ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

Date:

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು ವರದಿ ಮಾಡುವ ಜವಾಬ್ದಾರಿ- ಇವೆರಡನ್ನೂ ನಿಭಾಯಿಸಬೇಕಾದಾಗ ಮಾಡಿಕೊಳ್ಳುವ ಲೆಕ್ಕಾಚಾರಗಳ ಬಗೆಗಿನ ಒಂದು ಸ್ವಾನುಭವ.

ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದ ದೌರ್ಜನ್ಯ, ಕಿರುಕುಳದ ಕೇಸ್‌ಗಳು ಸಹಜವಾಗಿಯೇ ಎಲ್ಲರಲ್ಲೂ ಆಕ್ರೋಶ ಹುಟ್ಟಿಸಿವೆ: ರಸ್ತೆಯ ಮೇಲಿನ ಪ್ರತಿಭಟನೆಗಳು, ಮೆರವಣಿಗೆಗಳು, ಟಿವಿಗಳಲ್ಲಿ ಡಿಬೇಟ್‌ಗಳು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು, ಎಲ್ಲದರಲ್ಲೂ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬ ಕೂಗುಗಳು ಶುರುವಾಗಿವೆ. ಈ ಕೇಸ್‌ಗಳ ಬಗ್ಗೆ ರಿಪೋರ್ಟ್ ಮಾಡುತ್ತಿದ್ದಾಗ, ಸುರಕ್ಷಿತವಾಗಿರಲು ಹೆಣ್ಣುಮಕ್ಕಳು ಸದಾ ಏನೆಲ್ಲಾ ಲೆಕ್ಕಾಚಾರಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂಬ ಯೋಚನೆ ನನ್ನ ತಲೆಯಲ್ಲಿ ಕೊರೆಯುತ್ತಲೇ ಇತ್ತು.

- Advertisement -

ಕಳೆದ ತಿಂಗಳು ಸೌತ್ ದೆಹಲಿಯ ಆಸ್ಥಾ ಕುಂಜ್ ಪಾರ್ಕ್‌ನಲ್ಲಿ 17 ವರ್ಷದ ಹುಡುಗಿ ಮೇಲೆ ಗ್ಯಾಂಗ್ ರೇಪ್ ಆದ ಕೇಸ್ ಬಗ್ಗೆ ರಿಪೋರ್ಟ್ ಮಾಡುವಾಗ, ನಾನು ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸ್ಥಳೀಯರ ಜೊತೆ ಗಂಟೆಗಟ್ಟಲೆ ಮಾತನಾಡಿದೆ. ಸೆಪ್ಟೆಂಬರ್ 23ರಂದು, ಲೇಡಿ ಶ್ರೀರಾಮ್ ಕಾಲೇಜು ಮತ್ತು ದೆಹಲಿ ಯೂನಿವರ್ಸಿಟಿಯ ಹುಡುಗಿಯರು ತಮ್ಮ ಸುರಕ್ಷತೆಯ ಬಗ್ಗೆ ದನಿ ಎತ್ತಲು ಮಹಿಳೆಯರು ಒಂದು ಮೆರವಣಿಗೆ ನಡೆಸಿದರು. ಸಂಜೆ 6.30ರ ಸುಮಾರಿಗೆ, ಮೆರವಣಿಗೆ ಮುಗಿಸಿಕೊಂಡು ಅಲ್ಲಿಂದ ಬರೀ 650 ಮೀಟರ್ ದೂರದಲ್ಲಿದ್ದ ನೆಹರು ಪ್ಲೇಸ್ ಮೆಟ್ರೋ ಸ್ಟೇಷನ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದೆ. ಮೆರವಣಿಗೆ ಮುಗಿದ ಜಾಗದಿಂದ 200 ಮೀಟರ್ ಮುಂದಕ್ಕೆ ಹೋಗಿರಬಹುದು, ಫುಟ್‌ಪಾತ್ ಮೇಲೆ ನಿಂತಿದ್ದ ಒಬ್ಬ ನನ್ನ ಕಣ್ಣಲ್ಲೇ ಕಣ್ಣಿಟ್ಟು ನೋಡುತ್ತಾ ಪ್ಯಾಂಟ್ ಮೇಲೆ ಕೈಯಿಟ್ಟು ಅಸಭ್ಯವಾಗಿ ನಡೆದುಕೊಳ್ಳಲು ಶುರುಮಾಡಿದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಇದನ್ನು ಓದಿದ್ದೀರಾ: ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ನನ್ನ ಹಿಂದಿನಿಂದ “ಆಜಾದಿ, ಆಜಾದಿ” ಅನ್ನೋ ಕೂಗು ಇನ್ನೂ ಜೋರಾಗಿ ಕೇಳಿಸುತ್ತಲೇ ಇತ್ತು. ಪೊಲೀಸರು ರಸ್ತೆಯಲ್ಲೇ ನಿಂತು ಜನರನ್ನು ಕಂಟ್ರೋಲ್ ಮಾಡುತ್ತಿದ್ದರು.
ನಾನಂತೂ ತಲೆ ತಗ್ಗಿಸಿ ಮುಂದೆ ಹೆಜ್ಜೆ ಹಾಕಿದೆ.

ಅದೇ ದಿನ ಬೆಳಗ್ಗೆ ನನ್ನ ಜೊತೆ ಮಾತನಾಡಿದ ಮಹಿಳೆಯರು, ರಸ್ತೆಯಲ್ಲಿ ಈ ರೀತಿ ಕಿರುಕುಳ ನಡೆಯುವುದು ತೀರಾ ಮಾಮೂಲಿ ವಿಷಯ ಎಂದಿದ್ದರು. “ಮೂಲ್‌ಚಂದ್ ಮೆಟ್ರೋ ಹತ್ತಿರ ಮತ್ತು ಕಾಲೇಜು ಕಡೆಗೆ ಹೋಗುವ ರಸ್ತೆಯಲ್ಲಿ ಗಂಡಸರು ಆಗಾಗ ಕೆಟ್ಟದಾಗಿ ಸನ್ನೆ ಮಾಡುವುದು, ಅಸಭ್ಯವಾಗಿ ವರ್ತಿಸುವುದು ಇವೆಲ್ಲಾ ಮಾಡುತ್ತಾರೆ. ಇದರಿಂದ ನನಗಷ್ಟೇ ಅಲ್ಲ, ನಮ್ಮ ಮನೆಯವರಿಗೂ ಭಯ ಶುರುವಾಯ್ತು. ಅದಕ್ಕೇ ಆ ರಸ್ತೆಯಲ್ಲಿ ಓಡಾಡುವುದು ಬೇಡ ಅಂತ ಮನೆಯವರೇ ಒಂದು ಕಾರು ಕೊಡಿಸಿದರು,” ಎಂದು ಒಬ್ಬ ಹುಡುಗಿ ಹೇಳಿದಳು. ಇನ್ನು ಕೆಲವರಂತೂ ಆ ಮೆಟ್ರೋ ಸ್ಟೇಷನ್‌ಗೆ ಹೋಗುವುದನ್ನೇ ಬಿಟ್ಟು, ಆಟೋ ಹಿಡಿದು 10 ನಿಮಿಷ ದೂರದ ಬೇರೆ ಮೆಟ್ರೋಗೆ ಹೋಗ್ತಾರೆ.

ಮಹಿಳಾ ಪತ್ರಕರ್ತೆಯರೂ ಇಂಥದ್ದೇ ಲೆಕ್ಕಾಚಾರಗಳನ್ನು ಮಾಡ್ತಾರೆ. ನಾನು ಮೊದಲ ಬಾರಿಗೆ ದೆಹಲಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಲು ಹೋದಾಗ ಜೀನ್ಸ್, ಬೂಟ್ಸ್, ಟಾಪ್ ಹಾಕಿಕೊಂಡಿದ್ದೆ. “ಹೀಗೆ ಹೋದರೆ ತುಂಬಾ ಮಾಡರ್ನ್ ಅಂತ ತಿಳ್ಕೊತಾರೆ, ಅವರ ಗಮನ ಬೇರೆ ಕಡೆ ಹೋಗಬಹುದು. ಏನಾದರೂ ಸಿಂಪಲ್ ಇಂಡಿಯನ್ ಡ್ರೆಸ್ ಹಾಕಿಕೋ,” ಎಂದು ನನ್ನ ಸಹೋದ್ಯೋಗಿ ಹೇಳಿದರು. ಇನ್ನೊಬ್ಬರಂತೂ, “ಸ್ಲೀವ್‌ಲೆಸ್ ಡ್ರೆಸ್ ಎಲ್ಲಾ ಇಲ್ಲಿ ಬೇಡ,” ಅಂದರು. ಅಂದಿನಿಂದ, ಕೆಲಸಕ್ಕೆ ಯಾವ ಬಟ್ಟೆ ಹಾಕಿಕೊಳ್ಳಬೇಕು ಅನ್ನೋದು ಪೊಲೀಸ್ ಆಫೀಸರ್ ಭೇಟಿ ಇದೆಯಾ ಇಲ್ವಾ ಅನ್ನೋದರ ಮೇಲೆ ನಿರ್ಧಾರವಾಗತೊಡಗಿತು.

ಕಳೆದ ತಿಂಗಳು ಸತ್ಯ ನಿಕೇತನದಲ್ಲಿ ಬಿಲ್ಡಿಂಗ್ ಬಿದ್ದು ಏಳು ಜನ ತೀರಿಕೊಂಡಾಗ, ನಾನು ರಾತ್ರಿ 11.30ರವರೆಗೂ ಸ್ಪಾಟ್‌ನಲ್ಲೇ ಇದ್ದೆ. ಜನ ನನಗೆ, “ರಾತ್ರಿಯಾಗಿದೆ, ಮನೆಗೆ ಹೊರಡಿ” ಅಂತ ಪದೇ ಪದೇ ಹೇಳ್ತಿದ್ದರು. ಆಮೇಲೆ ದುರ್ಗಾಬಾಯಿ ದೇಶಮುಖ್ ಸೌತ್ ಕ್ಯಾಂಪಸ್ ಮೆಟ್ರೋ ಕೆಳಗೆ 150-200 ಜನ ಸ್ಟೂಡೆಂಟ್ಸ್ ಜಮಾಯಿಸಿದ್ದಾಗ, ಸಂದಿಗ್ಥತೆ ಶುರವಾಯಿತು. ಸುದ್ದಿ ಮಾಡುವುದು ಮುಖ್ಯವೋ ಅಥವಾ ರಾತ್ರಿ ಹೊತ್ತು ಒಬ್ಬಳೇ ಓಡಾಡುವ ರಿಸ್ಕ್ ತಗೋಬೇಕೋ ಅಂತ ಯೋಚಿಸಿದೆ. ನನ್ನ ಆತಂಕ ಸುಳ್ಳೇನೂ ಆಗಿರಲಿಲ್ಲ: ಮಧ್ಯರಾತ್ರಿ ಸುಮಾರಿಗೆ, ಮೆಟ್ರೋ ಸ್ಟೇಷನ್‌ನಲ್ಲಿ ಇನ್ನೊಬ್ಬ ಗಂಡಸು ನನ್ನ ಕಣ್ಣೆದುರೇ ಬಟ್ಟೆ ಬಿಚ್ಚಿ ಅಂಗಾಂಗ ತೋರಿಸಿ ವಿಕೃತಿ ಮೆರೆದ.

journalist 5

ಕಳೆದ ವಾರ ದೆಹಲಿಯಲ್ಲಿ ಚೀಫ್ ಎಲೆಕ್ಷನ್ ಕಮಿಷನರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದಾಗ, ನನಗೆ ಮತ್ತೆ ಅದೇ ಗೊಂದಲ. ಗಲಾಟೆ ಜೋರಾದಾಗ, ಪೊಲೀಸರು ಸಿಕ್ಕವರನ್ನು ಹಿಡಿದುಕೊಂಡು ಹೋಗುವುದನ್ನು ಶೂಟ್ ಮಾಡಲು ಜನರ ಮಧ್ಯೆ ನುಗ್ಗಬೇಕಾ, ಅಥವಾ ದೂರವೇ ನಿಂತು ಆ ಮುಖ್ಯವಾದ ಕ್ಷಣವನ್ನು ಮಿಸ್ ಮಾಡ್ಕೋಬೇಕಾ? “ಮೇಡಂ, ನೀವು ದೂರ ಹೋಗಿ” ಅನ್ನೋ ಮಾತು ಪದೇ ಪದೇ ಕೇಳಿಬರ್ತಿತ್ತು.

ಇದನ್ನು ಓದಿದ್ದೀರಾ?: ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ ಕುಸಿಯುತ್ತಿರುವ ವಿಶ್ವಾಸಾರ್ಹತೆ

ಪತ್ರಕರ್ತೆಯರೂ ಸೇರಿದಂತೆ ಪ್ರತಿಭಟನೆಯಲ್ಲಿದ್ದ ಹಲವರನ್ನು ಪೊಲೀಸರು ಎಳೆದಾಡಿ ಕೆಟ್ಟದಾಗಿ ನಡೆಸಿಕೊಂಡರು ಎಂದು ಹಲವರು ದೂರಿದರು. ಜನ ಜಾಗ ಬಿಟ್ಟು ಕದಲದಿದ್ದಾಗ ಬಲಪ್ರಯೋಗ ಮಾಡದೆ ಬೇರೆ ದಾರಿ ಇರಲಿಲ್ಲ ಅಂತ ಪೊಲೀಸರು ಸಮರ್ಥಿಸಿಕೊಂಡರು. ಜನ ಎದ್ದು ಹೋಗದೆ ಹಠ ಹಿಡಿದಾಗ ಅವರನ್ನು ಎತ್ತಿಕೊಂಡು ಹೋಗಬೇಕಾಗುತ್ತದೆ ಅಂತ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನನಗೆ ಹೇಳಿದರು. ಇಂತಹ ಪ್ರತಿಭಟನೆಯ ಸಂದರ್ಭಗಳಲ್ಲಿ ಜನರನ್ನು ನಿಯಂತ್ರಿಸುವುದು ಮತ್ತು ಮೈಮೇಲೆ ಕೈಹಾಕಿ ದೌರ್ಜನ್ಯ ಮಾಡುವುದರ ನಡುವೆ ಗೆರೆ ಎಳೆಯುವುದು ಕಷ್ಟವಾಗಬಹುದು.

ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದನ್ನು ನೋಡಿ, ವರದಿ ಮಾಡಲು ದೆಹಲಿಗೆ ಬರೋಣ ಅಂದುಕೊಂಡಿದ್ದ ಗುಜರಾತ್‌ನ ಫೋಟೋ ಜರ್ನಲಿಸ್ಟ್ ಒಬ್ಬರು, “ಒಬ್ಬಳೇ ಅಲ್ಲಿಗೆ ಹೋಗುವುದು ಸೇಫಾ?” ಅನ್ನೋ ಒಂದು ಸರಳ ಪ್ರಶ್ನೆಗೆ ಹಿಂದೇಟು ಹಾಕುವಂತಾಯ್ತು.

2020 ರಲ್ಲಿ ಇಂಜಿನಿಯರಿಂಗ್ ಮುಗಿಸಿ ಸಿಕ್ಕಿದ್ದ ಒಳ್ಳೆ ಕೆಲಸವನ್ನು ಬಿಟ್ಟು ನಾನು ಜರ್ನಲಿಸಂಗೆ ಬಂದಾಗ, ಹೆಣ್ಣುಮಕ್ಕಳಿಗೆ ಈ ಫೀಲ್ಡ್ ಸೇಫ್ ಅಲ್ಲ ಅಂತ ನಮ್ಮಮ್ಮ ಕಂಗಾಲಾಗಿದ್ದರು. ಆರು ವರ್ಷಗಳ ನಂತರವೂ ನಾನು ಕ್ರೈಮ್ ಸೀನ್‌ಗಳು, ಲೇಟ್ ನೈಟ್ ಡ್ಯೂಟಿಗಳ ಬಗ್ಗೆ ಮಾತಾಡುವುದನ್ನು ಕೇಳಿದಾಗ, ಅಮ್ಮನ ಮನಸ್ಸಿನ ಆ ಭಯ ಕಿಂಚಿತ್ತೂ ಕಡಿಮೆಯಾಗಿಲ್ಲ ಅಂತ ಅರ್ಥವಾಗುತ್ತದೆ. ನನಗೆ ಯಾವಾಗಲೂ ಬೆನ್ನತ್ತಬೇಕಾದ ಇನ್ನೊಂದು ಸುದ್ದಿಯಿರುತ್ತೆ, ಮಾಡಬೇಕಾದ ಇನ್ನೊಂದು ಫೋನ್ ಕಾಲಿರುತ್ತೆ. ಆದರೆ ನಮ್ಮಮ್ಮನಿಗೆ ಮಾತ್ರ ಪ್ರತಿ ಕೆಲಸ ಮುಗಿದ ಮೇಲೂ ಕೇಳಲು ಒಂದು ಪ್ರಶ್ನೆ ಖಾಯಂ ಆಗಿ ಇರುತ್ತದೆ. “ಮನೆಗೆ ಸುರಕ್ಷಿತವಾಗಿ ತಲುಪಿದ್ಯಾ?”

ಕೃಪೆ: ದಿ ಹಿಂದೂ, ಮೂಲ: ಲವ್‌ಪ್ರೀತ್ ಕೌರ್‌, ಕನ್ನಡಕ್ಕೆ: ಟಿ.ಎಸ್.‌ ವೇಣುಗೋಪಾಲ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2 ರೂ.ಗಾಗಿ ಆಸೆಪಟ್ಟ ಹೋಟೆಲ್‌ಗೆ 1 ಲಕ್ಷ ರೂ. ದಂಡ!

ಮುದ್ರಿತ ‘ಗರಿಷ್ಠ ಚಿಲ್ಲರೆ ಬೆಲೆ’ಗಿಂತ (MRP) 2 ರೂಪಾಯಿ ಹೆಚ್ಚುವರಿ ವಸೂಲಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ ದೇಸೀ ತಳಿಗಳನ್ನು ಉಳಿಸಲು ಬದುಕನ್ನೇ ಮುಡಿಪಿಟ್ಟ ‘ಬೀಜಗಳ ಕಾವಲುಗಾರ’!

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ...