ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವರದಿಗಾಗಿ ತೆರಳಿದ್ದಾಗ ವರದಿಗಾರನ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೊಸದಾಗಿ ನೇಮಕಗೊಂಡಿರುವ ತೆಲಂಗಾಣ ಡಿಜಿಪಿ ಜೀತೇಂದರ್ ಅವರಿಗೆ ಪತ್ರಕರ್ತರ ಗುಂಪು ಮನವಿ ಸಲ್ಲಿಸಿದೆ
ಉಸ್ಮಾನಿಯಾ ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜೇಂದರ್ ಅವರು ತೆಲುಗು ಟಿವಿ ಸುದ್ದಿ ವಾಹಿನಿಯ ವರದಿಗಾರ ಚರಣ್ ಅವರ ಕಾಲರ್ ಹಿಡಿದು ಎಳೆದಾಡಿದ್ದಾರೆ. ಗಸ್ತು ಕಾರಿನಲ್ಲಿ ಕುಳಿತುಕೊಳ್ಳುವಂತೆ ಒತ್ಥಾಯ ಮಾಡಿದ್ದಾರೆ ಎಂದು ಪತ್ರಕರ್ತರ ನಿಯೋಗವು ಡಿಜಿಪಿಗೆ ತಿಳಿಸಿದೆ.
ಪತ್ರಕರ್ತ ಚರಣ್ ಅವರನ್ನು ಪೊಲೀಸರು ಠಾಣೆಗೆ ಎಳೆದೊಯ್ದರು. ಕ್ಯಾಮೆರಾಗಳನ್ನು ಆಫ್ ಮಾಡಲು ವಿಡಿಯೋಗ್ರಾಫರ್‌ಗಳಿಗೆ ಬೆದರಿಕೆ ಹಾಕಿದರು ಎಂದು ನಿಯೋಗವು ಆರೋಪಿಸಿದೆ.
ಬುಧವಾರ ಉಸ್ಮಾನಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಮತ್ತು ವರದಿ ಮಾಡುತ್ತಿದ್ದ ಪತ್ರಕರ್ತರು ಪೊಲೀಸರು ಬಂಧಿಸಿದ್ದರು ಎಂದು ಆರೋಪಿಸಲಾಗಿದೆ.