ಕೈಗಾರಿಕಾ ಮತ್ತು ಸೇವಾ ವಲಯದಲ್ಲಿನ ಕ್ಷಿಪ್ರ ಬೆಳವಣಿಗೆಯಿಂದಾಗಿ 1990-91ರಲ್ಲಿ ಶೇ.35ರಷ್ಟಿದ್ದ ಭಾರತದ ಜಿಡಿಪಿಯಲ್ಲಿನ ಕೃಷಿ ಪಾಲು ಕಳೆದ 2022-23ರ ಹಣಕಾಸು ವರ್ಷದಲ್ಲಿ ಶೇ.15ಕ್ಕೆ ಕುಸಿದಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಮಾಹಿತಿ ನೀಡಿದೆ.
“ಆರ್ಥಿಕತೆಯ ಒಟ್ಟು ಮೌಲ್ಯ ವರ್ಧಿತ (ಜಿವಿಎ)ಯಲ್ಲಿ ಕೃಷಿಯ ಪಾಲು 1990-91 ರಲ್ಲಿ ಶೇ. 35 ರಿಂದ 2022-23 ರಲ್ಲಿ ಶೇ.15 ಕ್ಕೆ ಇಳಿದಿದೆ.
ಕೃಷಿ ಕುಸಿತವು ಜಿವಿಎಯಿಂದ ಆಗಿಲ್ಲ, ಆದರೆ ಕೈಗಾರಿಕಾ ಮತ್ತು ಸೇವಾ ವಲಯದ ಜಿವಿಎನ ತ್ವರಿತ ವಿಸ್ತರಣೆಯಿಂದ ಹೆಚ್ಚಳಗೊಂಡಿದೆ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
“ಬೆಳವಣಿಗೆಯ ಪರಿಭಾಷೆಯಲ್ಲಿ, ಕೃಷಿ ಮತ್ತು ಸಂಬಂಧಿತ ವಲಯವು ಕಳೆದ ಐದು ವರ್ಷಗಳಲ್ಲಿ ಸರಾಸರಿ ಶೇ. 4 ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಜಾಗತಿಕ ಅಂಶಕ್ಕೆ ಸಂಬಂಧಿಸಿದಂತೆ, ವಿಶ್ವದ ಜಿಡಿಪಿಯಲ್ಲಿ ಕೃಷಿಯ ಪಾಲು ದಶಕಗಳಿಂದ ಕುಸಿದಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಸುಮಾರು ಶೇ. 4 ರಷ್ಟಿದೆ” ಎಂದು ಸಚಿವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕೀಯ ಸಂಸ್ಕೃತಿಯನ್ನು ಅಧೋಗತಿಗೆ ತಳ್ಳುತ್ತಿರುವ ಬಿಜೆಪಿ ಅಂತಃಕಲಹ
“ಕೃಷಿಯ ಉತ್ಪಾದಕತೆಯನ್ನು ಹೆಚ್ಚಿಸಲು, ಸಂಪನ್ಮೂಲ ಬಳಕೆ ದಕ್ಷತೆಯನ್ನು ವೃದ್ಧಿಸುವುದು, ಸುಸ್ಥಿರ ಕೃಷಿ ಉತ್ತೇಜನ, ಮೂಲಸೌಕರ್ಯಗಳ ಬಲಪಡಿಸುವಿಕೆ ಮತ್ತು ರೈತರಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆಗಳು, ಸುಧಾರಣೆಗಳು ಮತ್ತು ನೀತಿಗಳನ್ನು ಅನುಷ್ಠಾನಗೊಳಿಸಿದೆ” ಎಂದು ಸಚಿವರು ಹೇಳಿದರು.
“ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಇದು ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ 6,000 ರೂಪಾಯಿಗಳನ್ನು ಒದಗಿಸುವ ಆದಾಯ ಬೆಂಬಲ ಯೋಜನೆಯಾಗಿದೆ. ನವೆಂಬರ್ 30, 2023 ರಂತೆ 11 ಕೋಟಿಗೂ ಹೆಚ್ಚು ರೈತರಿಗೆ ಇದುವರೆಗೆ ರೂ 2.81 ಲಕ್ಷ ಕೋಟಿಗಿಂತ ಹೆಚ್ಚು ಬಿಡುಗಡೆಗೊಳಿಸಲಾಗಿದೆ” ಅರ್ಜುನ್ ಮುಂಡಾ ಹೇಳಿದರು.