ಮುಂಬೈನ ಅಟಲ್ ಸೇತುವಿನಿಂದ ಅರಬ್ಬಿ ಸಮುದ್ರಕ್ಕೆ ಬೀಳುತ್ತಿದ್ದ 56 ವರ್ಷದ ಮಹಿಳೆಯನ್ನು ಟ್ಯಾಕ್ಸಿ ಚಾಲಕ ಮತ್ತು ನಾಲ್ವರು ಟ್ರಾಫಿಕ್ ಪೊಲೀಸರು ಚಾಣಾಕ್ಷತೆಯಿಂದ ರಕ್ಷಿಸಿದ್ದಾರೆ. ಮಹಿಳೆಯನ್ನು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರಬ್ಬಿ ಸಮುದ್ರದ ಮೇಲೆ ನಿರ್ಮಿಸಿರುವ ಅಟಲ್ ಸೇತುವೆ ದಕ್ಷಿಣ ಮುಂಬೈನಿಂದ ನವಿ ಮುಂಬೈಗೆ ಸಂಪರ್ಕ ಒದಗಿಸುತ್ತದೆ. ಶುಕ್ರವಾರ ಸಂಜೆ, ಟ್ಯಾಕ್ಸಿಯಲ್ಲಿ ಸೇತುವೆ ಬಳಿಗೆ ಬಂದ ಮುಲುಂಡ್ ನಿವಾಸಿ ರೀಮಾ ಮುಖೇಶ್ ಪಟೇಲ್ ಅವರು ಸೇತುವೆ ಕ್ರ್ಯಾಶ್ ಬ್ಯಾರಿಯರ್ಗೆ ನಡೆದುಕೊಂಡು ಹೋಗಿದ್ದು, ರೇಲಿಂಗ್ ಮೇಲೆ ಹತ್ತಿದ್ದು, ಸಮುದ್ರಕ್ಕೆ ಹಾರಲು ಯತ್ನಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈರಲ್ ವೀಡಿಯೊದಲ್ಲಿ, ಟ್ಯಾಕ್ಸಿ ಡ್ರೈವರ್ ಅವಳ ಹತ್ತಿರ ನಿಂತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಗಸ್ತು ತಿರುಗುತ್ತಿದ್ದ ಪೋಲೀಸ್ ವಾಹನವೂ ಅಲ್ಲಿಗೆ ಬಂದಿದೆ. ಪೊಲೀಸರನ್ನು ನೋಡಿದ ಮಹಿಳೆ ಕುಳಿತ ಜಾಗದಿಂದ ಸಮುದ್ರಕ್ಕೆ ಜಿಗಿಯುತ್ತಾರೆ. ಒಂದೇ ಒಂದು ಸೆಕೆಂಡ್ನಲ್ಲಿ ಮಹಿಳೆಯ ಕೂದಲನ್ನು ಟ್ಯಾಕ್ಸಿ ಡ್ರೈವರ್ ಹಿಡಿದುಕೊಂಡಿದ್ದು, ನಾಲ್ವರು ಪೊಲೀಸರು ಸ್ಪ್ರಿಂಟ್ ಮತ್ತು ರೇಲಿಂಗ್ ಮೇಲೆ ಹತ್ತಿ ಆಕೆಯನ್ನು ಮೇಲೆ ಎಳೆದುಕೊಂಡಿದ್ದಾರೆ.
“ಪೊಲೀಸರಲ್ಲಿ ಒಬ್ಬರು ಕೆಳಗೆ ಬಾಗಿ ಆಕೆಯನ್ನು ಹಿಡಿದುಕೊಂಡಿದ್ದಾರೆ. ಬಳಿಕ, ನಾಲ್ವರು ಪೊಲೀಸರು ನಿಧಾನವಾಗಿ ಮಹಿಳೆಯನ್ನು ಮೇಲೆ ಎಳೆದುಕೊಂಡಿದ್ದು, ಆಕೆಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಸ್ಥಳೀಯ ಅಧಿಕಾರಿ ತಿಳಿಸಿದ್ದಾರೆ.
“ಪೊಲೀಸರು ತನ್ನ ಬಳಿಗೆ ಬರುವುದನ್ನು ನೋಡಿದ ನಂತರ ಭಯದಿಂದ ನಿಯಂತ್ರಣ ಕಳೆದುಕೊಂಡು, ಸೇತುವೆಯಿಂದ ಬಿದ್ದಿದ್ದಾಗಿ ಮಹಿಳೆ ಕೇಳಿಕೊಂಡಿದ್ದಾರೆ. ನ್ಹವಾ ಶೇವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದು ಅಧಿಕಾರಿ ವಿವರಿಸಿದ್ದಾರೆ.