ತಾಳಿ ಕಟ್ಟದೆ ಪರಾರಿಯಾಗಲು ಯತ್ನಿಸಿದ ವರ; 20 ಕಿಮೀ ಬೆನ್ನಟ್ಟಿ ಮಂಟಪಕ್ಕೆ ಕರೆತಂದ ವಧು

Date:

  • ಪರಸ್ಪರ ಪ್ರೀತಿಸಿದ್ದ ಜೋಡಿ, ತಾಳಿ ಕಟ್ಟುವ ಸಮಯದಲ್ಲಿ ಕೈಕೊಟ್ಟಿದ್ದ ವರ
  • ಬೇರೆ ಮದುವೆಯಾಗಲು ಹೊರಟಿದ್ದ ವರನನ್ನು 20 ಕಿಮೀ ಓಡಿ ಹಿಡಿದ ವಧು

ಮಂಟಪದಿಂದ ಓಡಿ ಹೋಗುತ್ತಿದ್ದ ವರನನ್ನು ವಧು 20 ಕಿಮೀ ಬೆನ್ನಟ್ಟಿ ಹಿಡಿದಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಾದರಿ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ನಿವಾಸಿಯಾದ ಈ ಯುವತಿ, ಕಳೆದ ಎರಡೂವರೆ ವರ್ಷದಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಎರಡೂ ಮನೆಗಳಲ್ಲಿ ಗೊತ್ತಾಗಿ, ವಿರೋಧ ವ್ಯಕ್ತವಾಗಿತ್ತು. ಮದುವೆ ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ವಿಷಯ ಹೋಗಿತ್ತು. ಯುವತಿ ಹೇಗೋ ಕಾಡಿಬೇಡಿ ಮನೆಯವರನ್ನು ಒಪ್ಪಿಸಿದಳು. ಮದುವೆಯು ಸ್ಥಳೀಯ ಭೂತೇಶ್ವರನಾಥ ದೇವಸ್ಥಾನದಲ್ಲಿ ನಿಶ್ಚಯವಾಗಿತ್ತು.

ಇನ್ನೇನು ಎಲ್ಲವೂ ಸರಿಯಾಗಿ ಮಹೂರ್ತದ ಸಮಯದಲ್ಲಿ ಮದುವೆ ನಡೆಯಬೇಕು ಎನ್ನುವಷ್ಟರಲ್ಲಿ ವರ ನಾಪತ್ತೆ. ಬಹಳ ಸಮಯದವರೆಗೂ ಕಾದರೂ ವರ ಪತ್ತೆಯಾಗಲಿಲ್ಲ. ಕಾದು ಕಾದು ಸುಸ್ತಾದ ವಧು, ಭಾವೀ ಪತಿಗೆ ಕರೆ ಮಾಡುತ್ತಾಳೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಬಿಜೆಪಿಯ ಮಾಜಿ ಶಾಸಕ ಬಂಧನ

ಕರೆ ಸ್ವೀಕರಿಸಿದ ಗಂಡು, ತಾನು ತಾಯಿಯನ್ನು ಕರೆದುಕೊಂಡು ಬರಲು ಮನೆಗೆ ಹೋಗುತ್ತಿರುವುದಾಗಿ ಹೇಳಿದ್ದ. ಆದರೆ ವರನ ಮಾತು ವಧುವಿಗೆ ಯಾಕೋ ಅನುಮಾನ ಕಾಡಲು ಶುರುವಾಯಿತು. ಮದುವೆಯಿಂದ ತಪ್ಪಿಸಿಕೊಂಡು ಓಡಿ ಹೋಗಿ ಇನ್ನೊಂದು ಮದುವೆಯಾಗುವುದಾಗಿ ಮಾಹಿತಿ ಸಿಕ್ಕಿದೆ. ಒಂದೂ ಕ್ಷಣವೂ ತಡ ಮಾಡದೇ ಆತನನ್ನು ಹಿಡಿಯಲು ಮುಂದಾಗುತ್ತಾಳೆ. ಸುಮಾರು 20 ಕಿಮೀ ಚೇಸ್ ಮಾಡಿದ್ದಾಳೆ.

ಬಿಮೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಳಿ ವರ ಬಸ್ ಹತ್ತುವಾಗ ಸಿಕ್ಕಿ ಬಿದ್ದಿದ್ದಾನೆ. ನಡು ರಸ್ತೆಯಲ್ಲಿ ಇಬ್ಬರ ನಡುವೆ ಸಾಕಷ್ಟು ನಾಟಕೀಯ ಬೆಳವಣಿಗೆ ನಡೆದಿದೆ. ಕೊನೆಗೂ ಹಠ ಬಿಡದ ವಧು ವರನನ್ನು ಮದುವೆ ಮಂಟಪಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾಳೆ. ಜಗಳವು ಸುಖಾಂತ್ಯವಾಗಿ ಇಬ್ಬರು ಮದುವೆ ಭೀಮೋರ ದೇವಸ್ಥಾನದಲ್ಲಿ ಎರಡೂ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದೆ.

ಮದುವೆಯಾಗದೆ ಮೋಸ ಮಾಡಿ ಓಡಿ ಹೋಗಲು ಯತ್ನಿಸಿದ ವರನನ್ನು 20 ಕಿಮೀ ಚೇಸ್ ಮಾಡಿ ಕರೆತರುವ ಬದಲು ಪೊಲೀಸರಿಗೆ ಹಿಡಿದುಕೊಟ್ಟು ಶಿಕ್ಷೆ ಕೊಡಿಸಬಹುದಿತ್ತು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ 2ನೇ ಹಂತದ ಚುನಾವಣೆ: ಇವಿಎಂ ವಿರುದ್ಧ 290 ದೂರು ಸ್ವೀಕಾರ, ಶೇ.39 ಮತದಾನ

ದೇಶದ 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ...

ಕೋಮು ದ್ವೇಷ ಭಾಷಣ; ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚು.ಆಯೋಗಕ್ಕೆ 93 ನಿವೃತ ಅಧಿಕಾರಿಗಳ ಪತ್ರ

ರಾಜಸ್ಥಾನದ ಬನ್ಸ್‌ವಾರಾದಲ್ಲಿ ಏಪ್ರಿಲ್ 21ರಂದು ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ...

‘ನೋಟಾ’ಗೆ ಹೆಚ್ಚು ಮತ ಬಂದರೆ ಮುಂದೇನು? ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತಗಳು ಬಂದರೆ ಏನು ಮಾಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ...

ಬಿಹಾರ| ಹೊತ್ತಿ ಉರಿದ ಮದುವೆಯ ಮಂಟಪ; ಆರು ಮಂದಿ ಸಜೀವ ದಹನ

ಬಿಹಾರದ ದರ್ಬಂಗಾ ಜಿಲ್ಲೆಯ ಮದುವೆಯ ಮಂಟಪ ಹೊತ್ತಿ ಉರಿದಿದ್ದು, ಈ ಅಗ್ನಿ...