ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಝೊಮ್ಯಾಟೊಗೆ ಜುಲೈ 2017 ರಿಂದ ಮಾರ್ಚ್ 2021ರವರೆಗೆ ಭಾರತದ ಹೊರಗಿರುವ ತನ್ನ ಅಂಗಸಂಸ್ಥೆಗಳಿಗೆ ಒದಗಿಸಲಾದ ರಫ್ತು ಸೇವೆಗಳ ಮೇಲೆ ಜಿಎಸ್‌ಟಿಗೆ ಸಂಬಂಧಿಸಿದ ಸುಮಾರು 11.82 ಕೋಟಿ ರೂಪಾಯಿಯ ತೆರಿಗೆ ನೋಟಿಸ್ ನೀಡಲಾಗಿದೆ.
ಇದನ್ನು ಓದಿದ್ದೀರಾ? ರಾಮ ಪ್ರಾಣ ಪ್ರತಿಷ್ಠಾಪನೆ | ಉತ್ತರ ಭಾರತದಲ್ಲಿ ಮಾಂಸಾಹಾರ ವಿತರಣೆ ಬಂದ್ ಮಾಡಿದ್ದ ಝೊಮ್ಯಾಟೊ
ಕೇಂದ್ರ ಸರಕು ಮತ್ತು ಸೇವಾ ತೆರಿಗೆಯ ಗುರುಗ್ರಾಮದ ಹೆಚ್ಚುವರಿ ಆಯುಕ್ತರು ಈ ನೋಟಿಸ್ ಜಾರಿ ಮಾಡಿದ್ದಾರೆ. 5,90,94,889 ರೂಪಾಯಿ ಜಿಎಸ್‌ಟಿಗೆ ಬಡ್ಡಿ ಮತ್ತು ದಂಡವಾಗಿ 5,90,94,889 ರೂಪಾಯಿ ವಿಧಿಸಲಾಗಿದೆ.
ಈ ನೋಟಿಸ್ ಅನ್ನು ಝೊಮ್ಯಾಟೊ ವಿರೋಧಿಸಿದೆ. “ಕಂಪನಿಯು ಸೂಕ್ತ ಪ್ರಾಧಿಕಾರದ ಮುಂದೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಿದೆ” ಎಂದು ಶುಕ್ರವಾರ ತಡರಾತ್ರಿ ಝೊಮ್ಯಾಟೊ ಹೇಳಿಕೆ ನೀಡಿದೆ.
“ಸಂಸ್ಥೆಯು ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ, ಸ್ಪಷ್ಟೀಕರಣವನ್ನು ನೀಡಿದೆ. ಜೊತೆಗೆ ಅಗತ್ಯ ದಾಖಲೆಗಳನ್ನು ನೀಡಿದ್ದೇವೆ” ಎಂದು ಸಂಸ್ಥೆ ಹೇಳಿದೆ.