2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪಕ್ಷದ ಸಂಸ್ಥಾಪಕ, ನಟ ವಿಜಯ್ ಆಯ್ಕೆಯಾಗಿದ್ದಾರೆ. ವಿಜಯ್ ಅವರೇ ಮುಖ್ಯಮಂತ್ರಿ ಎಂದು ಟಿವಿಕೆ ಅಧಿಕೃತವಾಗಿ ಘೋಷಿಸಿದೆ.
ಮುಂದಿನ ವರ್ಷದ ಆರಂಭದಲ್ಲಿ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಗಾಗಿ ಟಿವಿಕೆ ಪಕ್ಷವು ಸಿದ್ಧತೆ ನಡೆಸುತ್ತಿದೆ. ವಿಜಯ್ ಅವರು ಸೆಪ್ಟೆಂಬರ್‌ನಿಂದ ಡಿಸೆಂಬರ್ ಕೊನೆಯವರೆಗೆ ತಮಿಳುನಾಡಿನಾದ್ಯಂತ ಪ್ರವಾಸ ಮಾಡಲಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಪಕ್ಷವು ತಿಳಿಸಿದೆ.
ಟಿವಿಕೆ ಕಾರ್ಯಕಾರ್ಯ ಸಮಿತಿಯ ಸಭೆಯಲ್ಲಿ ವಿಜಯ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಮಾತನಾಡಿದ ವಿಜಯ್, ಆಡಳಿತಾರೂಢ ಡಿಎಂಕೆ-ಕಾಂಗ್ರೆಸ್ ಅಥವಾ ವಿಪಕ್ಷ ಎಐಎಡಿಎಂಕೆ-ಬಿಜೆಪಿ ಜೊತೆಗಿನ ಮೈತ್ರಿಯನ್ನು ತಳ್ಳಿಹಾಕಿದ್ದಾರೆ. ಈ ಪಕ್ಷಗಳು ತಮ್ಮ ಪಕ್ಷದ ‘ಸೈದ್ಧಾಂತಿಕ ಶತ್ರುಗಳು’ ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸುವುದರಿಂದ ಉಂಟಾಗುವ ಬಿಕ್ಕಟ್ಟುಗಳೇನು ಬಲ್ಲಿರಾ?
“ನಮ್ಮ ಪಕ್ಷವು ಬಿಜೆಪಿ ಜೊತೆ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಾವು ಸಾರ್ವಜನಿಕವಾಗಿ ಮಾತ್ರವಲ್ಲ, ತೆರೆಯ ಹಿಂದೆಯೂ ಬಿಜೆಪಿ ಜೊತೆ ಮೈತ್ರಿ ಸಾಧ್ಯವೇ ಇಲ್ಲ. ಬಿಜೆಪಿ ದೇಶದ ವಿವಿಧೆಡೆ ವಿಷ-ದ್ವೇಷದ ಬೀಜ ಬಿತ್ತುತ್ತಿದೆ. ಆದರೆ ತಮಿಳುನಾಡಿನಲ್ಲಿ ಅದು ಸಾಧ್ಯವಿಲ್ಲ. ಬಿಜೆಪಿಗರು ಅಣ್ಣಾ, ಪರೆಯಾರ್ ಅವರನ್ನು ವಿರೋಧಿಸಲು ಮತ್ತು ತಮಿಳುನಾಡನ್ನು ಗೆಲ್ಲಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
Wow Super Statement, Nimma Periyar ravarige Ittiruva Nambikege Tumba Tumba Dhanyavadagalu,
Nimma Paksha 2026kke Vijyotsva Acharisali Endu Harisuttene.