ಚಿಕ್ಕಮಗಳೂರು | ಲೇಬರ್ ಕಾಲೋನಿಯಲ್ಲಿ ಮೂಲಸೌಕರ್ಯ ಮರೀಚಿಕೆ; ಶಿಕ್ಷಣದಿಂದ ವಂಚಿತರಾದ ಮಕ್ಕಳು

Date:

ದಟ್ಟವಾಗಿ ಕಾಡನ್ನು ಆವರಿಸಿಕೊಂಡಿರುವ ಕಳಸ ತಾಲೂಕು ನೋಡುಗರಿಗೆ ಪ್ರವಾಸಿ ತಾಣವಾಗಿ ಕಂಗೊಳಿಸುತ್ತದೆ. ಕಳಸ ತಾಲೂಕು ಕುದುರೆಮುಖ ವ್ಯಾಪ್ತಿಯಲ್ಲಿ ಬರುವ ವಿನೋಬ ನಗರ ಅಥವಾ ಕಂಪನಿಯ ಲಾಬಿಗೋಸ್ಕರ ಕೂಲಿ ಕೆಲಸ ಮಾಡಲು ಬಂದಂತಹ ಜನರು ಉಳಿದಿದ್ದರಿಂದ ಲೇಬರ್ ಕಾಲೋನಿ ಎಂಬ ಹೆಸರಿನ ಗ್ರಾಮವಾಗಿದೆ.

- Advertisement -

ಇಲ್ಲಿ ವಾಸಿಸುವ ಜನರು ಈ ಗ್ರಾಮಕ್ಕೆ ಬಂದು ಸುಮಾರು ಅರ್ಧ ಶತಕಗಳು ಕಳೆದಿವೆ. ಆದರೂ ಈ ಲೇಬರ್‌ ಕಾಲೋನಿಗೆ ಈವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. 1975ರಲ್ಲಿ ಕಂಪನಿಯೊಂದು ಗುಡ್ಡಗಳನ್ನು ಅಗೆದು ಗಣಿಗಾರಿಕೆ ಮಾಡುವುದಕ್ಕೆ ಶುರು ಮಾಡಿತ್ತು. ಆ ಸಂದರ್ಭದಲ್ಲಿ ಕೂಲಿ ಕೆಲಸ ಮಾಡಲು ವಲಸೆ ಬಂದಿರುವ ಅರ್ಧ ಜನರು ಇದ್ದಾರೆ ಹಾಗೂ ಇಲ್ಲೇ ಪೂರ್ವಜರ ಕಾಲದಿಂದಲೂ ವಾಸ ಮಾಡುತ್ತಿದ್ದ ಜನರೂ ಕೂಡ ಇಲ್ಲಿ ವಾಸ ಮಾಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಕಂಪನಿ ಶುರುವಾದಾಗ ಜನರಿಗೆ ಅಲ್ಪ ಸ್ವಲ್ಪ ವ್ಯವಸ್ಥೆ ಇತ್ತು. ಕಂಪನಿಯನ್ನು ಮುಚ್ಚಿದಾಗ ಆ ವ್ಯವಸ್ಥೆ ಕೂಡ ಇಲ್ಲದಾಗಿದೆ. ಸುಮಾರು 150 ಕುಟುಂಬದವರು ಮೂಲನಿವಾಸಿಗಳು ವಾಸವಾಗಿದ್ದರೂ ಅಂದಿನಿಂದಲೂ ಮೂಲಸೌಕರ್ಯವಿಲ್ಲದೆ ಜನರು ಬದುಕು ಅಸ್ತವ್ಯಸ್ತವಾಗಿದೆ.

ಕಳಸಾ ಲೇಬರ್‌ ಕಾಲೋನಿ 1ಕಳಸಾ ಲೇಬರ್‌ ಕಾಲೋನಿ 2ಕಳಸಾ ಲೇಬರ್‌ ಕಾಲೋನಿ 3ಕಳಸಾ ಲೇಬರ್‌ ಕಾಲೋನಿ 4

ಕುಡಿಯಲು ನೀರಿಗಾಗಿ ಗುಡ್ಡಗಳಿಂದ ಝರಿಯ ಮೂಲವಾಗಿ ಹರಿದು ಬರುವ ನೀರನ್ನು ಶೇಖರಣೆ ಮಾಡಿಕೊಂಡು ಕುಡಿದು ಬದುಕುತ್ತಿದ್ದರು. ಈವರೆಗೂ ವಿದ್ಯುತ್ ಬೆಳಕನ್ನು ಕಾಣದೆ ಪರದಾಡುವ ಪರಿಸ್ಥಿತಿ ಇಲ್ಲಿಯ ಜನರ ಪಾಡಾಗಿದೆ. 45-50 ವರ್ಷಗಳ ಹಿಂದೆಲ್ಲ ತುಂಬ ಮಂದಿ ವಾಸ ಮಾಡುತ್ತಿದ್ದರು. ಬದುಕು ಕಟ್ಟಿಕೊಳ್ಳಲು ವ್ಯವಸ್ಥೆ ಇಲ್ಲದೆ ಅದೆಷ್ಟೋ ಜನರು ಊರು ತೊರೆದು ಹೋಗಿದ್ದಾರೆ.

ಕಳಸಾ ಲೇಬರ್‌ ಕಾಲೋನಿ

ಕಲ್ಲು ಮುಳ್ಳು ಹಾಗೂ ರಸ್ತೆ ಮಾರ್ಗ ಹೊಂಡದ ರೀತಿಯಲ್ಲಿ ತುಂಬಿರುವ ರಸ್ತೆಗಳೇ ಕಾಣಸಿಗುತ್ತವೆ. ಇದೀಗ ಇಲ್ಲಿ ಸುಮಾರು 35 ರಿಂದ 40 ಕುಟುಂಬದವರು ಮಾತ್ರ ವಾಸ ಮಾಡುತ್ತಿದ್ದಾರೆ. ಇಲ್ಲಿ ವಾಸಿಸುವ ಜನರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಾಗಿದ್ದು, ಎಲ್ಲ ಕೂಲಿ ಕೆಲಸವನ್ನೇ ಅವಲಂಬಿಸಿದ್ದಾರೆ.

ಕಾಡಂಚಿನಲ್ಲಿ ಸಿಗುವ ಸೊಪ್ಪು ಸೆದೆ ಕಾಡಿನ ಆಹಾರೋತ್ಪತ್ತಿಗಳನ್ನು ಬಳಸುತ್ತಾ ಬದುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಆದರೆ ಹಕ್ಕುಪತ್ರವಿಲ್ಲ, ಸರಿಯಾದ ಸೌಲಭ್ಯವಿಲ್ಲ. ಮಳೆ ಬಂದಾಗ ಮನೆಗಳು ಕುಸಿದು ನೀರು ಸೋರುತ್ತದೆ.

ಕಳಸಾ ಲೇಬರ್‌ ಕಾಲೋನಿ 5ಕಳಸಾ ಲೇಬರ್‌ ಕಾಲೋನಿ 6

ಲೇಬರ್ ಕಾಲೋನಿಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಿದ್ಯಾಭ್ಯಾಸಗಳಿಂದ ಅದೆಷ್ಟೋ ಮಕ್ಕಳು ವಂಚಿತರಾಗಿದ್ದಾರೆ. ಮತ ಹಾಕಿಸಿಕೊಳ್ಳುವಾಗ ಮಾತ್ರ ನಾವು ನೆನಪಾಗುತ್ತೇವೆ. ಇಲ್ಲಾಂದ್ರೆ ನಾವು ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಣ್ಣಿಗೆ ಕಾಣಿಸುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಆಯ್ಕೆಯಾಗಿರುವ ಶಾಸಕರು ಅಭಿವೃದ್ಧಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಅದು ಕೇವಲ ಭರವಸೆಯಾಗದೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತಾಗಬೇಕು” ಎಂದು ತಮ್ಮ ಅಳಲು ತೋಡಿಕೊಂಡರು.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ಸಾಮಾಜಿಕ ಭದ್ರತೆ ಯೋಜನೆಗಳ ನಿಯಮ ಸಡಿಲಿಸಿ ಮಾಸಿಕ ₹5,000ಕ್ಕೆ ಹೆಚ್ಚಿಸುವಂತೆ ಆಗ್ರಹ

“ಶಾಸಕರ ಜತೆಗೆ ಸಂಬಂದ ಪಟ್ಟ ಅಧಿಕಾರಿಗಳೂ ಕೂಡ ಇತ್ತ ಗಮನ ಹರಿಸಿ ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವತ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

WhatsApp Image 2025 11 17 at 3.46.17 PM
ಗಿರಿಜಾ ಎಸ್‌ ಜಿ
+ posts

ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.

ಪೋಸ್ಟ್ ಹಂಚಿಕೊಳ್ಳಿ:

ಗಿರಿಜಾ ಎಸ್‌ ಜಿ
ಗಿರಿಜಾ ಎಸ್‌ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಡಗೋಡ | ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಸಚಿವರಿಗೆ ಮನವಿ

ಮುಂಡಗೋಡ: ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಹಾಗೂ...

ಯಾದಗಿರಿ | ಎಕರೆಗೆ ₹25 ಸಾವಿರ ಬರ ಪರಿಹಾರ, ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ರೈತ ಸಂಘ ಆಗ್ರಹ

ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರತಿ ರೈತರ...

ಕುಮಟಾ | ದೇವಿಮನೆ ಘಟ್ಟದಲ್ಲಿ KSRTC ಬಸ್ ಕಂದಕಕ್ಕೆ; 18 ಮಂದಿಗೆ ಗಾಯ

ಕುಮಟಾ: ತಾಲೂಕಿನ ದೇವಿಮನೆ ಘಟ್ಟದ 2ನೇ ತಿರುವಿನ ಬಳಿ ಗುರುವಾರ ರಾತ್ರಿ...

ಯಾದಗಿರಿ | ಸಮರ್ಪಕ ಕೂಲಿ ಪಾವತಿಗೆ ಆಗ್ರಹ: ರಸ್ತಾಪುರ ಗ್ರಾಪಂ ಕಚೇರಿ ಎದುರು ರೈತ ಸಂಘ ಧರಣಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿರುವ...