ವಿನೇಶ್ ಫೋಗಟ್ ವಿವಾದ: WFI ವಿರುದ್ಧ ಹೈಕೋರ್ಟ್ ಟೀಕೆಗಳನ್ನು ತೆಗೆದುಹಾಕಲು ಸುಪ್ರೀಂ ನಿರಾಕರಣೆ

Date:

ಏಷ್ಯನ್ ಗೇಮ್ಸ್ 2026ರ ಆಯ್ಕೆ ಪ್ರಕ್ರಿಯೆಯಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಭಾಗವಹಿಸಲು ಅನುಮತಿ ನೀಡುವಾಗ ದೆಹಲಿ ಹೈಕೋರ್ಟ್ ಮಾಡಿದ್ದ ಕಠಿಣ ಟೀಕೆಗಳನ್ನು ಮತ್ತು ಅವಲೋಕನಗಳನ್ನು ತೆಗೆದುಹಾಕಲು (Expunge) ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

- Advertisement -

ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠವು, “ಮೇ 29 ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ವಿನೇಶ್ ಫೋಗಟ್ ಈಗಾಗಲೇ ಟ್ರಯಲ್ಸ್‌ನಲ್ಲಿ ಭಾಗವಹಿಸಿರುವುದರಿಂದ, ಭಾರತೀಯ ಕುಸ್ತಿ ಫೆಡರೇಶನ್ (WFI) ಸಲ್ಲಿಸಿದ್ದ ಈ ಅರ್ಜಿಗೆ ಈಗ ಯಾವುದೇ ಅರ್ಥ ಉಳಿದಿಲ್ಲ ಎಂದು ಹೇಳಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಆದಾಗ್ಯೂ, ಹೈಕೋರ್ಟ್‌ನ ಟೀಕೆಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದರ್ಥವಲ್ಲ, ಈ ಕಾನೂನು ವಿಷಯಗಳು ಇನ್ನೂ ಮುಕ್ತವಾಗಿವೆ ಎಂದು ಪೀಠವು ಸ್ಪಷ್ಟಪಡಿಸಿದೆ.

ವಿವಾದದ ಹಿನ್ನೆಲೆ ಏನು?

ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್ ಅವರಿಗೆ ಅರ್ಹತೆ ಇಲ್ಲ ಎಂದು WFI ವಾದಿಸಿತ್ತು. ನಿಯಮಗಳ ಪ್ರಕಾರ 2025 ಮತ್ತು 2026 ರ ಕೆಲವು ನಿರ್ದಿಷ್ಟ ಸ್ಪರ್ಧೆಗಳಲ್ಲಿ ಪದಕ ಗೆದ್ದವರಿಗೆ ಮಾತ್ರ ಟ್ರಯಲ್ಸ್‌ನಲ್ಲಿ ಅವಕಾಶವಿತ್ತು. 2024ರ ಒಲಿಂಪಿಕ್ಸ್ ಬಳಿಕ ನಿವೃತ್ತಿ ಘೋಷಿಸಿ, ಡಿಸೆಂಬರ್ 2025 ರಲ್ಲಿ ಕಂಬ್ಯಾಕ್ ಮಾಡಿದ್ದ ವಿನೇಶ್ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಿರಲಿಲ್ಲ. ಅಲ್ಲದೆ ಅವರು ಮರಳಿ ಬರುವ ಮುನ್ನ ನೀಡಬೇಕಾದ 6 ತಿಂಗಳ ಮುನ್ಸೂಚನೆ ಅವಧಿಯನ್ನು ಪೂರೈಸಿಲ್ಲ ಎಂದು WFI ಆರೋಪಿಸಿತ್ತು.

ಇದನ್ನು ಪ್ರಶ್ನಿಸಿ ವಿನೇಶ್ ಫೋಗಟ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಟಾರಿಯಾ ಅವರಿದ್ದ ಪೀಠವು ಮೇ 22 ರಂದು WFI ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ವಿನೇಶ್ ಫೋಗಟ್ ಅವರು ಹೆರಿಗೆ ರಜೆಯಲ್ಲಿದ್ದ ಕಾರಣಕ್ಕಾಗಿ 2025ರ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ತಾಯ್ತನವನ್ನು ಮುಂದಿಟ್ಟುಕೊಂಡು ಮಹಿಳಾ ಕ್ರೀಡಾಪಟುಗಳನ್ನು ಕಡೆಗಣಿಸುವುದು ಅಥವಾ ಹೊರಗಿಡುವುದು ತಪ್ಪು ಎಂದು ಕೋರ್ಟ್ ಹೇಳಿತ್ತು.

2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಹೆಚ್ಚಿನ ತೂಕದ ಕಾರಣಕ್ಕೆ ಅನರ್ಹಗೊಂಡಿದ್ದನ್ನು WFI ತನ್ನ ಶೋಕಾಸ್ ನೋಟಿಸ್‌ನಲ್ಲಿ ʼರಾಷ್ಟ್ರೀಯ ಅವಮಾನʼ ಎಂದು ಕರೆದಿತ್ತು. ಇದನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿತ್ತು, ಈ ಪದಬಳಕೆ ದ್ವೇಷಪೂರಿತವಾಗಿದೆ ಎಂದು ಕಿಡಿಕಾರಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದೇನು?

ಹೈಕೋರ್ಟ್‌ನ ಈ ಕಠಿಣ ತೀರ್ಪನ್ನು ಪ್ರಶ್ನಿಸಿ WFI ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಮೇ 29 ರಂದು ಸುಪ್ರೀಂ ಕೋರ್ಟ್ ವಿನೇಶ್‌ಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ತಾತ್ಕಾಲಿಕ ಅನುಮತಿ ನೀಡಿತ್ತು (ಆದರೆ ವಿನೇಶ್ ಟ್ರಯಲ್ಸ್‌ನಲ್ಲಿ ಅರ್ಹತೆ ಪಡೆಯಲು ವಿಫಲರಾಗಿದ್ದರು).

ಇದನ್ನೂ ಓದಿ: ನ್ಯಾಯಾಲಯಗಳಲ್ಲಿ AI ಬಳಕೆ; ಸಾರ್ವಜನಿಕರ ಸಲಹೆಗೆ ಸುಪ್ರೀಂ ಅವಕಾಶ

ಗುರುವಾರ ಮತ್ತೆ ವಿಚಾರಣೆ ಆರಂಭವಾದಾಗ, WFI ಪರ ಹಿರಿಯ ವಕೀಲ ಡಿ.ಎನ್. ಗೋಬರ್ಧನ್, “ಹೈಕೋರ್ಟ್ ತೀರ್ಪಿನಲ್ಲಿ ಬಳಸಿರುವ ‘ದ್ವೇಷಪೂರಿತ’ ಮತ್ತು ‘ಖಂಡನೀಯ’ ಎಂಬ ಪದಗಳನ್ನು ತೆಗೆದುಹಾಕಬೇಕು, ಇಲ್ಲದಿದ್ದರೆ ಕೆಳಹಂತದ ನ್ಯಾಯಾಲಯದಲ್ಲಿರುವ ಪ್ರಕರಣಗಳ ಮೇಲೆ ಇದು ಪ್ರಭಾವ ಬೀರುತ್ತದೆ” ಎಂದು ವಾದಿಸಿದರು.

ಆದರೆ, ಸುಪ್ರೀಂ ಕೋರ್ಟ್ ಈ ವಾದವನ್ನು ಪುರಸ್ಕರಿಸದೆ, ಪ್ರಕರಣ ಈಗ ಪ್ರಸ್ತುತತೆ ಕಳೆದುಕೊಂಡಿರುವುದರಿಂದ ಹೈಕೋರ್ಟ್‌ನ ಯಾವುದೇ ಮುಖ್ಯಾಂಶಗಳನ್ನು ಸದ್ಯಕ್ಕೆ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿ ವಿಲೇವಾರಿ ಮಾಡಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಖನೌ ಕೆಫೆ ಮಾಲೀಕನ ಸಾವು ಪ್ರಕರಣ: ರೂಪದರ್ಶಿ ಶ್ರದ್ಧಾ ದುಬೆ ಬಂಧನ

​ಲಖನೌದ ಕೆಫೆ ಮಾಲೀಕ ಶಿವ ಶರ್ಮಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ...

ಏಷ್ಯನ್ ಪ್ಯಾರಾ ಗೇಮ್ಸ್‌ | 192 ಕೆಜಿ ಭಾರ ಎತ್ತಿ ಬೆಳ್ಳಿ ಗೆದ್ದ ಅಶೋಕ್ ಮಲಿಕ್

ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ 65 ಕೆಜಿ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ...

ಝುಬಿನ್ ಗರ್ಗ್‌ಗೆ ನ್ಯಾಯಕ್ಕಾಗಿ ಆಗ್ರಹ: ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ಅಸ್ಸಾಂ ಪೊಲೀಸ್ ವಶಕ್ಕೆ

ಅಸ್ಸಾಂನ ಪ್ರಸಿದ್ಧ ಸಾಂಸ್ಕೃತಿಕ ಪ್ರತಿಭೆ, ಗಾಯಕ ಝುಬಿನ್ ಗರ್ಗ್ ಅವರ ಸಾವಿಗೆ...

ಪ್ರಧಾನಿ ಮೋದಿಗೆ ಎರಡು ಪತ್ರಗಳನ್ನು ಬರೆದು, ಮೂರು ಮುಖ್ಯ ಕಳವಳ ವ್ಯಕ್ತಪಡಿಸಿದ ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಮಾತನಾಡುತ್ತಾ, ಚುನಾವಣಾ ಪಟ್ಟಿಯಲ್ಲಿ...