SIR ಬದಲು SSR! ಪ್ರತಿಭಟನೆ, ಉಳಿದಿಬ್ಬರು ಚುನಾವಣಾ ಆಯುಕ್ತರ ತಕರಾರುಗಳಿಗೆ ಕಡೆಗೂ ಮಣಿಯಿತೇ ಗ್ಯಾನೇಶ್- ಮೋದಿ- ಶಾ ತ್ರಿವಳಿ?

Date:

ತೀವ್ರ ವಿರೋಧ, ಪ್ರತಿಭಟನೆ, ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾದ ಬಳಿಕ ಇದೀಗ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಬದಲಾಗಿ ‘ವಿಶೇಷ ಸಾರಾಂಶ ಪರಿಷ್ಕರಣೆ’ (Special Summary Revision – SSR) ಪ್ರಕ್ರಿಯೆಯನ್ನು ಜಾರಿಗೆ ತರಲು ಮುಂದಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ ಸೇರಿದಂತೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2027ರ ಜನವರಿ 1ರಿಂದ SSR ಜಾರಿಯಾಗಲಿದೆ.

- Advertisement -

ಸುಪ್ರೀಂ ಕೋರ್ಟ್‌ನಲ್ಲಿ ವಿಪಕ್ಷಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸನ್ನಿಹಿತವಾಗಿರುವ ಸಮಯದಲ್ಲೇ ಈ ಆದೇಶ ಹೊರಬಿದ್ದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಎಸ್‌ಐಆರ್‌ಗೆ ಇತರೆ ಇಬ್ಬರು ಚುನಾವಣಾ ಆಯುಕ್ತರಾದ ವಿವೇಕ್ ಜೋಶಿ, ಸುಖ್‌ಬೀರ್ ಸಿಂಗ್ ಸಂಧು ವಿರೋಧವಿದ್ದರೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ತನಿಖಾ ವರದಿಯಲ್ಲಿ ಬಹಿರಂಗವಾಗಿತ್ತು. ಈ ಮೂಲಕ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಗ್ಯಾನೇಶ್ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪಗಳಿಗೆ ಪುರಾವೆ ಸಿಕ್ಕಿದಂತಾಯಿತು. ತೀವ್ರ ವಿರೋಧ ವ್ಯಕ್ತವಾದವು. ಸಿಜೆಪಿ, ಇಂಡಿಯಾ ಒಕ್ಕೂಟ ಪ್ರತಿಭಟನೆಗೆ ಇಳಿದವು. ಪ್ರತಿಭಟನೆ ಹತ್ತಿಕ್ಕಲು ಬಂಧನದ ಅಸ್ತ್ರವನ್ನೂ ದೆಹಲಿ ಪೊಲೀಸರ ಮೂಲಕ ಕೇಂದ್ರ ಸರ್ಕಾರ ಪ್ರಯೋಗಿಸಿತು. ಇದೀಗ ಕೊನೆಗೂ ಎಲ್ಲ ಒತ್ತಡಗಳಿಗೆ ಮಣಿದಂತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

​ಮೋದಿ-ಶಾ ಅಸಲಿ ಮುಖ ಅನಾವರಣ: ಅಂಕಿತಾ ಭಂಡಾರಿ ಕೊಲೆ...

ವೇದಿಕೆಗಳಲ್ಲಿ ‘ಬೇಟಿ ಬಚಾವೋ’ ಎಂದು ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಹಾಡಹಗಲೇ ಕೊಲೆಯಾದ ಬಡ ಯುವತಿಯ ಸಾವಿನ ಸುತ್ತ ಕಳಂಕದ ಹುತ್ತ ಹೊತ್ತಿರುವ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ...

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ ಮೊರೆ ಹೋಗುವವರ ಸಂಖ್ಯೆಯೂ ಕಡಿಮೆಯಿಲ್ಲ. ಇಂತಹವರ ಸಮಸ್ಯೆಗೆ ಪರ್ಯಾಯವೊಂದು ಸಿಕ್ಕರೆ ಹೇಗಿರಬಹುದು? ಮೆದುಳಿಗೆ ಅಲ್ಟ್ರಾಸೌಂಡ್‌ ತರಂಗಗಳ ಮೂಲಕ ಪ್ರಚೋದನೆ ನೀಡಿ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು ವರದಿ ಮಾಡುವ ಜವಾಬ್ದಾರಿ- ಇವೆರಡನ್ನೂ ನಿಭಾಯಿಸಬೇಕಾದಾಗ ಮಾಡಿಕೊಳ್ಳುವ ಲೆಕ್ಕಾಚಾರಗಳ ಬಗೆಗಿನ ಒಂದು ಸ್ವಾನುಭವ. ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ...

ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಸಿಜೆಪಿ ಪ್ರತಿಭಟನೆ: ಗುಂಪು ಸೇರದಂತೆ ದೆಹಲಿ ಪೊಲೀಸರ ಎಚ್ಚರಿಕೆ

ಆರಂಭದಲ್ಲಿ ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಗೋವಾ ಮುಂತಾದ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸಲಿರುವ 17 ರಾಜ್ಯಗಳಲ್ಲಿ ಸದ್ಯ SSR ನಡೆಯಲಿದ್ದು, ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಮುಂದಿನ ಹಂತದಲ್ಲಿ ಬರಲಿದೆ. SIR ಪ್ರಕ್ರಿಯೆಯಲ್ಲಿ ಮತದಾನದ ಹಕ್ಕನ್ನೇ ಕಳೆದುಕೊಂಡಿರುವ ಸುಮಾರು 13 ಕೋಟಿ ಮತದಾರರು ಮತ್ತೆ ಸ್ವಯಂಪ್ರೇರಿತವಾಗಿ ಸೇರಿಸುವ ಯಾವುದೇ ನೇರ ಪ್ರಸ್ತಾವನೆ ಈ ಆದೇಶದಲ್ಲಿಲ್ಲ. ಬಿಟ್ಟುಹೋದವರು ಹೊಸದಾಗಿ ಫಾರಂ-6 ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ತಮ್ಮ ಹಕ್ಕಿಗಾಗಿ ಮತ್ತೆ ಅಲೆದಾಡಬೇಕಾಗುತ್ತದೆ.

ಇನ್ನೊಂದೆಡೆ ರಾಜಕೀಯ ಪಕ್ಷಗಳಿಗೆ ಕರಡು ಮತ್ತು ಅಂತಿಮ ಮತದಾರರ ಪಟ್ಟಿಯನ್ನು ವಿಶ್ಲೇಷಣೆ ಮಾಡಲು ಅನುಕೂಲವಾಗುವಂತೆ ‘ಮಷೀನ್ ರೀಡಬಲ್ (Searchable PDF)’ ರೂಪದಲ್ಲಿ ಒದಗಿಸಲು ಆಯೋಗ ಸಮ್ಮತಿಸಿದೆ.

ಅನಗತ್ಯ ಡಿಲೀಶನ್ ತಡೆಗೆ ಯಾವುದೇ ಮತಗಟ್ಟೆಯಲ್ಲಿ ಶೇ. 2 ಕ್ಕಿಂತ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಬೇಕಾದರೆ, ಅದನ್ನು ಸ್ವತಃ ಇಆರ್‌ಒ (ERO – Electoral Registration Officer) ಅವರೇ ಪರಿಶೀಲಿಸಬೇಕು ಎಂಬ ನಿಯಮವಿದೆ. ಒಬ್ಬನೇ ವ್ಯಕ್ತಿ 5 ಕ್ಕಿಂತ ಹೆಚ್ಚು ಮತದಾರರ ಹೆಸರು ಡಿಲೀಟ್ ಮಾಡಲು ಅರ್ಜಿ ಸಲ್ಲಿಸಿದರೆ ( Form 7), ERO ಮಟ್ಟದಲ್ಲಿ ಕಡ್ಡಾಯ ತಪಾಸಣೆ ನಡೆಯಬೇಕಾಗುತ್ತದೆ. ದಾಖಲೆಗಳನ್ನು ಸುರಕ್ಷಿತವಾಗಿಡಲು ವಿಶೇಷ ಸೂಚನೆ ನೀಡಲಾಗಿದೆ.

SSR ಮತ್ತು SIR ನಡುವಿನ ವ್ಯತ್ಯಾಸಗಳು

ಪ್ರಕ್ರಿಯೆ ಯಾವುದು? ವಿಶೇಷ ಸಾರಾಂಶ ಪರಿಷ್ಕರಣೆ (SSR)ವಿಶೇಷ ತೀವ್ರ ಪರಿಷ್ಕರಣೆ (SIR)
ಸ್ವರೂಪವಾರ್ಷಿಕ ಸರಳ ಪರಿಷ್ಕರಣೆ (ಮತದಾರರ ಸೇರ್ಪಡೆ/ತಿದ್ದುಪಡಿ)ಆಳವಾದ/ತೀವ್ರ ಮರು-ಪರಿಶೀಲನೆ (ಮನೆ ಮನೆಗೆ ತೆರಳಿ ಪರಿಶೀಲನೆ).
ಮನೆಮನೆ ಭೇಟಿ ಮನೆಮನೆಗೆ ಕಡ್ಡಾಯ ಭೇಟಿ ಇಲ್ಲ, ಬಿಎಲ್‌ಒ ಹಂತದ ಸರಳ ಪರಿಶೀಲನೆಪ್ರತಿಯೊಬ್ಬ ಮತದಾರರ ಮನೆಗೆ ತೆರಳಿ ‘ಎನ್ಯುಮರೇಷನ್ ಫಾರಂ’ ಭರ್ತಿ ಕಡ್ಡಾಯ
ದಾಖಲೆಗಳ ಕಠಿಣತೆಹೊಸ ಮತದಾರರಿಗೆ ಸಾಮಾನ್ಯ ವಯಸ್ಸು ಮತ್ತು ನಿವಾಸದ ದಾಖಲೆ ಸಾಕುಹಳೆಯ ಪಟ್ಟಿಗಳಲ್ಲಿ ಪೋಷಕರ/ತಮ್ಮ ಹೆಸರು ಇದೆಯೇ ಎಂಬ ‘ಲಿಂಕೇಜ್’ ತೋರಿಸುವುದು ಕಠಿಣ
ಹೊಸ ಮತದಾರರ ನೋಂದಣಿಫಾರಂ-6 ಮೂಲಕ ನೋಂದಣಿ.ದಾಖಲೆಗಳ ತೊಡಕಿನಿಂದಾಗಿ ಯುವ ಮತದಾರರ ನೋಂದಣಿ ಕಷ್ಟಕರವಾಗಿತ್ತು
ಹೆಸರು ಕೈಬಿಡುವುದು ಶೇ. 2ಕ್ಕಿಂತ ಹೆಚ್ಚು ಅಥವಾ 5ಕ್ಕೂ ಹೆಚ್ಚು ಆಕ್ಷೇಪಣೆ ಬಂದಾಗ ERO ನೇರ ಪರಿಶೀಲನೆ ಕಡ್ಡಾಯಫಾರಂ ಸಲ್ಲಿಸದಿದ್ದರೆ/ದಾಖಲೆ ಸಿಗದಿದ್ದರೆ ಹೆಸರುಗಳು ಸುಲಭವಾಗಿ ಡಿಲೀಟ್ ಆಗುವ ಭೀತಿಯಿತ್ತು
ವಿಪಕ್ಷಗಳಿಗೆ ಪಟ್ಟಿ ಒದಗಿಸುವಿಕೆಮಷೀನ್ ರೀಡಬಲ್ (Searchable/Readable PDF) ಡಿಜಿಟಲ್ ಪ್ರತಿ ಸೌಲಭ್ಯ.ಸಾಮಾನ್ಯ ನೋಂದಾಯಿತ ಪಿಡಿಎಫ್‌ಗಳು ಮಾತ್ರ ಲಭ್ಯವಿದ್ದವು.

ಹೀಗೆ ಎಸ್‌ಐಆರ್ ನಡೆಸಿದಾಗ ಹಲವು ಗೊಂದಲಗಳು ಉಂಟಾಗಿವೆ, ಮತದಾರರ ಹೆಸರುಗಳು ಸಾಮೂಹಿಕವಾಗಿ ಕೈಬಿಟ್ಟು ಹೋಗಿದೆ. ಇದರಿಂದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಕಂಟಕ ಎದುರಾಗುವ ಮುನ್ಸೂಚನೆ, ದೇಶದಲ್ಲಿ ತೀವ್ರ ಪ್ರತಿಭಟನೆ ಎಲ್ಲವೂ ಒಂದಾದ ಬಳಿಕ ಒಂದರಂತೆ ಕೇಂದ್ರ ಸರ್ಕಾರದ ಮೇಲೆ ಮುಗ್ಗರಿಸುತ್ತಿದ್ದಂತೆ ಈಗ ಚುನಾವಣಾ ಆಯೋಗ SSR ಮಾದರಿಗೆ ಮರಳಿರುವುದು ಸದ್ಯದ ರಾಜಕೀಯ ಕಾವು ತಣಿಸುವ ಆಯೋಗದ ತಂತ್ರದಂತೆ ಕಾಣುತ್ತಿದೆ. ಇದರೊಂದಿಗೆ ಫಾರಂ 6ಕ್ಕೆ ಮಾಡಿದ ಅನಧಿಕೃತ ತಿದ್ದುಪಡಿಯನ್ನು ಹಿಂಪಡೆಯಲಾಗುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಸಿಜೆಪಿ ಪ್ರತಿಭಟನೆ: ಗುಂಪು ಸೇರದಂತೆ ದೆಹಲಿ ಪೊಲೀಸರ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ 'ಕಾಕ್‌ರೋಚ್ ಜನತಾ...

SIR ಪೂರ್ಣಗೊಂಡ ರಾಜ್ಯಗಳಲ್ಲಿ SSR ಪ್ರಕ್ರಿಯೆ: ಕೇಂದ್ರ ಚುನಾವಣಾ ಆಯೋಗ

'ವಿಶೇಷ ಸಮಗ್ರ ಪರಿಷ್ಕರಣೆ' (SIR- Special Intensive Revision) ಪ್ರಕ್ರಿಯೆ ಪೂರ್ಣಗೊಂಡಿರುವ...

ಕಲಬುರಗಿ | ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು

ಕಲಬುರಗಿ ಹೊರವಲಯದ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ...