ಅನ್‌ವೆರಿಫೈಡ್ ಟ್ವಿಟರ್ (ಎಕ್ಸ್) ಬಳಕೆದಾರರು ಇನ್ನು ಮುಂದೆ ಪೋಸ್ಟ್, ಲೈಕ್, ರೀಟ್ವೀಟ್, ರಿಪ್ಲೆ ಒಳಗೊಂಡ ಮುಂತಾದ ಸಂವಹನ ಸೇವೆಗಳಿಗೆ ಪಾವತಿ ಮಾಡಬೇಕಾಗುತ್ತದೆ.
ಟ್ವಿಟರ್ ಸಂಸ್ಥೆ ಅನ್‌ವೆರಿಫೈಯ್ಡ್ ಹೊಸ ಬಳಕೆದಾರರಿಗೆ ಪಾವತಿ ಸೇವೆಯನ್ನು ಪರಿಚಯಿಸುತ್ತಿದ್ದು, ವರ್ಷಕ್ಕೆ ಒಂದು ಡಾಲರ್ ಪಾವತಿಸಿದರೆ ಮಾತ್ರ ಪೋಸ್ಟ್, ಲೈಕ್, ರೀಟ್ವೀಟ್, ರಿಪ್ಲೆ ಒಳಗೊಂಡ ಸೇವೆಗಳನ್ನು ಪಡೆಯಬಹುದು.
ಸದ್ಯ ಈ ಯೋಜನೆಯನ್ನು ನ್ಯೂಜಿಲೆಂಡ್ ಮತ್ತು ಫಿಲಿಪೈನ್ಸ್ ದೇಶಗಳಲ್ಲಿ ಪರೀಕ್ಷಾ ಹಂತದಲ್ಲಿದೆ. ಅಕ್ಟೋಬರ್ 17, 2023 ರಿಂದ ನಾವು ಎರಡು ದೇಶಗಳಲ್ಲಿನ ಹೊಸ ಬಳಕೆದಾರರಿಗೆ ಹೊಸ ಚಂದಾದಾರಿಕೆ ವಿಧಾನವನ್ನು ಪರೀಕ್ಷಿಸಲು ಪ್ರಾರಂಭಿಸಿದ್ದೇವೆ” ಎಂದು ಟ್ವಿಟರ್ ತಿಳಿಸಿದೆ.
BREAKING: New 𝕏 users will have to pay $1 a year to be able to post, like, reply, re-post etc according to Forbes. pic.twitter.com/HjHhvIyS10
— DogeDesigner (@cb_doge) October 17, 2023
ಈ ಸುದ್ದಿ ಓದಿದ್ದೀರಾ? ದೇಶದ ಜನರನ್ನು ಲೂಟಿ ಮಾಡುತ್ತಿರುವ ಅದಾನಿ; ವಿದ್ಯುತ್ ಬೆಲೆ ಏರಿಕೆಗೆ ರಾಹುಲ್ ಗಾಂಧಿ ಆಕ್ರೋಶ
ಮುಂದಿನ ದಿನಗಳಲ್ಲಿ ಇದು ಎಲ್ಲ ದೇಶಗಳಿಗೂ ವಿಸ್ತರಣೆಯಾಗುವ ಸಾಧ್ಯತೆಯಿದೆ. ಸ್ಪ್ಯಾಮ್ ಅಥವಾ ನಕಲಿ ಅಕೌಂಟ್‌ಗಳನ್ನು ಕಡಿಮೆ ಮಾಡಲು ನಮ್ಮ ನಮ್ಮ ಪ್ಲಾಟ್‌ಫಾರ್ಮ್ ಮತ್ತು ಅಧಿಕೃತ ಬಳಕೆದಾರರ ಚಟುವಟಿಕೆಯ ಕುಶಲತೆ ಹೆಚ್ಚಿಸಲು ಈ ಹೊಸ ಪರೀಕ್ಷೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಹೊಸ ಬಳಕೆದಾರರಿಗೆ ಕಡಿಮೆ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಹಣ ಪಾವತಿಸದ ಹೊಸ ಬಳಕೆದಾರರು ಟ್ವೀಟ್‌ಅನ್ನು ಕೇವಲ ಓದಲು ಮಾತ್ರ ಸಾಧ್ಯವಾಗುತ್ತದೆ. ಪ್ರತಿಕ್ರಿಯೆಯ ಯಾವುದೇ ಸೌಲಭ್ಯ ಲಭ್ಯವಾಗುವುದಿಲ್ಲ. ಪ್ರಸ್ತುತ ಭಾರತದಲ್ಲಿ ಗಣ್ಯರು ಹೊರತುಪಡಿಸಿ ಬ್ಲೂಟಿಕ್ ಸೇವೆ ಪಡೆಯಲು 699 ರೂ. ಪಾವತಿಸಬೇಕಿದೆ.
ಎಲಾನ್ ಮಸ್ಕ್ ಟ್ವಿಟರ್ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡ ನಂತರ ಉದ್ಯೋಗ ಕಡಿತ ಸೇರಿದಂತೆ ಕೆಲವೊಂದು ಕಠಿಣ ನಿರ್ಧಾರಗಳಿಂದ ಸಂಸ್ಥೆಯು ಆರ್ಥಿಕವಾಗಿ ಹಿನ್ನಡೆ ಅನುಭವಿಸಿತು. ಬ್ಲೂಟಿಕ್ ವೆರಿಫೈಡ್ ಸೇವೆ, ಚಂದಾದಾರಿಕೆ ಒಳಗೊಂಡು ಹಲವು ಸೇವೆಗಳನ್ನು ಪರಿಚಯಿಸಿದ ನಂತರ ಸದ್ಯ ಚೇತರಿಸಿಕೊಳ್ಳುತ್ತಿದೆ.