ಸಂದೇಶಖಾಲಿ ವಿವಾದಕ್ಕೊಂದು ಹೊಸ ತಿರುವು ಸಿಕ್ಕಿದೆ. ಟಿಎಂಸಿ ನಾಯಕರು ಸಂದೇಶಖಾಲಿ ಮಹಿಳೆಯರ ಮೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪಗಳು ಇತ್ತೀಚೆಗೆ ಭಾರೀ ಕೋಲಾಹಲ ಸೃಷ್ಟಿಸಿದೆ.
ಟಿಎಂಸಿಯ ಶಾಹ್‌ಜಹಾನ್ ಶೇಖ್ ಬಂಧನಕ್ಕೆ ಕಾರಣವಾದ ಬೆಳವಣಿಗೆಗಳ ನಡುವೆ, ಬಿಜೆಪಿಯ ಸಂದೇಶಖಾಲಿ ಮಂಡಲ ಅಧ್ಯಕ್ಷ ಎಂದು ತಿಳಿಯಲಾದ ಓರ್ವ ವ್ಯಕ್ತಿಯ ವಿಡಿಯೋ ಸಾಕಷ್ಟು ಸದ್ದು ಮಾಡಿದೆ. ಈ ವಿಡಿಯೋದಲ್ಲಿ ಆ ವ್ಯಕ್ತಿ ಸಂದೇಶಖಾಲಿ ಘಟನೆಯ ಹಿಂದೆ ಬಿಜೆಪಿಯ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಇದ್ದಾರೆಂದು ಹೇಳುವುದು ಕೇಳಿಸುತ್ತದೆ.
ಶಾಹ್‌ಜಹಾನ್ ಶೇಖ್ ಸೇರಿದಂತೆ ಮೂವರು ಟಿಎಂಸಿ ನಾಯಕರ ವಿರುದ್ಧ ಅತ್ಯಾಚಾರ ಆರೋಪ ಹೊರಿಸುವಂತೆ ಮೂವರು ಸ್ಥಳೀಯ ಮಹಿಳೆಯರನ್ನು ಪ್ರಚೋದಿಸಲು ಸುವೇಂದು ಅಧಿಕಾರಿ ತಮ್ಮನ್ನು ಹಾಗೂ ಪ್ರದೇಶದ ಇತರ ಬಿಜೆಪಿ ನಾಯಕರಲ್ಲಿ ಹೇಳಿದ್ದರು ಎಂದು ವಿಡಿಯೋದಲ್ಲಿ ಆತ ಹೇಳುವುದು ಕೇಳಿಸುತ್ತದೆ.
ನಂದಿಗ್ರಾಮ ಶಾಸಕರಾಗಿರುವ ಅಧಿಕಾರಿ ಅವರೇ ಸಂದೇಶಖಾಲಿಯ ಮನೆಯೊಂದರಲ್ಲಿ ಬಂದೂಕುಗಳನ್ನು ಇರಿಸಿದ್ದರು, ಇವುಗಳನ್ನು ನಂತರ ಕೇಂದ್ರ ಸಂಸ್ಥೆಗಳು ವಶಪಡಿಸಿಕೊಂಡಿದ್ದವು ಎಂದು ಆ ವ್ಯಕ್ತಿ ಹೇಳುವುದು ಕೇಳಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ, “ಬಂಗಾಳ ಮತ್ತು ಸಂದೇಶಖಾಲಿಗೆ ಕೆಟ್ಟ ಹೆಸರು ತರಲು ಸಾಮೂಹಿಕ ಅತ್ಯಾಚಾರಗಳು ನಡೆದಿವೆ ಎಂಬ ಅಭಿಪ್ರಾಯ ಮೂಡಿಸಲು ಅಧಿಕಾರಿ ಈ ಸುವೇಂದು ಅಧಿಕಾರಿ ಈ ಸುಳ್ಳು ಸೃಷ್ಟಿಸಿದ್ದಾರೆ,” ಎಂದು ಆರೋಪಿಸಿದೆ.
“ಸಾಮೂಹಿಕ ಅತ್ಯಾಚಾರದಿಂದ ಹಿಡಿದು ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವಿಕೆ” ತನಕ ಪ್ರತಿಯೊಂದು ಆರೋಪ ಸುವೇಂದು ಅವರ ಸಂಚಿನಿಂದ ಆಗಿದೆ,” ಎಂದು ಟಿಎಂಸಿ ಹೇಳಿದೆ.
ಈ ಕುರಿತಂತೆ ಸುವೇಂದು ಅಧಿಕಾರಿ ಇನ್ನೂ ಪ್ರತಿಕ್ರಿಯಿಸಿಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ, “ಬಿಜೆಪಿಯೊಳಗೆ ಆಳವಾಗಿ ಬೇರೂರಿರುವ ಕೊಳಕನ್ನು ಬಹಿರಂಗಪಡಿಸಿದೆ ನಮ್ಮ ರಾಜ್ಯವನ್ನು ಎಲ್ಲ ಹಂತಗಳಲ್ಲಿ ಅವಮಾನಿಸುವುದು ಅವರ ಸಂಚಾಗಿದೆ,” ಎಂದು ಹೇಳಿದ್ದಾರೆ.
