2023ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದು, ಇನ್ನೂ ಮತ ಎಣಿಕೆ ನಡೆಯುತ್ತಿದೆ. ಈ ನಡುವೆ, ಮುಖ್ಯಮಂತ್ರಿ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬ ಚರ್ಚೆಗಳು ಬಿರುಸು ಪಡೆದಿವೆ. ಸದ್ಯ ಸಿಎಂ ರೇಸಿನಲ್ಲಿ ಕೋಮಟಿ ರೆಡ್ಡಿ ವೆಂಕಟರೆಡ್ಡಿ, ಭಟ್ಟಿ ವಿಕ್ರಮಾರ್ಕ, ಸೀತಕ್ಕ ಹಾಗೂ ರೇವಂತ್ ರೆಡ್ಡಿ ಇದ್ದು, ಕಾಂಗ್ರೆಸ್ ಹೈಕಮಾಂಡ್ ಯಾರ ಕೈ ಹಿಡಿಯಲಿದ್ದಾರೆ ಎಂದು ಕಾದು ನೋಡಬೇಕಿದೆ.
ಈ ನಡುವೆ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದು, “ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಸೋನಿಯಾ ಗಾಂಧಿ ನಿರ್ಧಾರ ಮಾಡುತ್ತಾರೆ. ಮೊದಲ ಆರು ತಿಂಗಳಲ್ಲೇ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಡಿಸೆಂಬರ್ 9ರಂದು ಸೋನಿಯಾ ಹುಟ್ಟುಹಬ್ಬವಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ಮೂಲಕ ಸೋನಿಯಾ ಗಾಂಧಿ ಅವರಿಗೆ ‘ಬರ್ತ್ ಡೇ ಗಿಫ್ಟ್’ ನೀಡುತ್ತೇವೆ” ಎಂದು ಕಾಂಗ್ರೆಸ್ ಮುಖಂಡ ಕೋಮಟಿ ರೆಡ್ಡಿ ವೆಂಕಟರೆಡ್ಡಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಚಾರ್ಮಿನಾರ್ ಕ್ಷೇತ್ರದ ಓವೈಸಿ ಪಕ್ಷದ ಅಭ್ಯರ್ಥಿ ಜುಲ್ಫಿಕರ್ ಅಲಿ ಗೆಲುವು
ತೆಲಂಗಾಣ ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುಂದಿದೆ. ಈ ನಡುವೆ, ಡಿಜಿಪಿ ಅಂಜನಿ ಕುಮಾರ್, ಮಹೇಶ್ ಭಾಗವತ್ ಹಾಗೂ ಸಂಜಯ್ ಕುಮಾರ್ ಜೈನ್ ಅವರು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಿಎಂ ಆಕಾಂಕ್ಷಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ, ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೋಮಟಿ ರೆಡ್ಡಿ ವೆಂಕಟರೆಡ್ಡಿ “ಸಿಎಂ ಅಭ್ಯರ್ಥಿ ಬಗ್ಗೆ ಎಲ್ಲ ಶಾಸಕರು ತೀರ್ಮಾನ ಕೈಗೊಳ್ಳುತ್ತಾರೆ. ರೇವಂತ್ ರೆಡ್ಡಿ ಪಕ್ಷದ ಅಧ್ಯಕ್ಷರಾಗಿದ್ದರಿಂದ ಡಿಜಿಪಿ ಭೇಟಿ ಮಾಡಿದ್ದಾರೆ, ಅಷ್ಟೇ” ಎಂದರು.
ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿದಿದೆ. ಕಾಮಾರೆಡ್ಡಿ ಕ್ಷೇತ್ರದಲ್ಲಿ ರೇವಂತ್ ರೆಡ್ಡಿ ಮುನ್ನಡೆಯಲ್ಲಿದ್ದಾರೆ. 8 ಸುತ್ತುಗಳ ಅಂತ್ಯಕ್ಕೆ ರೇವಂತ್ ರೆಡ್ಡಿ 26,437 ಮತಗಳನ್ನು ಪಡೆದರೆ, ಸಿಎಂ ಕೆಸಿಆರ್ 24,091 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗೆ 23,802 ಮತ ಪಡೆದಿದ್ದಾರೆ. ಇದರೊಂದಿಗೆ ರೇವಂತ್ ರೆಡ್ಡಿ 2346 ಮತಗಳ ಮುನ್ನಡೆ ಸಾಧಿಸಿದ್ದಾರೆ.
ರೇವಂತ್ ರೆಡ್ಡಿ ಗೆಲುವು
ಕೊಡಂಗಲ್‌ನಲ್ಲಿ ರೇವಂತ್ ರೆಡ್ಡಿ ಗೆದ್ದಿದ್ದಾರೆ. ಬಿಆರ್‌ಎಸ್ ಅಭ್ಯರ್ಥಿ ಪಟ್ನಂ ನರೇಂದ್ರ ರೆಡ್ಡಿ ವಿರುದ್ಧ 32,800 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಉತ್ತಮ್ ಕುಮಾರ್ ರೆಡ್ಡಿ ಗೆಲುವು
ಹುಜೂರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉತ್ತಮ್ ಕುಮಾರ್ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಬಿಆರ್‌ಎಸ್ ಅಭ್ಯರ್ಥಿ ವಿರುದ್ಧ ಅವರು ಜಯಗಳಿಸಿದ್ದಾರೆ.
ಮೇಡಕ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೈನಂಪಲ್ಲಿ ರೋಹಿತ್ ಬಿಆರ್ ಎಸ್ ಅಭ್ಯರ್ಥಿ ಪದ್ಮಾದೇವೇಂದ್ರ ರೆಡ್ಡಿ ವಿರುದ್ಧ ಜಯಗಳಿಸಿದ್ದಾರೆ.
ಅಂಬರ್‌ಪೇಟೆಯಲ್ಲಿ ಬಿಆರ್‌ಎಸ್ ಅಭ್ಯರ್ಥಿ ಕಾಳೇರು ವೆಂಕಟೇಶ್ ಗೆಲುವು ಸಾಧಿಸಿದ್ದಾರೆ.