ಇತ್ತೀಚೆಗೆ ವಿಮಾನ ಅಪಘಾತಗಳು ಮತ್ತು ವಿಮಾನ ಪ್ರಯಾಣದ ವಿಳಂಬಗಳ ಸುದ್ದಿ ಹೆಚ್ಚಾಗಿ ವರದಿಯಾಗುತ್ತಿವೆ. ವಿಮಾನ ಅಪಘಾತಗಳು ಹೆಚ್ಚು ಆತಂಕವನ್ನು ಸೃಷ್ಟಿಸಿವೆ. ಇಂತಹ ಸಂದರ್ಭದಲ್ಲಿ ವಿಮಾನ ನಿಲ್ದಾಣವೊಂದರಲ್ಲಿ ಹಾಸ್ಯಾಸ್ಪದ ಘಟನೆಯೊಂದು ನಡೆದಿದ್ದು, ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕನೊಬ್ಬ ವಿಮಾನ ನಿಲ್ದಾಣದಲ್ಲಿ ತನ್ನ ಬೋರ್ಡಿಂಗ್ ಪಾಸ್‌ಅನ್ನು ಪರಿಶೀಲಿಸುತ್ತಿರುವ ವಿಡಿಯೋ ಅದಾಗಿದೆ. ಆ ವಿಡಿಯೋದಲ್ಲಿ, ಯುವಕ ತನ್ನ ಬೋರ್ಡಿಂಗ್ ಪಾಸ್‌ಅನ್ನು ಬ್ಯಾನರ್ ರೀತಿಯಲ್ಲಿ ದೊಡ್ಡ ಗಾತ್ರದಲ್ಲಿ ಪ್ರಿಂಟ್ ಹಾಕಿಸಕೊಂಡು ಬಂದಿದ್ದಾರೆ.
ಸಾಮಾನ್ಯವಾಗಿ ಬೋರ್ಡಿಂಗ್ ಪಾಸ್‌ಗಳನ್ನು ಪ್ರಯಾಣಿಕರು A4 ಗಾತ್ರದ ಹಾಳೆಯಲ್ಲಿ ಮುದ್ರಿಸುತ್ತಾರೆ. ಆದರೆ, ಆ ಯುವಕ AO ಗಾತ್ರದ ಹಾಳೆಯಲ್ಲಿ ಪ್ರಿಂಟ್ ತೆಗೆಸಿಕೊಂಡು ಬಂದಿದ್ದಾನೆ.
ವಿಡಿಯೋಗಳಿಗೆ ಕಮೆಂಟ್ ಮಾಡಿರುವ ನೆಟ್ಟಿಗರು, “ನಿಮ್ಮ ಬೋರ್ಡಿಂಗ್ ಪಾಸ್ ಅನ್ನು ಮುದ್ರಿಸಲು ನಿಮ್ಮ ಸ್ನೇಹಿತರಿಗೆ ಹೇಳಬೇಡಿ” ಎಂದು ಹಾಸ್ಯ ಮಾಡಿದ್ದಾರೆ.
ಕೆಲವರು, “ಯುವಕರ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿರಬೇಕು” ಎಂದೂ, ಇನ್ನೂ ಕೆಲವರು “ಅದು ಬೋರ್ಡಿಂಗ್ ಪಾಸ್‌ನಾ ಅಥವಾ ಫ್ಲೈಯಿಂಗ್ ಕಾರ್ಪೆಟ್‌ಆ” ಎಂದು ಕೇಳಿದ್ದಾರೆ.
“ಅವರು ಬೋರ್ಡಿಂಗ್ ಪಾಸ್‌ಅನ್ನು ಕಳೆದುಕೊಳ್ಳುವ ಭಯದಲ್ಲಿ ಈ ರೀತಿ ದೊಡ್ಡ ಹಾಳೆಯಲ್ಲಿ ಪ್ರಿಂಟ್ ತಂದಿದ್ದಾರೆ” ಎಂದು ಕೆಲವರು ತಮಾಷೆ ಮಾಡಿದ್ದಾರೆ.
ಇನ್ನೊಬ್ಬರು, “ನೀವು ವಿಮಾನದಲ್ಲಿ ಪ್ರಯಾಣಿಸುತ್ತೀರಾ ಅಥವಾ ಬೋರ್ಡಿಂಗ್ ಪಾಸ್‌ನಲ್ಲಿಯೇ ಹಾರುತ್ತೀರಾ?” ಎಂದು ಛೇಡಿಸಿದ್ದಾರೆ.