ಭಾರತದ ಮೇಲೆ‌ ಹೊಸ ಸುಂಕ ಹೇರಲು ಟ್ರಂಪ್ ಆಡಳಿತ ಸಿದ್ಧತೆ; ಶೀಘ್ರವೇ ಅಧಿಕೃತ ಘೋಷಣೆ!

Date:

ನಾನಾ ರಾಷ್ಟ್ರಗಳು ದೇಶೀಯ ಕೈಗಾರಿಕಾ ಉತ್ಪಾದನೆಗೆ ಸರ್ಕಾರಿ ಸಬ್ಸಿಡಿ ಮತ್ತು ಬೆಂಬಲ ನೀಡುವ ಮೂಲಕ ಅಮೆರಿಕದ ಕಂಪನಿಗಳಿಗೆ ನಷ್ಟ ಉಂಟುಮಾಡುತ್ತಿವೆ ಎಂದು ಟ್ರಂಪ್ ಆಡಳಿತ‌ ಆರೋಪಿಸಿದೆ. ಇದೇ ಕಾರಣಕ್ಕಾಗಿ, ಭಾರತ ಸೇರಿದಂತೆ ಹತ್ತಾರು ಪ್ರಮುಖ ರಾಷ್ಟ್ರಗಳ ಮೇಲೆ ಹೊಸದಾಗಿ ಆಮದು ಸುಂಕ ಹೇರಲು ಟ್ರಂಪ್ ಸಿದ್ಧತೆ ನಡೆಸಿದ್ದಾರೆ. ಶೀಘ್ರವೇ ಹೊಸ ಸುಂಕ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

- Advertisement -

ಈ ಪ್ರಸ್ತಾವಿತ ಹೊಸ ಸುಂಕಗಳು ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಯುರೋಪಿಯನ್ ಒಕ್ಕೂಟ ಹಾಗೂ ಇತರ ಪ್ರಮುಖ ರಾಷ್ಟ್ರಗಳನ್ನು ಗುರಿಯಾಗಿಸಿಕೊಳ್ಳುವ ಸಾಧ್ಯತೆಯಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

ಟ್ರಂಪ್ ತಂಡವು ಕಳೆದ ಹಲವು ತಿಂಗಳುಗಳಿಂದ ನಡೆಸುತ್ತಿದ್ದ ಸುಂಕ ತನಿಖಾ ವರದಿಯನ್ನು ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಜೇಮಿಸನ್ ಗ್ರೀರ್ ಅವರು ಈ ವಾರವೇ ಬಹಿರಂಗಪಡಿಸುವ ನಿರೀಕ್ಷೆಯಿದ್ದು, ಮಂಗಳವಾರದ ವೇಳೆಗೆ ಈ ಕುರಿತು ಘೋಷಣೆಯಾಗಬಹುದು ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ. ಆದರೆ, ಶ್ವೇತಭವನವಾಗಲಿ ಅಥವಾ ಯುಎಸ್‌ಟಿಆರ್ ಕಚೇರಿಯಾಗಲಿ ಈ ವರದಿಗಳ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಅಮೆರಿಕದ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301ರ ಅಡಿಯಲ್ಲಿ ಕಳೆದ ಮಾರ್ಚ್ 11ರಂದು ಭಾರತ, ಚೀನಾ, ಯುರೋಪಿಯನ್ ಒಕ್ಕೂಟ ಹಾಗೂ ಇತರ 13 ದೇಶಗಳ ಕೈಗಾರಿಕಾ ಸಬ್ಸಿಡಿಗಳ ಕುರಿತು ತನಿಖೆಯನ್ನು ಆರಂಭಿಸಲಾಗಿತ್ತು. ಈ ದೇಶಗಳು ನೀಡುತ್ತಿರುವ ಸಬ್ಸಿಡಿ ಮತ್ತು ಸರ್ಕಾರಿ ಬೆಂಬಲದಿಂದಾಗಿ ಹೆಚ್ಚುವರಿ ಕೈಗಾರಿಕಾ ಸಾಮರ್ಥ್ಯ ಸೃಷ್ಟಿಯಾಗಿದ್ದು, ಆಯಾ ದೇಶಗಳ ಕಂಪನಿಗಳು ಜಾಗತಿಕ ಮಾರುಕಟ್ಟೆಗೆ ಅಗ್ಗದ ದರದಲ್ಲಿ ಸರಕುಗಳನ್ನು ಪೂರೈಸುವ ಮೂಲಕ ಅಮೆರಿಕದ ಉತ್ಪಾದಕರಿಗೆ ಹೊಡೆತ ನೀಡುತ್ತಿವೆ ಎಂದು ಜೇಮಿಸನ್ ಗ್ರೀರ್ ಪ್ರತಿಪಾದಿಸಿದ್ದಾರೆ.

ಯುಎಸ್‌ಟಿಆರ್ ಹೊರಡಿಸಲಿರುವ ಹೊಸ ಪ್ರಕಟಣೆಯು ಉದ್ದೇಶಿತ ದೇಶಗಳಿಂದ ರಫ್ತಾಗುವ ಬಹುತೇಕ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕವನ್ನು ಹೇರುವ ಸಾಧ್ಯತೆಯಿದೆ. ಆದಾಗ್ಯೂ, ಪ್ರತ್ಯೇಕ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಈಗಾಗಲೇ ಸುಂಕಕ್ಕೆ ಒಳಪಟ್ಟಿರುವ ಉಕ್ಕು, ಅಲ್ಯೂಮಿನಿಯಂ ಮತ್ತು ಆಟೋಮೊಬೈಲ್‌ಗಳಂತಹ ಕೆಲವು ಕೈಗಾರಿಕಾ ಸರಕುಗಳನ್ನು ಈ ಪಟ್ಟಿಯಿಂದ ಹೊರಗಿಡುವ ನಿರೀಕ್ಷೆಯಿದೆ.

ಹೊಸ ಸುಂಕದ ಅಂತಿಮ ದರಗಳು ಎಷ್ಟಿರಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆವದರೂ, 2026ರ ಫೆಬ್ರವರಿಯಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ 2025ರ ಸುಂಕದ ದರಗಳಿಗೆ ಸಮನಾದ ಸುಂಕವನ್ನೇ ಮತ್ತೆ ವಿಧಿಸಲು ಉದ್ದೇಶಿಸಿರುವುದಾಗಿ ಟ್ರಂಪ್ ಆಡಳಿತದ ಅಧಿಕಾರಿಗಳು ಪದೇಪದೇ ಹೇಳಿದ್ದಾರೆ.

ಇದರ ಜೊತೆಗೆ, ವಿದೇಶಿ ಪೂರೈಕೆ ಸರಪಳಿಗಳಲ್ಲಿ ಬಲವಂತದ ದುಡಿಮೆಯ ಕುರಿತು ಯುಎಸ್‌ಟಿಆರ್ ಕಳೆದ ಜುಲೈನಲ್ಲಿ ನಡೆಸಿದ್ದ ತನಿಖೆಯ ಅನ್ವಯ, ಹೆಚ್ಚುವರಿ ಉತ್ಪಾದನಾ ತನಿಖೆಗೆ ಒಳಪಟ್ಟಿರುವ ಎಲ್ಲ 16 ಆರ್ಥಿಕತೆಗಳು ಸೇರಿದಂತೆ ಹತ್ತಾರು ವ್ಯಾಪಾರ ಪಾಲುದಾರರ ಮೇಲೆ 10 ರಿಂದ 12.5% ರಷ್ಟು ಸುಂಕ ವಿಧಿಸಲು ಶಿಫಾರಸು ಮಾಡಲಾಗಿತ್ತು. ಇದೀಗ ಘೋಷಣೆಯಾಗಲಿರುವ ಹೊಸ ಸುಂಕಗಳು, ಜುಲೈನಲ್ಲಿ ಪ್ರಕಟಿಸಲಾದ ಆ ಸುಂಕಗಳಿಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಮತ್ತೊಂದೆಡೆ, ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕಾಗಿ ಕಳೆದ ಹಲವು ತಿಂಗಳುಗಳಿಂದ ಮಾತುಕತೆಗಳು ನಡೆಯುತ್ತಿವೆ. ಫೆಬ್ರವರಿಯಲ್ಲಿ ಈ ಒಪ್ಪಂದದ ಚೌಕಟ್ಟನ್ನು ಅಂತಿಮಗೊಳಿಸಲಾಗಿತ್ತಾದರೂ, ಕಳೆದ ವರ್ಷ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯಡಿ ವಿಧಿಸಲಾಗಿದ್ದ ಸುಂಕಗಳನ್ನು ಅಮೆರಿಕ‌ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ ಈ ಒಪ್ಪಂದವು ಮತ್ತೆ ಚರ್ಚೆಯ ಹಂತಕ್ಕೆ ಮರಳಿತ್ತು. ಈ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಅಮೆರಿಕದ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿ ರಾಷ್ಟ್ರಗಳಾದ ಬಾಂಗ್ಲಾದೇಶ, ವಿಯೆಟ್ನಾಂ ಮತ್ತು ಕಾಂಬೋಡಿಯಾಗಳಿಗಿಂತ ಕಡಿಮೆ ಸುಂಕದ ಸೌಲಭ್ಯವನ್ನು ಪಡೆಯಲು ಭಾರತ ತೀವ್ರ ಪ್ರಯತ್ನ ನಡೆಸುತ್ತಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬಿದರಿ ಕಲೆ ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ

ವಿಶ್ವದ ಶ್ರೀಮಂತ ಕಲೆಗಳಲ್ಲಿ ಒಂದಾಗಿರುವ ಬಿದರಿ ಕಲೆ ಬೀದರ್‌ನ ಹೆಮ್ಮೆಯಾಗಿದೆ. ಕಲೆ,...

ರಾಜ್ಯ ಹೈಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಎಂ.ಎಸ್ ರಾಮಚಂದ್ರ ರಾವ್ ನೇಮಕಕ್ಕೆ ಶಿಫಾರಸು!

ಕರ್ನಾಟಕ ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರನ್ನು ಜಾರ್ಖಂಡ್...

ಬಾಗಲಕೋಟೆ |ಬಸವ–ಅಂಬೇಡ್ಕರ್ ಚಿಂತನೆಗೆ ರಾಜಕೀಯ ಶಕ್ತಿ ತುಂಬಲು ‘ಬಸವ ಭೀಮ ಸಂಗಮ’

ಬಸವಣ್ಣನವರ ಸಮಾನತೆಯ ಆಶಯ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಿಕ ಚಿಂತನೆಗಳನ್ನು...

ಬೆಳಗಾವಿ |ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಯಲ್ಲಿ ಅನ್ಯಾಯ: ಪ್ರತ್ಯೇಕ ರಾಜ್ಯದ ಕೂಗು ತಪ್ಪಲ್ಲ ಎಂದ ಬಾಲಚಂದ್ರ ಜಾರಕಿಹೊಳಿ!

ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಆಡಳಿತ ಮತ್ತು ಅಭಿವೃದ್ಧಿಯಲ್ಲಿ...