ಯುಪಿ ಚುನಾವಣೆ | ಸೀಟು ಹಂಚಿಕೆ ಮಾತುಕತೆ ನಡುವೆಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಸ್‌ಪಿ; ಕಾಂಗ್ರೆಸ್ ಸಂಸದ ಆಕ್ರೋಶ

Date:

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳಾದ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆಗಳು ಬಿಕ್ಕಟ್ಟಿಗೆ ಸಿಲುಕಿವೆ. ಸೀಟು ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿರುವಾಗಲೇ ಎಸ್‌ಪಿ ಏಕಪಕ್ಷೀಯವಾಗಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಎಸ್‌ಪಿಯ ಈ ನಡೆಗೆ ಸಹರಾನ್‌ಪುರದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ಮೈತ್ರಿಯ ಲಕ್ಷಣವಲ್ಲ” ಎಂದು ಕಿಡಿಕಾರಿರುವ ಅವರು, ಮೈತ್ರಿ ಧರ್ಮದ ಪಾಲನೆಯಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಬಿಸ್ಲೆರಿ’ ವಿರುದ್ಧದ ಕ್ರಮಕ್ಕೂ ನೀರು ಮಾರುಕಟ್ಟಗೆ ‘ಅಂಬಾನಿ’ ಪ್ರವೇಶಕ್ಕೂ...

ಭಾರತದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆಯಲ್ಲಿ ಸುಮಾರು 35ರಿಂದ 36%ರಷ್ಟು ಮಾರುಕಟ್ಟೆ ಪಾಲನ್ನು ಬಿಸ್ಲೆರಿ ಹೊಂದಿದೆ. ಬಿಸ್ಲೆರಿ ನೀರಿನ ಸಂಸ್ಥೆ ‘ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು...

ಸಂವಿಧಾನ ದಿನ | ಸಂವಿಧಾನಕ್ಕೆ ಮೋದಿ ಸರ್ಕಾರ ಮತ್ತು...

ಭಾರತವು ಸಂವಿಧಾನ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಸಂವಿಧಾನದ ಮೂಲ ಆಶಯಗಳು ಅಭೂತಪೂರ್ವ ಬಿಕ್ಕಟ್ಟಿಗೆ ಸಿಲುಕಿವೆ. 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ...

ಯುಪಿ ಚುನಾವಣೆ: ಆಡಳಿತ ಯಂತ್ರ, ಜಾತಿ ಸಮೀಕರಣ ಮತ್ತು...

2027ರ ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯಲ್ಲಿನ ಲಿಂಗ ಅಂತರ, ಜಾತಿ ಸಮೀಕರಣ ಹಾಗೂ ಮೈತ್ರಿ ಪಕ್ಷಗಳ ಸೀಟು ಹಂಚಿಕೆಯ ಚೌಕಾಸಿ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ...

ಮಂಗಳವಾರ ಎಸ್‌ಪಿ ಐವರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ನಾಲ್ವರು ಹಾಲಿ ಶಾಸಕರಿದ್ದು, ವಿಶೇಷವಾಗಿ ಪಶ್ಚಿಮ ಉತ್ತರ ಪ್ರದೇಶದ ಸಹರಾನ್‌ಪುರ ಮತ್ತು ಬೆಹತ್ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವುದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.

ಇದನ್ನೂ ಓದಿ: ಯುಪಿ ಚುನಾವಣೆ | ಎಸ್‌ಪಿಯಿಂದ 26 ಸ್ಥಾನಗಳ ಆಫರ್‌; ‘ನಾವೇನು ಭಿಕ್ಷುಕರೇ?’ ಎಂದ ಕಾಂಗ್ರೆಸ್

ಈ ಕುರಿತು ಪ್ರತಿಕ್ರಿಯಿಸಿರುವ ಇಮ್ರಾನ್ ಮಸೂದ್, “ನೀವು ಪಟ್ಟಿಯನ್ನು ಬಿಡುಗಡೆ ಮಾಡುತ್ತೀರಿ, ಆಮೇಲೆ ನಮಗೆ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡುತ್ತೀರಿ. ನಾವು ಮೈತ್ರಿ ಪಾಲುದಾರರೇ ಅಥವಾ ನಿಮ್ಮ ಸೇವಕರೇ? ಈ ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡಿ ಎಂದು ನಾವು ನಿಮ್ಮನ್ನು ಕೇಳಿದ್ದೇವೆಯೇ?” ಎಂದು ಎಸ್‌ಪಿ ನಾಯಕತ್ವವನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ಸೀಟು ಹಂಚಿಕೆ ಮಾತುಕತೆಯ ಆರಂಭಿಕ ಹಂತದಲ್ಲಿ ಎಸ್‌ಪಿ ಕಾಂಗ್ರೆಸ್‌ಗೆ ಕೇವಲ 26 ‘ಗೆಲ್ಲುವ’ ಕ್ಷೇತ್ರಗಳನ್ನು ಮಾತ್ರ ನೀಡುವುದಾಗಿ ಪ್ರಸ್ತಾಪಿಸಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಸೂದ್, “ನಾವೇನು ಭಿಕ್ಷುಕರೇ?” ಎಂದು ಪ್ರಶ್ನಿಸಿದ್ದಾರೆ. “ಮೈತ್ರಿ ಎಂದರೆ ಜಂಟಿ ಪತ್ರಿಕಾಗೋಷ್ಠಿ ನಡೆಸಬೇಕು ಮತ್ತು ಎಲ್ಲಾ ನಿರ್ಧಾರಗಳನ್ನು ಒಟ್ಟಾಗಿ ತೆಗೆದುಕೊಳ್ಳಬೇಕು. ಆದರೆ ಇಲ್ಲಿ ಏನಾಗುತ್ತಿದೆ ಎಂಬುದೇ ನನಗೆ ತಿಳಿಯುತ್ತಿಲ್ಲ. ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ 107 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು, ಈಗ ಅವರು ಇನ್ನೂ ಮುಖ್ಯಮಂತ್ರಿಯಾಗಬೇಕಿದೆ” ಎಂದು ಮಸೂದ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಸುಮಾರು 120 ರಿಂದ 130 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ಕಡಿಮೆ ಸ್ಥಾನಗಳಿಗೆ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಸೀಟು ಹಂಚಿಕೆ ಕುರಿತು ನವದೆಹಲಿಯಲ್ಲಿ ನಡೆದ ಸಭೆಯ ಬೆನ್ನಲ್ಲೇ ಎಸ್‌ಪಿ ಈ ರೀತಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವುದು ಮೈತ್ರಿಯ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತಾವು ಯಾವುದೇ ಸಂದರ್ಭದಲ್ಲೂ ಕಾಂಗ್ರೆಸ್ ಜೊತೆಯೇ ಇರುವುದಾಗಿ ಸ್ಪಷ್ಟಪಡಿಸಿರುವ ಮಸೂದ್, ರಾಹುಲ್ ಗಾಂಧಿ ಮತ್ತು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಅಂತಿಮ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಇನ್ನೊಂದೆಡೆ, ವಿಪಕ್ಷಗಳ ನಡುವಿನ ಈ ಒಳಜಗಳವನ್ನು ಬಿಜೆಪಿ ಟೀಕಿಸಿದೆ. “ಚುನಾವಣೆಗೂ ಮುನ್ನವೇ ಎಸ್‌ಪಿ-ಕಾಂಗ್ರೆಸ್ ಸ್ನೇಹ ಐಸಿಯು ತಲುಪಿದೆ” ಎಂದು ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ ಲೇವಡಿ ಮಾಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ |ಜಿಲ್ಲೆಯಲ್ಲಿ ನೀರಿನ ಮಿತ ಬಳಕೆಗೆ ಡಿಸಿ ಮನವಿ

ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತವಾಗಿರುವ ಹಿನ್ನೆಲೆಯಲ್ಲಿ, ಮುಂದಿನ ಬೇಸಿಗೆಯ ಕುಡಿಯುವ ನೀರಿನ...

ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ: ತಮಿಳು ಸರ್ಕಾರ ಘೋಷಣೆ

ರಾಜ್ಯದ ಪುರುಷ ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆಯನ್ನು ಮಂಜೂರು...

‘ಬಿಸ್ಲೆರಿ’ ವಿರುದ್ಧದ ಕ್ರಮಕ್ಕೂ ನೀರು ಮಾರುಕಟ್ಟಗೆ ‘ಅಂಬಾನಿ’ ಪ್ರವೇಶಕ್ಕೂ ಇದೆಯೇ ನಂಟು?

ಭಾರತದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆಯಲ್ಲಿ ಸುಮಾರು 35ರಿಂದ 36%ರಷ್ಟು ಮಾರುಕಟ್ಟೆ...