ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ಓಧವ್ ಎಂಬಲ್ಲಿ ಕ್ರೈಸ್ತರ ಈಸ್ಟರ್ ಸಂಡೇ ಪ್ರಯುಕ್ತ ಆಯೋಜಿಸಿದ್ದ ಪ್ರಾರ್ಥನಾ ಸಭೆಯಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಕಾರ್ಯಕರ್ತರು ದಾಂಧಲೆ ಎಬ್ಬಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಡಿಗೆ ಮತ್ತು ಲಾಠಿಗಳನ್ನು ಹಿಡಿದಿದ್ದ ಕಾರ್ಯಕರ್ತರು, ಹರ ಹರ ಮಹಾದೇವ್ ಮತ್ತು ಜೈಶ್ರೀರಾಂ ಘೋಷಣೆಗಳನ್ನು ಕೂಗುತ್ತಾ ಪ್ರಾರ್ಥನಾ ಸಭೆ ನಡೆಯುತ್ತಿದ್ದ ಪ್ರದೇಶಕ್ಕೆ ನುಗ್ಗಿದರು.
ಪ್ರಾರ್ಥನಾ ನಿರತರಾಗಿದ್ದ ಮಹಿಳೆಯರನ್ನು ಸಭೆಯಿಂದ ಹೊರ ನಡೆಯುವಂತೆ ಆಗ್ರಹಿಸುತ್ತಿರುವುದು ವಿಡಿಯೊದಲ್ಲಿ ಕಂಡುಬರುತ್ತಿದೆ.
ಎಕ್ಸ್ ನಲ್ಲಿ ಪೋಸ್ಟ್ ಆದ ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ರಾಜ್ಯ ಪೊಲೀಸ್ ಮುಖ್ಯಸ್ಥರು, ಅಹ್ಮದಾಬಾದ್ ನಗರ ಪೊಲೀಸರು ಇದಕ್ಕೆ ಪ್ರತಿಕ್ರಿಯಿಸಿ, ಘಟನೆಯನ್ನು ದೃಢಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತೀಯ ಸಮಾಜದಲ್ಲಿ ಬ್ರಾಹ್ಮಣ್ಯ-ಮನುವಾದ ಮರುಕಳಿಸುತ್ತಿದೆಯೇ?
“ಧಾರ್ಮಿಕ ಮತಾಂತರ ನಡೆಯುತ್ತಿದೆ ಎಂಬ ಅನುಮಾನದಿಂದ ವಿಎಚ್‌ಪಿ ಕಾರ್ಯಕರ್ತರು ಪ್ರಾರ್ಥನಾ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದಾರೆ, ಇದಾದ ಸ್ವಲ್ಪವೇ ಹೊತ್ತಿನಲ್ಲಿ ಪೊಲೀಸರೂ ಸ್ಥಳಕ್ಕೆ ಧಾವಿಸಿದ್ದಾರೆ. ವಿಎಚ್‌ಪಿ ಕಾರ್ಯಕರ್ತರು ಓಧವ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಮನವಿಯನ್ನೂ ಸಲ್ಲಿಸಿ, ಧಾರ್ಮಿಕ ಮತಾಂತರ ವಿರುದ್ಧ ಆತಂಕ ವ್ಯಕ್ತಪಡಿಸಿದ್ದಾರೆ. ಅಪಹರಣ ಅಥವಾ ಒತ್ತೆಯಾಳುಗಳಾಗಿ ಒಯ್ದಿರುವ ಯಾವ ಘಟನೆಯೂ ನಡೆದಿಲ್ಲ. ಯಾವುದೇ ಸಂಘರ್ಷ ಅಥವಾ ಅನಪೇಕ್ಷಿತ ಘಟನೆಗಳು ನಡೆದಿಲ್ಲ” ಎಂದು ಅಹಮದಾಬಾದ್ ನಗರ ಪೊಲೀಸರು ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ವಿಮಲ್ ಪ್ರಕಾಶ್ ಸೊಸೈಟಿ ಸಮೀಪದ ರಾಜೇಂದ್ರ ಪಾರ್ಕ್ ನಲ್ಲಿ ಆಯೋಜಿಸಿದ್ದ ಈಸ್ಟರ್ ಸಮಾವೇಶದ ವೇಳೆ ಈ ಘಟನೆ ನಡೆದಿದೆ ಎಂದು ಇನ್ಸ್ಪೆಕ್ಟರ್ ಪ್ರತೀಕ್ ಜಿಂಜುವಾಡಿಯಾ ಹೇಳಿದ್ದಾರೆ. ಈ ಘಟನೆ ಸಂಬಂಧ ಇನ್ನೂ ಎಫ್ಐಆರ್ ದಾಖಲಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
A church was attacked in Odhav, Ahmedabad during Easter Sunday prayer. VHP and Bajrang Dal members stormed the church with knives & sticks, threatening women and children while chanting Jai Shri Ram!
— Congress Kerala (@INCKerala) April 20, 2025
Wolves in sheep clothing: @GeorgekurianBjp, @TheSureshGopi, @RajeevRC_X and… pic.twitter.com/0saBLWbuIi