ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಸ್ಪರ್ಧಿಸುತ್ತಿದ್ದಾರೆ. ಕಿನ್ನರ್ ಮಹಾಮಂಡಲೇಶ್ವರ್ ಹಿಮಾಂಗಿ ಸಖಿ ಅವರು ಅಖಿಲ ಭಾರತ ಹಿಂದೂ ಮಹಾಸಭಾ(ಎಬಿಎಚ್‌ಎಂ) ಪಕ್ಷದಿಂದ ಕಣಕ್ಕಿಳಿಯುತ್ತಿದ್ದಾರೆ.
ಬಲಪಂಥೀಯ ಪಕ್ಷವಾದ ಎಬಿಎಚ್‌ಎಂ ಉತ್ತರ ಪ್ರದೇಶದಲ್ಲಿ 20 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಕಿನ್ನರ್ ಮಹಾಮಂಡಲೇಶ್ವರ್ ಹಿಮಾಂಗಿ ಸಖಿ ಅವರ ಹೆಸರನ್ನು ಘೋಷಿಸಲಾಗಿದೆ.
ಕೃಷ್ಣನ ಪರಮ ಭಕ್ತರಾಗಿರುವ ಕಿನ್ನರ್ ಮಹಾಮಂಡಲೇಶ್ವರ್ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಧನಿ ಎತ್ತಲು ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಪ್ರಧಾನಿ ಮೋದಿಯವರು ಮಹಿಳೆಯರಿಗೆ ಮಾತ್ರವಲ್ಲ ಲಿಂಗತ್ವ ಅಲ್ಪಸಂಖ್ಯಾತರಿಗೂ ಉದ್ಯೋಗ ಹಾಗೂ ಚುನಾವಣೆಗಳಲ್ಲಿ ಸ್ಪರ್ಧಿಸಲು ಲೋಕಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಮೀಸಲಾತಿ ನೀಡಬೇಕು ಎಂದು ಎಂದು ಕಿನ್ನರ್ ಮಹಾಮಂಡಲೇಶ್ವರ್ ಹಿಮಾಂಗಿ ಸಖಿ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್
ಚುನಾವಣಾ ಆಯೋಗದ ವರದಿಗಳ ಪ್ರಕಾರ 2024ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ 48,044 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ನೋಂದಾಯಿಸಿದ್ದಾರೆ. 2019ರ ಚುನಾವಣೆಯಲ್ಲಿ ಅವರ ಸಂಖ್ಯೆ 39,683 ಸಂಖ್ಯೆ ಇತ್ತು.
ಕಿನ್ನರ್ ಮಹಾಮಂಡಲೇಶ್ವರ್ ಹಿಮಾಂಗಿ ಸಖಿ ಅವರು ಭಗವತ್ ಕಥಾ ವಾಚಿಸುವ ವಿಶ್ವದ ಮೊದಲ ಲಿಂಗತ್ವ ಅಲ್ಪಸಂಖ್ಯಾತರಾಗಿದ್ದಾರೆ. ಇವರು ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಭಗವತ್ ಕಥಾ, ರಾಮ್ ಕಥಾ, ದೇವಿ ಭಗವತ್ ಕಥಾ ಸೇರಿದಂತೆ ಹಲವು ವಾಚನಗಳನ್ನು ಮಂಡಿಸಿದ್ದಾರೆ. ಮೂಲತಃ ಮುಂಬೈನವರಾದ ಇವರು ಸಣ್ಣ ವಯಸ್ಸಿನಿಂದಲೇ ತಮ್ಮ ಮನೆಯ ಬಳಿಯಿರುವ ಇಸ್ಕಾನ್ ದೇಗುಲದಲ್ಲಿ ಪ್ರಾರ್ಥನೆ ಶುರು ಮಾಡಿದರು. ನಂತರದಲ್ಲಿ ಕೃಷ್ಣನ ಪರಮ ಭಕ್ತರಾದರು.
ವಾರಣಾಸಿಯಲ್ಲಿ ಜೂನ್ 1ರಂದು ಚುನಾವಣೆ ನಡೆಯಲಿದ್ದು, 19.62 ಲಕ್ಷ ಮತದಾರರಲ್ಲಿ 135 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಮೋದಿ ವಿರುದ್ಧವಾಗಿ ಕಾಂಗ್ರೆಸ್‌ನಿಂದ ಅಜಯ್ ರಾಯ್ ಸ್ಪರ್ಧಿಸಿದ್ದಾರೆ.
