ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯೊಳಗೆ ಎಎಪಿ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಅರವಿಂದ್ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್ ಬಂಧಿಸಿದ್ದಾರೆ.
ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ 7-8 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಹೊಟ್ಟೆಗೆ ಒದ್ದಿದ್ದಾರೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ. ಇದಾದ ಬಳಿಕ ದೆಹಲಿ ಪೊಲೀಸರು ಬಿಭವ್ ಕುಮಾರ್ ವಿರುದ್ಧ ಐಪಿಸಿಯ ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Analysing the #SwatiMaliwal case through this video:
If this video was recorded before the alleged assault, there’s no way she could have been assaulted the way she has written in the FIR after this, in presence of so many security staff including a female staff.
If this video… pic.twitter.com/RNnmzYkC04
— Deepika Narayan Bhardwaj (@DeepikaBhardwaj) May 17, 2024
ಆಮ್ ಆದ್ಮಿ ಪಕ್ಷವು ಬಿಭವ್ ಕುಮಾರ್ ಪರವಾಗಿ ನಿಂತಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಲು ಬಿಜೆಪಿಯು ಸ್ವಾತಿ ಮಲಿವಾಲ್ ಅವರನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಹಾಗೆಯೇ ಬಿಭವ್ ಕುಮಾರ್ ಮತ್ತು ಸ್ವಾತಿ ಮಲಿವಾಲ್ ನಡುವೆ ವಾಗ್ವಾದದ ಹೊಸ ವಿಡಿಯೋವನ್ನು ಕೂಡಾ ಹಂಚಿಕೊಂಡಿದೆ.
ಇದನ್ನು ಓದಿದ್ದೀರಾ? ಸ್ವಾತಿ ಮಲಿವಾಲ್ ಪ್ರಕರಣ | ಎಫ್ಐಆರ್ ಬಳಿಕ ಹೊರಗಡೆ ಬಂದ ಘಟನೆಯ ಹೊಸ ವೀಡಿಯೋ!
ಈ ವಿಡಿಯೋ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಬಂದ ಸಂಸದೆಯನ್ನು ಭದ್ರತಾ ಸಿಬ್ಬಂದಿ ತಡೆಯುತ್ತಾರೆ. ಹೀಗಾಗಿ ಅಲ್ಲಿಗೆ ಬಂದ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್, “ನೀವು ಈಗ ಭೇಟಿ ಮಾಡಲು ಸಾಧ್ಯವಿಲ್ಲ. ನೀವು ಇಲ್ಲಿಂದ ಹೊರಡಿ” ಎಂದು ಸ್ವಾತಿ ಮಲಿವಾಲ್ ಗೆ ಸೂಚಿಸುತ್ತಾರೆ.
“ಈ ವೇಳೆ, ಇಲ್ಲ ನಾನು ಇಲ್ಲಿಯೇ ಇರುತ್ತೇನೆ. ನೀವು ನನ್ನ ಮೇಲೆ ದಬ್ಬಾಳಿಕೆ ನಡೆಸಿದರೆ, ನನ್ನನ್ನು ಮುಟ್ಟಿದರೆ ನಾನು ಪೊಲೀಸರಿಗೆ ಕರೆ ಮಾಡಬೇಕಾಗುತ್ತದೆ” ಎಂದು ಸ್ವಾತಿ ಹೇಳುತ್ತಾರೆ. ಮುಂದೆ ನಿಮ್ಮ ಕೆಲಸ ಸಹ ಹೋಗಬಹುದು ಎಂದು ಎಚ್ಚರಿಸುತ್ತಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಸ್ವಾತಿ ಅವರು, ಬಿಭವ್ಗೆ ‘ಗಾಂಜಾ ಸಾಲಾ’ ಎಂದು ಸ್ವಾತಿ ಮಲಿವಾಲ್ ಕರೆದಿರುವಲ್ಲಿಗೆ ವಿಡಿಯೋ ಕಟ್ ಆಗುತ್ತದೆ. ಇದಾದ ನಂತರ ಹಲ್ಲೆ ನಡೆದಿರಬಹುದು ಎಂದು ವರದಿಯಾಗಿದೆ.
Arvind kejriwal claims to be a friend of the common man. Why should his own associate seek an appointment and go through this security barrier. When he was asked pointed questions on this cas he offered the mike to Sanjay Singh. The latter mentioned every other case involving the BJP and evaded the question. The irony is that he had himself condemned the attack on Swati Maliwal. Arvind Kejriwal has maintained studied silence while trolls on his behalf are indulging in her character assassination.
The material question is, what led to the rift between Arvind Kejriwal and Swati Maliwal?
This website has to make a serious investigation of the issue instead of relying on handouts from the AAP.