ತಿ ಒದ್ದೆಯಾಗುವಂತೆ ಮಾಡಿದ್ದಾರೆ. ಒದ್ದೆ ಟವೆಲ್ ಮೇಲೆ ದಟ್ಟ ಹೊಗೆ ತಾಗದಂತೆ ತೀರಾ ಕೆಳಮಟ್ಟದಲ್ಲಿ ಅಂದರೆ ನೆಲಕ್ಕೆ ಅಂಟಿಕೊಂಡಂತೆ ಮಲಗಿದ್ದಾರೆ.

ರಕ್ಷಕ ಸಿಬ್ಬಂದಿ ಬರುವವರೆಗೂ ದಂಪತಿ ಇದೇ ಸ್ಥಿತಿಯಲ್ಲಿದ್ದರು. ನೀರಿನ ಶವರ್ ಮತ್ತು ಒದ್ದೆ ಟವೆಲ್ ಕೋಣೆಯ ತಾಪಮಾನವನ್ನು ಕಡಿಮೆ ಮಾಡಿದ್ದಲ್ಲದೆ, ದಟ್ಟ ಹೊಗೆ ಅವರ ಶ್ವಾಸಕೋಶಕ್ಕೆ ಸೇರದಂತೆ ತಡೆದಿದೆ.

“ಈ ಅಗ್ನಿ ಅವಘಡದಲ್ಲಿ ಮೃತಪಟ್ಟ ಬಹುತೇಕರು ಬೆಂಕಿಯಿಂದ ಸುಟ್ಟು ಸತ್ತಿಲ್ಲ, ಬದಲಿಗೆ ದಟ್ಟ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಆದರೆ ಈ ನೈಜೀರಿಯಾ ದಂಪತಿಯ ಸಮಯಪ್ರಜ್ಞೆ ಅವರನ್ನು ರಕ್ಷಿಸಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯ ರೆಸ್ಟೋರೆಂಟ್‌ನಲ್ಲಿ ಭಾರಿ ಅಗ್ನಿ ದುರಂತ: 21 ಮಂದಿ ಸಜೀವ ದಹನ

ಮೃತಪಟ್ಟ 21 ಜನರಲ್ಲಿ 13 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ. ಇವರೆಲ್ಲರೂ ಭಾರತಕ್ಕೆ ಚಿಕಿತ್ಸೆಗಾಗಿ ಬಂದಿದ್ದ ಅಥವಾ ರೋಗಿಗಳ ಜೊತೆ ಬಂದಿದ್ದ ‘ಮೆಡಿಕಲ್ ಟೂರಿಸ್ಟ್ಸ್’ ಆಗಿದ್ದಾರೆ. ವಿದೇಶಾಂಗ ಸಚಿವಾಲಯದ ಪ್ರಕಾರ ಮೃತರ ಪೈಕಿ ನೈಜೀರಿಯಾದ ಐದು, ಕಿರ್ಗಿಸ್ತಾನ್‌ನ ನಾಲ್ಕು, ಮತ್ತು ಮೊಜಾಂಬಿಕ್, ಲೈಬೀರಿಯಾ, ಉಜ್ಬೇಕಿಸ್ತಾನ್, ಬಾಂಗ್ಲಾದೇಶ, ಕಾಂಗೋ ಹಾಗೂ ಇರಾಕ್ ದೇಶದ ತಲಾ ಒಬ್ಬರು ಪ್ರಜೆಗಳು ಸೇರಿದ್ದಾರೆ. ಮೃತದೇಹಗಳ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

ದುರಂತ ನಡೆದ ಕಟ್ಟಡದಲ್ಲಿ ಯಾವುದೇ ತುರ್ತು ನಿರ್ಗಮನದ ವ್ಯವಸ್ಥೆ ಇರಲಿಲ್ಲ ಮತ್ತು ಗಾಳಿಯಾಡಲು ಸರಿಯಾದ ವೆಂಟಿಲೇಶನ್ ಕೂಡ ಇರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ನಿಯಮ ಬಾಹಿರವಾಗಿ ಕಟ್ಟಡ ನಿರ್ಮಿಸಿರುವ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ವಿದೇಶಿ ಪ್ರವಾಸದ ದಾಖಲೆ ಬಹಿರಂಗಕ್ಕೆ ದೆಹಲಿ ಹೈಕೋರ್ಟ್ ನಕಾರ

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ...

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ...

ಈ ದಿನ ಸಂಪಾದಕೀಯ | ʼಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದ್ಯಾ ಈ ಪ್ರಪಂಚದಲ್ಲಿ?ʼ

ಸೌದಿ ಅರೇಬಿಯಾದ ಮರಣದಂಡನೆ ಪ್ರಕರಣದಿಂದ ಚಿಂತನೆಗೆ ಹಚ್ಚುವ ಸಂಗತಿ ಎಂದರೆ, ಧಾರ್ಮಿಕ...

ಶಿವಮೊಗ್ಗ ಜಂಬೂ ಸವಾರಿ ವೇಳೆ ಭಾರೀ ಅನಾಹುತ: ಅಂಬಾರಿ ಹೊತ್ತು ಅಡ್ಡಾದಿಡ್ಡಿ ಓಡಿದ ಆನೆ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ಸಿಕ್ಕು ಅಲ್ಲಿನ...