‘ಆರು ತಿಂಗಳ ಹಾಲೂಡಿಕೆಗೆ ಆರ್ಥಿಕ ಭದ್ರತೆ ಬೇಕು’; ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ ನೀಡಲು ಶಶಿ ತರೂರ್ ಆಗ್ರಹ

Date:

ದೇಶದಲ್ಲಿ ಆರು ತಿಂಗಳೊಳಗಿನ ಶಿಶುಗಳಿಗೆ ಸಂಪೂರ್ಣ ತಾಯಿಹಾಲು ನೀಡುವ ಪ್ರಮಾಣ ಕುಸಿದಿರುವ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಕಳವಳ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹೆರಿಗೆಯಾದ ಕೆಲವೇ ವಾರಗಳಲ್ಲಿ ಜೀವನೋಪಾಯಕ್ಕಾಗಿ ಮಹಿಳೆಯರು ಮತ್ತೆ ಕೆಲಸಕ್ಕೆ ಮರಳಬೇಕಾದ ಅನಿವಾರ್ಯತೆಯೇ ಈ ಕುಸಿತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಅವರು ಹೇಳಿದ್ದಾರೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ ಮತ್ತು ಉದ್ಯೋಗ ಭದ್ರತೆ ಕಲ್ಪಿಸುವ ಅಗತ್ಯವಿದೆ ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -

ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣಾ ದೇವಿ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ತರೂರ್‌ ಪೋಸ್ಟ್‌ ಮಾಡಿದ್ದಾರೆ. “ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–6 (NFHS-6) ದತ್ತಾಂಶದ ಪ್ರಕಾರ, ದೇಶದ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆಗಳ ಪ್ರಮಾಣ 90.6% ಏರಿಕೆಯಾಗಿದೆ. ಆದರೆ, ಆರು ತಿಂಗಳೊಳಗಿನ ಶಿಶುಗಳಿಗೆ ಸಂಪೂರ್ಣವಾಗಿ ತಾಯಿಹಾಲು ನೀಡುವ ಪ್ರಮಾಣ ಮಾತ್ರ 63.7%ನಿಂದ 55.8%ಗೆ ಕುಸಿದಿದೆ. ಗ್ರಾಮೀಣ ಪ್ರದೇಶಗಳು ಸೇರಿದಂತೆ ಉತ್ತರ ಪ್ರದೇಶ ಮತ್ತು ಹರಿಯಾಣದಂತಹ ಪ್ರಮುಖ ರಾಜ್ಯಗಳಲ್ಲಿ ಈ ಕುಸಿತ ಹೆಚ್ಚು ತೀವ್ರವಾಗಿದೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ...

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕಲೆ ಮತ್ತೊಮ್ಮೆ ಅತ್ಯಂತ ಸುಂದರವಾಗಿ ಸಾಬೀತುಪಡಿಸಿದೆ. ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು 'ಮಹಿಷಾಸುರ...

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ...

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ ಮತದಾನ ಅಕ್ಟೋಬರ್ 23ರಂದು ನಡೆಯಲಿದೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆರಿಸಲು ಪ್ರಾಶಸ್ತ್ಯ ಮತದಾನ ಪದ್ಧತಿಯನ್ನು ಅನುಸರಿಸಬೇಕು. ಈ ಸಂದರ್ಭದಲ್ಲಿ...

ಬೆಂಗಳೂರು ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ ಕಟ್ಟಿಕೊಂಡಿರುವ ‘ಶಿಕ್ಷಕರ ಕೋಟೆ’...

ವಿಧಾನ ಪರಿಷತ್‌ನ 4 ಸ್ಥಾನಗಳಲ್ಲಿಅಕ್ಟೋಬರ್ 23ರ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು- ‘ಬೆಂಗಳೂರು ಶಿಕ್ಷಕರ ಕ್ಷೇತ್ರ'. ಇಲ್ಲಿ ಕಾಂಗ್ರೆಸ್‌ನಿಂದ ಸ್ಫರ್ಧಿಸಿರುವ ಪುಟ್ಟಣ್ಣ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿರುವ...

“ಭಾರತದ ಅಸಂಘಟಿತ ವಲಯದಲ್ಲಿ 16 ಕೋಟಿಗೂ ಹೆಚ್ಚು ಮಹಿಳೆಯರು ದುಡಿಯುತ್ತಿದ್ದಾರೆ. ಇವರಲ್ಲಿ ಬಹುತೇಕ ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ ಅಥವಾ ದೀರ್ಘಾವಧಿಯ ಉದ್ಯೋಗ ಭದ್ರತೆ ಇಲ್ಲದಿರುವುದರಿಂದ, ಹೆರಿಗೆಯಾದ ಕೆಲವೇ ವಾರಗಳಲ್ಲಿ ಮತ್ತೆ ದುಡಿಮೆಗೆ ಮರಳಬೇಕಾದ ಪರಿಸ್ಥಿತಿ ಇದೆ” ಎಂದು ಅವರು ಹೇಳಿದ್ದಾರೆ.

“ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಮೊದಲ ಆರು ತಿಂಗಳು ಅತ್ಯಂತ ಮಹತ್ವದ ಅವಧಿ. ಈ ಅವಧಿಯಲ್ಲಿ ಮಗುವಿಗೆ ಸಂಪೂರ್ಣವಾಗಿ ತಾಯಿಹಾಲು ನೀಡುವುದು ಶಿಶುವಿನ ಪೌಷ್ಟಿಕತೆ ಮತ್ತು ಆರೋಗ್ಯಕ್ಕೆ ಮಹತ್ವದ್ದಾಗಿದೆ. ಆದರೆ ದಿನಗೂಲಿ, ಗೃಹಾಧಾರಿತ ಕೆಲಸ, ನಿರ್ಮಾಣ ಕ್ಷೇತ್ರ, ಕೃಷಿ, ಸಣ್ಣ ವ್ಯಾಪಾರ ಸೇರಿದಂತೆ ಅಸಂಘಟಿತ ವಲಯದ ಹಲವು ಉದ್ಯೋಗಗಳಲ್ಲಿ ತಾಯಿಗೆ ದೀರ್ಘಕಾಲ ಕೆಲಸದಿಂದ ದೂರ ಉಳಿಯುವುದು ಆರ್ಥಿಕವಾಗಿ ಸಾಧ್ಯವಾಗುವುದಿಲ್ಲ” ಎಂದು ತರೂರ್ ಹೇಳಿದ್ದಾರೆ.

“ವೇತನ ಸಹಿತ ಹೆರಿಗೆ ರಜೆ ಅಥವಾ ಉದ್ಯೋಗ ಭದ್ರತೆ ಇಲ್ಲದಿದ್ದರೆ, ಬದುಕಿಗಾಗಿ ಸಾವಿರಾರು ದುಡಿಯುವ ತಾಯಂದಿರು ಹೆರಿಗೆಯಾದ ಕೆಲವೇ ವಾರಗಳಲ್ಲಿ ಮತ್ತೆ ಅಸಂಘಟಿತ ದುಡಿಮೆಗೆ ಮರಳಬೇಕಾಗುತ್ತದೆ. ಹೀಗಿರುವಾಗ ಆರು ತಿಂಗಳ ಸಂಪೂರ್ಣ ತಾಯಿಹಾಲು ನೀಡುವುದು ಆರ್ಥಿಕವಾಗಿ ಅಸಾಧ್ಯವಾಗುತ್ತದೆ” ಎಂದು ತರೂರ್ ಹೇಳಿದ್ದಾರೆ.

“ತಾಯಿಹಾಲು ನೀಡುವ ವಿಚಾರವನ್ನು ಕೇವಲ ತಾಯಿಯ ವೈಯಕ್ತಿಕ ನಿರ್ಧಾರ ಅಥವಾ ಆರೋಗ್ಯ ಜಾಗೃತಿಯ ಪ್ರಶ್ನೆಯಾಗಿ ನೋಡುವುದಕ್ಕಿಂತ, ಅದರ ಹಿಂದೆ ಇರುವ ಕೆಲಸದ ಪರಿಸ್ಥಿತಿ, ಆದಾಯದ ಭದ್ರತೆ ಮತ್ತು ಸಾಮಾಜಿಕ ರಕ್ಷಣೆಯನ್ನೂ ಪರಿಗಣಿಸಬೇಕಿದೆ” ಎಂದು ಅವರು ಹೇಳಿದ್ದಾರೆ.

“ಒಂದು ಕಡೆ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆಗಳ ಪ್ರಮಾಣ 90.6%ಗೆ ಏರಿಕೆಯಾಗಿದೆ. ಇನ್ನೊಂದೆಡೆ ಆರು ತಿಂಗಳೊಳಗಿನ ಶಿಶುಗಳ ಸಂಪೂರ್ಣ ತಾಯಿಹಾಲು ಪ್ರಮಾಣ ಕುಸಿದಿದೆ. ಈ ಕುಸಿತಕ್ಕೆ ಆರೋಗ್ಯ ವ್ಯವಸ್ಥೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿರುವ ಕೆಲವು ರಚನಾತ್ಮಕ ಸಮಸ್ಯೆಗಳೂ ಕಾರಣವಾಗಿರಬಹುದು” ಎಂದು ಅವರು ಹೇಳಿದ್ದಾರೆ.

“ಹೆರಿಗೆಯ ನಂತರ ತಾಯಿಗೆ ತಕ್ಷಣದ ಆರೈಕೆ, ಹಾಲುಣಿಸುವ ಕುರಿತು ಸರಿಯಾದ ಮಾರ್ಗದರ್ಶನ ಮತ್ತು ಅಗತ್ಯ ವೈದ್ಯಕೀಯ ನೆರವು ಸಿಗದಿದ್ದರೆ ಆರಂಭಿಕ ಹಂತದಲ್ಲೇ ತಾಯಿಹಾಲು ನೀಡುವ ಪ್ರಕ್ರಿಯೆಗೆ ತೊಂದರೆಯಾಗಬಹುದು. ಈ ಹಿನ್ನೆಲೆಯಲ್ಲಿ ಹೆರಿಗೆ ನಂತರದ ಆರೈಕೆ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ” ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಈ ಲೇಖನ ಓದಿದ್ದೀರಾ?: ಕುಸಿದ ಮೋದಿ ಜನಪ್ರಿಯತೆ – ʼಪ್ರಜಾಪ್ರಭುತ್ವ ಅಪಾಯದಲ್ಲಿದೆʼ ಎನ್ನುತ್ತಿರುವ ಜನತೆ; ಸಮೀಕ್ಷಾ ವರದಿ

“ತಾಯಿಹಾಲು ಶಿಶುಗಳಿಗೆ ಅಪೌಷ್ಟಿಕತೆ ಮತ್ತು ಶಿಶು ಮರಣದ ಅಪಾಯದಿಂದ ರಕ್ಷಣೆ ನೀಡುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಹೀಗಾಗಿ, ತಾಯಿಹಾಲು ನೀಡುವ ಪ್ರಮಾಣವನ್ನು ಹೆಚ್ಚಿಸುವ ಜವಾಬ್ದಾರಿ ಕೇವಲ ತಾಯಿಯ ಮೇಲೇ ಇರಬಾರದು; ಸರ್ಕಾರ, ಉದ್ಯೋಗದಾತರು ಮತ್ತು ಆರೋಗ್ಯ ವ್ಯವಸ್ಥೆಯೂ ಅದರ ಹೊಣೆ ಹೊರಬೇಕು. ಇದಕ್ಕಾಗಿ ಅಸಂಘಟಿತ ವಲಯದ ಮಹಿಳೆಯರಿಗೆ ಬಲವಾದ ಆರ್ಥಿಕ ಹೆರಿಗೆ ಪ್ರಯೋಜನಗಳನ್ನು ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಶಿಶು ಹಾಲಿನ ಪರ್ಯಾಯ ಉತ್ಪನ್ನಗಳ ಜಾಹೀರಾತು ಮತ್ತು ಪ್ರಚಾರಕ್ಕೆ ಸಂಬಂಧಿಸಿದ Infant Milk Substitutes (IMS) ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ನಂತರದ ಹಾಲೂಡಿಕೆ ಸಲಹೆ ಮತ್ತು ನೆರವು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುಬೇಕು” ಎಂದೂ ಅವರು ಆಗ್ರಹಿಸಿದ್ದಾರೆ.

“ತಾಯಿಹಾಲು ನೀಡುವ ಪ್ರಮಾಣದ ಕುಸಿತವನ್ನು ಕೇವಲ ತಾಯಂದಿರಲ್ಲಿ ಜಾಗೃತಿ ಕೊರತೆಯಾಗಿ ನೋಡುವುದು ಸಮಸ್ಯೆಯ ಮೂಲವನ್ನು ಮರೆಮಾಚಬಹುದು. ಮಹಿಳೆಯೊಬ್ಬಳು ಹೆರಿಗೆಯಾದ ನಂತರವೂ ಕುಟುಂಬದ ಆದಾಯವನ್ನು ಉಳಿಸಿಕೊಳ್ಳಲು ಕೆಲಸಕ್ಕೆ ಮರಳಬೇಕಾದ ಪರಿಸ್ಥಿತಿ ಇದ್ದರೆ, ಆಕೆಯ ಮುಂದೆ ಆರೋಗ್ಯ ಮತ್ತು ಆರ್ಥಿಕ ಬದುಕಿನ ನಡುವೆ ಆಯ್ಕೆ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ವಿಶೇಷವಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ಒತ್ತಡ ಇನ್ನಷ್ಟು ಹೆಚ್ಚಿರುತ್ತದೆ. ವೇತನ ಸಹಿತ ರಜೆ, ಉದ್ಯೋಗ ಭದ್ರತೆ, ಹೆರಿಗೆ ನಂತರದ ಆರೋಗ್ಯ ಸೇವೆ, ಮಗುವನ್ನು ನೋಡಿಕೊಳ್ಳಲು ಸುರಕ್ಷಿತ ಸ್ಥಳ ಮತ್ತು ಕೆಲಸದ ಸ್ಥಳದಲ್ಲಿ ಅಗತ್ಯ ಸೌಲಭ್ಯಗಳು ಇಲ್ಲದಿದ್ದರೆ, ತಾಯಿಗೆ ಮಾತ್ರ ಜವಾಬ್ದಾರಿ ಹೊರಿಸುವುದು ಸಮರ್ಥನೀಯವಲ್ಲ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಮಧ್ಯರಾತ್ರಿ 3 ಗಂಟೆಯಾದರೂ ಪಟಾಕಿ ಸದ್ದು; ಫನ್ ವರ್ಲ್ಡ್ ವಿರುದ್ಧ ರಮ್ಯಾ ಕಿಡಿ

ಬೆಂಗಳೂರಿನಲ್ಲಿ ರಾತ್ರಿ ವೇಳೆ ಸಾರ್ವಜನಿಕರ ನಿದ್ದೆಗೆ ಭಂಗ ತರುವ ಮತ್ತು ಶಬ್ದಮಾಲಿನ್ಯ...

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ ಈ ತಪ್ಪು ಮಾಡಬೇಡಿ!

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ...

ಸೋನಿಯಾ ಗಾಂಧಿ ಇನ್‌ಸ್ಟಾಗ್ರಾಮ್‌ಗೆ ಪದಾರ್ಪಣೆ: ‘ಬಿಲಾಂಗಿಂಗ್’ ಆತ್ಮಕಥೆಯ ಮೊದಲ ನೋಟ ಬಿಡುಗಡೆ

ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಾಮಾಜಿಕ ಜಾಲತಾಣ...

ಎಪ್‌ಸ್ಟೀನ್ ಫೋಟೊ ಬಾಂಬ್‌! ಮೋದಿ-ಪುರಿ ವಿರುದ್ಧ ವಿಪಕ್ಷಗಳ ವಾಗ್ದಾಳಿ

ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದ ಅಮೆರಿಕದ ಕುಖ್ಯಾತ ಅಪರಾಧಿ ಜೆಫ್ರಿ ಎಪ್‌ಸ್ಟೀನ್...