ಪೇಟಿಎಂ ಪಾವತಿ ಬ್ಯಾಂಕ್ | ಅಕ್ರಮ ಹಣ ವ್ಯವಹಾರದ ಬಗ್ಗೆ ಇ.ಡಿ ತನಿಖೆಯ ಅಗತ್ಯವೇಕಿದೆ?

Date:

Advertisements
ಪೇಟಿಎಂ ಪಾವತಿ ಬ್ಯಾಂಕ್ ಮೂಲಕ ಅಕ್ರಮ ಹಣ ವರ್ಗಾವಣೆಯಾಗಿರುವ ಸಾಧ್ಯತೆಯನ್ನು ಆರ್‌ಬಿಐ ಅನುಮಾನಿಸಿರುವುದರಿಂದ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸುವ ಅಗತ್ಯವಿದೆ

ಇತ್ತೀಚೆಗೆ ಪೇಟಿಎಂ ಪಾವತಿ ಬ್ಯಾಂಕ್‌ ಮೇಲೆ ಆರ್‌ಬಿಐ ನಿಗಾ ವಹಿಸಲು ನಿಜವಾದ ಕಾರಣವೇನು? ಪೇಟಿಎಂ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಗೂ ಆದೇಶಿಸುವ ಸಾಧ್ಯತೆ ಇದೆ ಎಂಬ ಚರ್ಚೆಯಾಗುತ್ತಿದೆ. ಈವರೆಗೂ ಇ.ಡಿ ಪೇಟಿಎಂ ಬ್ಯಾಂಕ್‌ ಪ್ರಕರಣವನ್ನು ಕೈಗೆತ್ತಿಕೊಂಡಿಲ್ಲ ಮತ್ತು ಪೇಟಿಎಂ ಬ್ಯಾಂಕ್ ಅಧಿಕಾರಿಗಳು ಮತ್ತು ಸ್ಥಾಪಕರು ಇ.ಡಿ ತನಿಖೆಗೆ ಒಳಗಾಗುವ ಸಾಧ್ಯತೆಯಿಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. 

ಪೇಟಿಎಂ ಕುರಿತಂತೆ ಆರ್‌ಬಿಐ ಮುಂದಿಟ್ಟಿರುವ ಸತ್ಯಗಳು ಇ.ಡಿ ತನಿಖೆಯ ವ್ಯಾಪ್ತಿಗೆ ಬರುವುದಿಲ್ಲವೆ? ಖಂಡಿತಾ ಬರಲಿದೆ. ಏಕೆಂದರೆ ಪೇಟಿಎಂ ಮೇಲೆ ಇರುವ ಪ್ರಮುಖ ಆರೋಪವೆಂದರೆ ಸೂಕ್ತ ಕೆವೈಸಿ ಪರಿಶೀಲನೆಯಾಗದ ಖಾತೆಗಳನ್ನು ನಿಭಾಯಿಸಿರುವುದು. ಈ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆಯಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವೇ ಇಲ್ಲ.

ಒಂದು ಪ್ಯಾನ್ ಸಾವಿರಾರು ಖಾತೆಗಳು

Advertisements

ಪೇಟಿಎಂ ಪಾವತಿ ಬ್ಯಾಂಕ್‌ಗಳಲ್ಲಿ ತೆರೆಯಲಾದ ನೂರಾರು ಖಾತೆಗಳಿಗೆ ಸಮರ್ಪಕ ಕೆವೈಸಿ (ಗುರುತು ಚೀಟಿ, ಅಧಿಕೃತ ವಿಳಾಸ ಇತ್ಯಾದಿ) ವಿವರಗಳೇ ಇಲ್ಲ ಮತ್ತು ಒಂದೇ ಪ್ಯಾನ್‌ ಕಾರ್ಡ್‌ ನೀಡಿ ಸಾವಿರಾರು ಖಾತೆಗಳನ್ನು ತೆರೆಯಲಾಗಿದೆ ಎನ್ನುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪಾವತಿ ಬ್ಯಾಂಕ್ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲು ಪ್ರಮುಖ ಕಾರಣ.

ಆರ್‌ಬಿಐ ಕಣ್ಣಿಗೆ ಬಿದ್ದಿರುವಂತೆ, ಸೂಕ್ತ ಕೆವೈಸಿ ವಿವರಗಳಿಲ್ಲದ ಪೇಟಿಎಂ ಪಾವತಿ ಬ್ಯಾಂಕ್‌ನ ಖಾತೆಗಳಲ್ಲಿ ಕೋಟಿಗಟ್ಟಲೆ ವ್ಯವಹಾರವಾಗಿದೆ. ಹೀಗಾಗಿ ಅಕ್ರಮ ಹಣ ವರ್ಗಾವಣೆಗಾಗಿ ಈ ಖಾತೆಗಳನ್ನು ಬಳಸುತ್ತಿರುವ ಸಾಧ್ಯತೆಯಿಂದ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ.

ಡಿಜಿಟಲೀಕರಣದಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬಿತ್ತೆ?

ಪ್ರಧಾನಿ ನರೇಂದ್ರ ಮೋದಿಯ ಒತ್ತಾಸೆಯಿಂದ ಪೇಟಿಎಂ ಡಿಜಿಟಲ್ ಪ್ಲಾಟ್‌ಫಾರ್ಮ್‌ ಸಂಸ್ಥೆ ಸ್ಥಾಪನೆಯಾಗಿತ್ತು. ಭಾರತದ ಹಣ ವ್ಯವಹಾರವನ್ನು ಡಿಜಟಲೀಕರಿಸುವ ಮೂಲಕ ಭ್ರಷ್ಟಾಚಾರವನ್ನು ಮಟ್ಟ ಹಾಕಬಹುದು ಎನ್ನುವುದು ಪೇಟಿಎಂ ಡಿಜಿಟಲ್ ಪ್ಲಾಟ್‌ಫಾರ್ಮ್ ಬಗ್ಗೆ ಮುಖಪುಟ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಾಗ ವೈರಲ್ ಆಗಿದ್ದ ಸುದ್ದಿಯಾಗಿತ್ತು.

ನಂತರ ಅದೇ ಸಂಸ್ಥೆಗೆ ನಿರ್ಬಂಧಿತ ಬ್ಯಾಂಕ್ ವಹಿವಾಟಿಗೆ ಪರವಾನಗಿಯನ್ನೂ ನೀಡಲಾಯಿತು. ಡಿಜಿಟಲ್ ಪಾವತಿ ಪ್ಲೇಟ್‌ಫಾರ್ಮ್‌ಗಳಿಗೆ ನಿರ್ಬಂಧಿತ ಬ್ಯಾಂಕ್ ವ್ಯವಹಾರ ನಡೆಸುವ ಅವಕಾಶ ನೀಡುವ ಕ್ರಮವನ್ನು ಅಭೂತಪೂರ್ವ ಸುಧಾರಣೆ ಎಂದು ಕೊಂಡಾಡಲಾಗಿತ್ತು.

ನಿರ್ಬಂಧಿತ ಬ್ಯಾಂಕ್ ಎಂದರೆ, ಪೇಟಿಎಂ ಬ್ಯಾಂಕ್‌ಗೆ ಹಣ ಠೇವಣಿ ಇಡುವ ಮತ್ತು ವರ್ಗಾಯಿಸುವ ಅಧಿಕಾರ ನೀಡಲಾಗುವುದು, ಅದಕ್ಕೆ ಸಾಲದಂತಹ ವ್ಯವಹಾರ ನಡೆಸಲು ಪರವಾನಗಿ ಇರಲಿಲ್ಲ. ಡಿಜಿಟಲೀಕರಣದ ಮೂಲಕ ಅಕ್ರಮ ಹಣ ಪತ್ತೆ ಮಾಡುವ ಉದ್ದೇಶವಿಟ್ಟುಕೊಂಡಿದ್ದ ಕೇಂದ್ರ ಸರ್ಕಾರ, ಇದೀಗ ತಾನೇ ಸ್ವತಃ ಪ್ರೋತ್ಸಾಹಿಸಿದ ನಿರ್ಬಂಧಿತ ಬ್ಯಾಂಕ್‌ನ ಅಕ್ರಮ ಹಣ ವರ್ಗಾವಣೆಯನ್ನು ತನಿಖೆ ಮಾಡಬೇಕಾದ ಪೇಚಿಗೆ ಸಿಕ್ಕಿಹಾಕಿಕೊಂಡಿದೆ. 

ಜಾರಿ ನಿರ್ದೇಶನಾಲಯದ ತನಿಖೆಯ ಅಗತ್ಯವೇಕಿದೆ?

ಒಂದೇ ಪ್ಯಾನ್‌ (ಪರ್ಮನೆಂಟ್ ಅಕೌಂಟ್ ನಂಬರ್‌) ಖಾತೆಯಲ್ಲಿ ಸಾವಿರಾರು ಬಳಕೆದಾರರು ಖಾತೆ ತೆರೆದಿರುವುದು ಪತ್ತೆಯಾದ ಬಗ್ಗೆ ಆರ್‌ಬಿಐ ಮತ್ತು ಲೆಕ್ಕಪರಿಶೋಧಕರು ಪರಿಶೀಲನೆ ನಡೆಸಿದಾಗ ಪೇಟಿಎಂ ಬ್ಯಾಂಕ್ ಸಲ್ಲಿಸಿದ ನಿಯಮ ಅನುಸರಣೆ ಸರಿಯಾಗಿಲ್ಲದಿರುವುದು ಪತ್ತೆಯಾಗಿತ್ತು. ಹೀಗಾಗಿ ಇವುಗಳಲ್ಲಿ ಕೆಲವು ಖಾತೆಗಳನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಿರಬಹುದು ಎಂದು ಆರ್‌ಬಿಐ ಅನುಮಾನಿಸಿದೆ. 

ಜನಪ್ರಿಯ ವ್ಯಾಲೆಟ್ ಪೇಟಿಎಂ ಮತ್ತು ಅದರ ಹೆಚ್ಚು ಜನಪ್ರಿಯವಲ್ಲದ ಬ್ಯಾಂಕಿಂಗ್ ಶಾಖೆಯ ನಡುವೆ ಪ್ರಶ್ನಾರ್ಹವೆನಿಸುವ ನೂರಾರು ಕೋಟಿ ವ್ಯವಹಾರಗಳನ್ನು ಆರ್‌ಬಿಐ ಅನುಮಾನಿಸುತ್ತಿದೆ. ಈ ಹಣದ ವಹಿವಾಟಿನಲ್ಲಿ ಕನಿಷ್ಠ ಕೆವೈಸಿ ಪೂರ್ವಪಾವತಿ ಉತ್ಪನ್ನಗಳಿಗೆ ಆರ್‌ಬಿಐ ನಿಗದಿಪಡಿಸಿರುವ ನಿಯಂತ್ರಕ ಮಿತಿಯ ನಿಯಮಗಳನ್ನು ಮೀರಿರುವುದು ಪತ್ತೆಯಾಗಿದೆ. ಹೀಗಾಗಿ ಅಕ್ರಮ ಹಣ ವರ್ಗಾವಣೆಯನ್ನು ಅನುಮಾನಿಸಲಾಗಿದೆ.

ಪೇಟಿಎಂ ದೋಷಗಳ ಬಗ್ಗೆ ಇ.ಡಿಗೆ ವಿವರ ನೀಡಿರುವ ಆರ್‌ಬಿಐ, ತಾನು ಪತ್ತೆ ಮಾಡಿದ ವಿವರವನ್ನು ಕೇಂದ್ರ ಗೃಹ ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೂ ಕಳುಹಿಸಿದೆ.

“ವ್ಯವಹಾರದಲ್ಲಿ ಅಕ್ರಮ ಚಟುವಟಿಕೆಗೆ ಸಾಕ್ಷ್ಯ ದೊರೆತಲ್ಲಿ ಇ.ಡಿ ತನಿಖೆಗೆ ಆದೇಶಿಸಲಾಗುವುದು” ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಸ್ತುತ ಫೆಬ್ರವರಿ 29 ನಂತರ ಪೇಟಿಎಂ ಪಾವತಿ ಬ್ಯಾಂಕ್ ಲಿಮಿಟೆಡ್‌ಗೆ ಹೆಚ್ಚುವರಿ ಠೇವಣಿ ಸ್ವೀಕರಿಸುವುದು ಮತ್ತು ಕ್ರೆಡಿಟ್ ವ್ಯವಹಾರ ನಡೆಸುವುದನ್ನು ತಡೆಯಲಾಗಿದೆ. ಬಳಕೆದಾರರ ಖಾತೆಗಳಿಗೆ, ಪೂರ್ವಪಾವತಿ ಉತ್ಪನ್ನಗಳು, ವಾಲೆಟ್‌ಗಳು ಹಾಗೂ ಕಾರ್ಡ್‌ಗಳಿಗೆ ಹೆಚ್ಚುವರಿ ಟಾಪಪ್‌ಗಳನ್ನು ತಡೆದಿದೆ. 

ಪೇಟಿಎಂ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲೂ ದೋಷ

ಅಖಿಲ ಭಾರತ ವ್ಯಾಪಾರಿ ಒಕ್ಕೂಟ (ಸಿಎಐಟಿ) ಫೆಬ್ರವರಿ 4ರಂದು ಎಚ್ಚರಿಕೆ ಸಂದೇಶ ರವಾನಿಸಿ ಉದ್ಯಮ ವ್ಯವಹಾರಗಳಿಗೆ ಪೇಟಿಎಂ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಕೆ ಸ್ಥಗಿತಗೊಳಿಸುವಂತೆ ಸಲಹೆ ನೀಡಿದೆ. ಪೇಟಿಎಂ ವ್ಯಾಲೆಟ್ ಮತ್ತು ಪಾವತಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧಗಳ ಹಿನ್ನೆಲೆಯಲ್ಲಿ ಉದ್ಯಮ ವ್ಯವಹಾರಗಳಿಗೆ ಪೇಟಿಎಂ ತೊರೆದು ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವಂತೆ ಸೂಚಿಸಿದೆ.

ತಕ್ಷಣದ ಮಟ್ಟಿಗೆ ಬಳಕೆದಾರರು ಉಳಿತಾಯ ಖಾತೆಗಳು, ವಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳು ಹಾಗೂ ಎನ್‌ಸಿಎಂಸಿ ಖಾತೆಗಳಲ್ಲಿ ಉಳಿಸಿರುವ ಹಣವನ್ನು ಬಳಸಿಕೊಳ್ಳಬಹುದು. ಕಂಪನಿ ಫೆಬ್ರವರಿ 29ರವರೆಗೆ ತೃತೀಯ ಪಕ್ಷದ ಬ್ಯಾಂಕ್‌ಗಳನ್ನು ಅವಲಂಬಿಸಿ ವ್ಯವಹಾರ ನಡೆಸಲಿದೆ. ಆದರೆ ಆರ್‌ಬಿಐ ಕಳವಳ ಪೇಟಿಎಂನ ಪಾವತಿ ಬ್ಯಾಂಕ್‌ಗೆ ಮಾತ್ರ ಸೀಮಿತವಾಗಿಲ್ಲ ಎನ್ನುವುದನ್ನೂ ಗಮನಿಸಬೇಕಾಗುತ್ತದೆ.

ಪೇಟಿಎಂ ಬ್ಯಾಂಕ್ ಗ್ರೂಪ್ ಮತ್ತು ಸಹಭಾಗಿಗಳ ನಡುವಿನ ಕೆಲವು ಬೃಹತ್ ಮೊತ್ತದ ಪ್ರಮುಖ ವ್ಯವಹಾರಗಳನ್ನು ಬಹಿರಂಗಪಡಿಸಲಾಗಿಲ್ಲ ಎನ್ನುವ ಆರೋಪವನ್ನೂ ಎದುರಿಸುತ್ತಿದೆ. ಪೇಟಿಎಂ ಬ್ಯಾಂಕ್‌ನ ಆಡಳಿತ ಗುಣಮಟ್ಟದಲ್ಲು ಆರ್‌ಬಿಐ ದೋಷ ಕಂಡುಕೊಂಡಿದೆ. ಮುಖ್ಯವಾಗಿ ಪೇಟಿಎಂ ಪಾವತಿ ಬ್ಯಾಂಕ್ ಮತ್ತು ಮಾತೃ ಕಂಪನಿ ಒನ್‌97 ಕಮ್ಯುನಿಕೇಶನ್ಸ್ ಲಿಮಿಡೆಟ್ ನಡುವೆ ವ್ಯವಹಾರದಲ್ಲಿ ಲೋಪಧೋಷಗಳಿರುವುದು ಪತ್ತೆಯಾಗಿದೆ.

ಪೇಟಿಎಂನ ಮೂಲ ಡಿಜಿಟಲ್ ಪ್ಲಾಟ್‌ಫಾರ್ಮ್‌ನ ವ್ಯವಹಾರಗಳಲ್ಲಿ ದತ್ತಾಂಶ ಗೌಪ್ಯತೆಯನ್ನು ಕಾಪಾಡದೆ ಇರುವ ಬಗ್ಗೆಯೂ ಆರ್‌ಬಿಐ ಆತಂಕ ವ್ಯಕ್ತಪಡಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X