ಸೌಜನ್ಯ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸಿದ ಮಹಾವೀರ ಜೈನ್‌ ಯಾರು ಗೊತ್ತೇ?

Date:

Advertisements
ಸೌಜನ್ಯ ಪ್ರಕರಣದ ಮರು ತನಿಖೆಗೆ ರಾಜ್ಯದೆಲ್ಲೆಡೆ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಧರ್ಮಸ್ಥಳದ ಪರವಾಗಿ ಪ್ರತಿ ಹೋರಾಟ ಶುರುವಾಗಿದೆ. ಆದರೆ ಭಕ್ತರ ಮಿತಿ ಮೀರಿದ ಗೂಂಡಾ ವರ್ತನೆ ಸೌಜನ್ಯ ಕುಟುಂಬವನ್ನು ಜೀವ ಭಯಕ್ಕೆ ದೂಡಿದೆ. ಮಹಾವೀರ ಜೈನ್‌ ಎಂಬ ವ್ಯಕ್ತಿ ಸೌಜನ್ಯ ತಾಯಿ ಮತ್ತು ಸಹೋದರನ ಮೇಲೆ ಹಲ್ಲೆಗೆ ಯತ್ನಿಸಿ ಸುದ್ದಿಯಾಗಿದ್ದಾನೆ. ಈತ ಹೆಗ್ಗಡೆ ಕುಟುಂಬದ ಆಪ್ತ, ಸಕಲ ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡವನು ಎಂಬುದು ಈಗ ಬಯಲಾಗಿದೆ

ಬೆಳ್ತಂಗಡಿಯ ಉಜಿರೆಯಲ್ಲಿ ಆಗಸ್ಟ್‌ 4ರಂದು ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕುಟುಂಬದ ಪರವಾಗಿ ಬೃಹತ್‌ ಪ್ರತಿಭಟನಾ ಸಮಾವೇಶ ನಡೆಯಿತು. ವೇದಿಕೆಯ ಮೇಲಿದ್ದ ಬಿಜೆಪಿ-ಕಾಂಗ್ರೆಸ್‌ನ ನಾಯಕರು ಸೇರಿದಂತೆ ಹಲವರು ಒಂದು ಸಾಲಿನಲ್ಲಿ ಸೌಜನ್ಯ ಪ್ರಕರಣದ ಮರುತನಿಖೆಗೆ ಒತ್ತಾಯಿಸುತ್ತಾ, ಸೌಜನ್ಯ ಕುಟುಂಬದ ಪರವಾಗಿ ಹೋರಾಟ ಮಾಡುತ್ತಿರುವವರು ನಕಲಿ ಹೋರಾಟಗಾರರು, ಹಣದ ದಂಧೆ ಮಾಡುತ್ತಿದ್ದಾರೆ, ಧರ್ಮಸ್ಥಳದ ಧರ್ಮಾಧಿಕಾರಿಯವರ ಹೆಸರಿಗೆ ಕಳಂಕ ತರುತ್ತಿದ್ಧಾರೆ, ಧರ್ಮಸ್ಥಳದ ಪಾವಿತ್ರ್ಯ ಹಾಳು ಮಾಡುತ್ತಿದ್ಧಾರೆ, ಅವರ ಎದೆ ಬಗೆಯುತ್ತೇವೆ… ಎಂದು ಧಮ್ಕಿ ಹಾಕುವ ಶೈಲಿಯಲ್ಲಿ ಅಬ್ಬರಿಸಿ ಭಾಷಣ ಮಾಡಿದ್ದಾರೆ.

ನಮ್ಮ ಮಗಳ ಪರವಾಗಿ ನಡೆಯುತ್ತಿರುವ ಸಭೆಗೆ ನನಗೂ ವೇದಿಕೆಗೆ ಹೋಗಿ ನಾಲ್ಕು ಮಾತನಾಡಲು ಅವಕಾಶ ಬೇಕು ಎಂದು ವೇದಿಕೆಯ ಬಳಿ ಹೋದ ಸೌಜನ್ಯಳ ತಾಯಿಯ ಮೇಲೆ ಒಬ್ಬ ಗೂಂಡಾ ಹಲ್ಲೆಗೆ ಯತ್ನಸಿದ್ದು ಸಮಾವೇಶದ ಪರವಾಗಿ ಲೈವ್‌ ವರದಿ ಮಾಡುತ್ತಿದ್ದ ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ನೇರಪ್ರಸಾರವಾಯಿತು. ಆ ವ್ಯಕ್ತಿಯನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದಂತೆ ವಾರದ ಹಿಂದೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಧರಣಿಯ ಸ್ಥಳದಲ್ಲೂ ಇದೇ ವ್ಯಕ್ತಿ ಸೌಜನ್ಯ ಪರ ಮಾತನಾಡಿದ್ದ ಯುಟ್ಯೂಬರ್‌ ಜಗದೀಶ್‌ ಎಂಬವರ ಮೇಲೂ ಹಲ್ಲೆಗೆ ಯತ್ನಿಸಿದ್ದ ಎಂಬ ಅಂಶ ಈಗ ಚರ್ಚೆಗೆ ಗ್ರಾಸವಾಗಿದೆ.

ಹಾಗಿದ್ದರೆ ಈ ವ್ಯಕ್ತಿಗೆ ಹೀಗೆ ಸೌಜನ್ಯ ಕುಟುಂಬದವರನ್ನು ಅವರು ಹೋದ ಊರುಗಳೆಲ್ಲ ಹಿಂಬಾಲಿಸುತ್ತಾ ಗೂಢಚರ್ಯೆ ಕೆಲಸ ಮಾಡಲು, ಆ ಕುಟುಂಬವನ್ನು ಬೆದರಿಸಲು ಸುಪಾರಿ ಕೊಟ್ವವರು ಯಾರು? ಅಷ್ಟಕ್ಕೂ ಯಾರೀತ ಎಂದು ನೋಡಿದಾಗ ಬಯಲಾದದ್ದು ಈ ವ್ಯಕ್ತಿಯ ಹೆಸರು ಮಹಾವೀರ್‌ ಜೈನ್‌. ಈತ ವೀರೇಂದ್ರ ಹೆಗ್ಗಡೆಯವರ ಬೆಂಗಳೂರಿನಲ್ಲಿರುವ ಸಹೋದರ ಸುರೇಂದ್ರ ಹೆಗ್ಗೆಡೆಯವರ ಆಪ್ತ ಕಾರ್ಯದರ್ಶಿ ಎಂಬ ವಿಷಯ ಬಯಲಾಗಿದೆ. ಈತನನ್ನು ಕಳುಹಿಸುತ್ತಿರುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆದರೆ ಅಷ್ಟೇ ಆಗಿದ್ದರೆ ಅದು ಸಹಜ ಎಂದು ಸುಮ್ಮನಾಗಬಹುದು. ಆದರೆ ಹಾಗೆ ಹಲ್ಲುಕಚ್ಚಿ ಮಹಿಳೆಯ ಮೇಲೆರಗಲು ಬಂದು ಜಗತ್ತಿನ ಮುಂದೆ ಧರ್ಮಸ್ಥಳದವರ ಗೂಂಡಾಗಿರಿಗೆ ಸಾಕ್ಷಿ ಕೊಟ್ಟ ಈ ವ್ಯಕ್ತಿ ಸಾಮಾನ್ಯದವನಲ್ಲ. ಆತನಿಗೆ ರಾಜಕೀಯ ವ್ಯಕ್ತಿಗಳ ಬೆಂಬಲವೂ ಇದೆ. ಬಿಜೆಪಿಯ ಪ್ರಮುಖ ನಾಯಕರ ಆಪ್ತ ಕೂಡಾ. ದಿವಂಗತ ಕೇಂದ್ರ ಸಚಿವ ಅನಂತಕುಮಾರ್‌, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌, ಶಾಸಕ ಅಶ್ವತ್ಥ ನಾರಾಯಣ ಹೀಗೆ ಘಟಾನುಘಟಿ ನಾಯಕರ ಜೊತೆಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

Advertisements
ಹೆಗ್ಗಡೆ
ಸುರೇಂದ್ರ ಹೆಗ್ಗಡೆ ಜೊತೆ ಮಹಾವೀರ ಜೈನ್‌

ಧರ್ಮಸ್ಥಳದ ಸೌಜನ್ಯಳ ಅತ್ಯಾಚಾರ/ಕೊಲೆ ಪ್ರಕರಣದ ಆರೋಪಿ ಸಂತೋಷ್‌ ರಾವ್‌ ನಿರಪರಾಧಿ ಎಂದು ಸಿಬಿಐ ಕೋರ್ಟ್‌ ತೀರ್ಪು ನೀಡಿದ ನಂತರ ಎರಡನೇ ಹಂತದ ಹೋರಾಟಕ್ಕೆ ಕುಟುಂಬದವರು ದುಮುಕಿದ್ದಾರೆ. ಈ ಬಾರಿ ಅವರ ಜೊತೆ ಇಡೀ ಕರ್ನಾಟಕವೇ ನಿಂತಿದೆ. ಮುಖ್ಯವಾಗಿ ಮೈಸೂರಿನ ಒಡನಾಡಿ ಸಂಸ್ಥೆ ಈ ಪ್ರಕರಣವನ್ನು ವಿಶೇಷ ಪ್ರಕರಣವಾಗಿ ಕೈಗೆತ್ತಿಕೊಂಡಿದೆ. ಮುಖ್ಯವಾಹಿನಿಯ ಪತ್ರಿಕೆಗಳು, ಎಲೆಕ್ಟ್ರಾನಿಕ್‌ ಮಾಧ್ಯಮಗಳು ಮೌನಕ್ಕೆ ಶರಣಾಗಿವೆ. ಆದರೆ ಈ ಬಾರಿ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ, ಯುಟ್ಯೂಬ್‌ಗಳಲ್ಲಿ ಸೌಜನ್ಯ ಮತ್ತು ಸಂತೋಷ್‌ ರಾವ್‌ ಕುಟುಂಬದ ಪರವಾಗಿ ಸಾಕಷ್ಟು ವರದಿಗಳು ಬಂದು ಜನಮಾನಸವನ್ನು ತಲುಪಿದ್ದರ ಪರಿಣಾಮವಾಗಿ ಸೌಜನ್ಯ ಪ್ರಕರಣದ ಪರ ಹೋರಾಟ, ಪ್ರತಿಭಟನೆ ಎಂದರೆ ಸಾಕು ಸಾವಿರಾರು ಸಂಖ್ಯೆಯಲ್ಲಿ ಜನ ಸ್ವಯಂಪ್ರೇರಣೆಯಿಂದ ಸೇರುತ್ತಿದ್ದಾರೆ. ಸೌಜನ್ಯ ಕುಟುಂಬದ ಪರವಾಗಿ ಸರ್ಕಾರದ ಮೇಲೆ ಮರುತನಿಖೆಗೆ ಒತ್ತಡ ಹೇರುತ್ತಿದ್ದಾರೆ. ಧರ್ಮಸ್ಥಳದ ಸುತ್ತಮುತ್ತ ನಡೆದ ಹಲವು ಅಸಹಜ ಸಾವುಗಳು, ಭೂ ಮಾಫಿಯಾದಿಂದಾದ ಕೊಲೆ ಪ್ರಕರಣಗಳು ದೂಳು ಕೊಡವಿ ಜನರ ಮುಂದೆ ಬರಲು ಶುರುವಾಗಿತ್ತು. ಮೂರು ದಶಕದ ಹಿಂದಿನ ಅದೇ ಶ್ರೀ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿ ಪದ್ಮಲತಾಳ ಅತ್ಯಾಚಾರ/ಕೊಲೆ ಪ್ರಕರಣ, ವೇದವಲ್ಲಿ ಟೀಚರ್‌ ಅವರನ್ನು ಮನೆಯೊಳಗೇ ಪೆಟ್ರೋಲ್‌ ಹಾಕಿ ಸುಟ್ಟು ಹಾಕಿದ ಪ್ರಕರಣಗಳ ಬಗ್ಗೆ ಚರ್ಚೆಗಳು ಶುರುವಾಗಿದ್ದವು.

ಇದನ್ನು ಓದಿ ಸೌಜನ್ಯ ಪ್ರಕರಣ | ಹೋರಾಟಗಾರರ ವಿರುದ್ಧ ಅಪಪ್ರಚಾರಕ್ಕೆಂದೇ ಸಕ್ರಿಯವಾಗಿವೆಯೇ ಫೇಕ್‌ ಅಕೌಂಟ್‌ಗಳು?

ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಧರ್ಮಸ್ಥಳದ ಪರವಾಗಿ ಪ್ರತಿ ಹೋರಾಟ ಶುರುವಾಗಿದೆ. ಅಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತು. ಆದರೆ, ಮಿತಿ ಮೀರಿದ ಗೂಂಡಾ ವರ್ತನೆ ಸೌಜನ್ಯ ಕುಟುಂಬವನ್ನು ಜೀವ ಭಯಕ್ಕೆ ದೂಡಿದೆ. ಇಷ್ಟು ದಿನ ಭಯಪಡದೇ ಯಾವುದೇ ಊರಿನಲ್ಲಿ ಹೋರಾಟ ನಡೆದರೂ ಸೌಜನ್ಯ ತಾಯಿ ಕುಸುಮಾವತಿ, ತಂಗಿಯರಾದ ಸೌಹಾರ್ದ, ಸೌಂದರ್ಯ, ಮಾವ ವಿಠಲ, ಮಹೇಶ್‌ ಶೆಟ್ಟಿ ತಿಮರೋಡಿ ಸ್ವಂತ ವಾಹನದಲ್ಲೇ ಪ್ರತಿಭಟನೆಗೆ ಬಂದು ಹೋಗುತ್ತಿದ್ದರು. ಆದರೆ ಇತ್ತೀಚೆಗೆ ನಡೆದ ಕೆಲವು ಘಟನೆಗಳು ಸೌಜನ್ಯ ಪರ ಹೋರಾಟವನ್ನು ಹತ್ತಿಕ್ಕುವ ದೊಡ್ಡವರ ಷಡ್ಯಂತ್ರದ ನಡೆಯುತ್ತಿದೆ ಎಂಬುದು ಗೊತ್ತಾಗುತ್ತದೆ.

ಇದನ್ನು ಓದಿ ಧರ್ಮಸ್ಥಳ | ಸೌಜನ್ಯ ಕುಟುಂಬ, ಹೋರಾಟಗಾರರ ವಿರುದ್ಧ ಅಪಪ್ರಚಾರಕ್ಕಿಳಿದ ಭಕ್ತಪಡೆ

ಉಜಿರೆಯಲ್ಲಿ ನಡೆದ ಹಲ್ಲೆ ಯತ್ನದ ಬಗ್ಗೆ ಈ ದಿನ.ಕಾಮ್‌ ಜೊತೆಗೆ ಮಾತನಾಡಿದ ಸೌಜನ್ಯ ತಾಯಿ ಕುಸುಮಾವತಿ, “ನನ್ನ ಮಗಳ ಹೆಸರಿನಲ್ಲಿ ಸಮಾವೇಶ ನಡೆಯುತ್ತಿದೆ. ಅವಳ ಸಾವಿಗೆ ನ್ಯಾಯಕೊಡಿಸಲು ಅಷ್ಟೊಂದು ಜನ ಸೇರಿದ ಮೇಲೆ ಅವಳ ತಾಯಿಯಾಗಿ ನಾನು ನ್ಯಾಯ ಕೇಳಲು ಹೋಗಿದ್ದೆ. ಆದರೆ ನನ್ನನ್ನು ವೇದಿಕೆಗೆ ಹತ್ತಲು ಬಿಡಲಿಲ್ಲ. ಗೂಂಡಾಗಳು ನಮ್ಮನ್ನು ಸುತ್ತುವರಿದು ನಮ್ಮ ಬಗ್ಗೆಯೇ ಕೆಟ್ಟದಾಗಿ ದಿಕ್ಕಾರ ಕೂಗಲು ಶುರು ಮಾಡಿದ್ದಾರೆ. ಮಹಾವೀರ ಎಂಬ ವ್ಯಕ್ತಿ ಹಲ್ಲು ಕಚ್ಚುತ್ತಾ ನನ್ನ ಮಗನ ಕಾಲರ್‌ ಹಿಡಿಯಲು ಬಂದ. ಪೊಲೀಸರು ನಮ್ಮ ಸುತ್ತಲೂ ಇಲ್ಲದೇ ಇರುತ್ತಿದ್ದರೆ ನಮ್ಮನ್ನು ಏನು ಬೇಕಿದ್ದರೂ ಮಾಡುತ್ತಿದ್ದರು. ಪೊಲೀಸರು ನಮ್ಮನ್ನು ವೇದಿಕೆ ಹತ್ತಲು ತಡೆದಿಲ್ಲ. ಅದೆಲ್ಲ ಮಾಧ್ಯಮಗಳ ಸುಳ್ಳು ಸುದ್ದಿ. ಪೊಲೀಸರು ನಮಗೆ ರಕ್ಷಣೆ ಕೊಟ್ಟು ಏನೂ ಆಗದಂತೆ ನೋಡಿಕೊಂಡಿದ್ದಾರೆ. ಮುಂದೆಯೂ ಎಲ್ಲೇ ಸೌಜನ್ಯಳ ಹೆಸರಿನಲ್ಲಿ ಸಭೆ ನಡೆದರೂ ನಾನು ಹೋಗಿಯೇ ಹೋಗುತ್ತೇನೆ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X