ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕದ ಹೇರಿಕೆಗೆ ಭಾರತ ಸೇರಿದಂತೆ ಜಗತ್ತಿನಾದ್ಯಂತ ಷೇರುಪೇಟೆ ತಲ್ಲಣಗೊಂಡಿದೆ. ಇಂದು (ಏ.07) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 3,000ಕ್ಕೂ ಅಧಿಕ ಅಂಕಗಳಷ್ಟು ಕುಸಿತ ಕಂಡಿದ್ದು ಹೂಡಿಕೆದಾರರು ಭಾರೀ ನಷ್ಟ ಅನುಭವಿಸುವಂತಾಗಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ 3,150.12 ಅಂಕಗಳಷ್ಟು ಕುಸಿತದೊಂದಿಗೆ 72,206.88 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ನಿಫ್ಟಿ 1010.95 ಅಂಕಗಳಷ್ಟು ಕುಸಿತದೊಂದಿಗೆ 21,893.50 ಅಂಕಗಳ ಮಟ್ಟಕ್ಕೆ ಇಳಿಕೆಯಾಗಿದೆ.
ಏಪ್ರಿಲ್ 4ರಂದು ವಿದೇಶಿ ಇನ್ಸ್ ಟಿಟ್ಯೂಷನಲ್ ಮೌಲ್ಯದ ಹೂಡಿಕೆದಾರರು 3,483.98 ಕೋಟಿ ರೂ. ಮೌಲ್ಯದ ಭಾರತೀಯ ಈಕ್ವಿಟಿಗಳನ್ನು ಮಾರಾಟ ಮಾಡಿದ್ದರು. ಅದೇ ರೀತಿ ದೇಶೀಯ ಇನ್ಸ್ ಟಿಟ್ಯೂಷನಲ್ ಹೂಡಿಕೆದಾರರು 1,720.32 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಇನ್‌ಸ್ಟಾ ಹೆಲ್ಪ್’ -ಗೃಹ ಕಾರ್ಮಿಕರನ್ನು ಮತ್ತಷ್ಟು ಅಭದ್ರತೆಗೆ ದೂಡುವ ಅಪಾಯ
ಷೇರುಪೇಟಿಯ ಸೂಚ್ಯಂಕ, ನಿಫ್ಟಿಯ ಭಾರಿ ಕುಸಿತದಿಂದ 19 ಲಕ್ಷ ಕೋಟಿ ಕರಗಿ ಹೋಗಿದೆ. ಟಾಟಾ ಸ್ಟೀಲ್, ಇನ್ಫೋಸಿಸ್, ಟಾಟಾ ಮೋಟಾರ್ಸ್, ಎಚ್‌ಸಿಎಲ್ ಟೆಕ್ ಮತ್ತು ಟೆಕ್ ಮಹೇಂದ್ರ ಷೇರು ಶೇ. 10 ರಷ್ಟು ಕುಸಿತಕಂಡಿದೆ.
ಜಾಗತಿಕ ಮಟ್ಟದಲ್ಲಿ ಚೀನಾ, ಜಪಾನ್ ಸೇರಿದಂತೆ ಹಲವು ದೇಶಗಳ ಷೇರುಪೇಟೆ ಸೂಚ್ಯಂಕ ಕೂಡ ಭಾರಿ ಕುಸಿತ ಕಂಡಿದೆ. ನೆಫ್ಟಿಯೂ ಕೂಡ ಇಳಿಕೆಯಾಗಿರುವುದರಿಂದ ಹೂಡಿಕೆದಾರರಿಗೆ ಸಾಕಷ್ಟು ನಷ್ಟವುಂಟಾಗಿದೆ.