ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನದ ವೇಳೆ ಪಶ್ಚಿಮಬಂಗಾಳದಲ್ಲಿ ಆಕ್ರೋಶಿತ ಜನರ ಗುಂಪು ಬಿಜೆಪಿ ಅಭ್ಯರ್ಥಿಯ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಬಿಜೆಪಿ ಅಭ್ಯರ್ಥಿಯು ಗ್ರಾಮದಿಂದಲೇ ಓಡಿ ಹೋಗುವಂತ ಪರಿಸ್ಥಿತಿ ನಿರ್ಮಾಣವಾದ ಘಟನೆ ನಡೆದಿದೆ.
ಇಂದು (ಮೆ 25) ನಡೆದ ಆರನೇ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದ ಜಾರ್‌ಗ್ರಾಮ್‌ನ ಬಿಜೆಪಿ ಅಭ್ಯರ್ಥಿ ಪ್ರಣತ್ ತುಡು ಅವರ ಮೇಲೆ ಪಶ್ಚಿಮ ಮಿಡ್ನಾಪುರದ ಮಂಗಲಪೋಟಾದಲ್ಲಿ ಜನ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಗ್ರಾಮದಿಂದಲೇ ಅವರು ಓಡಿ ಹೋಗುವಂತಾಯಿತು.
ಪ್ರಣತ್ ತುಡು ಅವರನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ರಕ್ಷಾ ಕವಚಗಳನ್ನು ಹಿಡಿದುಕೊಂಡು ಕರೆದೊಯ್ದಿದ್ದಾರೆ. ಪ್ರತಿಭಟನಾಕಾರರು ಅಭ್ಯರ್ಥಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಮಾಧ್ಯಮ ಪ್ರತಿನಿಧಿಗಳು, ಭದ್ರತಾ ಸಿಬ್ಬಂದಿ ಹಾಗೂ ಬಿಜೆಪಿ ಅಭ್ಯರ್ಥಿ ಸ್ಥಳದಿಂದ ಪರಾರಿಯಾಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
Mamata Banerjee is murdering democracy in Bengal. Now, TMC goons attack BJP’s Jhargram (a Tribal seat) candidate and ABP Ananda’s crew. Despite attempts to preclude people from casting vote, West Bengal has one of the highest voter turnout across the country. People are voting to… pic.twitter.com/ZMdTPhxiYw
— Amit Malviya (मोदी का परिवार) (@amitmalviya) May 25, 2024
ಮತಗಟ್ಟೆಯ ಹೊರಗೆ ಮತ ಚಲಾಯಿಸಲು ಕಾಯುತ್ತಿದ್ದ ಮಹಿಳೆಗೆ ಪ್ರಣತ್ ತುಡು ಅವರ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಇದು ಪ್ರತಿಭಟನೆಗೆ ಕಾರಣವಾಯಿತು ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಜೆಪಿ ಅಭ್ಯರ್ಥಿ ಪ್ರಣತ್ ತುಡು, “ಪಕ್ಷದ ಏಜೆಂಟರನ್ನು ಮತಗಟ್ಟೆ ಒಳಗೆ ಬಿಡುತ್ತಿಲ್ಲ ಎಂಬ ಮಾಹಿತಿ ಮೇರೆಗೆ ಕೆಲವು ಮತಗಟ್ಟೆಗಳಿಗೆ ಭೇಟಿ ನಿಡುತ್ತಿದ್ದೆ. ಈ ವೇಳೆ ರಸ್ತೆಗಳನ್ನು ತಡೆದ ಟಿಎಂಸಿ ಗೂಂಡಾಗಳು, ನನ್ನ ಕಾರಿಗೆ ಇಟ್ಟಿಗೆಗಳನ್ನು ಎಸೆಯಲು ಪ್ರಾರಂಭಿಸಿದರು. ನನ್ನ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿ, ತಡೆಯಲು ಪ್ರಯತ್ನಿಸಿದಾಗ ಅವರು ಗಾಯಗೊಂಡರು. ನನ್ನ ಜೊತೆಗಿದ್ದ ಇಬ್ಬರು ಭದ್ರತಾ ಸಿಬ್ಬಂದಿ ತಲೆಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಬೇಕಾಯಿತು. ಒಂದು ವೇಳೆ ನಾವು ಅಲ್ಲಿಂದ ತಪ್ಪಿಸಿಕೊಳ್ಳದೇ ಇದ್ದಿದ್ದರೆ ನಮ್ಮನ್ನು ಕೊಂದುಬಿಡುತ್ತಿದ್ದರು” ಎಂದು ಹೇಳಿಕೊಂಡಿದ್ದಾರೆ.
#WATCH | West Bengal | BJP candidate from Jhargram Lok Sabha seat, Pranat Tudu was attacked allegedly by miscreants when he was visiting booth number 200 in Monglapota in the parliamentary constituency today pic.twitter.com/bfEYH7KgXT
— ANI (@ANI) May 25, 2024
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಕಲ್ಲುತೂರಾಟದ ವಿಡಿಯೊವನ್ನು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಟಿಎಂಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾರೆ. ಟಿಎಂಸಿಯ ಗೂಂಡಾಗಳು ಬಿಜೆಪಿ ಅಭ್ಯರ್ಥಿ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಜನರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ. ಇಷ್ಟಾದರೂ, ರಾಜ್ಯದಿಂದ ಟಿಎಂಸಿಯನ್ನು ಕಿತ್ತೆಸೆಯುವ ದಿಸೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಮತದಾನ ಮಾಡುತ್ತಿದ್ದಾರೆ” ಎಂಬುದಾಗಿ ಪೋಸ್ಟ್ ಮಾಡಿದ್ದಾರೆ.
