ಮದುವೆಗೆ ಬಾರದ ಬ್ಯಾಂಡ್ ಸೆಟ್: ಮಾಲೀಕನಿಗೆ 39,000 ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

Date:

ಮದುವೆ ದಿನದಂದು ಬ್ಯಾಂಡ್ ಸೆಟ್ ಕಳುಹಿಸದೆ ವರನ ಕುಟುಂಬವನ್ನು ಪರದಾಡುವಂತೆ ಮಾಡಿದ ಬ್ಯಾಂಡ್ ಮಾಲೀಕನಿಗೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಬರೋಬ್ಬರಿ 39,000 ರೂ. ದಂಡ ವಿಧಿಸಿದೆ. ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರ ಪದ್ಧತಿಗಾಗಿ ಈ ದಂಡ ವಿಧಿಸಿ ಜುಲೈ 13ರಂದು ಆದೇಶ ಹೊರಡಿಸಿದೆ.

- Advertisement -

ದೂರುದಾರರು ತಮ್ಮ ಮಗನ ಮದುವೆಗಾಗಿ ಫೆಬ್ರವರಿ 5, 2026 ರಂದು ಪವನ್ ಕುಮಾರ್ ಎಂಬುವವರಿಂದ ಐದು ಸದಸ್ಯರ ಬ್ರಾಸ್ ಬ್ಯಾಂಡ್ ಅನ್ನು ಬುಕ್ ಮಾಡಿದ್ದರು. ಮದುವೆಗೆ ಒಂದು ತಿಂಗಳ ಮುಂಚೆಯೇ ಒಟ್ಟು 9,000 ರೂ.ಗಳಿಗೆ ಒಪ್ಪಂದ ಮಾಡಿಕೊಂಡು, 4,200 ರೂ.ಗಳನ್ನು ಮುಂಗಡವಾಗಿ (ಅಡ್ವಾನ್ಸ್) ನೀಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಆದರೆ, ಮದುವೆಯ ದಿನದಂದು ಬ್ಯಾಂಡ್ ಸೆಟ್ ಬರಲೇ ಇಲ್ಲ. ದೂರುದಾರರು ಪದೇ ಪದೇ ಕರೆ ಮಾಡಿದಾಗ, ಬ್ಯಾಂಡ್ ದಾರಿಯಲ್ಲಿದೆ ಎಂದು ಹೇಳಿದ ಮಾಲೀಕ, ಸ್ವಲ್ಪ ಸಮಯದ ನಂತರ ಕರೆ ಸ್ವೀಕರಿಸುವುದನ್ನು ನಿಲ್ಲಿಸಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದನು. ಬ್ಯಾಂಡ್ ಇಲ್ಲದೆ ಮದುವೆ ಮೆರವಣಿಗೆ ನಿಂತುಹೋಗಿದ್ದರಿಂದ, ದೂರುದಾರರು ಅನಿವಾರ್ಯವಾಗಿ ಕೊನೆ ಕ್ಷಣದಲ್ಲಿ 10,000 ರೂ. ಪಾವತಿಸಿ ಬೇರೊಂದು ಬ್ಯಾಂಡ್ ವ್ಯವಸ್ಥೆ ಮಾಡಿದ್ದರು. ಈ ಬಗ್ಗೆ ಅವರು ಸೇವಾ ನ್ಯೂನತೆ ಆರೋಪದಡಿ ಕಾಂಗ್ರಾ ಜಿಲ್ಲಾ ಗ್ರಾಹಕ ವೇದಿಕೆಯ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಬ್ಯಾಂಡ್ ಮಾಲೀಕ ಪವನ್ ಕುಮಾರ್ ಗೈರುಹಾಜರಾಗಿದ್ದರಿಂದ ಹಾಗೂ ಯಾವುದೇ ಹಂತದಲ್ಲೂ ನೋಟಿಸ್‌ಗೆ ಪ್ರತಿಕ್ರಿಯಿಸದ ಕಾರಣ ಆಯೋಗವು ಏಕಪಕ್ಷೀಯ ವಿಚಾರಣೆ ನಡೆಸಿತು. ಅಧ್ಯಕ್ಷ ಹೇಮಾಂಶು ಮಿಶ್ರಾ ಹಾಗೂ ಸದಸ್ಯರಾದ ಆರತಿ ಸೂದ್ ಮತ್ತು ನಾರಾಯಣ್ ಠಾಕೂರ್ ಅವರಿದ್ದ ಪೀಠವು ದೂರುದಾರರ ವಾದವನ್ನು ಎತ್ತಿಹಿಡಿಯಿತು. “ಮಾಲೀಕನು ಮುಂಗಡ ಹಣ ಪಡೆದಿದ್ದರೂ ಮದುವೆಯಂತಹ ಶುಭ ಸಂದರ್ಭದಲ್ಲಿ ಭರವಸೆ ನೀಡಿದ್ದ ಬ್ಯಾಂಡ್ ಸೇವೆ ಒದಗಿಸಲು ವಿಫಲವಾಗಿರುವುದು ಗಂಭೀರ ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರ ಪದ್ಧತಿಯಾಗಿದೆ. ದೂರುದಾರರು ಒದಗಿಸಿರುವ ಸಾಕ್ಷ್ಯಗಳನ್ನು ಅವಿಶ್ವಸಿಸಲು ಯಾವುದೇ ಕಾರಣಗಳಿಲ್ಲ” ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ದೂರುದಾರರು ಪಾವತಿಸಿದ್ದ ಮುಂಗಡ ಹಣ ಮತ್ತು ಕೊನೆ ಕ್ಷಣದಲ್ಲಿ ಮತ್ತೊಂದು ಬ್ಯಾಂಡ್‌ಗೆ ನೀಡಿದ ವೆಚ್ಚ ಸೇರಿ 14,000 ರೂ.ಗಳನ್ನು ಮರುಪಾವತಿಸುವಂತೆ ಮಾಲೀಕನಿಗೆ ಆಯೋಗ ಆದೇಶಿಸಿದೆ. ದೂರು ದಾಖಲಾದ ದಿನದಿಂದ ಈ ಮೊತ್ತ ಪಾವತಿಯಾಗುವವರೆಗೆ ಶೇ. 9ರಷ್ಟು ವಾರ್ಷಿಕ ಬಡ್ಡಿಯನ್ನೂ ನೀಡುವಂತೆ ಸೂಚಿಸಿದೆ. ಜೊತೆಗೆ, ಪರಿಹಾರವಾಗಿ 15,000 ರೂ. ಮತ್ತು ಕಾನೂನು ಹೋರಾಟದ ವೆಚ್ಚವಾಗಿ 10,000 ರೂ. ಸೇರಿ ಒಟ್ಟು 39,000 ರೂ. ಪಾವತಿಸುವಂತೆ ನಿರ್ದೇಶಿಸಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆಯನ್ವಯ ಈ ಆದೇಶದ ಪ್ರತಿಯನ್ನು ಉಚಿತವಾಗಿ ಎರಡೂ ಕಡೆಯವರಿಗೆ ಒದಗಿಸುವಂತೆಯೂ ಆಯೋಗ ಸೂಚಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ

ವಿಶ್ವಬಸವಧರ್ಮ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನವೆಂಬರ್ 28 ಮತ್ತು 29ರಂದು 47ನೇ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಜಂತರ್ ಮಂತರ್ ಪ್ರತಿಭಟನಾ ಸ್ಥಳ ರದ್ದು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಅಧಿಕೃತವಾಗಿ...