ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ (ಜೆಎನ್‌ಯು) ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಅಂಗವಿಕಲ ವಿದ್ಯಾರ್ಥಿಗೆ ಎಬಿವಿಪಿ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿಯನ್ನು ಫಾರೂಕ್ ಆಲಂ ಎಂದು ಗುರುತಿಸಲಾಗಿದೆ. ಫಾರೂಕ್ ಅವರು ಎನ್‌ಎಸ್‌ಯುಐ ಹಿರಿಯ ಕಾರ್ಯಕರ್ತರಾಗಿದ್ದಾರೆ.
ಬುಧವಾರದಂದು ಕಾವೇರಿ ಹಾಸ್ಟೆಲ್‌ನಲ್ಲಿ ಎಬಿವಿಪಿಯ ಕೆಲವು ಸದಸ್ಯರು ಫಾರೂಕ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎನ್‌ಎಸ್‌ಯುಐ ಹೇಳಿಕೊಂಡಿದೆ.
ಕಾವೇರಿ ಹಾಸ್ಟೆಲ್‌ನಲ್ಲಿ ಇಂದು ನಡೆದ ಭೀಕರ ಘಟನೆಯಲ್ಲಿ, ಕಾವೇರಿ ಹಾಸ್ಟೆಲ್‌ನ ಹಿರಿಯ ವಾರ್ಡನ್ ಮತ್ತು ಅವರ ಎಬಿವಿಪಿ ಗೂಂಡಾಗಳು ಎನ್‌ಎಸ್‌ಯುಐ ಕಾರ್ಯಕರ್ತ ಮತ್ತು ಜೆಎನ್‌ಯುನಲ್ಲಿ ಅಂಗವಿಕಲ ಸಂಶೋಧನಾ ವಿದ್ಯಾರ್ಥಿಯಾಗಿರುವ ಫಾರೂಕ್ ಆಲಂ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತು ಕ್ರಮ ಕೈಗೊಳ್ಳುವಂತೆ ಎನ್‌ಎಸ್‌ಯುಐ ಟ್ವೀಟ್ ಮೂಲಕ ಒತ್ತಾಯಿಸಿದೆ.
ಗಾಯಗೊಂಡ ಫಾರೂಕ್ ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿದೆ.
ಜೆಎನ್‌ಯು ಕ್ಯಾಂಪಸ್ ಈಗ ಶಿಕ್ಷಣಕ್ಕಿಂತ ಗಲಭೆಗಳಿಗೆ ಹೆಚ್ಚು ಪ್ರಸಿದ್ಧಿಯಾಗಿದೆ. ಜೆಎನ್‌ಯು ಆಡಳಿತಯು ಬಿಜೆಪಿಯ ರಾಜಕೀಯ ಶಕ್ತಿಯಿಂದ ರಕ್ಷಿಸಲ್ಪಟ್ಟಿದ್ದು, ಅಧೀನ ಸಂಸ್ಥೆ ಎಬಿವಿಪಿ ವಿದ್ಯಾರ್ಥಿಗಳು ಗಲಭೆಯ ಕಾರಣಕರ್ತರಾಗಿದ್ದಾರೆ.
ಜೆಎನ್‌ಯುನಿಂದ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಗಾಯಾಳು ವಿದ್ಯಾರ್ಥಿ ಫಾರೂಕ್ ಇನ್ನೆರಡು ತಿಂಗಳಲ್ಲಿ ಪಿಎಚ್‌ಡಿ ಮುಗಿಸಲಿದ್ದಾರೆ. ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೇರಿ ಹಾಸ್ಟೆಲ್‌ನಲ್ಲಿರುವ ಫಾರೂಕ್ ಅವರ ಕೊಠಡಿಯನ್ನು ಖಾಲಿ ಮಾಡಲು ಜೆಎನ್‌ಯು ಆಡಳಿತವು ಮಧ್ಯಾಹ್ನ ಬಂದಾಗ ಈ ಘಟನೆ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ಅಂಗಿ ಕಳಚಿ ಎಂದರು, ನಾನು ದೇಗುಲದ ಒಳಗೆ ಕಾಲಿಡಲಿಲ್ಲ: ಕೇರಳ ಘಟನೆ ಮೆಲುಕು ಹಾಕಿದ ಸಿದ್ದರಾಮಯ್ಯ
ಫಾರೂಕ್ ಅವರ ಜೊತೆಗಿದ್ದ ಕೆಲವು ಎಬಿವಿಪಿ ವಿದ್ಯಾರ್ಥಿಗಳು ಅವರ ಜೊತೆ ಜಗಳವಾಡಿದ್ದಲ್ಲದೆ ಥಳಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ಅವರನ್ನು ನಂತರ ಆಂಬ್ಯುಲೆನ್ಸ್ ಮೂಲಕ ಏಮ್ಸ್‌ಗೆ ಕರೆದೊಯ್ಯಲಾಯಿತು.
ಜೆಎನ್‌ಯು ಕ್ಯಾಂಪಸ್‌ನ ಎಸ್‌ಎಫ್‌ಐ ಸಂಘಟನೆ ಕೂಡ ಇಡೀ ಘಟನೆಯನ್ನು ವಿರೋಧಿಸಿದೆ. ಎಲ್ಲ ವಿದ್ಯಾರ್ಥಿಗಳು ಒಗ್ಗೂಡಿ ಎಬಿವಿಪಿ ವಿರುದ್ಧ ಪ್ರತಿಭಟಿಸುವಂತೆ ಕರೆ ನೀಡಿದೆ.