ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕರೊಬ್ಬರು ಕೇಳಿದ ಪ್ರಶ್ನೆಗೆ ಅಸಂಬದ್ಧ ಉತ್ತರ ನೀಡಿದ ಘಟನೆ ಎಲ್ಲಡೆ ವೈರಲ್ ಆಗುತ್ತಿದೆ.
ಷೇರು ಮಾರುಕಟ್ಟೆಯ ಗ್ರಾಹಕರೊಬ್ಬರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಷೇರು ಮಾರುಕಟ್ಟೆ ಗ್ರಾಹಕರಿಗೆ(ಬ್ರೋಕರ್‌ಗಳು) ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳಿಗೆ ಹೆಚ್ಚು ತೆರಿಗೆಯನ್ನು ವಿಧಿಸಲಾಗುತ್ತಿರುವ ಬಗ್ಗೆ ಪ್ರಶ್ನೆ ಕೇಳಿದರು.
ಇದಕ್ಕೆ ಉತ್ತರಿಸಿದ ನಿರ್ಮಲಾ ಅವರು ನಾನು ನಿಮ್ಮ ವಿಷಯಕ್ಕೆ ಸಂಬಂಧಪಡದ ವ್ಯಕ್ತಿಯಾಗಿದ್ದು, ನಾನು ನಿಮ್ಮ ಈ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ತಮ್ಮದೆ ಭಾಷೆಯಲ್ಲಿ ಹೇಳಿ ಜಾರಿಕೊಂಡರು.
ಮುಂಬೈನಲ್ಲಿ ಭಾರತೀಯ ಷೇರು ಮಾರುಕಟ್ಟೆ ವಿನಿಮಯ(ಬಿಎಸ್‌ಇ) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಷೇರು ಮಾರುಕಟ್ಟೆ ಗ್ರಾಹಕರು, ಹೂಡಿಕೆ ಮತ್ತು ತೊಂದರೆಗಳು, ಸರ್ಕಾರವು ಜಿಎಸ್‌ಟಿ, ಐಜಿಎಸ್‌ಟಿ, ಮುದ್ರಾಂಕ ಶುಲ್ಕ,ಭದ್ರತಾ ವಹಿವಾಟು ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳನ್ನು ವಿಧಿಸುತ್ತಿರುವ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!
ಈ ಸಂದರ್ಭದಲ್ಲಿ ಬ್ರೋಕರ್ ಒಬ್ಬರು, ”ಇಂದು ಭಾರತ ಸರ್ಕಾರ ಬ್ರೋಕರ್‌ಗಳಿಂಗಿತ ಹೆಚ್ಚು ಲಾಭ ಗಳಿಸುತ್ತಿದೆ. ನಾನು ಎಲ್ಲದರಲ್ಲಿಯೂ ಹೂಡಿಕೆ ಮಾಡಿದ್ದೇನೆ. ನಾನು ಎಲ್ಲ ರೀತಿಯ ಸವಾಲುಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಕೇಂದ್ರ ಸರ್ಕಾರ ಕೂಡ ನನ್ನ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿದೆ. ನೀವು(ಸರಕಾರ) ನನ್ನ ಸ್ಲೀಪಿಂಗ್ ಪಾರ್ಟ್ನ್‌ರ್ ಆಗಿದ್ದೀರಿ. ನಾನು ನನ್ನ ಹಣಕಾಸು, ನನ್ನ ಜವಾಬ್ದಾರಿಗಳು, ನನ್ನ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಷೇರು ಮಾರುಕಟ್ಟೆ ಗ್ರಾಹಕರಿಗೆ(ಬ್ರೋಕರ್‌ಗಳು) ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳಿಗೆ ಹೆಚ್ಚು ತೆರಿಗೆಯನ್ನು ವಿಧಿಸಲಾಗುತ್ತಿದೆ. ಸರ್ಕಾರ ಸ್ಲೀಪಿಂಗ್ ಪಾರ್ಟ್ನ್‌ರ್ ಆಗಿದೆ. ನಾನು ನನ್ನ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಪಾರ್ಟ್ನ್‌ರ್ ಆಗಿದ್ದೇನೆ. ಇದಕ್ಕೆ ನಿಮ್ಮ ಉತ್ತರವೇನು” ಎಂದು ಪ್ರಶ್ನೆ ಕೇಳಿದರು.
ಈ ಪ್ರಶ್ನೆಗೆ ಅಸಂಬದ್ಧವಾಗಿ ಉತ್ತರ ನೀಡಿದ ನಿರ್ಮಲಾ ಸೀತಾರಾಮನ್ ”ಇಲ್ಲಿ ಕುಳಿತುಕೊಂಡಿರುವ ಸ್ಲೀಪಿಂಗ್ ಪಾರ್ಟ್ನ್‌ರ್ ನಿಮ್ಮ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಿಲ್ಲ” ಎಂದು ವಿಷಯವನ್ನು ಬೇರೆಡೆ ತಿರುಗಿಸಿದರು.
ನಿರ್ಮಲಾ ಸೀತಾರಾಮನ್ ನೀಡಿದ ಉತ್ತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಣಕಾಸು ಸಂಬಂಧಿತ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸದ ಸಚಿವರು ತಮ್ಮ ಹುದ್ದೆಗೆ ಅನರ್ಹರು ಎಂದು ನೆಟ್ಟಿಗರು ಟೀಕಿಸಿದ್ದಾರೆ.
