ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶಕ್ಕೆ ಅನುಗುಣವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಚುನಾವಣಾ ಬಾಂಡ್‌ಗಳ ಬಗ್ಗೆ ‘ಡೇಟಾ’ವನ್ನು ಮಂಗಳವಾರ ಸಂಜೆ ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ನ್ಯಾಯಾಲಯದ ಆದೇಶದಂತೆ ಶುಕ್ರವಾರ ಸಂಜೆ 5 ಗಂಟೆಯೊಳಗೆ ಚುನಾವಣಾ ಆಯೋಗವು ಡೇಟಾವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.
ಚುನಾವಣಾ ಬಾಂಡ್‌ಗಳ ಡೇಟಾವನ್ನು ಚುನಾವಣಾ ಆಯೋಗಕ್ಕೆ ಎಸ್‌ಬಿಐ ಸಲ್ಲಿಸಿದ್ದರೂ, ಅದರ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ನ್ಯಾಯಾಲಯದ ಆದೇಶವನ್ನು ದೃಢೀಕರಿಸುವ ಅಫಿಡವಿಟ್‌ಅನ್ನು ಇನ್ನೂ ಸಲ್ಲಿಸಿಲ್ಲ ಎಂದು ವರದಿಯಾಗಿದೆ.
ಎಸ್‌ಬಿಐ ಅಫಿಡವಿಟ್ಅನ್ನು ಸಿದ್ದಪಿಡಿಸದೆ. ಆದರೆ, ಇನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ ಎಂದು ಎಸ್‌ಬಿಐ ಮೂಲಗಳು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಚುನಾವಣಾ ಬಾಂಡ್ ಪ್ರಕರಣದ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್, ಮಾರ್ಚ್ 6ರೊಳಗೆ ಬಾಂಡ್‌ಗಳ ಅಂಕಿಅಂಶವನ್ನು ಚುನಾವಣಾ ಆಯೋಗಕ್ಕೆ ಎಸ್‌ಬಿಐ ಅಲ್ಲಿಸಬೇಕು. ಅವುಗಳನ್ನು ಪರಿಶೀಲಿಸಿ ಮಾರ್ಚ್ 13ರೊಳಗೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪ್ರಕಟಿಸಬೇಕು ಎಂದು ಹೇಳಿತ್ತು.
ಆದರೆ, ಗಡುವನ್ನು ಜೂನ್ 30ವರೆಗೆ ವಿಸ್ತರಿಸುವಂತೆ ಮೇಲ್ಮನವಿ ಸಲ್ಲಿಸಿದ್ದ ಎಸ್‌ಬಿಐ, ಬಾಂಡ್‌ಗಳ ಎಲ್ಲ ಡೇಟಾವನ್ನು ಸಂಗ್ರಹಿಸಲು, ಕ್ರಾಸ್-ಚೆಕ್ ಮಾಡಲು ಮತ್ತು ಒಟ್ಟುಗೂಡಿಸಲು ಸಮಬೇಕೆಂದು ವಾದಿಸಿತ್ತು.
ಈ ಸುದ್ದಿ ಓದಿದ್ದೀರಾ?: ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸಿಎಎ ರದ್ದು: ಶಶಿ ತರೂರ್
ಮನವಿಯನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಸೋಮವಾರ ಎಸ್‌ಬಿಐಅನ್ನು ತರಾಟೆಗೆ ತೆಗೆದುಕೊಂಡಿತ್ತು. “ಈಗಾಗಲೇ ಎಸ್‌ಬಿಐನ ಮುಂಬೈ ಶಾಖೆಯಲ್ಲಿ ದಾನಿಗಳ ವಿವರ ಲಭ್ಯವಿದೆ. ಆ ಮಾಹಿತಿಗಳ ಕವರ್‌ಅನ್ನು ಬ್ಯಾಂಕ್ ತೆರೆಯಬೇಕು. ಸಂಗ್ರಹಿಸಿ, ಮಾಹಿತಿ ನೀಡಬೇಕು. ನಾವು ಹೊಂದಾಣಿಕೆ ಕೆಲಸ ಮಾಡಲು ಹೇಳಿಲ್ಲ. ಸರಳವಾಗಿ ಮಾಹಿತಿಯನ್ನು ಬಹಿರಂಗಪಡಿಸಲು ಕೇಳಿದ್ದೇವೆ” ಎಂದು ಹೇಳಿತ್ತು.
ಮಂಗಳವಾರವೇ (ಮಾರ್ಚ್ 12) ಮಾಹಿತಿಯನ್ನು ನೀಡಬೇಕು. ಮಾರ್ಚ್ 15ರಂದು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ನ್ಯಾಯಪೀಠ ಸೂಚಿಸಿದ ಟೈಮ್‌ಲೈನ್‌ಗಳ ಮೂಲಕ ನಿರ್ದೇಶನಗಳನ್ನು ಅನುಸರಿಸದಿದ್ದರೆ, ನ್ಯಾಯಾಲಯವು ಎಸ್‌ಬಿಐ ವಿರುದ್ಧ ಕ್ರಮಕ್ಕೆ ಮುಂದಾಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿತ್ತು.