ಟ್ರಂಪ್ ಭೇಟಿ ಮಾಡಿದ ಯುವ ಬಿಜೆಪಿ ಸಂಸದರಿಗೆ ಭಾರೀ ಮುಖಭಂಗ; ರಾಷ್ಟ್ರೀಯ ನಾಯಕರಿಂದ ಛೀಮಾರಿ

Date:

Advertisements

ಆಪರೇಷನ್‌ ಸಿಂಧೂರ್‌ ಬಗ್ಗೆ ಜಾಗತಿಕ ಗಮನ ಸೆಳೆಯಲು ಇತ್ತೀಚೆಗೆ ಭಾರತೀಯ ಸಂಸದರ ನೇತೃತ್ವದಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ನಿಯೋಗದಲ್ಲಿದ್ದ, ಯುವ ಬಿಜೆಪಿ ಸಂಸದರೊಬ್ಬರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ ತೀವ್ರ ಮುಜುಗರಕ್ಕೊಳಗಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪಕ್ಷದ ನಾಯಕತ್ವವು ಸಂಸದರನ್ನು ದೆಹಲಿಗೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡಿದೆ ಎಂದು ‘ಪಾರ್ಲಿಮೆಂಟರಿಯನ್’ ವೆಬ್‌ಸೈಟ್‌ನ ಸಂಪಾದಕ ಹಾಗು ಹಿರಿಯ ಪತ್ರಕರ್ತ ತ್ರಿದಿಬ್ ರಮಣ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದಾರೆ.

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯಿಂದ ಇರುವ ಬೆದರಿಕೆಗಳ ಬಗ್ಗೆ ಜಾಗತಿಕ ಗಮನ ಸೆಳೆಯಲು ಭಾರತ ಕಳಿಸಿದ್ದ ಸಂಸದೀಯ ನಿಯೋಗದಲ್ಲಿದ್ದ ಈ ಯುವ ಬಿಜೆಪಿ ಸಂಸದ ಅನಗತ್ಯ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.

Advertisements

ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗದ ಸಂಸದರೊಬ್ಬರ ಜೊತೆ ಈ ಘಟನೆ ನಡೆದಿದೆ ಎಂದು ವರದಿ ಹೇಳಿದೆ. ‘ಪಾರ್ಲಿಮೆಂಟರಿಯನ್’ ವೆಬ್ ಸೈಟ್ ಪ್ರಕಾರ, ನಿಯೋಗದಲ್ಲಿದ್ದ ಯುವ ಬಿಜೆಪಿ ಸಂಸದರೊಬ್ಬರು, ಸಹೋದ್ಯೋಗಿ ಹಾಗೂ ಶಿವಸೇನೆಯ ಸಂಸದ ಮಿಲಿಂದ್ ದೇವ್ರಾ ಅವರು ಡೊನಾಲ್ಡ್ ಟ್ರಂಪ್ ಜೂನಿಯರ್ ಅವರೊಂದಿಗೆ ಯಶಸ್ವಿ ಭೇಟಿ ಮಾಡಿದ್ದನ್ನು ತಿಳಿದು ಸ್ವಲ್ಪ ಇರಿಸು ಮುರುಸಿಗೆ ಒಳಗಾಗಿದ್ದರು. ತಾನೇನು ಕಡಿಮೆಯಲ್ಲ ಎಂದು ತೋರಿಸಿಕೊಳ್ಳಲು ಬಯಸಿದ ಯುವ ಬಿಜೆಪಿ ಸಂಸದರು, ಟ್ರಂಪ್ ಜೂನಿಯರ್ ಅವರೊಂದಿಗೆ ಇದೇ ರೀತಿಯ ಭೇಟಿ ಏರ್ಪಡಿಸಲು ತಾವು ಪ್ರಯತ್ನಗಳನ್ನು ಮಾಡಿ ವಿಫಲರಾದರು. ಇದರಿಂದ ಹತಾಶೆಗೊಂಡ ಸಂಸದರು, “ಈಗ ನಾನು ನೇರವಾಗಿ ಡೊನಾಲ್ಡ್ ಟ್ರಂಪ್ ಅವರನ್ನೇ ಭೇಟಿಯಾಗುತ್ತೇನೆ” ಎಂದು ಸಹೋದ್ಯೋಗಿಗಳಲ್ಲಿ ಹೇಳಿ ಬಿಟ್ಟರು ಎಂದು ವರದಿಯಾಗಿದೆ.

ಆಮೇಲೆ ಮಿಲಿಂದ್ ದೇವ್ರಾ ಅವರನ್ನು ಮೀರಿಸಲು ಡೊನಾಲ್ಡ್ ಟ್ರಂಪ್ ಅವರೊಂದಿಗೇ ಭೇಟಿ ಮಾಡಲು ಪ್ರಯತ್ನಿಸಿದ್ದಾರೆ. ಅಮೆರಿಕ ಮೂಲದ ಪರಿಚಯಸ್ಥರೊಬ್ಬರ ಸಹಾಯದಿಂದ, ಯುವ ಸಂಸದರು ಫ್ಲೋರಿಡಾದಲ್ಲಿನ ಟ್ರಂಪ್ ಅವರ ಖಾಸಗಿ ಎಸ್ಟೇಟ್ ಮಾರ್-ಎ-ಲಾಗೊಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದರು. ಸಾವಿರಾರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ 126 ಕೊಠಡಿಗಳ ಭವ್ಯವಾದ ಮಹಲು, ವಿಶೇಷ ಖಾಸಗಿ ಕ್ಲಬ್ ಆಗಿ ಮಾರ್ಪಟ್ಟಿರುವ ಟ್ರಂಪ್ ಅವರ ಮಾರ್-ಎ-ಲಾಗೊ, ಈ ಹಿಂದೆ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಉನ್ನತ ಮಟ್ಟದ ನಾಯಕರಿಗೆ ಆತಿಥ್ಯ ವಹಿಸಿತ್ತು. ವರದಿಯ ಪ್ರಕಾರ ಅಲ್ಲಿಗೆ ಈ ಯುವ ಸಂಸದರು ತಲುಪಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ‘ಅಚ್ಛೇ ದಿನ’ದಲ್ಲಿ ಸಾಮಾನ್ಯರಿಗೆ ಸಾಲದ ಹೊರೆ

ಈ ಯುವ ಭಾರತೀಯ ಸಂಸದರನ್ನು “ದೇಶದ ಮುಖ್ಯಸ್ಥರಿಗೆ ಅತ್ಯಂತ ಆಪ್ತರು” ಎಂದು ಟ್ರಂಪ್‌ಗೆ ಪರಿಚಯಿಸಲಾಗಿತ್ತು. ಆದರೆ ಅದರಿಂದ ಟ್ರಂಪ್‌ ಈ ಬಗ್ಗೆ ಹೆಚ್ಚು ಉತ್ಸಾಹ ತೋರಿಸಲಿಲ್ಲ. ಆನಂತರದಲ್ಲಿ ತಮ್ಮನ್ನು ಭೇಟಿ ಮಾಡಿದ ಯುವ ಬಿಜೆಪಿ ಸಂಸದರಿಗೆ ಟ್ರಂಪ್ ಅವರ ಪ್ರತಿಕ್ರಿಯೆ ಕೂಡ ಸೌಹಾರ್ದಯುತವಾಗಿರಲಿಲ್ಲ. ತಮ್ಮ ಎಂದಿನ ಉಡಾಫೆ ರೀತಿಯಲ್ಲೇ , ಟ್ರಂಪ್ ಅವರು ಭಾರತೀಯ ಸಂಸದರ ಜೊತೆಗಿನ ಭೇಟಿಯಲ್ಲಿ ಅಸಡ್ಡೆ ಮತ್ತು ಅವಮಾನಕರ ಹೇಳಿಕೆಗಳನ್ನು ನೀಡಿದ್ದು, ಯುವ ಸಂಸದರು ಇದರಿಂದ ಅವಮಾನಕ್ಕೊಳಗಾಗಿ ಹೊರನಡೆದರು ಎಂದು ವರದಿ ತಿಳಿಸಿದೆ.

ಈ ಘಟನೆಯನ್ನು ಯುವ ಸಂಸದರು ಸಾರ್ವಜನಿಕವಾಗಿ ಹೇಳಿಕೊಳ್ಳಲಿಲ್ಲ. ಆದರೆ ವಿಷಯ ಮಾತ್ರ ದೆಹಲಿಯ ಬಿಜೆಪಿಯ ಹಿರಿಯ ನಾಯಕರಿಗೆ ತಲುಪಿತು. ಪಕ್ಷದ ನಾಯಕರು ಆಕ್ರೋಶಗೊಂಡು ಯುವ ಸಂಸದರನ್ನು ಕರೆಸಿ ಮೂವರು ಹಿರಿಯ ನಾಯಕರ ಸಮ್ಮುಖದಲ್ಲಿ ಯುವ ಸಂಸದರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಹಂತದಲ್ಲಿ, ಪಕ್ಷದಿಂದ ಉಚ್ಚಾಟಿಸುವುದನ್ನೂ ಪರಿಗಣಿಸಲಾಗಿತ್ತು. ಆದರೆ ಯುವ ಸಂಸದರು ಹಲವಾರು ಬಾರಿ ಕ್ಷಮೆ ಕೋರಿ, ಮನವಿ ಮಾಡಿಕೊಂಡ ನಂತರ ಅವರನ್ನು ಕಳಿಸಿಬಿಡಲಾಯಿತು ಎಂದು ವರದಿ ತಿಳಿಸಿದೆ.

ಹಲವರು ಈ ವರದಿಯ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕೇಂದ್ರ ಸರಕಾರ ಹಾಗೂ ಬಿಜೆಪಿ ಪಕ್ಷದ ನಾಯಕರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X