ನಿಮಗೆ 75 ತುಂಬಿತು ಎಂದರೆ, ನೀವು ನಿವೃತ್ತರಾಗಬೇಕು ಎಂದರ್ಥ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ(ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರಧಾನಿ ನರೇಂದ್ರ ಮೋದಿ ರಾಜಕೀಯದಿಂದ ನಿವೃತ್ತರಾಗಬೇಕೆಂದು ಪರೋಕ್ಷವಾಗಿ ಸೂಚಿಸಿದ್ದಾರೆ.
ನಾಗ್ಪುರದಲ್ಲಿ ಬುಧವಾರ ದಿವಂಗತ ಆರ್‌ಎಸ್‌ಎಸ್ ಸಿದ್ಧಾಂತವಾದಿ ಮೊರೊಪಂತ್ ಪಿಂಗಳೆ ಅವರ ದಿ ಆರ್ಕಿಟೆಕ್ಟ್ ಆಫ್ ಹಿಂದೂ ರಿಸರ್ಜೆನ್ಸ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮೋಹನ್ ಭಾಗವತ್ ಅವರು, “ಪಿಂಗಳೆ ಒಮ್ಮೆ ಹೇಳಿದ್ದರು… 75 ವರ್ಷ ತುಂಬಿದ ನಂತರ ನಿಮಗೆ ಶಾಲು ಹೊದಿಸಿ ಸನ್ಮಾನಿಸಿದರೆ, ನೀವು ಈಗಲೇ ನಿಲ್ಲಿಸಬೇಕು ಎಂದರ್ಥ, ನೀವು ವಯಸ್ಸಾದವರು; ಪಕ್ಕಕ್ಕೆ ಸರಿದು ಇತರರು ಒಳಗೆ ಬರಲಿ” ಎಂದು ಹೇಳಿದರು.
75 ವರ್ಷಗಳ ನಂತರ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿ ಅವರ ನಿವೃತ್ತಿಗೆ ವಿಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದಾಖಲೆ ಬರೆದ ಶಕ್ತಿ ಯೋಜನೆ: ಆಡಿದ್ದನ್ನು ಮಾಡಿ ತೋರಿಸಿದ ಸರ್ಕಾರ
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪ್ರಧಾನಿ ಮೋದಿಯನ್ನು ʼಕಳಪೆ ಪ್ರಶಸ್ತಿ ವಿಜೇತ ಪ್ರಧಾನಿʼ ಎಂದು ವ್ಯಂಗ್ಯವಾಡಿದರು. 2025ರ ಸೆಪ್ಟೆಂಬರ್ 17ರಂದು ಮೋದಿಗೆ 75 ವರ್ಷ ತುಂಬುವುದರಿಂದ ಆರ್‌ಎಸ್‌ಎಸ್ ಮುಖ್ಯಸ್ಥರು ಮನೆಗೆ ಮರಳುವಂತೆ ನೆನಪಿಸಿದ್ದಾರೆ. ಪ್ರಧಾನ ಮಂತ್ರಿಗಳು ಕೂಡ ಆರ್‌ಎಸ್‌ಎಸ್ ಮುಖ್ಯಸ್ಥರಿಗೆ 2025ರ ಸೆಪ್ಟೆಂಬರ್ 11ರಂದು ಅವರಿಗೂ 75 ವರ್ಷ ತುಂಬುತ್ತದೆ ಎಂದು ನೆನಪಿಸಬಹುದು ಎಂದು ಹೇಳಿದರು.
ಕಾಂಗ್ರೆಸ್ ನಾಯಕ ಪವನ್ ಖೇರಾ ಈ ಕುರಿತು ಪ್ರತಿಕ್ರಿಯಿಸಿ, ʼಪ್ರಧಾನಿ ಮೋದಿ ಮತ್ತು ಭಾಗವತ್ ಇಬ್ಬರೂ ತಮ್ಮ ಬ್ಯಾಗ್‌ಗಳನ್ನು ಎತ್ತಿಕೊಂಡು ಕಚೇರಿಯಿಂದ ಹೊರಹೋಗಬೇಕು. ಈಗ ನೀವಿಬ್ಬರೂ ಬ್ಯಾಗ್ ಎತ್ತಿಕೊಂಡು ಹೋಗಿ ಪರಸ್ಪರ ಮಾರ್ಗದರ್ಶಕರಾಗಿʼ ಎಂದು ಹೇಳಿದರು.
ʼ75 ವರ್ಷ ತುಂಬಿದ ನಂತರ ಬಿಜೆಪಿಯ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಲು ಬಳಸಲಾಗುತ್ತಿದ್ದ ನಿವೃತ್ತಿ ನಿಯಮವನ್ನು ಪ್ರಧಾನಿ ಮೋದಿ ತಮ್ಮ ಮೇಲೂ ಅನ್ವಯಿಸಿಕೊಳ್ಳುತ್ತಾರೆಯೇʼ ಎಂದು ಉದ್ಧವ್ ನೇತೃತ್ವದ ಶಿವಸೇನೆ ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಜಸ್ವಂತ್ ಸಿಂಗ್ ಅವರಂತಹ ನಾಯಕರಿಗೆ 75 ವರ್ಷ ತುಂಬಿದ ನಂತರ ನಿವೃತ್ತಿ ಹೊಂದುವಂತೆ ಪ್ರಧಾನಿ ಮೋದಿ ಒತ್ತಾಯಿಸಿದ್ದರು. ಅವರು ಈಗ ಅದೇ ನಿಯಮವನ್ನು ಸ್ವತಃ ಅನ್ವಯಿಸುತ್ತಾರೆಯೇ ಎಂದು ನೋಡೋಣ ಎಂದು ಸಂಜಯ್ ರಾವತ್ ಹೇಳಿದರು.
VIDEO | Speaking at a book release function in Nagpur, Rashtriya Swayamsevak Sangh (RSS) chief Mohan Bhagwat said:
— Press Trust of India (@PTI_News) July 11, 2025
"When you turn 75, it means you should stop now and make way for others."#RSS #Nagpur
(Full video available on PTI Videos – https://t.co/n147TvrpG7) pic.twitter.com/yIfzL3Z56t
