ಪಂಜಾಬ್‌ನ ರವಿದಾಸಿಯಾ ಸಮುದಾಯದ ಬಹುಕಾಲದ ಕನಸು ನನಸು: ಜಲಂಧರ್‌ನಿಂದ ವಾರಾಣಸಿಗೆ ಹೊಸ ರೈಲಿಗೆ ಮೋದಿ ಚಾಲನೆ

Date:

ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿ ನಡುವೆ ಸಂಪರ್ಕ ಕಲ್ಪಿಸುವ ಚೊಚ್ಚಲ ನೇರ ಹಾಗೂ ಹವಾನಿಯಂತ್ರಿತ (ಎಸಿ) ರೈಲಾದ ‘ಸಂತ ರವಿದಾಸ್ ಎಕ್ಸ್‌ಪ್ರೆಸ್’ಗೆ ಜುಲೈ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.

- Advertisement -

ಈ ಮೂಲಕ ರವಿದಾಸಿಯಾ ಸಮುದಾಯದ ಬಹುಕಾಲದ ಬೇಡಿಕೆಯೊಂದು ಈಡೇರಿದಂತಾಗಿದೆ.15ನೇ ಶತಮಾನದ ಸಂತ ಗುರು ರವಿದಾಸ್ ಅವರ ಜನ್ಮದಿನದ ಪ್ರಯುಕ್ತ ಪ್ರತಿ ವರ್ಷ ಫೆಬ್ರವರಿಯಲ್ಲಿ ಜಲಂಧರ್‌ನಿಂದ ಅವರ ಜನ್ಮಸ್ಥಳವಾದ ವಾರಾಣಸಿಗೆ ‘ಬೇಗಂಪುರ ಎಕ್ಸ್‌ಪ್ರೆಸ್’ ಎಂಬ ವಿಶೇಷ ನಾನ್-ಎಸಿ ರೈಲು ಸಂಚರಿಸುತ್ತಿತ್ತು. ಆದರೆ, ಈ ಮಾರ್ಗದಲ್ಲಿ ಎಸಿ ಸೌಲಭ್ಯವಿರುವ ನೇರ ರೈಲಿಗಾಗಿ ರವಿದಾಸಿಯಾ ಸಮುದಾಯ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿತ್ತು. ವಾರಾಣಸಿಯ ಸೀರ್ ಗೋವರ್ಧನ್‌ಪುರದಲ್ಲಿ ನಡೆಯಲಿರುವ ಗುರು ರವಿದಾಸ್ ಅವರ 650ನೇ ಪ್ರಕಾಶ್ ಪುರಬ್ (ಜನ್ಮದಿನಾಚರಣೆ) ಹಿನ್ನೆಲೆಯಲ್ಲಿ ಈ ಹೊಸ ರೈಲು ಸೇವೆ ಆರಂಭವಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಪ್ರಭಾವಿ ಡೇರಾ ಸಚ್‌ಖಂಡ್ ಬಲ್ಲನ್‌ನ ಮುಖ್ಯಸ್ಥರಾದ ಸಂತ ನಿರಂಜನ್ ದಾಸ್ ಅವರನ್ನು ಭೇಟಿಯಾದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.ಜುಲೈ 17 ರಂದು ಮಧ್ಯಾಹ್ನ 3.40ಕ್ಕೆ ಜಲಂಧರ್ ಕಂಟೋನ್ಮೆಂಟ್‌ನಿಂದ ಪ್ರಧಾನಿ ಮೋದಿಯವರು ನೂತನ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. 18 ಬೋಗಿಗಳನ್ನು ಹೊಂದಿರುವ ಈ ಎಕ್ಸ್‌ಪ್ರೆಸ್ ರೈಲು ಅಮೃತಸರ (ಛೇಹರ್ತಾ) ಮತ್ತು ವಾರಾಣಸಿ ನಡುವೆ ಒಟ್ಟು 1,048.33 ಕಿ.ಮೀ ದೂರವನ್ನು ಕ್ರಮಿಸಲಿದೆ.

ವಾರದಲ್ಲಿ ಮೂರು ದಿನ ಅಂದರೆ ಬುಧವಾರ, ಶುಕ್ರವಾರ ಮತ್ತು ಭಾನುವಾರಗಳಂದು ಸಂಚರಿಸಲಿದ್ದು, ಮರುದಿನ ವಾಪಸಾಗಲಿದೆ. ಮಾರ್ಗಮಧ್ಯೆ ಅಮೃತಸರ, ಜಲಂಧರ್, ಲುಧಿಯಾನ, ಅಂಬಾಲಾ ಕ್ಯಾಂಟ್, ಸಹರಾನ್‌ಪುರ, ಮೊರಾದಾಬಾದ್, ಬರೇಲಿ, ಶಹಜಹಾನ್‌ಪುರ, ಲಕ್ನೋ, ಸುಲ್ತಾನ್‌ಪುರ, ಜೌನ್‌ಪುರ ಸಿಟಿ ಮತ್ತು ವಾರಾಣಸಿ ಸೇರಿದಂತೆ 12 ನಿಲ್ದಾಣಗಳಲ್ಲಿ ಈ ರೈಲು ತಂಗಲಿದೆ. ಈ ರೈಲಿನಲ್ಲಿ ಮೂರು ಎಸಿ ಬೋಗಿಗಳು (ಎರಡು ಎಸಿ 3-ಟೈರ್ ಮತ್ತು ಒಂದು ಎಸಿ 2-ಟೈರ್), ಆರು ದ್ವಿತೀಯ ದರ್ಜೆಯ ಸಾಮಾನ್ಯ ಬೋಗಿಗಳು ಹಾಗೂ ಏಳು ವೆಸ್ಟಿಬ್ಯೂಲ್ಡ್ ಸೆಕೆಂಡ್-ಕ್ಲಾಸ್ 3-ಟೈರ್ ಸ್ಲೀಪರ್ ಬೋಗಿಗಳನ್ನು ಅಳವಡಿಸಲಾಗಿದೆ.

ಪಂಜಾಬ್‌ನ ಒಟ್ಟು ಜನಸಂಖ್ಯೆಯಲ್ಲಿ ದಲಿತರು ಶೇ 41 ರಿಂದ 42 ರಷ್ಟಿದ್ದು, ಅದರಲ್ಲಿ ರವಿದಾಸಿಯಾ ಸಮುದಾಯವು (ಮುಖ್ಯವಾಗಿ ದೋವಾಬಾ ಭಾಗದಲ್ಲಿ ಕೇಂದ್ರೀಕೃತವಾಗಿದೆ) ರಾಜ್ಯದ ದಲಿತ ಜನಸಂಖ್ಯೆಯ ಶೇ 31 ರಿಂದ 32 ರಷ್ಟಿದೆ. 2027ರ ಪಂಜಾಬ್ ವಿಧಾನಸಭಾ ಚುನಾವಣೆಯ ಹೊತ್ತಿಗೆ ಸಂತರ 650ನೇ ಜನ್ಮದಿನಾಚರಣೆ ನಡೆಯಲಿದೆ. ರಾಜ್ಯದ ದಲಿತ ಸಮುದಾಯದಲ್ಲಿ ಗಣನೀಯ ಪ್ರಭಾವ ಹೊಂದಿರುವ ಈ ಸಮುದಾಯವನ್ನು ಮತ್ತು ಡೇರಾವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ರೈಲು ಸೇವೆ ರಾಜಕೀಯವಾಗಿಯೂ ತೀವ್ರ ಮಹತ್ವ ಪಡೆದುಕೊಂಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ

ವಿಶ್ವಬಸವಧರ್ಮ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನವೆಂಬರ್ 28 ಮತ್ತು 29ರಂದು 47ನೇ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಜಂತರ್ ಮಂತರ್ ಪ್ರತಿಭಟನಾ ಸ್ಥಳ ರದ್ದು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಅಧಿಕೃತವಾಗಿ...