ಈ ದಿನ ಸಂಪಾದಕೀಯ | ದಾಖಲೆ ಬರೆದ ಶಕ್ತಿ ಯೋಜನೆ: ಆಡಿದ್ದನ್ನು ಮಾಡಿ ತೋರಿಸಿದ ಸರ್ಕಾರ

Date:

ಈಗ ಕಾಂಗ್ರೆಸ್ಸಿಗರು ತಮ್ಮ ಜಡತ್ವವನ್ನು ಕೊಡವಿಕೊಂಡು ಎದ್ದು ನಿಲ್ಲಬೇಕಿದೆ. ತಮ್ಮೊಳಗಿನ ಅಸಹನೆಯನ್ನು ತೊಡೆದುಹಾಕಬೇಕಿದೆ. ಯೋಜನೆಯ ಯಶಸ್ಸನ್ನು, ಅದರಿಂದಾದ ಬದಲಾವಣೆಯನ್ನು ದೇಶದ ಜನತೆಗೆ ತಲುಪಿಸಬೇಕಿದೆ.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಶಕ್ತಿ ಯೋಜನೆ ಜೂನ್ 11ಕ್ಕೆ ಎರಡು ವರ್ಷ ಪೂರೈಸಿದೆ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಂದ ನಿರಂತರ ಟೀಕೆಗೆ, ಮೂದಲಿಕೆಗೆ ಗುರಿಯಾಗಿದ್ದ ಗ್ಯಾರಂಟಿ ಯೋಜನೆ, ಇಂದು ಯಶಸ್ವಿ ಯೋಜನೆ ಎನಿಸಿಕೊಂಡಿದೆ. ಅದು ರಾಜ್ಯದಲ್ಲಿ ತಂದ ಬದಲಾವಣೆಯೇ ವಿರೋಧಿಗಳಿಗೆ ಉತ್ತರವಾಗಿದೆ.

- Advertisement -

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ 2023ರ ಜೂನ್ 11ರಂದು ಆರಂಭವಾಗಿತ್ತು. ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಪ್ರತಿದಿನ ಸುಮಾರು 70ರಿಂದ 75 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಉಚಿತವಾಗಿ ಸಂಚರಿಸಿದ ಮಹಿಳೆಯರ ಸಂಖ್ಯೆ ಇಲ್ಲಿಯವರೆಗೆ 494 ಕೋಟಿ ಆಗಿದೆ. 12,511 ಕೋಟಿ ರೂ. ಮೌಲ್ಯದ ಟಿಕೆಟ್ ವಿತರಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಇದೇ ಜುಲೈ 14ರಂದು 500 ಕೋಟಿ ಮಹಿಳೆಯರು ಪ್ರಯಾಣಿಸಿದ ಗುರಿ ಮುಟ್ಟುವ ಅಂದಾಜಿದೆ. ಆ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು 500ನೇ ಕೋಟಿಯ ಟಿಕೆಟ್ ವಿತರಿಸುವ, ಆ ಟಿಕೆಟ್ ಪಡೆಯುವ ಮಹಿಳೆಗೆ ಬಹುಮಾನ ನೀಡುವ, ಆ ಸಂದರ್ಭವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಸ್ಮರಣೀಯಗೊಳಿಸುವ ಯೋಜನೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಇದು ನಿಜಕ್ಕೂ ಕಾಂಗ್ರೆಸ್ ಸರ್ಕಾರದ ‌ಮೈಲಿಗಲ್ಲು ಮತ್ತು ಜನಪರ ಯೋಜನೆಗೆ ಸಿಕ್ಕ ಗೆಲುವು.

ಇಂತಹ ಯೋಜನೆಯನ್ನು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾಂಗ್ರೆಸ್ಸಿನ ಗ್ಯಾರಂಟಿ ಶಕ್ತಿ ಯೋಜನೆಯಿಂದಾಗಿ ಬಸ್‌ಗಳು ಡೀಸೆಲ್ ಇಲ್ಲದೆ ನಿಲ್ಲುತ್ತವೆ; ಸಾರಿಗೆ ನಿಗಮ ಮುಚ್ಚುವ ಸ್ಥಿತಿ ನಿರ್ಮಾಣವಾಗುತ್ತದೆ; ಕರ್ನಾಟಕ ಕತ್ತಲಲ್ಲಿ ಮುಳುಗಲಿದೆ ಎಂದು ಟೀಕಿಸಿದ್ದರು. ಸರ್ಕಾರದ ಖಜಾನೆ ಬರಿದಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಸಾರಿಗೆ ನಿಗಮಗಳಿಗೆ ಸರ್ಕಾರ ಈ ನಷ್ಟದ ಹಣವನ್ನು ತುಂಬಿಕೊಡಲು ಸಾಧ್ಯವೇ ಎಂದು ಕುಹಕವಾಡಿದ್ದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಆದಿವಾಸಿಗಳನ್ನು ಆದಿವಾಸಿಗಳೇ ಕೊಂದರು ಹೌದು… ಆದರೆ ಯಾಕಾಗಿ ಕೊಂದರು?

ಸಂಘಪರಿವಾರ, ಬಿಜೆಪಿಯೊಂದಿಗಿನ ನಿಷ್ಠೆಯನ್ನು ಜನಿವಾರದಂತೆ ಜತನದಿಂದ ಕಾಯ್ದುಕೊಂಡಿರುವ ಕೆಲ ಪತ್ರಕರ್ತರು, ಬಿಜೆಪಿ ನಾಯಕರ ಹೇಳಿಕೆಗಳಿಗೆ ಒತ್ತುಕೊಟ್ಟು ಪ್ರಕಟಿಸಿದ್ದರು. ಮಹಿಳೆಯರು ಉಚಿತ ಸಂಚರಿಸುವ ಶಕ್ತಿ ಯೋಜನೆ ಕುರಿತು ತೀರಾ ಕೆಟ್ಟದಾಗಿ ಬರೆದು-ಬಿಂಬಿಸಿ ತಮ್ಮ ವಿಕೃತಿಯನ್ನು ಹೊರಹಾಕಿದ್ದರು. ಮಹಿಳೆಯರು ಮನೆಬಿಟ್ಟು ಹೊರಬಂದದ್ದನ್ನು ಸಹಿಸಲಾಗದ ‘ಗಂಡಸರು’ ಮೂದಲಿಸಿದ್ದರು. 

ಆದರೆ ಈ ಟೀಕೆ, ಮೂದಲಿಕೆ, ಕುಹಕ, ಸಂದೇಹಗಳನ್ನು ಮೀರಿ ಶಕ್ತಿ ಯೋಜನೆ ಎರಡು ವರ್ಷ ಪೂರೈಸಿದೆ, ಯಶಸ್ಸು ಕಂಡಿದೆ. ಸಾರಿಗೆ ನಿಗಮಗಳಿಗೆ ನಿಯಮಿತವಾಗಿ ಈ ಉಚಿತ ಟಿಕೆಟ್ ಹಣವನ್ನು ಸರ್ಕಾರ ಪಾವತಿಸಿದೆ. ಯೋಜನೆ ಹಳಿತಪ್ಪದಂತೆ ಹಾಗೂ ನಿಗಮಗಳ ಕೆಲಸಕ್ಕೆ ಚ್ಯುತಿ ಬರದಂತೆ ನೋಡಿಕೊಂಡಿದೆ. ಹಾಗೆಯೇ ಉಚಿತ ಗ್ಯಾರಂಟಿ ಯೋಜನೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಕರ್ನಾಟಕ ರಾಜ್ಯ ಮಾದರಿಯಾಗಿದೆ. ಇಂಗ್ಲೆಂಡಿನ ಪ್ರತಿಷ್ಠಿತ ‘ದಿ ಗಾರ್ಡಿಯನ್’ ಸೇರಿದಂತೆ ದೇಶವಿದೇಶಗಳ ಹಲವು ಪತ್ರಿಕೆಗಳು ಕರ್ನಾಟಕದ ಶಕ್ತಿ ಯೋಜನೆಯನ್ನು ಮುಕ್ತಕಂಠದಿಂದ ಹೊಗಳಿವೆ. ಇದೇ ಸಂದರ್ಭದಲ್ಲಿ ಈ ಕಲ್ಯಾಣ ಕಾರ್ಯಕ್ರಮದಿಂದ ನಾಡಿನ ಮಹಿಳೆಯರಿಗಾದ ಅನುಕೂಲಗಳೇನು, ಇದರಿಂದ ಆದ ಬದಲಾವಣೆಗಳೇನು ಎಂಬುದು ಕೂಡ ಗಂಭೀರ ಅಧ್ಯಯನಕ್ಕೆ ಯೋಗ್ಯವಾಗಿದೆ.

ಉಚಿತ ಬಸ್ ಪ್ರಯಾಣದಿಂದ ಒಂದಷ್ಟು ಬಡ-ಮಧ್ಯಮವರ್ಗದ ಮಹಿಳೆಯರಿಗೆ ಉಪಯೋಗವಾಗಿದೆ. ದುಡಿಯುವ ಹೆಣ್ಣುಮಕ್ಕಳಿಗೆ ಒಂದಷ್ಟು ಉಳಿತಾಯಕ್ಕೆ ದಾರಿಯಾಗಿದೆ. ಆ ಉಳಿತಾಯ ಮನೆಯ ಖರ್ಚುವೆಚ್ಚವನ್ನು ಸರಿದೂಗಿಸಿದೆ. ಮನೆಯಲ್ಲಿಯೇ ಕೂತ ಮಹಿಳೆಯರು ಕೆಲಸಕ್ಕೆ ಹೋಗುವ ಮನಸ್ಸು ಮಾಡಿದ್ದಾರೆ. ಆ ಮೂಲಕ ಉತ್ಪಾದನೆ ಹೆಚ್ಚಾಗಿದೆ, ವಾಣಿಜ್ಯ-ವ್ಯವಹಾರ ಕುದುರಿದೆ. ಅದು ಆರ್ಥಿಕವಾಗಿ ಮಹಿಳಾ ಸಬಲೀಕರಣಕ್ಕೆ ದಾರಿಮಾಡಿಕೊಟ್ಟಿದೆ. ಜನರ ಕೈಯಲ್ಲಿ ಹಣ ಹರಿದಾಡುವುದರಿಂದ ಆರ್ಥಿಕ ಚಕ್ರವೂ ತಿರುಗಿದೆ.

ಇನ್ನು ಮನೆಕೆಲಸದಲ್ಲಿಯೇ ಮುಳುಗಿಹೋಗಿರುವ ಹೆಣ್ಣುಮಕ್ಕಳು ಉಚಿತ ಪ್ರಯಾಣದ ನೆಪದಲ್ಲಿ ಒಂದಷ್ಟು ದೇವಸ್ಥಾನಗಳಿಗೆ, ದೂರದ ತೀರ್ಥಕ್ಷೇತ್ರಗಳಿಗೆ ಹೋಗಿರಬಹುದು. ಹೀಗಾಗುವುದರಿಂದ ಸಾರಿಗೆ ವ್ಯವಸ್ಥೆಯಲ್ಲಿ ಕೊಂಚ ಏರುಪೇರಾಗಿರಬಹುದು. ಸಹ ಪ್ರಯಾಣಿಕರಿಗೆ ತೊಂದರೆಯಾಗಿರಬಹುದು. ಸಾರಿಗೆ ಸಿಬ್ಬಂದಿಗೆ ನಿಯಂತ್ರಣ, ನಿಭಾಯಿಸುವಿಕೆ ಕಷ್ಟವಾಗಿರಬಹುದು.

ಹಾಗಂತ ನಮ್ಮ ಅಕ್ಕ-ತಂಗಿಯರನ್ನು, ಅಮ್ಮ-ಅಜ್ಜಿಯರನ್ನು ಅಪಹಾಸ್ಯ ಮಾಡುವುದೇ? ಈ ಆಧುನಿಕ ಯುಗದಲ್ಲಿ ಮಹಿಳೆಯರು ಮನೆ ಬಿಟ್ಟು ಹೊರಬರುವುದಕ್ಕೆ ವಿರೋಧಿಸುವ ಸಂಘಪರಿವಾರ, ಬಿಜೆಪಿಯ ಮನಸ್ಥಿತಿ ಎಂತಹದ್ದು? ಸ್ವಾತಂತ್ರ್ಯ, ಸಬಲೀಕರಣ, ಲಿಂಗ ಸಮಾನತೆ ಬರಿ ಭಾಷಣಕ್ಕಾಗಿಯೇ? ನಿಮ್ಮ ಸನಾತನ ಧರ್ಮ ಮಹಿಳೆಯರನ್ನು ಮನೆಯಲ್ಲಿ ಕಟ್ಟಿಹಾಕಿದ್ದು, ಕಡೆಗಣಿಸಿದ್ದು, ಕೀಳಾಗಿ ಕಂಡಿದ್ದು ಮಹಿಳೆಯರಿಗೆ ಗೊತ್ತಿಲ್ಲವೇ? ಶತ ಶತಮಾನಗಳಿಂದ ಮಹಿಳೆಯರನ್ನು ಮೂಲೆಗೆ ಕೂರಿಸಿದ ನಿಮ್ಮ ಮನುಧರ್ಮಕ್ಕೆ ಮಹಿಳೆ ಈಗ ಮನೆಯಿಂದ ಹೊರಬಂದು ಲೋಕವನ್ನು ತೆರೆದ ಕಣ್ಣಿನಿಂದ ನೋಡುತ್ತಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲವೇ?

ಬಿಜೆಪಿಗರ ಹೊಟ್ಟೆಯುರಿ, ಬಿಸ್ಕತ್ತು ತಿಂದ ಪತ್ರಕರ್ತರ ಒಡಲ ಉರಿ- ಎಲ್ಲದಕ್ಕೂ ಈಗ ಉತ್ತರ ಸಿಕ್ಕಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವಿಶ್ವಾಸಾರ್ಹತೆ ಕಳೆದುಕೊಂಡ ಚುನಾವಣಾ ಆಯೋಗದ ಅವಶ್ಯಕತೆ ಇದೆಯೇ?

ಪ್ರಧಾನಿ ಮೋದಿಯವರು ಬಡಮಹಿಳೆಗೆ ಮನೆಯನ್ನು ಕೊಡದೇ, ಯಾರದೋ ಮನೆಯ ಮುಂದೆ ನಿಂತು ಆ ಮನೆಯನ್ನು ಆಕೆಗೆ ಕಟ್ಟಿಸಿಕೊಟ್ಟಂತೆ ದೇಶದಾದ್ಯಂತ ಪ್ರಚಾರ ಪಡೆದಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರವೂ ಕೆಲವು ಯೋಜನೆಗಳಲ್ಲಿ ಹೀಗೆಯೇ ಅಪರಾ-ತಪರಾ ಮಾಡಿರಬಹುದು. ಆದರೆ, ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಕಲ್ಪಿಸುವಲ್ಲಿ ಕಟಿಬದ್ಧವಾಗಿದೆ. ಯಾವ ಅಡೆತಡೆಯಿಲ್ಲದೆ ಎರಡು ವರ್ಷಗಳ ಕಾಲ ನಿರಂತರವಾಗಿ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದೆ. ಬದಲಾವಣೆಗೆ ಕಾರಣವಾಗಿದೆ.

ಈಗ ಕಾಂಗ್ರೆಸ್ಸಿಗರು ತಮ್ಮ ಜಡತ್ವವನ್ನು ಕೊಡವಿಕೊಂಡು ಎದ್ದು ನಿಲ್ಲಬೇಕಿದೆ. ತಮ್ಮೊಳಗಿನ ಅಸಹನೆಯನ್ನು ತೊಡೆದುಹಾಕಬೇಕಿದೆ. ಯೋಜನೆಯ ಯಶಸ್ಸನ್ನು, ಅದರಿಂದಾದ ಬದಲಾವಣೆಯನ್ನು ದೇಶದ ಜನತೆಗೆ ತಲುಪಿಸಬೇಕಿದೆ. ಆ ನಿಟ್ಟಿನಲ್ಲಿ ಅನಗತ್ಯ ಆರ್ಭಟಕ್ಕೆ ಆಸ್ಪದ ಕೊಡದೆ, ಸಂಯಮದಿಂದ ವರ್ತಿಸಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...