ದಿನಕ್ಕೆ 10 ರೂ. ಕೂಲಿ ಸಂಪಾದಿಸುತ್ತಿದ್ದವನ ಮಗ ಈಗ 3 ಸಾವಿರ ಕೋಟಿ ರೂ. ಕಂಪನಿಯ ಒಡೆಯ

Date:

Advertisements

ಈತನ ಕುಟುಂಬ ಒಪ್ಪತ್ತಿನ ಊಟಕ್ಕೂ ಕಷ್ಟಪಡುತ್ತಿತ್ತು. ಈತನ ತಂದೆ ನಿತ್ಯ ಕೂಲಿ ಕೆಲಸ ಮಾಡಿ 10 ರೂ. ಸಂಪಾದಿಸಿದರೆ ಮಾತ್ರ ಮನೆಮಂದಿ ಹಸಿವನ್ನು ನೀಗಿಸಿಕೊಳ್ಳಬೇಕಿತ್ತು. ಕೂಲಿ ತಪ್ಪಿದರೆ ಊಟವಿಲ್ಲದೆ ಪೂರ್ತಿ ಕುಟುಂಬ ಉಪವಾಸದಿಂದ ಇರಬೇಕಿತ್ತು. ಅದೇ ಕುಟುಂಬದಲ್ಲಿ ಜನಿಸಿದ ಯುವಕನೀಗ ಕಷ್ಟಪಟ್ಟು ಮೇಲೆ ಬಂದು 3 ಸಾವಿರ ಕೋಟಿ ಕಂಪನಿಯ ಓಡೆಯನಾಗಿದ್ದಾನೆ.

‘ಐಡಿ ಫ್ರೆಶ್ ಫುಡ್‌’ ಮೂಲಕ ದೇಶದಲ್ಲಿ ಖ್ಯಾತಿ ಗಳಿಸಿರುವ ಮುಸ್ತಫಾ ಪಿ ಸಿ ಎಂಬುವವರ ನಿಜ ಜೀವನದ ಕಥೆ ಇದು. ಐಡಿ ಫ್ರೆಶ್ ಫುಡ್‌ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿರುವ ಮುಸ್ತಫಾ ಜನಿಸಿದ್ದು ಕೇರಳದ ಕುಗ್ರಾಮದಲ್ಲಿ. ಇವರ ತಂದೆ ದಿನಗೂಲಿ ಕಾರ್ಮಿಕರಾಗಿದ್ದರು. ಅವರು ದಿನಕ್ಕೆ 10 ರೂ. ಮಾತ್ರ ಸಂಪಾದಿಸುತ್ತಿದ್ದರು. ಈ ಹಣದಿಂದಲೇ ಮುಸ್ತಫಾ ಜೀವನ ನಡೆಯುತ್ತಿತ್ತು.

ದಿ ನಿಯಾನ್ ಶೋ ಎಂಬ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಜೀವನ ಹಾಗೂ ವೃತ್ತಿ ಬೆಳವಣಿಗೆಯ ಬಗ್ಗೆ ಮುಸ್ತಫಾ ಪಿ ಸಿ ಮಾಹಿತಿ ಹಂಚಿಕೊಂಡಿದ್ದಾರೆ.

Advertisements

ಶುಂಠಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇವರ ತಂದೆಯನ್ನು ಬೆಂಬಲಿಸಲು ಮುಸ್ತಾಫಾ ಅವರು ಬಾಲ್ಯದಲ್ಲಿ ತಮ್ಮ ಒಡಹುಟ್ಟಿದವರ ಜೊತೆಯಲ್ಲಿ ಅದೇ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಶುಂಠಿ ತೋಟದಲ್ಲಿ ಕೆಲಸ ಮಾಡುವುದರ ಜೊತೆ ಅವರು ತಮ್ಮ ಒಡಹುಟ್ಟಿದವರ ಜೊತೆ ತಮ್ಮ ಕುಟುಂಬದ ಆದಾಯಕ್ಕೆ ಪೂರಕವಾಗಿ ಕಾಡಿನಿಂದ ಗ್ರಾಮಕ್ಕೆ ಕಟ್ಟಿಗೆ ತಂದು ಮಾರಾಟ ಮಾಡುತ್ತಿದ್ದರು.

ಹತ್ತಾರು ಕೆಲಸಗಳನ್ನು ಮಾಡುವುದರೊಂದಿಗೆ ಪ್ರತಿ ಪೈಸೆಯನ್ನು ಉಳಿಸಿ ಅಂತಿಮವಾಗಿ ಒಂದು ಮೇಕೆಯನ್ನು ಖರೀದಿಸಿದರು. ಸಣ್ಣ ಮೇಕೆ ಮುಸ್ತಾಫಾರವರ ಕುಟುಂಬದ ಮೊದಲ ಆಸ್ತಿಯಾಗಿತ್ತು. ಒಂದು ಮೇಕೆಯಿಂದ ನಾಲ್ಕಾರು ಮೇಕೆಗಳಾದವು. ಇವರ ಕುಟುಂಬ ಈ ಮೇಕೆಗಳನ್ನೆಲ್ಲ ಮಾರಿ ಒಂದು ಹಸುವನ್ನು ಖರೀದಿಸಿತು. ಮನೆಗೆ ಹಸು ಬಂದ ಮೇಲೆ ಕುಟುಂಬಕ್ಕೆ ಒಂಚೂರು ನೆಮ್ಮದಿ ಕಾಣುವಂತಾಯಿತು. ಹಸುವಿನ ಹಾಲು ಮಾರಾಟ ಮಾಡಿ ಮೂರು ಹೊತ್ತು ಊಟ ಮಾಡಲು ಸಾಧ್ಯವಾಯಿತು.

50 ಸಾವಿರ ಬಂಡವಾಳದಿಂದ ಬೆಂಗಳೂರಿನಲ್ಲಿ ಕಂಪನಿ ಶುರು

ಹೀಗೆಯೆ ಜೀವನ ಸಾಗಿಸುತ್ತ ಕಷ್ಟಪಟ್ಟು ಸ್ಕಾಲರ್‌ಶಿಪ್‌ ಪಡೆದು ಕೇರಳದ ಕಲ್ಲಿಕೋಟೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್‌ ಪದವಿ ಪಡೆದರು. ಪದವಿ ಪಡೆದ ನಂತರ ಮುಸ್ತಾಫಾರವರು ಆರಂಭದ ಒಂದೆರೆಡು ವರ್ಷ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದರು. ಆದರೆ ಯಾಕೋ ಇದು ಸಮಾಧಾನವಾಗಲಿಲ್ಲ. ತಮ್ಮ ಸೋದರ ಸಂಬಂಧಿಗಳಾದ ಶಂಸುದ್ದೀನ್ ಟಿಕೆ, ಅಬ್ದುಲ್ ನಾಜರ್, ಜಾಫರ್ ಟಿಕೆ ಮತ್ತು ನೌಶಾದ್ ಟಿಡಿ ಅವರೊಂದಿಗೆ 50 ಸಾವಿರ ರೂ. ಬಂಡವಾಳದೊಂದಿಗೆ  2005ರಲ್ಲಿ  ಬೆಂಗಳೂರು ನಗರದ ಒಂದು ಚಿಕ್ಕ ಕೊಠಡಿಯಲ್ಲಿ ತಾಜಾ ಆಹಾರ ಉತ್ಪನ್ನವನ್ನು ಪ್ಯಾಕೆಟ್‌ಗಳಲ್ಲಿ ತಯಾರಿಸುವ “ಐಡಿ ಫ್ರೆಶ್ ಫುಡ್‌” ಎಂಬ ಕಂಪನಿ ಸ್ಥಾಪಿಸಿದರು. ಐಡಿ ಎಂದರೆ ಇಡ್ಲಿ, ದೋಸೆ ಎಂಬುದಾಗಿದೆ.

ಈ ಸುದ್ದಿ ಓದಿದ್ದೀರಾ? ಗುಜರಾತ್: ಕಳೆದ 3 ವರ್ಷಗಳಲ್ಲಿ 5 ವರ್ಷದೊಳಗಿನ 40 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ

ಆರಂಭದಲ್ಲಿ ಇವರು ಉದ್ಯಮದಲ್ಲಿ ಏಳುಬೀಳು ಕಂಡರು. 100 ಪ್ಯಾಕೆಟ್ ತಯಾರಿಸಿ ಮಾರುಕಟ್ಟೆಗೆ ಕಳಿಸಿದರೆ 90 ವಾಪಸ್‌ ಬರುತ್ತಿತ್ತು. ಸೋಲನ್ನು ಎದೆಗುಂದದೆ ಇದನ್ನೇ ಸವಾಲಾಗಿ ಸ್ವೀಕರಿಸಿ ತಮ್ಮ ಉದ್ಯಮವನ್ನು ಯಶಸ್ವಿಗೊಳಿಸಿದರು. ಮುಸ್ತಾಫಾ ಮತ್ತು ಅವರ ತಂಡದ ಬದ್ಧತೆಯೊಂದಿಗೆ ಸಂಸ್ಥೆಯು ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧಿ ಪಡೆಯಿತು. ಇವರ ಐಡಿ ಫ್ರೆಶ್ ಉತ್ಪನ್ನ ಎಲ್ಲಡೆ ಮಾರಾಟವಾಗಲು ಶುರುವಾಯಿತು. ಐಡಿ ಫ್ರೆಶ್ ಫುಡ್‌ ಬೆಂಗಳೂರಿನಲ್ಲಿ ಈಗ ಹಲವು ಮಳಿಗೆಗಳನ್ನು ಹೊಂದಿದೆ.

ಸದ್ಯ ಮೂರು ಸಾವಿರ ಕೋಟಿ ರೂ. ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ “ಐಡಿ ಫ್ರೆಶ್ ಫುಡ್‌” ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದು ಅಲ್ಲಿಯೂ ಮಾರಾಟಗೊಳ್ಳುತ್ತಿದೆ. ಇಡ್ಲಿ, ದೋಸೆ ಮಾತ್ರವಲ್ಲದೆ ಪರೋಟಾ ಸೇರಿದಂತೆ ಇನ್ನಿತರ ತಿನಿಸುಗಳಿಗೂ ಫ್ರೆಶ್ ಫುಡ್‌ ವಿಸ್ತಾರಗೊಂಡಿದೆ.

“ಆಹಾರ ವ್ಯಾಪಾರವನ್ನು ನಡೆಸುವುದು ತುಂಬಾ ಕಷ್ಟ. ಆದರೆ ರಾಸಾಯನಿಕಗಳು ಮತ್ತು ಸಂರಕ್ಷಕಗಳನ್ನು ಸೇರಿಸದೆ ತಾಜಾ ಆಹಾರ ವ್ಯಾಪಾರವನ್ನು ನಡೆಸುವುದು ವಿಶ್ವದ ಅತ್ಯಂತ ಕಠಿಣ ಕೆಲಸವಾಗಿದೆ. ಆರಂಭಿಕ ಹಿನ್ನಡೆಗಳ ನಂತರವೂ, ಐಡಿ ಫ್ರೆಶ್ ಫುಡ್ ಅನೇಕರಿಗೆ ಮೆಚ್ಚುಗೆಯಾಯಿತು. ನಾವು ವಿಶ್ವದ ಅತಿದೊಡ್ಡ ತಾಜಾ ಆಹಾರ ವ್ಯವಹಾರಗಳಲ್ಲಿ ಒಂದನ್ನು ತಯಾರಿಸುತ್ತಿದ್ದೇವೆ. ನಮ್ಮ ತಂಡ ಜಗತ್ತಿನಲ್ಲಿ ಅದ್ಭುತಗಳನ್ನು ಮಾಡಬಹುದು. ನಾವೆಲ್ಲರೂ ನಾಳೆಗಾಗಿ ಕಾಯುತ್ತೇವೆ” ಎಂದು ತಮ್ಮ ಮುಂದಿನ ಗುರಿಯ ಬಗ್ಗೆ ಮುಸ್ತಾಫಾ ಹೇಳುತ್ತಾರೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X