ನೋಡ ನೋಡುತ್ತಿದ್ದಂತೆ ಪುಣೆ ಮಹಾನಗರ ಪಾಲಿಕೆಗೆ ಸೇರಿದ ಭಾರೀ ತೂಕದ ಟ್ರಕ್‌ವೊಂದು ನೆಲದೊಳಗೆ ಮುಳುಗಿ ಹೋದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದ್ದು, ಸದ್ಯ ಇದರ ವಿಡಿಯೋ ವೈರಲ್ ಆಗಿದೆ.
ನಿಂತಿದ್ದ ಪುಣೆ ಮುನ್ಸಿಪಾಲಿಟಿಯ ನೀರಿನ ಟ್ಯಾಂಕರ್ ಒಂದು ಕೆಲವೇ ಸೆಕೆಂಡ್‌ಗಳಲ್ಲಿ ನೆಲದೊಳಗೆ ನಿರ್ಮಾಣವಾದ ಕುಳಿಯೊಳಕ್ಕೆ ಹೋಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಟ್ರಕ್‌ನೊಳಗಿದ್ದ ಚಾಲಕ ಹೊರಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಸದ್ಯ ದೊಡ್ಡ ಕುಳಿಯಲ್ಲಿ ಮಣ್ಣು ನೀರು ತುಂಬಿಕೊಂಡಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ಸ್ಥಳದಲ್ಲಿದ್ದ ಬೈಕ್ ಕೂಡಾ ಈ ಕುಳಿಯೊಳಕ್ಕೆ ಬಿದ್ದಿದೆ.
ಇದನ್ನು ಓದಿದ್ದೀರಾ? ಭಾರೀ ಮಳೆ | ಪುಣೆಯಲ್ಲಿ ನಾಲ್ವರು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪತನ
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುನ್ಸಿಪಾಲಿಟಿ ಅಧಿಕಾರಿಗಳು ದೌಡಾಯಿಸಿದ್ದು, ಎರಡು ಕ್ರೇನ್‌ಗಳ ಸಹಾಯದಿಂದ ಟ್ರಕ್ ಮತ್ತು ಬೈಕ್ ಅನ್ನು ಮೇಲಕ್ಕೆತ್ತಿದ್ದಾರೆ.
STORY | Pune: Sinkhole swallows up truck on post office premises
— Press Trust of India (@PTI_News) September 20, 2024
READ: https://t.co/IOomPRPV6F
VIDEO:
(Source: Third Party)
(Full video available on PTI Videos – https://t.co/n147TvqRQz) pic.twitter.com/L5ueHP1czn
ಸದ್ಯ ಘಟನೆಯ ಬಗ್ಗೆ ತನಿಖೆ ಆರಂಭವಾಗಿದೆ. ಈ ಟ್ರಕ್ ನೆಲದಲ್ಲಿ ಮುಳುಗಿದ ಜಾಗದಲ್ಲಿ ಈ ಹಿಂದೆ ಬಾವಿ ಇತ್ತು. ಬಳಿಕ ಬಾವಿಯನ್ನು ಮುಚ್ಚಿ ಅಲ್ಲಿಯೇ ಅಂಚೆ ಕಚೇರಿ ಕಟ್ಟಡಕ್ಕೆ ಹೋಗುವ ರಸ್ತೆಯಾಗಿ ಅದನ್ನು ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
VIDEO | Maharashtra: Officials recovered a bike that fell, along with a truck, into a sinkhole that opened in Pune's Budhwar Peth area earlier today.
— Press Trust of India (@PTI_News) September 20, 2024
(Full video available on PTI Videos – https://t.co/n147TvqRQz) pic.twitter.com/ufA2nrm0sT
