ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಶಾಸಕ ಬೇಡಿ ರಾಮ್, ಈ ಹಿಂದೆಯೂ ಹಲವಾರು ಇತರ ಪೇಪರ್ ಸೋರಿಕೆ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಶಾಸಕ ಬೇಡಿ ರಾಮ್ ಅವರ ಅಫಿಡವಿಟ್ ಪ್ರಕಾರ, ಅವರ ವಿರುದ್ಧ ದಾಖಲಾಗಿರುವ ಒಂಬತ್ತು ಪ್ರಕರಣಗಳಲ್ಲಿ ಎಂಟು ಪೇಪರ್ ಸೋರಿಕೆಗೆ ಸಂಬಂಧಿಸಿದ್ದಾಗಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಬೇಡಿ ರಾಮ್ ವಿರುದ್ಧ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಪೊಲೀಸ್ ಮತ್ತು ರೈಲ್ವೇ ನೇಮಕಾತಿ ಪರೀಕ್ಷೆಯ ಪತ್ರಿಕೆಗಳನ್ನು ಸೋರಿಕೆ ಮಾಡಿದ ಪ್ರಕರಣಗಳು ದಾಖಲಾಗಿವೆ.
2009 ರಲ್ಲಿ, ಜೈಪುರದ ವಿಶೇಷ ಕಾರ್ಯಾಚರಣೆ ಗುಂಪು (SOG) ರೈಲ್ವೇ ನೇಮಕಾತಿ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬೇಡಿ ರಾಮ್ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಭೋಪಾಲ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮಧ್ಯಪ್ರದೇಶ ಲೋಕಸೇವಾ ಆಯೋಗದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಅವರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ಸಹ ದಾಖಲಿಸಿದೆ.
2006ರಲ್ಲಿ, ರೈಲ್ವೇಸ್‌ನಲ್ಲಿ ನೇಮಕಾತಿಗಾಗಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಕ್ಕಾಗಿ ಬೇಡಿ ರಾಮ್‌ಗೆ ದರೋಡೆಕೋರ ಕಾಯಿದೆಯ ಅನ್ವಯ ಮೊಕದ್ದಮೆ ದಾಖಲಿಸಲಾಗಿತ್ತು. ಎರಡು ವರ್ಷಗಳ ನಂತರ ಗೋಮತಿ ನಗರದಲ್ಲಿ ಮತ್ತೊಂದು ಪ್ರಕರಣ ಕೂಡ ದಾಖಲಾಗಿದೆ.
SBSP MLA Bedi Ram has emerged as a key figure in the NEET UG paper leak case. Bedi Ram himself has admitted to facilitating the admission of 40 individuals.
The SBSP, currently allied with the BJP and holding ministerial positions in the Uttar Pradesh cabinet, counts Bedi Ram… pic.twitter.com/JXMWExgOpv
— Omniscient Chautala (@Highonchoorma) June 27, 2024
2010 ರಲ್ಲಿ, ಪೊಲೀಸ್ ನೇಮಕಾತಿ ಪರೀಕ್ಷೆಯ ಪತ್ರಿಕೆಯನ್ನು ಸೋರಿಕೆ ಮಾಡಿದ್ದಕ್ಕಾಗಿ ಜೌನ್‌ಪುರದ ಮಡಿಯಾಹುದಲ್ಲಿ ಬೇಡಿ ರಾಮ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. 2014ರಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು.
ಬುಧವಾರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳಾದ್ಯಂತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಹಲವಾರು ಅಭ್ಯರ್ಥಿಗಳಿಗೆ ಸಹಾಯ ಮಾಡಿದ ಎಸ್‌ಬಿಎಸ್‌ಪಿ ಶಾಸಕರ ಹೇಳಿಕೆಯನ್ನು ತೋರಿಸುವ ವೈರಲ್ ವೀಡಿಯೊ ಕಾಣಿಸಿಕೊಂಡ ನಂತರ ಕಾಂಗ್ರೆಸ್ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು.
ಇದನ್ನು ಓದಿದ್ದೀರಾ? ಮೊದಲ ಹಂತದಲ್ಲಿ 10 ಸಾವಿರ ಅಂಗನವಾಡಿಗಳು ಮೇಲ್ದರ್ಜೆಗೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೇಡಿ ರಾಮ್ ಶಾಸಕರಾಗುವ ಮುನ್ನ ಪೇಪರ್ ಲೀಕ್ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು ಎಂದೂ ಕಾಂಗ್ರೆಸ್ ಹೇಳಿದೆ. ವೈರಲಾಗಿರುವ ವಿಡಿಯೋ ಫೂಟೇಜ್‌ನಲ್ಲಿ, ಬೇಡಿ ರಾಮ್ ಅವರು ಅಭ್ಯರ್ಥಿಯನ್ನು ಪಾಸ್ ಮಾಡಲು ಪ್ರತಿಯಾಗಿ ಹಣವನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳುವುದನ್ನು ಕೇಳಬಹುದು. ಮುಂದೆ ಪತ್ರಿಕೆ ರದ್ದಾದರೆ ತಾನು ಜವಾಬ್ದಾರನಲ್ಲ ಎನ್ನುತ್ತಾರೆ.
ವೀಡಿಯೋ ನಿಜವಾಗಿದ್ದರೆ, ಎಸ್‌ಬಿಎಸ್‌ಪಿ ಎನ್‌ಡಿಎ ಮಿತ್ರ ಪಕ್ಷವಾಗಿರುವುದರಿಂದ ಪೇಪರ್ ಸೋರಿಕೆಯಲ್ಲಿ ಬಿಜೆಪಿ ಸರ್ಕಾರದ ಕೈವಾಡವನ್ನು ತಳ್ಳಿ ಹಾಕಲಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
