ದೀಪಾವಳಿ ಕಗ್ಗತ್ತಲು | 141 ಜನರನ್ನು ಬಲಿ ಪಡೆದ ‘ಮೊರ್ಬಿ ತೂಗು ಸೇತುವೆ’ ದುರಂತಕ್ಕೆ ಎರಡು ವರ್ಷ; ನ್ಯಾಯ ಮರೀಚಿಕೆ

Date:

Advertisements

ದೀಪಾವಳಿ ಆಚರಣೆಯ ಸಂಭ್ರಮದಲ್ಲಿ ದೇಶಾದ್ಯಂತ ಮನೆ ಮಾಡಿದೆ. ಆದರೆ, ಎರಡು ವರ್ಷಗಳ ಹಿಂದೆ, ಮೊರ್ಬಿ ತೂಗು ಸೇತುವೆ ಕುಸಿದು ಬಂದಿದ್ದು, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿದೆ. ಕಳೆದುಕೊಂಡವರ ನೆನಪುಗಳು ಮತ್ತೆ-ಮತ್ತೆ ಅವರನ್ನು ಕಾಡುತ್ತಿವೆ. ಅವರೆಲ್ಲರಲ್ಲಿ ಬೆಳಕಿನ ಹಬ್ಬದ ನಡುವೆಯೂ ಕಗತ್ತಲು ಆವರಿಸಿದೆ. ನೋವಿನ ಕಾರ್ಮೋಡದ ನಡುವೆ ನ್ಯಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

ಗುಜರಾತ್‌ನ ಮೊರ್ಬಿ ನಗರದಲ್ಲಿರುವ ಮಚ್ಚು ನದಿಯ ಮೇಲೆ ಕಟ್ಟಲಾಗಿದ್ದ ಪಾದಚಾರಿ ತೂಗು ಸೇತುವೆ 2022ರ ಅಕ್ಟೋಬರ್ 20ರಂದು ಕುಸಿದು ಬಿದ್ದಿತ್ತು. ಅದು ಬ್ರಿಟಿಷ್ ಕಾಲದ ಸೇತುವೆಯಾಗಿದ್ದರಿಂದ ಶಿಥಿಲಗೊಂಡಿತ್ತು. ಅಂದು ದೀಪಾವಳಿ ಸಮಯದ ರಜಾ ದಿನವಾಗಿದ್ದರಿಂದ ಹೆಚ್ಚಿನ ಜನರು ಸೇತುವೆ ನೋಡಲು ಬಂದಿದ್ದರು. ದಿಢೀರನೆ ಸೇತುವೆ ಕುಸಿದಿದ್ದರಿಂದ, ದುರ್ಘಟನೆಯಲ್ಲಿ ಕನಿಷ್ಠ 141 ಜನರ ಸಾವನ್ನಪ್ಪಿದ್ದರು. 180ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಆ ಭೀಕರ ಘಟನೆ ನಡೆದು ನಿನ್ನೆಗೆ (ಅ.30) ಎರಡು ವರ್ಷಗಳಾಗಿವೆ. ಆದರೆ, ಪ್ರಕರಣದ ತನಿಖೆ ಕುಂಟುತ್ತಲೇ ಇದೆ. ಆರೋಪಿಗಳ ವಿರುದ್ಧ ಇನ್ನೂ ಚಾರ್ಜ್‌ಶೀಟ್‌ ಸಲ್ಲಿಸಲಾಗಿಲ್ಲ. ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಯಾವುದೇ ಅಳುಕೂ ಇಲ್ಲದೆ ನಿರಾಯಾಸವಾಗಿ ಬದುಕುತ್ತಿದ್ದಾರೆ. ಆದರೆ, ತಮ್ಮವರನ್ನು ಕಳೆದುಕೊಂಡ ಕುಟುಂಬಗಳು ಇನ್ನೂ ದುಃಖದಲ್ಲೇ ದಿನದೂಡುತ್ತಿವೆ. ದುರ್ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ ನೀಡಲಾಗಿದ್ದರೂ, ಆ ಪರಿಹಾರದ ಹಣವು ಜೀವ ಕಳೆದುಕೊಂಡ ನಷ್ಟವನ್ನು ತುಂಬುವುದಿಲ್ಲ ಎನ್ನುತ್ತಾರೆ ಸಂತ್ರಸ್ತ ಕುಟುಂಬದವರು. ತಮ್ಮವರನ್ನು ಬಲಿಪಡೆದ ಆರೋಪಿಗಳಿಗೆ ಶಿಕ್ಷೆಯಾಗಬೇಕು. ನಮಗೆ ನ್ಯಾಯ ದೊರೆಯಬೇಕೆಂದು ಒತ್ತಾಯಿಸುತ್ತಿದ್ದಾರೆ.

Advertisements

ತನ್ನ 10 ವರ್ಷದ ಮಗಳನ್ನು ಕಳೆದುಕೊಂಡ ನರೇಂದ್ರ ಪರ್ಮಾರ್, “ಪ್ರತಿ ವರ್ಷ, ದೀಪಾವಳಿ ಬರುತ್ತಿದ್ದಂತೆಯೇ, ನನ್ನ ಮಗಳ ನೆನಪುಗಳು ಹೆಚ್ಚಾಗಿ ಕಾಡುತ್ತವೆ. ಆಕೆಯ ನೆನಪಿನಿಂದ ನನ್ನ ಕುಟುಂಬವು ಜರ್ಜರಿತವಾಗುತ್ತದೆ. ದುಗುಡಕ್ಕೊಳಗಾಗುತ್ತದೆ. ಸರ್ಕಾರ ನೀಡುವ ಪರಿಹಾರದ ಹಣ ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಆಘಾತವನ್ನು ನಿವಾರಿಸುವುದಿಲ್ಲ” ಎಂದಿದ್ದಾರೆ.

ಈ ಎರಡು ವರ್ಷಗಳ ಹಿಂದೆಯೇ ಪರಿಹಾರ ನೀಡಲಾಗಿದ್ದು, ಆರೋಪಿಗಳನ್ನು ಬಂಧಿಸಿ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ. ಆದಾಗ್ಯೂ, ಅನೇಕ ಸಂತ್ರಸ್ತರ ಕುಟುಂಬಗಳ ಜೀವನವು ನೆಲೆಗೊಂಡಿಲ್ಲ. ಬದಲಾಗಿ, ಬದುಕಿನ ಹಾದಿಗೆ ಶಾಶ್ವತವಾಗಿ ಬದಲಾಗಿದೆ.

60 ವರ್ಷದ ಕುಸುಮ್ ರಾಥೋಡ್ ತನ್ನ 19 ವರ್ಷದ ಮಗನನ್ನು ಕಳೆದುಕೊಂಡಿದ್ದಾರೆ. ಅವರು ಇನ್ನೂ ತಮ್ಮ ಮಗನ ಅಗಲಿಕೆಯ ದುಃಖ, ನೋವಿನಿಂದ ಹೊರಬರಲಾಗಿಲ್ಲ. ಅವರ ಮಾನಸಿಕ ಆರೋಗ್ಯವೂ ಹದಗೆಡುತ್ತಿದೆ. ಚಿಕಿತ್ಸೆ ನೀಡಿದರೂ ಆಕೆಯ ಆರೋಗ್ಯ ಸುಧಾರಿಸುತ್ತಿಲ್ಲ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

ಆಟೋ ಚಾಲಕ ಇಕ್ಬಾಲ್ ನಾಗೋರಿ ಅವರು ಪ್ರತಿದಿನ ತನ್ನ ಪುಟ್ಟ ಮಗನ ಸಮಾಧಿ ಬಳಿಗೆ ಹೋಗುತ್ತಾರೆ. ಮಗನ ಸಮಾಧಿ ಬಳಿ ಕಾಲ ಕಳೆಯುತ್ತಾರೆ. ಮಗನನ್ನು ನೆನೆದು ಕಣ್ಣೀರು ಹಾಕುತ್ತಾರೆ. ಪ್ರತಿದಿನ ಸಂಜೆ ಮೂರು ಗಂಟೆಗಳ ಕಾಲ ‘ರೋಜಾ’ ಆಚರಿಸುತ್ತಾರೆ. ಆ ಮೂರು ಗಂಟೆಗಳ ಕಾಲ ಅವರು ನೀರನ್ನೂ ಕುಡಿಯುವುದಿಲ್ಲ. ‘ಅಂದು ನನ್ನ ಮಗನನ್ನು ಸೇತುವೆ ಮೇಲೆ ಹೋಗಲು ಬಿಟ್ಟಿದ್ದಕ್ಕಾಗಿ ತಪ್ಪಿತಸ್ಥಭಾವ ತಮ್ಮನ್ನು ಕಾಡುತ್ತಿದೆ’ ಎಂದು ಇಕ್ಬಾಲ್ ಹೇಳಿದ್ದಾರೆ.

“ನಾವು ಶೀಘ್ರ ನ್ಯಾಯವನ್ನು ಎದುರು ನೋಡುತ್ತಿದ್ದೇವೆ. ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದನ್ನು ನೋಡಲು ಕಾಯುತ್ತಿದ್ದೇನೆ. ವಿಚಾರಣೆಯೇ ವರ್ಷಗಳನ್ನು ತೆಗೆದುಕೊಂಡರೆ, ನ್ಯಾಯ ದೊರೆಯುವ ವೇಳೆಗೆ, ಆ ನ್ಯಾಯವನ್ನು ಕೇಳಲು ಮೃತಪಟ್ಟ ಕುಟುಂಬದ ಅನೇಕ ಸದಸ್ಯರು ಬದುಕೇ ಇರುವುದಿಲ್ಲವೇನೋ. ಅಲ್ಲದೆ, ಕೆಲವು ಆರೋಪಿಗಳು ಕೂಡ ವಿಚಾರಣೆಯ ಸಮಯದಲ್ಲಿ ಸಾಯಬಹುದು” ಎನ್ನುತ್ತಾರೆ ನರೇಂದ್ರ ಪರ್ಮಾರ್.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿಜಯ್ ಜಾನಿ, “ನಾವು 148 ಸಾಕ್ಷ್ಯಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಪ್ರಕರಣವನ್ನು ದೈನಂದಿನ ವಿಚಾರಣೆಗೆ ಒಳಪಡಿಸಬೇಕೆಂದು ಮನವಿಯನ್ನೂ ಸಲ್ಲಿಸಿದ್ದೇವೆ. ದೈನಂದಿನ ವಿಚಾರಣೆಗೆ ಸಾಕ್ಷ್ಯ ಮತ್ತು ಸಾಕ್ಷಿಗಳೊಂದಿಗೆ ಪ್ರಾಸಿಕ್ಯೂಷನ್ ಸಿದ್ಧವಾಗಿದೆ. ಆದರೆ, ಕೆಲವು ಅರ್ಜಿಗಳ ಕಾರಣಕ್ಕಾಗಿ ಆರೋಪ ಮತ್ತು ಆರೋಪಪಟ್ಟಿಯನ್ನು ರೂಪಿಸುವುದು ವಿಳಂಬವಾಗಿದೆ” ಎಂದಿದ್ದಾರೆ.

ಈ ವರದಿ ಓದಿದ್ದೀರಾ?: ಹೆದ್ದಾರಿಗಳಿಗಷ್ಟೇ ಸೀಮಿತವಾದ ಮೋದಿ ಅಭಿವೃದ್ಧಿ: ಅಸಮಾನತೆಯ ಅಡಕತ್ತರಿಯಲ್ಲಿ ಬಡವರ ಕೊರಳು!

ಸಂತ್ರಸ್ತರ ಸಂಘದ ಪರ ವಕೀಲ ಉತ್ಕರ್ಷ್ ದವೆ, “ರಾಜ್ಯ ಸರ್ಕಾರ ನೇಮಿಸಿದ ಮೊದಲ ಸರ್ಕಾರಿ ಅಭಿಯೋಜಕ (ಎಸ್‌ಕೆ ವೋರಾ) ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ವಿಚಾರಣೆ ಆರಂಭವಾದ ಕೆಲವು ದಿನಾಂಕಗಳ ನಂತರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಸರ್ಕಾರವು ಹೊಸ ಪಬ್ಲಿಕ್ ಪ್ರಾಸಿಕ್ಯೂಟರ್‌ಅನ್ನು ನೇಮಿಸಿತು. ಆದರೆ, ಈ ಪ್ರಕ್ರಿಯೆಯು ಸಮಯ ತೆಗೆದುಕೊಂಡಿತು. ತನಿಖೆಯನ್ನು ನಡೆಸಿದ ರೀತಿಯ ಬಗ್ಗೆ ಸಂತ್ರಸ್ತ ಕುಟುಂಬಗಳು ಅಸಮಾಧಾನಗೊಂಡಿವೆ. ತ್ವರಿತ ತನಿಖೆಗಾಗಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ನ್ಯಾಯಾಲಯವು ಅರ್ಜಿಯನ್ನು ಪರಿಗಣಿಸಿದೆ” ಎಂದಿದ್ದಾರೆ.

ಎಸ್‌ಐಟಿ ತನಿಖೆಯ ಪ್ರಮುಖ ಅಂಶಗಳು

  • ತುಕ್ಕು ಹಿಡಿದ ಕೇಬಲ್‌ಗಳು, ಸಡಿಲವಾದ ಬೋಲ್ಟ್‌ಗಳು ಹಾಗೂ ಜನದಟ್ಟಣೆಯು ಸೇತುವೆ ಕುಸಿತಕ್ಕೆ ಕಾರಣ
  • 49 ಕೇಬಲ್‌ಗಳಲ್ಲಿ 22 ತುಕ್ಕು ಹಿಡಿದಿದ್ದವು
    • ಘಟನೆಯ ದಿನ ಅಕ್ಟೋಬರ್ 30 ರಂದು 3,165 ಟಿಕೆಟ್‌ಗಳನ್ನು ಬುಕ್ಕಿಂಗ್ ಗುಮಾಸ್ತರು ಮಾರಾಟ ಮಾಡಿದ್ದರು
  • ಸೂಕ್ತ ಕ್ರಮ ಅನುಸರಿಸದೆ ಒರೆವ ಏಜೆನ್ಸಿ ಜತೆ ನಗರಸಭೆ ಸೇತುವೆ ನಿರ್ವಹಣೆಯ ಒಪ್ಪಂದ ಮಾಡಿಕೊಂಡಿತ್ತು
    • ಏಜೆನ್ಸಿಯು ಉತ್ತಮ ಕ್ರಮಗಳನ್ನು ತೆಗೆದುಕೊಂಡಿಲ್ಲ ಮತ್ತು ಸರಿಯಾಗಿ ದುರಸ್ಥಿ ಮಾಡಿಸಿಲ್ಲ.
  • ಸೇತುವೆ ನವೀಕರಣ ಪೂರ್ಣಗೊಂಡ ನಂತರ ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯುವ ಮೊದಲು, ಏಜೆನ್ಸಿಯು ಫಿಟ್‌ನೆಸ್‌ ವರದಿಯನ್ನು ಪಡೆದಿಲ್ಲ.
  • ಸಾರ್ವಜನಿಕರು ಮತ್ತು ಸೇತುವೆಗೆ ಹಾನಿಯಾಗದಂತೆ ನೋಡಿಕೊಳ್ಳಲು ಸೂಕ್ತ ಭದ್ರತೆ ಅಳವಡಿಸಿಕೊಂಡಿರಲಿಲ್ಲ.

ದುರ್ಘಟನೆ ಮತ್ತು ಪ್ರಕರಣದ ಟೈಮ್‌ಲೈನ್

  • ಅಕ್ಟೋಬರ್ 30, 2022: ಬ್ರಿಟಿಷರ ಕಾಲದ ತೂಗುಸೇತುವೆ ಸಂಜೆ 6.30ಕ್ಕೆ ಕುಸಿದು ಬಿದ್ದಿತು. 135 ಜನರ ಸಾವು.
  • ಅಕ್ಟೋಬರ್ 30, 2022: ಐಪಿಸಿ ಸೆಕ್ಷನ್ 304, 308 ಮತ್ತು 114ರ ಅಡಿಯಲ್ಲಿ ಆರೋಪಿಗಳ ಹೆಸರನ್ನು ಉಲ್ಲೇಖಿಸದೆ ಬಿ ಡಿವಿಷನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಬಳಿಕ, ಎಫ್‌ಐಆರ್‌ನಲ್ಲಿ ಸೆಕ್ಷನ್ 336, 337 ಮತ್ತು 338 ಸೇರ್ಪಡೆ.
  • ಅಕ್ಟೋಬರ್ 31, 2022: ಮೊರ್ಬಿ ಸೇತುವೆ ಮ್ಯಾನೇಜರ್, ಟಿಕೆಟ್ ಗುಮಾಸ್ತರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಂಬತ್ತು ಆರೋಪಿಗಳ ಬಂಧನ.
  • ಜನವರಿ 27, 2023: ಮೊರ್ಬಿ ಪೊಲೀಸರು 1,262 ಪುಟಗಳ ಮೊದಲ ಚಾರ್ಜ್‌ಶೀಟ್ಅನ್ನು ಸಲ್ಲಿಸಿದರು. ಆರೋಪಿ ಜೈಸುಖ್ ಪಟೇಲ್ ಪರಾರಿಯಾಗಿದ್ದಾರೆಂದು ಉಲ್ಲೇಖಿಸಿದ್ದರು.
  • ಜನವರಿ 31, 2023: ಜೈಸುಖ್ ಪಟೇಲ್ ನ್ಯಾಯಾಲಯದ ಮುಂದೆ ಶರಣಾದರು. ಅವರನ್ನು ಪೊಲೀಸರು ಬಂಧಿಸಿದರು.
  • ಮಾರ್ಚ್ 9, 2023: ಪೊಲೀಸರು ಜೈಸುಖ್ ಪಟೇಲ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು.
  • ಏಪ್ರಿಲ್ 9, 2023: ರಾಜ್ಯ ಸರ್ಕಾರವು ಮೊರ್ಬಿ ಪುರಸಭೆಯನ್ನು ರದ್ದುಗೊಳಿಸಿತು.
  • ಅಕ್ಟೋಬರ್ 9, 2023: ಗುಜರಾತ್ ಹೈಕೋರ್ಟ್‌ಗೆ 5,000 ಪುಟಗಳ ವರದಿಯನ್ನು ಎಸ್‌ಐಟಿ ಸಲ್ಲಿಸಿತು.

ಪ್ರಕರಣದ ಆರೋಪಿಗಳು

  • ಜೈಸುಖ್ ಪಟೇಲ್, ತೂಗು ಸೇತುವೆ ನಿರ್ವಹಿಸುವ ಕಂಪನಿ ಒರೆವಾ ಗ್ರೂಪ್‌ನ ಪ್ರವರ್ತಕರು,
  • ದೀಪಕ್ ಪರೇಖ್, ಒರೆವಾ ಗ್ರೂಪ್‌ನ ಮ್ಯಾನೇಜರ್,
  • ದಿನೇಶ್ ದವೆ, ಒರೆವಾ ಗ್ರೂಪ್‌ ವ್ಯವಸ್ಥಾಪಕರು,
  • ಮನ್ಸುಖ್ ಟೋಪಿಯಾ, ಟಿಕೆಟ್ ಗುಮಾಸ್ತ
  • ಮಹಾದೇವ ಸೋಲಂಕಿ, ಟಿಕೆಟ್ ಗುಮಾಸ್ತ
  • ಅಲ್ಪೇಶ್ ಗೋಹಿಲ್, ಭದ್ರತಾ ಸಿಬ್ಬಂದಿ
  • ಮುಖೇಶ್ ಚೌಹಾಣ್, ಭದ್ರತಾ ಸಿಬ್ಬಂದಿ
  • ದಿಲೀಪ್ ಗೋಹಿಲ್, ಭದ್ರತಾ ಸಿಬ್ಬಂದಿ
  • ಪ್ರಕಾಶ್ ಪರ್ಮಾರ್ ಮತ್ತು ದೇವಾಂಗ್ ಪರ್ಮಾರ್ ದುರಸ್ತಿ/ನವೀಕರಣ ನಡೆಸಿದವರು

ಕೃಪೆ: ಟೈಮ್ಸ್‌ ಆಫ್‌ ಇಂಡಿಯಾ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X