ಹತ್ತು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಒಳಗೊಂಡು 96 ಕ್ಷೇತ್ರಗಳಿಗೆ 4ನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಕೆಲವು ರಾಜ್ಯಗಳಲ್ಲಿ ಗಲಭೆ ಸಂಭವಿಸಿವೆ. ಬೆಳಿಗ್ಗೆ 9 ಗಂಟೆ ವೇಳೆಗೆ ಒಟ್ಟಾರೆ ಶೇ. 10.35 ಮತದಾನ ಚಲಾವಣೆಯಾಗಿದೆ.
ಇದೇ ದಿನದಂದು ಆಂಧ್ರ ಪ್ರದೇಶದ 175 ಕ್ಷೇತ್ರಗಳ ಹಾಗೂ ಒಡಿಶಾದ 147 ಕ್ಷೇತ್ರಗಳ ವಿಧಾನಸಭಾ ಚುನಾವಣೆ ಕೂಡ ನಡೆಯುತ್ತಿದೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತನನ್ನು ಬಾಂಬ್ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ.ಬೋಲ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಮೃತನನ್ನು ಮಿಂಟು ಶೇಖ್ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?
ಆಂಧ್ರ ಪ್ರದೇಶದ ಕೆಲವು ಕಡೆ ಹಿಂಸಾಚಾರ ನಡೆದಿದೆ. ಚಿತ್ತೂರು ಜಿಲ್ಲೆಯಲ್ಲಿ ಮೂವರು ಟಿಡಿಪಿ ಚುನಾವಣಾ ಏಜೆಂಟರನ್ನು ಅಪಹರಿಸಲಾಗಿದ್ದು, ಪೊಲೀಸರು ಮೂವರನ್ನೂ ರಕ್ಷಿಸಿದ್ದಾರೆ. ಘಟನೆಗೆ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಕಾರಣ ಎಂದು ಟಿಡಿಪಿ ನಾಯಕರು ಆರೋಪಿಸಿದ್ದಾರೆ.
ಇಂದಿನ ಲೋಕಸಭಾ ಚುನಾವಣೆಯಲ್ಲಿ ಆಂಧ್ರ ಪ್ರದೇಶ 25, ತೆಲಂಗಾಣ 17, ಉತ್ತರ ಪ್ರದೇಶ 13, ಮಹಾರಾಷ್ಟ್ರ 11, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ ತಲಾ 8, ಬಿಹಾರ 5, ಒಡಿಶಾ, ಜಾರ್ಖಂಡ್ ತಲಾ 4 ಹಾಗೂ ಜಮ್ಮು ಮತ್ತು ಕಾಶ್ಮೀರದ ಒಂದು ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.
ಈ ಮೊದಲಿನ ಮೂರು ಹಂತದಲ್ಲಿ 283 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಇಂದಿನ 96 ಕ್ಷೇತ್ರ ಸೇರಿ ಒಟ್ಟು 379 ಕ್ಷೇತ್ರಗಳಿಗೆ ಚುನಾವಣೆ ನಡೆದಂತಾಗುತ್ತದೆ. ಮೇ.20, ಮೇ 25 ಹಾಗೂ ಜೂ.1 ರಂದು ಉಳಿದ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
