ಗುಜರಾತ್ ವಿಮಾನ ದುರಂತದಲ್ಲಿ ಗತಿಸಿದವರು ಹಿಂದಿನ ಜನ್ಮದಲ್ಲಿ ಕಾಡಿಗೆ ಬೆಂಕಿ ಇಟ್ಟಿದ್ದರು: ಬೊಗಳೆ ಶೂರನಿಗೆ ಉಗಿದ ಜನ!

Date:

Advertisements

“ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟ ಎಲ್ಲರ ಹಿಂದಿನ ಜನ್ಮವನ್ನು ನಾನು ನೋಡಿದೆ. ಅವರೆಲ್ಲರೂ ಸೇರಿ ಹಿಂದಿನ ಜನ್ಮದಲ್ಲಿ ಬೆಂಕಿ ಇಟ್ಟಿದ್ದರು. ಬೆಂಕಿ ಇಟ್ಟಿದ್ದರಿಂದ ಗಿಡ ಮರ, ಪ್ರಾಣಿಗಳು, ಆದಿವಾಸಿ ಜನಗಳು ಸೇರಿದಂತೆ ಹಲವರು ಸುಟ್ಟು ಕರಕಲಾಗಿದ್ದರು. ಆ ಕರ್ಮವನ್ನು ನಿವಾರಣೆ ಮಾಡುವುದಕ್ಕಾಗಿ ಅವರೆಲ್ಲರೂ ವಿಮಾನ ಹತ್ತಿದ್ದರು. ಹಾಸ್ಟೆಲ್‌ನಲ್ಲಿ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳು ಕೂಡ ಹಿಂದಿನ ಜನ್ಮದಲ್ಲಿ ಈ ಕರ್ಮ ಎಸಗಿದ್ದರು. ಪೈಲಟ್ ಮತ್ತು ಗುಜರಾತ್‌ನ ಮಾಜಿ ಸಿಎಂ ಬೆಂಕಿ ಇಟ್ಟವರ ನಾಯಕರಾಗಿದ್ದರು. ಹಾಗಾಗಿ, ಅವರು ಕೂಡ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.

ಹೀಗಂತ ಒಬ್ಬ ಬೊಗಳೆ ಶೂರ, ತನ್ನನ್ನು ‘ಸೋ ಕಾಲ್ಡ್‌ ಆಧ್ಯಾತ್ಮಿಕ ತಜ್ಞ’ ಎಂದು ಹೇಳಿಕೊಳ್ಳುವ ಡಾ. ಉದಯ್ ಶಾ ಎಂಬಾತ ಬೊಗಳೆ ಬಿಟ್ಟಿದ್ದು, ಸದ್ಯ ಜನರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಬೈಸಿಕೊಳ್ಳುತ್ತಿದ್ದಾರೆ.

‘The Mystic Journey’ ಎಂಬ ಯೂಟ್ಯೂಬ್‌ ಚಾನೆಲ್‌ನ ನಿರೂಪಕಿಯ ಜೊತೆಗೆ ನಡೆಸಿದ ಪಾಡ್‌ ಕಾಸ್ಟ್‌ ಸಂದರ್ಶನದಲ್ಲಿ ಈ ವ್ಯಕ್ತಿ ಈ ರೀತಿಯ ಹೇಳಿಕೆ ನೀಡಿದ್ದಾನೆ. ಇದು ಈಗ ಜನರ ಕೆಂಗಣ್ಣಿಗೆ ಕಾರಣವಾಗಿದೆ.

Advertisements

“ವಿಮಾನ ದುರಂತದಲ್ಲಿ ವಿಶ್ವಾಸ್ ಕುಮಾರ್ ಎಂಬಾತ ಒಬ್ಬನೇ ಬದುಕಿದ್ದಾನೆ. ಅದು ಹೇಗೆ?” ಎಂದು ನಿರೂಪಕಿ ಕೇಳಿದ್ದಕ್ಕೆ ಉತ್ತರಿಸಿರುವ ಈತ, “ಕಾಡಿಗೆ ಬೆಂಕಿ ಇಡುವ ವೇಳೆ ಈತನೊಬ್ಬ ವಿರೋಧಿಸಿದ್ದ ಹಾಗೂ ಆ ಕೃತ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಹಾಗಾಗಿ, ಆತ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ” ಎಂದು ಉದಯ್ ಶಾ ಬೊಗಳೆ ಬಿಟ್ಟಿದ್ದಾನೆ. ಸದ್ಯ ಈತನ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

“ಪ್ರಧಾನ ಮಂತ್ರಿ ಮೋದಿಯವರ ಹಿಂದಿನ ಜನ್ಮವನ್ನೂ ಕೂಡ ನಾನು ನೋಡಿದ್ದೇನೆ. ಅವರು ಭೀಷ್ಮರಾಗಿದ್ದರು. ಬಾಲಿವುಡ್ ನಟರಾದ ಶಾರೂಖ್ ಖಾನ್, ಅಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರ ಹಿಂದಿನ ಜನ್ಮವನ್ನು ನೋಡಿದ್ದೇನೆ. ಅವರೆಲ್ಲರೂ ಹಿಂದಿನ ಜನ್ಮದಲ್ಲಿ ಮೌಲಾನಾಗಳಾಗಿದ್ದರು. ಒಬ್ಬರು ಮದುವೆ ಆಗಿಲ್ಲ, ಇನ್ನೊಬ್ಬರು ಹೆಚ್ಚು ಹೆಚ್ಚು ಮದುವೆ ಆಗಿದ್ದಾರೆ. ನಿಧನರಾಗಿರುವ ನಟ ಸುಶಾಂತ್ ಸಿಂಗ್ ರಜಪೂತ್ ಚಂದ್ರನ ಗ್ರಹದಿಂದ ಬಂದಿದ್ದರು” ಎಂದೆಲ್ಲ ಬೊಗಳೆ ಬಿಟ್ಟಿದ್ದಾರೆ.

ಈತನ ವಿಡಿಯೋ ನೋಡಿ ರೊಚ್ಚಿಗೆದ್ದಿರುವ ನೆಟ್ಟಿಗರು, “ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬ ಇನ್ನೂ ಆ ಆಘಾತದಿಂದ ಚೇತರಿಸಿಕೊಂಡಿಲ್ಲ. ಈತ ಬೊಗಳೆ ಬಿಡುತ್ತಿದ್ದಾನೆ. ಈತನ ವಿರುದ್ಧ ಸರ್ಕಾರವೇ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಈತನ ವಿಡಿಯೋವನ್ನು ಟ್ವೀಟ್ ಮಾಡಿರುವ ಖ್ಯಾತ ಪತ್ರಕರ್ತ ಮೊಹಮ್ಮದ್ ಝುಬೇರ್, “ಈತನಿಗೆ ನಮ್ಮ ದೇಶದಲ್ಲಿ ಧೀರೇಂದ್ರ ಶಾಸ್ತ್ರಿ, ಶ್ರೀಶ್ರೀ ಮತ್ತು ಜಗ್ಗಿ ಅವರಿಗಿಂತ ಉಜ್ವಲ ಭವಿಷ್ಯವಿದೆ” ಎನ್ನುವ ಮೂಲಕ ವ್ಯಂಗ್ಯವಾಡಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X