ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ ಆರೋಗ್ಯ ಕೇಂದ್ರ

Date:

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ, ಔಷಧಿಗಳು ದೊರೆಯದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ಮುಖ್ಯವಾಗಿ ವಾಣಿಜ್ಯ ನಗರವಾಗಿ ಬೆಳೆಯುತ್ತಿದ್ದು, ವ್ಯಾಪಾರ ವಹಿವಾಟು ಚಟುವಟಿಕೆ ನಡೆಯುತ್ತಿವೆ. ತಾಲೂಕು ಘೋಷಣೆಯಾಗಿ ಒಂದು ದಶಕ ಕಳೆದರೂ ಇನ್ನೂ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರವು ಕೆಳ ದರ್ಜೆಯಲ್ಲಿಯೇ ಇದೆ. ಮೂವತ್ತು ಹಾಸಿಗೆಯುಳ್ಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿನಿತ್ಯ ನಾಲ್ಕು ನೂರಕ್ಕೂ ಹೆಚ್ಚು ಜನರು ತಪಾಸಣೆಗೆ ಬರುತ್ತಾರೆ.

- Advertisement -

“ತಾಲೂಕಿನ ಹತ್ತಾರು ಗ್ರಾಮಗಳಿಂದ ರೋಗಿಗಳು ಪಟ್ಟಣಕ್ಕೆ ಬರುವರು. ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಔಷಧಿ, ಸಿಬ್ಬಂಧಿಗಳ ಕೊರತೆ ಕಾಣುತ್ತದೆ. ಇದರಿಂದ ಗದಗ ಇಳಕಲ, ಕುಷ್ಟಗಿ, ಹುಬ್ಬಳ್ಳಿ,ಕೊಪ್ಪಳದಂತಹ ನಗರಗಳಿಗೆ ಅನಿವಾರ್ಯವಾಗಿ ಹೋಗುವಂತಹ ಸ್ಥಿತಿ ಎದುರಾಗಿದೆ. ತಾಲೂಕಿನ ನಗರದಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು ನೂರು ಹಾಸಿಗೆಯನ್ನಾಗಿಸಿ ಮೇಲ್ದರ್ಜೇಗೆ ಏರಿಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ಬಿಜ್ಜಳನ ಆಸ್ಥಾನದಲ್ಲಿದ್ದ ಕೊಂಡಿ ಮಂಚಣ್ಣ ಯಾರು? ಆತ ‘ಬಸವ’...

ಬಸವಣ್ಣನವರ ವಿರೋಧಿಯಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿರುವ ‘ಕೊಂಡಿ ಮಂಚಣ್ಣ’ ಈಗ ಮತ್ತೆ ಕರ್ನಾಟಕದ ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ಬಂದಿದ್ದಾನೆ. ಸಚಿವ ಎಂ.ಬಿ. ಪಾಟೀಲ್ ಅವರು ಶಂಕರ್ ಬಿದರಿ ಮತ್ತು ಮನು ಬಳಿಗಾರ್ ಅವರನ್ನು ‘21ನೇ...

ಔಷಧಿಗಳ ಕೊರತೆ; ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಮಾನ್ಯ ಹಾಗೂ ಗಂಭೀರ ಹೊರ ಹಾಗೂ ಒಳ ರೋಗಿಗಳನ್ನು ವೈದ್ಯರು ತಪಾಸನೆಗೆ ನಡೆಸುವರು. ವೈದ್ಯರು ಬರೆದು ಕೊಡುವ ಚೀಟಿಯಲ್ಲಿ ಬರೆದು ಕೊಡುವ ಔಷಧಿಗಳ ಕೊರತೆ ಇದೆ. ಸಿಟ್ರಿಜನ್, ಟಿಟಿ ಇಂಜಕ್ಷನ್, ಇನ್ಸೂಲಿನ್, ಬ್ಯಾಂಟಿಡಿನ್, ಎ.ಆರ್.ವಿ ರೇಬಿಸ್, ಕ್ಯಾಲ್ಸಂ, ಕಲಮ್ ಇನ್ ಲೋಷನ್, ಸಿಪ್ಪಾ ಐಡ್ರಾಪ್ ಜತೆ ಇನ್ನೂ ಅನೇಕ ಔಷಧಗಳ ಕೊರತೆ ಇದೆ. ವೈದ್ಯರು ಬರೆದು ಕೊಡುವ ಚೀಟಿಗಳು ಸಮುದಾಯ ಆರೋಗ್ಯ ಔಷಧಿ ಇಲ್ಲದಿರುವುದರಿಂದ ಅಲ್ಲಿಯೇ ಇರುವ ಜನೌಷಧಿ ಅಂಗಡಿಯಲ್ಲಿ ದುಡ್ಡು ಕೊಟ್ಟು ಔಷಧಿ ಪಡೆಯುವರು.

ವೈದ್ಯರ ಕೊರತೆ: ಆರೋಗ್ಯ ಸಮುದಾಯ ಕೇಂದ್ರದಲ್ಲಿ ಇಬ್ಬರು ವೈದ್ಯರು ಕಾಯಂ ಇದ್ದು, ಇನ್ನೂ ಇಬ್ಬರ ವೈದ್ಯರ ಕೊರತೆ ಇದೆ. ಅರವಳಿಕೆ (anastasia) ತಜ್ಞರು ಇಲ್ಲ. ಇಬ್ಬರು ಡಯಾಲಿಸಿಸ್ ಇದ್ದು, ಇನ್ನೂ ಒಬ್ಬರ ಅವಶ್ಯಕತೆ ಇದೆ. ಒಬ್ಬರು ಔಷಧ ವಿತರಕರು, ಒಬ್ಬರ ಫೀಲ್ಡ್ ಆಫೀಸರ್ ಇದ್ದಾರೆ. ಒಬ್ಬರು ಲ್ಯಾಬ್ ಟೆಕ್ನಿಷಿಯನ್, ಒಬ್ಬರು ಡಿ ಗ್ರೂಪ್ ನೌಕರನಿದ್ದಾರೆ. ನಾಲ್ಕು ಸ್ಟಾಫ್ ನರ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂಳಿದ ನಾಲ್ಕು ವೈದ್ಯಾಧಿಕಾರಿಗಳು, ದ್ವೀತಿಯ ದರ್ಜೆಯ ಸಹಾಯಕ ಸಿಬ್ಬಂದಿಗಳ ಹುದ್ದೆಗಳು ಖಾಲಿ ಇವೆ.

ಈದಿನ.ಕಾಮ್ ಜೊತೆಗೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ್ ಮಾತನಾಡಿ, “ಗಜೇಂದ್ರಗಡ ಆರೋಗ್ಯ ಸಮುದಾಯ ಆಸ್ಪತ್ರೆಯಲ್ಲಿ ಹಲವಾರು ಮೂಲಭೂತ ಸಮಸ್ಯೆಗಳಿಂದ ಕೂಡಿದೆ. ಫಿಜಿಶಿಷನ್ ಅನಾಸ್ತೆಷಿಯಾ ಅರವಳಿಕೆ ತಜ್ಞರ ಕೊರತೆ, ಬ್ಲಡ್ ಬ್ಯಾಂಕ್ ಲ್ಯಾಬ್, ರಕ್ತ ತಪಾಸಣೆ ಉತ್ಕೃಷ್ಟವಾದ ಮಿಷನ್ಸ್ ಗಳು, ಗ್ರೂಪ್ ಡಿ ದರ್ಜೆಯ ಹುದ್ದೆ, ಸೆಕ್ಯೂರಿಟಿ ಇರುವುದಿಲ್ಲ. ಆಸ್ಪತ್ರೆಗೆ ಬಂದವರಿಗೆ ಸರಿಯಾಗಿ ಕುಡಿಯುವ ನೀರಿಲ್ಲ, ರೋಗಿಗಳಿಗೆ ಶೌಚಕ್ಕೂ ನೀರಿನ ಕೊರತೆಯಿದೆ. ಶೌಚಾಲಯಗಳು ದುಸ್ಥಿತಿಯಲ್ಲಿವೆ. ಶಾಸಕರ ಗಮನಕ್ಕೆ ತಂದರೂ ಏನು ಮಾಡಿಲ್ಲ. ರೋಣದಲ್ಲಿ ಹೇಗೆ ತಮ್ಮ ಖಾಸಗಿ ಆಸ್ಪತ್ರೆಗಳನ್ನ ಬಲಪಡಿಸಿಕೊಂಡು ಮುಂದಾಗಿದ್ದಾರೆ. ಅದೇ ರೀತಿ ಗಜೇಂದ್ರಗಡದಲ್ಲೂ ಖಾಸಗಿ ಆಸ್ಪತ್ರೆಗಳ ಪರವಾಗಿ ನೀತಿಗಳಿಗೆ ಇವೆ‌ ಹೊರತು ನಮ್ಮಸರ್ಕಾರಿ ಸೌಲಭ್ಯ ಸರಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಕೊಡದಿರುವುದು ವಿಪರ್ಯಾಸ ” ಎಂದು ಹೇಳಿದರು.

“ಈಗಿರುವ 30 ಹಾಸಿಗೆಯಿಂದ 50 ಹಾಸಿಗೆವರೆಗೂ ಮತ್ತು ನೂರು ಹಾಸಿಗೆವರೆಗೂ ಅಭಿವೃದ್ಧಿಪಡಿಸಲು ಪ್ರಸ್ತಾವನೆಯಲ್ಲಿ ಇದೆ, ಹೊರತು ಅನುಮತಿ ಹಣಕಾಸು ಬಿಡುಗಡೆ ಕಾರ್ಯಾಚರಣೆ ಆಗಿಲ್ಲ. ನಾವು ಈ ಹಿಂದೆ ಹೋರಾಟ ಮಾಡಿದರೂ ಯಾವುದೇ ಒಂದು ಸಣ್ಣ ಪ್ರಯತ್ನವನ್ನು ಕೂಡ ಮಾಡದೇ ಸಮಸ್ಯೆಯನ್ನು ಬಗೆಹರಿಸಲು ಶಾಸಕರಿಗೆ ಸಮಯವಿಲ್ಲ” ಎಂದು ಕಿಡಿ ಕಾರಿದರು.

ಈದಿನ.ಕಾಮ್ ಪೋನ್ ಮೂಲಕ ಡಿಎಚ್ಒ ಡಾ. ಎಸ್.ಎಸ್ ನೀಲಗುಂದ ಅವರನ್ನು ಸಂಪರ್ಕಿಸಿದಾಗ, “ಗಜೇಂದ್ರಗಡದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೆ ಏರಿಸಲು ಸರಕಾರ ಅನುಮೋಧನೆಗಾಗಿ ಕಳಿಸಲಾಗಿದೆ. ಒಂದು ವರ್ಷದಿಂದ ಔಷಧಿಗಳ ಟೆಂಡರ್ ನಲ್ಲಿ ಸಮಸ್ಯೆ ಆಗಿದ್ದರಿಂದ ಬಂದಿರುವುದಿಲ್ಲ. ಈಗ ಪೂರೈಸಲಾಗುವುದು. ಅನಸ್ಥೇಷಿಯಾ ವೈದ್ಯರ ಹುದ್ದೆ ಖಾಲಿ ಇದ್ದು, ನಾರ್ಮಲ್ ಹೆರಿಗೆ ಮಾಡಲಾಗುತ್ತಿದೆ” ಎಂದು ಪ್ರತಿಕ್ರಿಯೆ ನೀಡಿದರು.

ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂಧಿಗಳ ಕೊರತೆಯಿಂದ ಸಾರ್ವಜನಿಕರಿಗೆ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ಈ ಸಮುದಾಯ ಆರೋಗ್ಯ ಕೇಂದ್ರವನ್ನು ಸರಕಾರ ಮೇಲ್ದರ್ಜೇಗೆ ಏರಿಸಿ ಸೌಲಭ್ಯಗಳನ್ನು ಒದಗಿಸಿದರೆ ತಾಲೂಕಿನ ಜನರಿಗೆ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ರೈತರ ಹೋರಾಟಕ್ಕೆ ಸ್ಪಂದನೆ; ಬಸವಸಾಗರದಿಂದ 1.5 ಟಿಎಂಸಿ ನೀರು ಬಿಡುಗಡೆಗೆ ಆದೇಶ

ಬರಗಾಲದ ಸಂಕಷ್ಟದಿಂದ ಕಂಗಾಲಾಗಿದ್ದ ಕಾಲುವೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕೊನೆಗೂ ಕೊಂಚ...

ಯಾದಗಿರಿ | ಎಂಬಿಬಿಎಸ್‌ ವಿದ್ಯಾರ್ಥಿಗಳ ಬಾಕಿ ವಿದ್ಯಾರ್ಥಿವೇತನ ಬಿಡುಗಡೆಗೆ ಸದ್ದಮ್ ಹುಸೇನ್ ಆಗ್ರಹ

ಕೋವಿಡ್ ಸಾಂಕ್ರಾಮಿಕ ಹಾಗೂ ಪ್ರವೇಶ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ 2021ನೇ ಸಾಲಿನ ಎಂಬಿಬಿಎಸ್...

ಯಾದಗಿರಿ | ಕೆಂಭಾವಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಮನವಿ

ಕೆಂಭಾವಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಿ, ಅಗ್ನಿಶಾಮಕ ವಾಹನ ಹಾಗೂ ಅಗತ್ಯ...

ವಿಜಯಪುರ |ಬಸವ ತತ್ವದ ವಿರುದ್ಧದ ಅಪಪ್ರಚಾರ | ಎಸ್‌ಐಟಿ ತನಿಖೆಗೆ ಆಗ್ರಹ

ಬಸವಣ್ಣನವರ ವಚನಗಳು, ವಿಚಾರಧಾರೆ ಹಾಗೂ ಶರಣ ಚಳವಳಿಯ ಇತಿಹಾಸವನ್ನು ತಿರುಚಿ ಸಮಾಜದಲ್ಲಿ...