ಕೇಂದ್ರ ಚುನಾವಣಾ ಆಯೋಗವು ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ದಿನಾಂಕವನ್ನು ಬದಲಿಸಿದೆ.
ಇವೆರೆಡು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಜೂನ್ 4ರ ಬದಲಿಗೆ ಜೂನ್ 2 ರಂದು ನಡೆಸಲು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.
ಎರಡೂ ರಾಜ್ಯಗಳ ಮತದಾನ ಏ.19 ರಂದು ನಡೆಯಲಿದೆ. ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ಲೋಕಸಭೆ ಚುನಾವಣೆಯ ಮತದಾನ ಜೂನ್ 4 ರಂದು ಪ್ರಕಟಣೆಗೊಳ್ಳಲಿದೆ. ಉಳಿದ ರಾಜ್ಯಗಳ ಚುನಾವಣಾ ಫಲಿತಾಂಶ ಕೂಡ ಜೂನ್ 4 ರಂದು ಪ್ರಕಟಗೊಳ್ಳಲಿದೆ.

