ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹಗರಣಗಳನ್ನು ಒಂದೊಂದಾಗಿ ಬಿಚ್ಚಿಡುತ್ತಿರುವ ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಠಿ ಅವರ ಕುಟುಂಬದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಇಲ್ಲಸಲ್ಲದ ಪೋಸ್ಟ್‌ಗಳು ಹರಿದಾಡುತ್ತಿವೆ.
ವೈರಲ್ ಆಗುತ್ತಿರುವ ಪೋಸ್ಟ್‌ಗಳಲ್ಲಿ ರಾಠಿ ಅವರ ನಿಜವಾದ ಹೆಸರು ಬಧ್ರೂದ್ದೀನ್ ರಷೀದ್ ಲಹೋರಿ ಅವರ ಪತ್ನಿಯ ಹೆಸರು ಜೂಲಿ. ಇವರು ಪಾಕಿಸ್ತಾನಿ ಪ್ರಜೆಯಾಗಿದ್ದು, ಪಾಕ್‌ನಲ್ಲಿ ಅವರನ್ನು ಜುಲೈಕಾ ಎಂಬುದಾಗಿ ಕರೆಯಲಾಗುತ್ತದೆ. ಅದಲ್ಲದೆ ದಂಪತಿಗಳು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕರಾಚಿ ಬಂಗಲೆಯಲ್ಲಿ ಪಾಕ್‌ನ ಸೇನಾ ರಕ್ಷಣೆಯೊಂದಿಗೆ ವಾಸಿಸುತ್ತಿದ್ದಾರೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ.
ಸರಿಸಮಾರು 2 ಕೋಟಿ ಚಂದಾದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ತಮ್ಮ ಹಲವು ಪೋಸ್ಟ್‌ಗಳಲ್ಲಿ ಕೇಂದ್ರ ಸರ್ಕಾರದ ವಂಚನೆ, ದುರಾಡಳಿತವನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವೇಗೌಡರ ಧೃತರಾಷ್ಟ್ರ ಸಿಂಡ್ರೋಮ್ ಮತ್ತು ಮೋದಿ ವಾಷಿಂಗ್ ಮಷೀನ್
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ತಮ್ಮ ವಿರುದ್ಧದ ಸುಳ್ಳು ಆರೋಪಕ್ಕೆ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಧ್ರವ್ ರಾಠಿ, ”ನಾನು ಮಾಡುತ್ತಿರುವ ವಿಡಿಯೋಗಳಿಗೆ ಅವರ ಬಳಿ ಉತ್ತರವಿಲ್ಲದ ಕಾರಣ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ನೀವು ಹೇಗೆ ಹತಾಶೆಗೊಂಡು ನನ್ನ ಪತ್ನಿಯ ಕುಟುಂಬವನ್ನು ಇಲ್ಲಿಗೆ ಎಳೆದು ತರುತ್ತಿದ್ದೀರಿ ಎಂಬುದು ಇದರಿಂದ ಗೊತ್ತಾಗುತ್ತಿದೆ. ಈ ಐಟಿ ಸೆಲ್‌ನ ಉದ್ಯೋಗಿಗಳಿಗೆ ಅಸಹ್ಯಕರ ಮಾನದಂಡವಿರುವುದನ್ನು ನೀವು ನೋಡಬಹುದು” ಎಂದು ವಾಗ್ದಾಳಿ ನಡೆಸಿದ್ದಾರೆ
ಅಂದ ಹಾಗೆ ಹರಿಯಾಣದ ರೋಟಕ್‌ನವರಾದ ಧ್ರುವ್ ರಾಠಿ, ಜಾಟ್ ಕುಟುಂಬದಲ್ಲಿ ಜನಿಸಿದ್ದು, ರೋಟಕ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಜರ್ಮನಿಯಲ್ಲಿ ಪೂರೈಸಿ ಅಲ್ಲಿಯೇ ವಾಸವಾಗಿದ್ದಾರೆ. ಪತ್ನಿ ಜೂಲಿ ಜರ್ಮನಿಯ ಪ್ರಜೆಯಾಗಿದ್ದು, 2021ರಲ್ಲಿ ಇವರಿಬ್ಬರೂ ಆಸ್ಟ್ರೀಯಾದ ವಿಯನ್ನಾದಲ್ಲಿ ವಿವಾಹವಾದರು.
They have no answer to the videos I made so they’re spreading these fake claims.
And how desperate do you have to be to drag my wife’s family into this? You can also see the disgusting moral standard of these IT Cell employees. pic.twitter.com/sqWj8vaJaY
— Dhruv Rathee (@dhruv_rathee) April 29, 2024
