ಔರಂಗಜೇಬ ನೆಪ ಮಾತ್ರ ; ಈದ್ ಮಿಲಾದ್‌ಗೆ ಟಾರ್ಗೆಟ್‌ಗೆಂದೇ ಈ ದ್ವಾರ ಹಾಕಲಾಗಿತ್ತಾ? ಇಲ್ಲಿದೆ ವಿವರ

Date:

Advertisements
ಶಿವಮೊಗ್ಗ ಬಸ್ ನಿಲ್ದಾಣದ ಎದುರು ʼಜ್ಞಾನವ್ಯಾಪಿ ಶಿವನ ಮಹಾದ್ವಾರʼವನ್ನು ನಿರ್ಮಿಸಲಾಗಿದೆ. ಜ್ಞಾನವ್ಯಾಪಿ ಶಿವಲಿಂಗ ವಿವಾದ ಆಗಿರುವುದು ಉತ್ತರ ಪ್ರದೇಶದಲ್ಲಿ..! ಅದಕ್ಕೂ ಶಿವಮೊಗ್ಗಕ್ಕೂ ಏನು ಸಂಬಂಧ? ಜ್ಞಾನವ್ಯಾಪಿ ಮಸೀದಿಯನ್ನು ಗಣೇಶೋತ್ಸವ ಮೆರವಣಿಗೆಯಲ್ಲಿ ಯಾಕೆ ನೆನಪಿಸಬೇಕಿತ್ತು?

ಈದ್ ಮಿಲಾದ್‌ಗೂ ಔರಂಗಜೇಬನಿಗೂ ಏನು ಸಂಬಂಧ ? ಮುಸ್ಲಿಂ ಕೋಮುವಾದಿಗಳು ಯಾಕೆ ಇಂತಹ ಕಿಡಿಗೇಡಿತನ ಮಾಡಬೇಕಿತ್ತು? ಎಂದು ಬಲಪಂಥೀಯರು, ಎಡಪಂಥೀಯರು ಸೇರಿದಂತೆ ಇಡೀ ಸಮಾಜ ಪ್ರಶ್ನಿಸಿದ್ದಾಯ್ತು. ಇದೀಗ ಔರಂಗಜೇಬನಿಗೂ ಮೊದಲು ಶಿವಮೊಗ್ಗ ಈದ್ ಮಿಲಾದ್ ಹಾಳು ಮಾಡಲೆಂದೇ ಯಾರ್ಯಾರು ಬಂದಿದ್ದರು ಎಂಬ ಸತ್ಯಶೋಧನಾ ವರದಿಯೊಂದು ಬೇಕಾಗಿದೆ. ಪರ-ವಿರೋಧದ ಚರ್ಚೆಯನ್ನು ಬದಿಗಿಟ್ಟು ಪೊಲೀಸರು ಈ ನಿಟ್ಟಿನಲ್ಲೂ ತನಿಖೆ ಮಾಡಬೇಕಿದೆ.

ಈದ್ ಮಿಲಾದ್ ಗೂ ಮುನ್ನ ನಡೆದ ಶಿವಮೊಗ್ಗ ಗಣೇಶೋತ್ಸವಕ್ಕೂ ಶ್ರೀರಾಮನಿಗೂ ಏನು ಸಂಬಂಧ ? ಗಣೇಶ ಮೆರವಣಿಗೆಗೆಂದು ತೀರ್ಥಹಳ್ಳಿ ರಸ್ತೆಯಲ್ಲಿ ದೊಡ್ಡದಾದ ದ್ವಾರವೊಂದನ್ನು ನಿರ್ಮಿಸಲಾಗುತ್ತದೆ. ದ್ವಾರದ ಮಧ್ಯಭಾಗದಲ್ಲಿ ಶ್ರೀರಾಮ ಬಿಲ್ಲನ್ನು ಹಿಡಿದು ನಿಂತಿದ್ದಾನೆ. ಶ್ರೀರಾಮನ ಬಿಲ್ಲು ಮುಸ್ಲೀಮರೇ ಅತ್ಯಧಿಕವಾಗಿರುವ ಇಲ್ಯಾಸ್ ನಗರ ಎಂಬ ಊರನ್ನು ಗುರಿಯಾಗಿರಿಸಿದೆ. ಇದು ಯಾವ ಉದ್ದೇಶದಿಂದ ಮಾಡಲಾಗಿದೆ ? ಗಣೇಶೋತ್ಸವ ಮುಗಿದು ಈದ್ ಮಿಲಾದ್ ಮೆರವಣಿಗೆ ಮುಗಿದರೂ ಇನ್ನೂ ಆ ದ್ವಾರ ರಸ್ತೆಯಲ್ಲಿದೆ ಯಾಕೆ ?

ಶಿವಮೊಗ್ಗ ಬಸ್ ನಿಲ್ದಾಣದ ಎದುರು ಜ್ಞಾನವ್ಯಾಪಿ ಶಿವನ ಮಹಾದ್ವಾರವನ್ನು ನಿರ್ಮಿಸಲಾಗಿದೆ. ಜ್ಞಾನವ್ಯಾಪಿ ಶಿವಲಿಂಗ ವಿವಾದ ಆಗಿರುವುದು ಉತ್ತರ ಪ್ರದೇಶದಲ್ಲಿ..! ಅದಕ್ಕೂ ಶಿವಮೊಗ್ಗಕ್ಕೂ ಏನು ಸಂಬಂಧ ? ಜ್ಞಾನವ್ಯಾಪಿ ಮಸೀದಿಯನ್ನು ಗಣೇಶೋತ್ಸವ ಮೆರವಣಿಗೆಯಲ್ಲಿ ಯಾಕೆ ನೆನಪಿಸಬೇಕಿತ್ತು ?

Advertisements
ಶಿವದ್ವಾರ

ಮುಸ್ಲಿಂ ಸಮುದಾಯ ಕ್ರಿಯೆಗೆ ಪ್ರತಿಕ್ರಿಯೆ ನೀಡಬಾರದು ಎಂಬುದು ನಿಜ. ಆದರೆ ಪ್ರತಿಕ್ರಿಯೆಗಾಗಿಯೇ ಕಾಲು ಕೆರೆಯುವುದು ತಪ್ಪಲ್ಲವೇ? ದ್ವಾರಗಳ ಪೈಪೋಟಿಯನ್ನು ಸೃಷ್ಟಿಸಿದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತಲ್ಲವೇ ? ಗಣೇಶೋತ್ಸವ ಮುಗಿದರೂ, ಈದ್ ಮಿಲಾದ್ ಆರಂಭಗೊಂಡರೂ ಸಂಬಂಧವಿಲ್ಲದ ಈ ದ್ವಾರಗಳನ್ನು ಪೊಲೀಸರೇಕೆ ತೆರವುಗೊಳಿಸಲಿಲ್ಲ ? ಇವೆರಡೇ ದ್ವಾರಗಳಲ್ಲ, ಸಾವರ್ಕರ್ ಸಾಮ್ರಾಜ್ಯ ಸೇರಿದಂತೆ ಹತ್ತಾರು ಬ್ಯಾನರ್ ಗಳನ್ನು ಪೇಟೆಯಾದ್ಯಂತ ಹಾಕಲಾಗಿತ್ತು.

ಗಲಭೆ ಆರಂಭಗೊಂಡ ರಾಗಿಗುಡ್ಡ ಸೌಹಾರ್ದತೆಯ ಊರು. ಇಲ್ಲಿ ಗಣೇಶೋತ್ಸವ ಸೇರಿದಂತೆ ಎಲ್ಲಾ ಹಬ್ಬಗಳಲ್ಲೂ ಸೌಹಾರ್ದತೆ ಇರುತ್ತದೆ. ಆದರೆ ಮಿಲಾದ್ ಗೆ ಬಂಟಿಂಗ್ಸ್ ಹಾಕುವಾಗ ಮಹಿಳೆಯೊಬ್ಬರು ಉದ್ದೇಶಪೂರ್ವಕವಾಗಿ ತಗಾದೆ ತೆಗೆದ ಘಟನೆಯಿಂದ ಘರ್ಷಣೆ ಆರಂಭವಾಯಿತು. ಅದಾಗಲೇ ರಸ್ತೆಗಳಲ್ಲಿ ಗಣೇಶೋತ್ಸವ ಸಂಬಂಧ ಹಾಕಲಾಗಿದ್ದ ಪ್ರಚೋದನಕಾರಿ ದ್ವಾರಗಳಿಂದ ಕೆಲ ಮುಸ್ಲಿಂ ಯುವಕರು ಪ್ರಚೋದನೆಗೆ ಒಳಗಾಗಿರಬಹುದು.

ಇದನ್ನೂ ಓದಿ ಕೇಸರಿ-ಹಸಿರು ಗುಂಪುಗಳು; ಜಾತ್ಯತೀತ ಪರಂಪರೆಯ ನಡುವೆ ಸೀಳು ಮೂಡಿಸುವ ಸಮಾನಾಂತರ ಹಳಿಗಳು

ಗಣೇಶೋತ್ಸವದ ಮೆರವಣಿಗೆಗೆ ಸಂಬಂಧವೇ ಇಲ್ಲದ ಹೆಸರು, ಫೋಟೋಗಳ ಬ್ಯಾನರ್, ದ್ವಾರಗಳನ್ನು ಉದ್ದೇಶ ಪೂರ್ವಕವಾಗಿ ಸಂಘಟಿತವಾಗಿ ಹಾಕಲಾಗಿತ್ತು. ಸಂಘಟಿತ ಕೋಮುವಾದಕ್ಕೆ ಬರುವ ಕಿಡಿಗೇಡಿ ಪ್ರತಿಕ್ರಿಯೆಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ತಪ್ಪಾಗುತ್ತದೆ. ಔರಂಗಜೇಬ್ ಸರಿಯೋ ತಪ್ಪೋ ಎಂಬ ಪ್ರಶ್ನೆಗೆ ಉತ್ತರ ಇದಲ್ಲ. ಆದರೆ, ಕೋಮುಗಲಭೆಗೆ ಮತ್ತು ಪ್ರತಿಕ್ರಿಯೆಗೆ ಕಾರಣವಾದ ಪ್ರಚೋದನೆಯ ಅಂಶಗಳನ್ನು ಹುಡುಕಿ ಬಯಲು ಮಾಡುವುದು ಈಗಿನ ಅಗತ್ಯ.

ಸೂರಿಂಜೆ 1
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

7 COMMENTS

  1. ಇಂತಹ ವಸ್ತುನಿಷ್ಠ ಲೇಖನಗಳು ಮೂಡಿಬರಬೇಕು. ಅದರಲ್ಲೂ ಪತ್ರಕರ್ತರು ಮತ್ತು ಸುದ್ದಿ ವಾಹಿನಿಗಳು ಯಾವುದೇ ದುರುದ್ದೇಶವಿಲ್ಲದ ಇಂತಹ ಲೇಖನಗಳನ್ನು ಪ್ರಕಟಿಸುವುದರ ಮುಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು.

  2. ಗಣೇಶನ ಹಬ್ಬದ ಸಂದರ್ಭದಲ್ಲಿ ಗಣೇಶನ ಜೊತೆ ಅವರ ತಂದೆಯವರಾದ ಶಿವನನ್ನು ಪ್ರದರ್ಶಿಸುವುದು ಸರ್ವೇ ಸಾಮಾನ್ಯ.ಆದರೆ ಶಾಂತಿಯ ಸಂಖೇತವಾದ ಈದ್ ಮಿಲದ್ ಸಂದರ್ಭದಲ್ಲಿ ಟಿಪ್ಪು ಸುಲ್ತಾನನು ಹಿಂದೂಗಳ ಎದೆಯ ಮೇಲೆ ಕಾಲಿಟ್ಟು ನಿಂತಿರುವುದು, ಅಖಂಡ ಭಾರತ ದೇಶದ ನಕ್ಷೆಯನ್ನು ವಿರೂಪಗೊಳಿಸಿ,ಹಸಿರು ಬಣ್ಣವನ್ನು ತುಂಬಿ ಸಾವಿರಾರು ಹಿಂದೂಗಳನ್ನು ಮಾರಣ ಹೋಮ ಮಾಡಿದ ಔರಂಗಜೇಬನನ್ನು ವೈಭವೀಕರಿಸುವುದು, ತಲವಾರು, ಚಾಕು ಮತ್ತು ಕತ್ತಿಗಳನ್ನು ಪ್ರದರ್ಶಿಸಿ ಹಿಂದೂಗಳನ್ನು ಪ್ರಚೋದಿಸುವುದು ಕಾನೂನು ಬಾಹಿರವಾಗಿದೆ.ಇದರಲ್ಲಿ ತಾಲಿಭಾನಿ ,ಜಿಹಾದಿ ಮನಸ್ಥಿತಿ ಹೊಂದಿರುವ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ಸ್ ಸರ್ಕಾರ ಹಿಂದೂಗಳಿಗೆ ರಕ್ಷಣೆ ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.ಜನರನ್ನು ರಕ್ಷಣೆ ಮಾಡಬೇಕಾದ ಜಿಲ್ಲಾ ಪೊಲೀಸ್ ಅದಿಕಾರಿಗಳು ಅಸಾಹಯಕರಾಗಿ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲು ಓಡಿ ಹೋಗುತ್ತಿರುವ ದೃಶ್ಯ ನಿಜಕ್ಕು ಈ ಸರ್ಕಾರದ ದೌರ್ಬಲ್ಯತೆಯನ್ನು ಎತ್ತಿ ತೋರಿಸುತ್ತದೆ.ಫ್ರೀಬೀಸ್ ಗಾಗಿ ಕಾಂಗ್ರೆಸ್ಸ್ ಗೆ ವೋಟು ಹಾಕಿದ ಹಿಂದೂಗಳು ಈಗ ಪಶ್ಚ್ಯಾತಾಪ ಪಡುವಂತಾಗಿದೆ.

  3. ಅಕಂಡ ಭರತ ಚಿತ್ರದಲಿ ಔರಂಗಜೇಬನೊಂದಿಗೆ ಪಾಕಿಸ್ತಾನವನು ಸೇರಿಸಿ ಹಸಿರು ಬಂದಿಂದ ಭೀಮುಸಿರುವುದು ಎಷ್ಟು ಸರಿ,, ಪರವಿರೋದ ಅಲ್ಲ ಸಮಾಜದ ನೇಮದಿ ಹಳ್ಳು ಮಾಡಬಾರದು ಅದು ಯಾರೇ ಎರಲಿ, ನಮಗೇಲ ಒಂದೆ ಭಾರತ

  4. Article baredava Soorinje emba Muslim Bahulyavulla pradeshadava… Samanyavaagiye bhayada vaathavaranavirutthade… Matthu innu kelavaru eethanige thumba pressure kooda haakirabahudu…

  5. Opposition may come from anyone, police have painted hindu soldier on cutout.
    But point to be taken from research is that Dance, music , DJ , crackers, lightings,weapons were used including “muslim rashtra”. That too in front of masjids. They should not object when others do this.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X