ನ್ಯಾಯಾಲಯಗಳಲ್ಲಿ AI ಬಳಕೆ; ಸಾರ್ವಜನಿಕರ ಸಲಹೆಗೆ ಸುಪ್ರೀಂ ಅವಕಾಶ

Date:

ಭಾರತದಾದ್ಯಂತ ಇರುವ ನ್ಯಾಯಾಲಯಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯಿಟ್ಟಿದೆ. ಈ ಕುರಿತು ‘ನ್ಯಾಯಾಲಯಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯ ನಿಯಮಾವಳಿಗಳು-2026’ ರ ಕರಡನ್ನು ಬಿಡುಗಡೆ ಮಾಡಲಾಗಿದ್ದು, ಜೂನ್ 20ರವರೆಗೆ ಸಾರ್ವಜನಿಕರು ಹಾಗೂ ತಜ್ಞರಿಂದ ಅನಿಸಿಕೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ.

- Advertisement -

ಈ ಪ್ರಸ್ತಾಪಿತ ನಿಯಮಗಳು ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು, ಕೆಳಹಂತದ ನ್ಯಾಯಾಲಯಗಳು ಹಾಗೂ ನ್ಯಾಯಾಂಗದ ಕಾರ್ಯ ನಿರ್ವಹಿಸುವ ಎಲ್ಲಾ ತರಹದ ಟ್ರಿಬ್ಯುನಲ್‌ಗಳಿಗೂ ಅನ್ವಯಿಸಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಪ್ರಮುಖ ನಿಯಮಗಳು ಮತ್ತು ಷರತ್ತುಗಳು

  • ಮಾಹಿತಿ ಬಹಿರಂಗಪಡಿಸುವುದು ಕಡ್ಡಾಯ (ನಿಯಮ 43(3): ವಕೀಲರು ಅಥವಾ ದಾವೆದಾರರು ತಮ್ಮ ವಾದದ ಪತ್ರಗಳು, ಪುರಾವೆಗಳು ಅಥವಾ ಯಾವುದೇ ದಾಖಲೆಗಳನ್ನು ಸಿದ್ಧಪಡಿಸಲು AI ಬಳಸಿದ್ದರೆ, ಅದನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವಾಗಲೇ ಕಡ್ಡಾಯವಾಗಿ ತಿಳಿಸಬೇಕು.
  • ತಪ್ಪುಗಳಿಗೆ AI ಕಾರಣವಲ್ಲ: AI ನೀಡಿದ ಮಾಹಿತಿ ತಪ್ಪಾಗಿದ್ದರೆ ಅಥವಾ ಅದರಿಂದ ನ್ಯಾಯಾಲಯದ ದಾರಿ ತಪ್ಪಿಸುವಂತಿದ್ದರೆ, ಅದಕ್ಕೆ ಅದನ್ನು ಸಲ್ಲಿಸಿದ ವ್ಯಕ್ತಿಯೇ ಸಂಪೂರ್ಣ ಹೊಣೆಗಾರರಾಗುತ್ತಾರೆ. “AI ತಂತ್ರಜ್ಞಾನ ತಪ್ಪಾದ ಮಾಹಿತಿ ನೀಡಿದೆ (AI Hallucination)” ಎಂದು ಹೇಳಿ ತಪ್ಪಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ.
  • ಮಾನವ ನ್ಯಾಯಾಧೀಶರೇ ಅಂತಿಮ: ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಕಾನೂನು, ಸತ್ಯಾಸತ್ಯತೆ ಮತ್ತು ನ್ಯಾಯದ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಕೇವಲ ನ್ಯಾಯಾಧೀಶರಿಗೆ ಮಾತ್ರ ಇರುತ್ತದೆ.

AI ಎಲ್ಲೆಲ್ಲಿ ಬಳಸಬಹುದು?

ಮಾನವನ ಮೇಲ್ವಿಚಾರಣೆಗೆ ಒಳಪಟ್ಟು ಕೆಳಗಿನ ಕೆಲಸಗಳಿಗೆ AI ಬಳಸಲು ಅನುಮತಿ ನೀಡಲಾಗಿದೆ:

  • ಕಾನೂನು ಸಂಶೋಧನೆ ಮತ್ತು ಹಳೆಯ ತೀರ್ಪುಗಳ ಹುಡುಕಾಟ.
  • ದಾಖಲೆಗಳು, ವಾದಗಳು ಮತ್ತು ತೀರ್ಪುಗಳ ಸಾರಾಂಶ ಸಿದ್ಧಪಡಿಸುವುದು.
  • ತೀರ್ಪುಗಳು ಮತ್ತು ಕಾನೂನು ದಾಖಲೆಗಳ ಭಾಷಾಂತರ ಹಾಗೂ ಕೋರ್ಟ್ ಕಲಾಪಗಳ ಲಿಪ್ಯಂತರ.
  • ದೈನಂದಿನ ನೋಟಿಸ್, ಸಮನ್ಸ್ ಮತ್ತು ಕೇಸ್ ಮ್ಯಾನೇಜ್‌ಮೆಂಟ್ ನಿರ್ವಹಣೆ.
  • ವಿಕಲಚೇತನರಿಗೆ ನ್ಯಾಯಾಲಯದ ಸೇವೆಗಳು ಸುಲಭವಾಗಿ ಸಿಗುವಂತೆ ಮಾಡುವುದು.

AI ಎಲ್ಲೆಲ್ಲಿ ಬಳಸುವಂತಿಲ್ಲ?

ನ್ಯಾಯಾಂಗದ ಪ್ರಮುಖ ನಿರ್ಧಾರಗಳಲ್ಲಿ AI ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ:

  • ಪ್ರಕರಣಗಳ ತೀರ್ಪು ನೀಡುವುದು ಅಥವಾ ಶಿಕ್ಷೆ ಪ್ರಕಟಿಸುವುದು.
  • ಜಾಮೀನು ಅರ್ಹತೆಯನ್ನು ನಿರ್ಧರಿಸುವುದು ಅಥವಾ ಆರೋಪಿಗಳ ಭವಿಷ್ಯದ ನಡವಳಿಕೆಯನ್ನು ಊಹಿಸುವುದು.
  • ಸಾಕ್ಷಿಗಳ ವಿಶ್ವಾಸಾರ್ಹತೆಯನ್ನು ಅಳೆಯುವುದು.
  • ನ್ಯಾಯಾಧೀಶರು, ವಕೀಲರು ಅಥವಾ ದಾವೆದಾರರ ಮೇಲೆ ಕಣ್ಗಾವಲು ಇಡುವುದು.

ಇದನ್ನೂ ಓದಿ: ನದಿಗಳ ಒಡಲು ಬಗೆವ ‘ಆಧುನಿಕ ಡಕಾಯಿತರು’: ಮರಳು ಮಾಫಿಯಾದ ಕಪಿಮುಷ್ಟಿಯಲ್ಲಿ ಭಾರತದ ಜೀವರಾಶಿ

AI ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಮತ್ತು ತಂತ್ರಜ್ಞಾನ ತಜ್ಞರನ್ನೊಳಗೊಂಡ ಶಾಶ್ವತ ಉನ್ನತ ಸಮಿತಿಯನ್ನು ರಚಿಸಲಾಗುವುದು. ಜೊತೆಗೆ CoRE-AI ಎಂಬ ಸಂಶೋಧನಾ ಕೇಂದ್ರವನ್ನೂ ಸ್ಥಾಪಿಸಲಾಗುವುದು. ನ್ಯಾಯಾಲಯಗಳಲ್ಲಿ ಬಳಸಲಾಗುವ ಪ್ರತಿಯೊಂದು AI ತಂತ್ರಜ್ಞಾನವನ್ನು ವರ್ಷಕ್ಕೊಮ್ಮೆಯಾದರೂ ತಾಂತ್ರಿಕ, ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದ ಆಡಿಟ್‌ಗೆ ಒಳಪಡಿಸಬೇಕು. ಖಾಸಗಿ ಕಂಪನಿಗಳಿಗೆ ನಿರ್ಬಂಧ: ಕೋರ್ಟ್ ದತ್ತಾಂಶಗಳನ್ನು (Data) ಬಳಸುವ ಖಾಸಗಿ ಐಟಿ ಕಂಪನಿಗಳ ಮೇಲೆ ಕಠಿಣ ನಿಯಮಗಳನ್ನು ಹೇರಲಾಗುವುದು. ನ್ಯಾಯಾಲಯದ ಡೇಟಾ ಸುರಕ್ಷತೆ ಮತ್ತು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ (DPDP Act, 2023) ಪಾಲನೆ ಕಡ್ಡಾಯವಾಗಿರುತ್ತದೆ ಎಂದು ಸುಪ್ರೀಂ ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿರುವ ಈ ಕರಡು ಪ್ರತಿಯು ತಂತ್ರಜ್ಞಾನವನ್ನು ವಿರೋಧಿಸುವುದಿಲ್ಲ. ಬದಲಿಗೆ, ನ್ಯಾಯದ ವಿಳಂಬವನ್ನು ತಪ್ಪಿಸಲು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು “ಜವಾಬ್ದಾರಿಯುತ AI” ಬಳಕೆಯನ್ನು ಉತ್ತೇಜಿಸುತ್ತದೆ ಎಂದು ಕೋರ್ಟ್‌ ಹೇಳಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ ನಡುವೆ ಟ್ರಂಪ್‌ಗೆ ಅಗ್ನಿಪರೀಕ್ಷೆ!

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್...