ಬಿಹಾರದ ಮತದಾರ ಪಟ್ಟಿಯಲ್ಲಿವೆ ಉತ್ತರ ಪ್ರದೇಶದ ಸಾವಿರಾರು ಮತದಾರರ ಹೆಸರುಗಳು

Date:

Advertisements

ಬಿಹಾರದಲ್ಲಿ ಚುನಾವಣಾ ಆಯೋಗವು ಕರಡು ಮತದಾರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ, ಹಲವಾರು ಬಿಹಾರಿ ಜನರ ಹೆಸರುಗಳಿಲ್ಲ, ಆಯೋಗವು ಉದ್ದೇಶಪೂರ್ವಕವಾಗಿ ಹಲವರನ್ನು ಕೈಬಿಟ್ಟಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ, ಬಿಹಾರದ ಮತದಾರರ ಪಟ್ಟಿಯಲ್ಲಿ ಉತ್ತರ ಪ್ರದೇಶದ ಮತದಾರರ ಹೆಸರುಗಳೂ ಇವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಬಿಹಾರದ ಕರಡು ಮತದಾರ ಪಟ್ಟಿಯಲ್ಲಿ ಇರುವ 5,000ಕ್ಕೂ ಹೆಚ್ಚು ಮಂದಿ ಮತದಾರರು ಈಗಾಗಲೇ ಉತ್ತರ ಪ್ರದೇಶದಲ್ಲಿ ಮತದಾರರಾಗಿದ್ದಾರೆ. ಉತ್ತರ ಪ್ರದೇಶದ ಮತದಾರ ಚೀಟಿಗಳನ್ನು ಹೊಂದಿದ್ದಾರೆ. ಈ ಐದು ಸಾವಿರ ಮಂದಿಯ ಹೆಸರುಗಳನ್ನು ಬಿಹಾರದ ವಾಲ್ಮೀಕಿನಗರ ವಿಧಾನಸಭಾ ಕ್ಷೇತ್ರದ ಮತದಾರರ ಕರಡು ಪಟ್ಟಿಯಲ್ಲಿ ಅಕ್ರಮವಾಗಿ ಸೇರಿಸಲಾಗಿದೆ ಎಂಬುದು ಗೊತ್ತಾಗಿದೆ.

‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಸಂಸ್ಥೆಯು ಬಿಹಾರ ಕರಡು ಪಟ್ಟಿಯನ್ನು ಪರಿಶೀಲಿಸಿ, ತನಿಖೆ ನಡೆಸಿದೆ. ಸಂಸ್ಥೆಯ ಆಯುಷಿ ಕಾರ್, ಹರ್ಷಿತಾ ಮಾನ್ವಾನಿ ಮತ್ತು ಗಾಯತ್ರಿ ಸಪ್ರು ಅವರು ಈ ತನಿಖಾ ವರದಿಯನ್ನು ಪ್ರಕಟಿಸಿದ್ದಾರೆ.

Advertisements

ಈ ವರದಿಯ ಪ್ರಕಾರ, ಉತ್ತರ ಪ್ರದೇಶದ 5,000ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಬಿಹಾರದ ವಾಲ್ಮೀಕಿನಗರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರಿಸಲಾಗಿದೆ. ಆಶ್ಚರ್ಯಕರವೆಂದರೆ, ಆ ಮತದಾರರ ವಿಳಾಸಗಳು ಎರಡೂ ರಾಜ್ಯಗಳ ಮತದಾರ ಪಟ್ಟಿಯಲ್ಲಿ ಒಂದೇ ಆಗಿವೆ. ಸಣ್ಣ-ಪುಟ್ಟ ವಿವರಗಳು ಮಾತ್ರವೇ ಬದಲಾಗಿವೆ ಎಂಬುದನ್ನು ತನಿಖಾ ತಂಡ ಪತ್ತೆ ಹಚ್ಚಿದೆ.

ಕೆಲವು ಮತದಾರಪಟ್ಟಿಯಲ್ಲಿ ಮತದಾರರ ಬಂಧುಗಳ ಹೆಸರಿನಲ್ಲಿ ಕೆಲವು ಅಕ್ಷರಗಳನ್ನು ಬದಲಾಯಿಸಲಾಗಿದೆ. ಕೆಲವರ ಪಟ್ಟಿಯನ್ನು ವಯಸ್ಸನ್ನು (1-4 ವರ್ಷ ಅಂತರ) ಬದಲಾಯಿಸಲಾಗಿದೆ. ಇನ್ನೂ, ಕೆಲವರ ಪಟ್ಟಿಯಲ್ಲಿ ಅವರ ಸಂಬಂಧಿಗಳ ಹೆಸರನ್ನು ಬದಲಾಯಿಸಲಾಗಿದೆ ಎಂದು ವರದಿ ವಿವರಿಸಿದೆ.

ಇವೆಲ್ಲರ ಹೆಸರಿನಲ್ಲಿ ಎರಡೂ ರಾಜ್ಯಗಳಲ್ಲಿ ಎರಡು ವಿಭಿನ್ನ ಚುನಾವಣಾ ಗುರುತಿನ ಚೀಟಿ (EPIC) ಸಂಖ್ಯೆಗಳಿವೆ. ಇದು ಕಾನೂನುಬಾಹಿರ. ಇದು ಅಕ್ರಮ ಮತದಾನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ವರದಿ ಹೇಳಿದೆ.

ಭಾರತದ ಕಾನೂನಿನ ಪ್ರಕಾರನ ಅಡಿಯಲ್ಲಿ ಓರ್ವ ಮತದಾರ ಎರಡು EPIC ಸಂಖ್ಯೆಗಳನ್ನು ಹೊಂದಲು ಅವಕಾಶವಿಲ್ಲ. ಎರಡು ಎಪಿಕ್ ಸಂಖ್ಯೆಗಳನ್ನು ಹೊಂದುವುದು ಅಪರಾಧ.

ಬಿಹಾರದ ವಾಲ್ಮೀಕಿ ನಗರದ ಮತದಾರ ಪಟ್ಟಿಯಲ್ಲಿ ಹೆಸರು ಹೊಂದಿರುವ, ಛೆಡಿ ರಾಮ (45 ವರ್ಷ) ಅವರ ವಿವರವು, ಉತ್ತರಪ್ರದೇಶದಲ್ಲಿ ಶಬನಮ್ ಖಾತುನ್ ಎಂದಿದ್ದರೆ, ಬಿಹಾರದಲ್ಲಿ ಶಬನಮ್ ಖಾತೂನ್ ಎಂದಿದೆ. ಅಂತೆಯೇ, ಮತ್ತೊಬ್ಬರ ಹೆಸರು ಉತ್ತರ ಪ್ರದೇಶದಲ್ಲಿ ಹೀರಾಲಾಲ್ ಕುಶ್ವಾಹ ಎಂದು ಇದ್ದರೆ, ನಿಹಾರದಲ್ಲಿ ಹೀರಾಮಾನ್ ಕುಶ್ವಾಹ ಎಂದು ಉಲ್ಲೇಖಿಸಲಾಗಿದೆ.

ವಾಲ್ಮೀಕಿನಗರದ ಮತದಾರ ಪಟ್ಟಿಯ ಕುರಿತಾದ ಸಂಶೋಧನೆಯು, ಚುನಾವಣಾ ಆಯೋಗ ತನ್ನ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಅರಂಭಿಸುವ ಸಮಯದಲ್ಲಿ ನೀಡಿದ್ದ ಹೇಳಿಕೆ ಬಗ್ಗೆ ಸಂಶಯವನ್ನು ಹುಟ್ಟುಹಾಕಿದೆ. ಚುನಾವಣಾ ಆಯೋಗವು ಜೂನ್‌ ತಿಂಗಳಿನಲ್ಲಿ, “ಬಿಹಾರದಲ್ಲಿ ವಲಸೆ ಮತ್ತು ಅಕ್ರಮ ವಲಸಿಗರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಸಮಸ್ಯೆಗಳಿಂದ ಬಿಹಾರದ ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ‘ಎಸ್‌ಐಆರ್‌’ ನಡೆಸಲಾಗುತ್ತಿದೆ” ಎಂದು ಹೇಳಿತ್ತು.

ಆದರೆ, ಈಗ ಎಸ್‌ಐಆರ್‌ ನಡೆಸಿದ ಬಳಿಯವೂ ಹೊಸ ಕರಡು ಪಟ್ಟಿಯಲ್ಲಿ, ಒಂದು ವಿಧಾನಸಭಾ ಕ್ಷೇತ್ರದಲ್ಲಿಯೇ 5,000ಕ್ಕೂ ಹೆಚ್ಚು ಮತದಾರರನ್ನು ಅದೂ ಹೊಸದಾಗಿ ಸೇರಿಸಲಾಗಿದೆ. ಎ.ಐ ಬಳಸಿ ನಡೆಸಿದ ತನಿಖೆಯಲ್ಲಿ ಕಂಡುಬಂದಿರುವಂತೆ, ಈ 5,000 ಮತದಾರರ ಹೆಸರುಗಳು ಮೂರು ಮಾನದಂಡಗಳಲ್ಲಿ (ಹೆಸರು, ವಯಸ್ಸು, ಸಂಬಂಧಿಕರ ಹೆಸರು) ಸಂಪೂರ್ಣವಾಗಿ ಹೋಲಿಕೆಯಾಗುತ್ತಿವೆ.  ಇದು, ಆ ಮತದಾರರು ತಾವಾಗಿಯೇ ಅರ್ಜಿ ಸಲ್ಲಿಸಿ ಸೇರ್ಪಡೆಯಾದರೇ? ಅಥವಾ ಉದ್ದೇಶಪೂರ್ವಕವಾಗಿ ಸೇರಿಸಲಾಗಿರುವ ಆಯೋಗ ವೈಫಲ್ಯವೇ? ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಈ ಬಗ್ಗೆ ಅಗತ್ಯ ತನಿಖೆ ನಡೆಯುವ ತುರ್ತು ಅಗತ್ಯವಿದೆ ಎಂದು ವರದಿ ಹೇಳಿದೆ.

ಈ ಬಗ್ಗೆ, ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ದೆಹಲಿಯ ಚುನಾವಣಾ ಆಯೋಗದ ಪ್ರಧಾನ ಕಚೇರಿ ಮತ್ತು ಬಿಹಾರ ಕಚೇರಿಗೆ ಲಿಖಿತ ಪ್ರಶ್ನೆಗಳನ್ನು ಕಳುಹಿಸಿದೆ. ಆದರೂ, ಎರಡೂ ಕಚೇರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿ ಆರೋಪಿಸಿದೆ. ಜೊತೆಗೆ, “ಏನೇ ವ್ಯತ್ಯಾಸಗಳಿದ್ದರೂ, ಆಕ್ಷೇಪಣೆ ಮತ್ತು ಹಕ್ಕು ಸಲ್ಲಿಕೆಯ ಅವಧಿ ಇನ್ನೂ ಜಾರಿಯಲ್ಲಿದೆ” ಎಂದು ಬಿಹಾರ ಚುನಾವಣಾ ಆಯೋಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಶೋಕ್ ಗೋಯಲ್ ಅವರು ಹೇಳಿರುವುದಾಗಿ ವರದಿಯಾಗಿದೆ.

ಈ ಲೇಖನ ಓದಿದ್ದೀರಾ?: ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಹೊಸ ಕರಡು ಮತದಾರರ ಪಟ್ಟಿಯಲ್ಲಿರುವ ಬಹುತೇಕ ಹೆಸರುಗಳಿಗೆ ಪೂರಕ ದಾಖಲೆಗಳೇ ಇಲ್ಲ. ಬಿಹಾರದ ಚುನಾವಣಾ ಮತದಾರ ಪಟ್ಟಿಯನ್ನು 30 ದಿನಗಳಲ್ಲಿ ಪರಿಷ್ಕರಿಸಲು ಆಯೋಗವು ಆದೇಶಿಸಿತ್ತು. ಮೃತ, ನಕಲಿ ಹಾಗೂ ವಲಸೆ ಹೋದ ಮತದಾರರನ್ನು ತೆಗೆದುಹಾಕುವುದೇ ಇದರ ಉದ್ದೇಶವೂ ಆಗಿತ್ತು. ಆದರೆ, ಈಗ ಒಂದು ಕ್ಷೇತ್ರದ ಕರಡು ಪಟ್ಟಿಯಲ್ಲಿಯೇ 5,000 ಹೊಸ ಮತದಾರರ ಹೆಸರುಗಳು ಕಂಡುಬಂದಿವೆ.

ಚುನಾವಣಾ ಆಯೋಗವು ತಾನೇ ಸೃಷ್ಟಿಸಿಕೊಂಡ ಗೊಂದಲದಲ್ಲಿ ಸಿಲುಕಿದೆ. 30 ದಿನಗಳ ಗಡುವು ಅಧಿಕಾರಿಗಳು ಎಲ್ಲವನ್ನೂ ಕೂಲಕುಶವಾಗಿ ಪರಿಶೀಲಿಸಲಾಗದೆ, ಪಟ್ಟಿಗಳಲ್ಲಿ ಹೆಸರುಗಳನ್ನು ಹಾಗೆಯೇ ಬಿಟ್ಟುಬಿಡುವ, ಅಥವಾ ರ್ಯಾಂಡಮ್‌ ಆಗಿ ತೆಗೆದುಹಾಕುವ ಸಾಧ್ಯತೆಗಳಿವೆ ಎಂಬ ಆತಂಕವಿದೆ. ಮಾತ್ರವಲ್ಲದೆ, ಬಿಜೆಪಿ ಗುರಿತಿಸಿದ ಮತದಾರರನ್ನು ಉದ್ದೇಶಪೂರ್ವಕವಾಗಿ ಪಟ್ಟಿಯಿಂದ ಕೈಬಿಡುವ ಅಪಾಯವೂ ಇದೆ ಎಂಬ ಗಂಭೀರ ಆರೋಪಗಳೂ ಇವೆ. ಈ ಆರೋಪಗಳಿಗೆ ವಾಲ್ಮೀಕಿ ನಗರದಲ್ಲಿ 5,000 ಮತದಾರರ ಪುನಾರಾವರ್ತಿತ ಹೆಸರುಗಳಿರುವುದು ಮತ್ತಷ್ಟು ಪುಷ್ಟಿನೀಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X