ಉತ್ತರ ಪ್ರದೇಶ | ಹಸುಳೆಯ ಭೀಕರ ಹತ್ಯೆ; ದುರುಳನ ಜಾತಿ/ಧರ್ಮ ಆಧರಿಸಿದೆಯೇ ಪೊಲೀಸ್ ಗುಂಡಿನ ಗುರಿ?

Date:

ರಾಜಕೀಯ ಮತ್ತು ಸಾಮಾಜಿಕ ವೈರುಧ್ಯಗಳ ಕೇಂದ್ರ ಬಿಂದುವಾಗಿರುವ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಮನುಕುಲವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಯೊಂದು ನಡೆದಿದೆ. ವಿಕೃತ ತಂದೆಯೊಬ್ಬ ತನ್ನದೇ ಒಂದೂವರೆ ವರ್ಷದ ಮಗುವನ್ನು ಕ್ರೂರವಾಗಿ ನೆಲಕ್ಕೆ ಬಡಿದು ಕೊಂದಿದ್ದಾನೆ. ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯಲ್ಲಿ ನಡೆದಿರುವ ಈ ಆಘಾತಕಾರಿ ಕೃತ್ಯ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

- Advertisement -

ಈಗಷ್ಟೇ ಕಣ್ಣು ತೆರೆದು ಜಗತ್ತನ್ನು ನೋಡಲಾರಂಭಿಸಿದ್ದ ಹಸುಳೆಯನ್ನು ಜಿತೇಂದ್ರ ಪಾಠಕ್ ಕೊಂದ ರೀತಿ ಅತ್ಯಂತ ಭಯಾನಕವಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಮಗುವನ್ನು ನೆಲಕ್ಕೆ ಪದೇ ಪದೇ ಬೀಸಿ ಬಡಿದು ಹತ್ಯೆಗೈದಿದ್ದಾನೆ. ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾರ್ವನಿಕರು ಆಗ್ರಹಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೆಚ್ಚುತ್ತಿದ್ದಂತೆಯೇ, ಕೃತ್ಯ ಎಸಗಿದ ಆರೋಪಿ ಜಿತೇಂದ್ರ ಪಾಠಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ, ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಆದರೆ, ‘ಕಾಲಿಗೆ ಗುಂಡು’ ಹಾರಿಸುವ ಪ್ರಕ್ರಿಯೆ ಕುರಿತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ದೊಡ್ಡ ವೈರುದ್ಯದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಉತ್ತರ ಪ್ರದೇಶದ ಪೋಲಿಸ್ ಆಡಳಿತ ಮತ್ತು ಎನ್‌ಕೌಂಟರ್ ಸಂಸ್ಕೃತಿಯಲ್ಲಿಯೂ ತಾರತಮ್ಯವಿದೆ ಎಂಬ ಗಂಭೀರ ಚರ್ಚೆಗಳು ಮುನ್ನೆಲೆಗೆ ಬಂದಿದೆ.

ಜಾತಿ-ಧರ್ಮದ ಆಧಾರದಲ್ಲಿ ಬದಲಾಗುತ್ತದೆಯೇ ಪೊಲೀಸ್ ಗುರಿ?

ಈ ಘಟನೆಯ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಅತಿಮುಖ್ಯವಾದ ಚರ್ಚೆ ನಡೆಯುತ್ತಿದೆ. ಈ ಚರ್ಚೆಯು ಪ್ರಮುಖ ವೈರುದ್ಯವನ್ನು ಎತ್ತಿ ತೋರಿಸಿದೆ. ಎನ್‌ಕೌಂಟರ್‌ಗೆ ಕಾನೂನಿನ ಮಾನ್ಯತೆ ಇಲ್ಲದಿದ್ದರೂ, ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಎನ್‌ಕೌಂಟರ್‌ಗಳು ನಡೆಯುತ್ತಲೇ ಇವೆ. ಈ ಎನ್‌ಕೌಂಟರ್‌ ಮಾದರಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಆರೋಪಿಯ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಪೊಲೀಸರ ನಡೆ ನಿರ್ಧಾರವಾಗುತ್ತದೆಯೇ ಎಂಬ ಗಂಭೀರ ಸಂಶಯಗಳು ವ್ಯಕ್ತವಾಗುತ್ತಿವೆ ಎಂದು ನೆಟ್ಟಿಗರು ಹೇಳಿದ್ದಾರೆ.

ಒಂದು ವೇಳೆ, ಈ ಘೋರ ಕೃತ್ಯವೆಸಗಿದ ಆರೋಪಿಯ ಹೆಸರು ‘ಜಿಯಾವುಲ್ಲಾ ಪರ್ವೇಜ಼್’ ಆಗಿರುತ್ತಿದ್ದರೆ ಅಥವಾ ಆತ ಹಿಂದುಳಿದ, ದಲಿತ, ಆದಿವಾಸಿ ಸಮುದಾಯಕ್ಕೆ ಸೇರಿದವನಾಗಿದ್ದರೆ ಪೊಲೀಸರ ನಡೆ ಹೀಗೆಯೇ ಇರುತ್ತಿತ್ತೇ? ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿಬರುತ್ತಿದೆ.

ನೆಟ್ಟಿಗರ ವಿಮರ್ಶೆಯ ಪ್ರಕಾರ, ಅಪರಾಧಿ ಅಲ್ಪಸಂಖ್ಯಾತ ಅಥವಾ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದರೆ, ಎನ್‌ಕೌಂಟರ್ ಹೆಸರಿನಲ್ಲಿ ಪೊಲೀಸರ ಗುಂಡು ನೇರವಾಗಿ ತಲೆಗೆ ಅಥವಾ ಎದೆಗೆ ತಗುಲಿ, ಆತ ಸ್ಥಳದಲ್ಲೇ ಹತನಾಗುವ ಸಾಧ್ಯತೆಗಳೇ ಹೆಚ್ಚಿರುತ್ತಿದ್ದವು. ಆದರೆ, ಇಲ್ಲಿ ಆರೋಪಿಯ ಹೆಸರು ‘ಪಾಠಕ್’ (ಪ್ರಬಲ ಜಾತಿ) ಎಂದಾಗಿರುವುದರಿಂದ, ಪೊಲೀಸರ ಗುಂಡು ಹಣೆಯನ್ನು ಬಿಟ್ಟು ಕಾಲಿಗೆ ತಗುಲಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಈ ಲೇಖನ ಓದಿದ್ದೀರಾ?: ಸಾಲುಸಾಲು ಸವಾಲು ಗೆಲ್ಲಲು ‘ಇಮೇಜ್’ ಬದಲಾಯಿಸಿಕೊಳ್ಳಬಲ್ಲರೆ ‘ಡಿಕೆಶಿ’?

“ಅಪರಾಧಕ್ಕೆ ಯಾವುದೇ ಜಾತಿ ಅಥವಾ ಧರ್ಮ ಇರುವುದಿಲ್ಲ. ಆದರೆ ಅಪರಾಧಿಯನ್ನು ಶಿಕ್ಷಿಸುವಾಗ ಅಥವಾ ಎನ್‌ಕೌಂಟರ್ ನಡೆಸುವಾಗ ಕಾನೂನು ಜಾರಿ ಸಂಸ್ಥೆಗಳು ಆರೋಪಿಯ ಸಾಮಾಜಿಕ ಹಿನ್ನೆಲೆಯನ್ನು ನೋಡುತ್ತಿವೆಯೇ” ಎಂದು ನಟ್ಟಿಗರು ಪ್ರಶ್ನಿಸಿದ್ದಾರೆ.

ಕಾನೂನಿನ ಮುಖಾಮುಖಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಡಳಿತದ ಉತ್ತರ ಪ್ರದೇಶದಲ್ಲಿ ಅಸಂವಿಧಾನಿಕ ‘ಬುಲ್ಡೋಜರ್ ನ್ಯಾಯ’ ಮತ್ತು ‘ಹಾಫ್ ಎನ್‌ಕೌಂಟರ್’ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದರೂ, ಈ ಕ್ರಮಗಳು ಎಲ್ಲರ ವಿರುದ್ಧವೂ ಒಂದೇ ಥರನಾಗಿಲ್ಲ ಎಂಬುದೂ ಕಟು ಸತ್ಯ.

ಇದೇ ಉತ್ತರ ಪ್ರದೇಶದಲ್ಲಿ ಉನ್ನಾವೋ ಮತ್ತು ಹತ್ರಾಸ್‌ನಂತಹ ಭೀಕರ ಅತ್ಯಾಚಾರ ಪ್ರಕರಣಗಳು ನಡೆದಿವೆ. ಆದರೆ, ಈ ಪ್ರಕರಣಗಳಲ್ಲಿ ಆರೋಪಿಗಳು ಸ್ವತಃ ಬಿಜೆಪಿಗರು ಅಥವಾ ಪ್ರಬಲ ಜಾತಿಗೆ ಸೇರಿದವರಾಗಿದ್ದಾರೆ. ಆದ್ದರಿಂದ, ಈ ಆರೋಪಿಗಳ ವಿರುದ್ಧ ಯೋಗಿ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಬದಲಾಗಿ, ಆರೋಪಿಗಳ ಪರವಾಗಿ ಪೊಲೀಸರೇ ಸಂತ್ರಸ್ತೆಯರ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ. ಸರ್ಕಾರವೂ ಆರೋಪಿಗಳ ಪರವಾಗಿ ನಿಂತಿದೆ ಎಂಬ ಗಂಭೀರ ಆರೋಪಗಳಿವೆ.

ಒಂದೂವರೆ ವರ್ಷದ ಹಸುಳೆಯನ್ನು ಕೊಂದ ಜಿತೇಂದ್ರ ಪಾಠಕ್‌ನ ಕ್ರೌರ್ಯಕ್ಕೆ ಯಾವುದೇ ಕ್ಷಮೆ ಇಲ್ಲ. ಆತನಿಗೆ ಕಾನೂನಿನ ಚೌಕಟ್ಟಿನಲ್ಲಿ ಗರಿಷ್ಠ ಶಿಕ್ಷೆಯಾಗಬೇಕು ಎಂಬುದರಲ್ಲಿ ಎರಡನೇ ಮಾತಿಲ್ಲ. ಅಂತೆಯೇ, ಆರೋಪಿಗಳನ್ನು ಗುಂಡಿಕ್ಕಿ ಕೊಲ್ಲುವ ಅಧಿಕಾರವೂ ಪೊಲೀಸರಿಗಿಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್‌ ನ್ಯಾಯ ಹೆಚ್ಚಾಗಿದೆ. ಪೊಲೀಸರೇ ಹಲವು ಪ್ರಕರಣಗಳಲ್ಲಿ ತೀರ್ಪುದಾರರಂತೆ ಆರೋಪಿಗಳನ್ನು ಕೊಲ್ಲುತ್ತಿದ್ದಾರೆ. ಅದೂ, ಆರೋಪಿಗಳ ಜಾತಿ, ಧರ್ಮದ ಬಲದ ಮೇಲೆ ಪೋಲೀಸ್ ಇಲಾಖೆಯ ಗುಂಡಿನ ಗುರಿ ಬದಲಾಗುತ್ತಿದೆ ಎಂಬುದು ಕಠು ವಾಸ್ತವ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...