ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮೂಲಭೂತ ಹಕ್ಕು; ಲಿಂಗತ್ವ ಅಲ್ಪಸಂಖ್ಯಾತ ಮಗುವಿಗೆ ಇಲ್ಲವೇ?

Date:

Advertisements

ಅತ್ಯಂತ ಅಂಚಿಗೆ ತಳ್ಳಲ್ಪಟ್ಟ ಮಗು ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಮಗು (ಟ್ರಾನ್ಸ್‌ಜೆಂಡರ್). ಹಾಗಾದರೆ ಶಿಕ್ಷಣದ ಮೂಲಭೂತ ಹಕ್ಕು ಈ ಮಗುವಿಗೆ ಇಲ್ಲವೇ? ಈ ಮಗುವನ್ನು ಸಾಕ್ಷರಳನ್ನಾಗಿಸುವುದು ಸಮಾಜ ಮತ್ತು ಸರ್ಕಾರಗಳ ಹೊಣೆ ಅಲ್ಲವೇ?

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಥವಾ ಶಿಕ್ಷಣ ಹಕ್ಕು ಕಾಯ್ದೆ ( RTE ) ಆಗಸ್ಟ್ 4, 2009 ರಂದು ಜಾರಿಗೆ ಬಂದಿದ್ದು, ಇದು ಭಾರತೀಯ ಸಂವಿಧಾನದ 21A ವಿಧಿಯ ಅಡಿಯಲ್ಲಿ ಭಾರತದಲ್ಲಿ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಹತ್ವದ ವಿಧಾನಗಳನ್ನು ವಿವರಿಸುತ್ತದೆ. ಏಪ್ರಿಲ್ 1, 2010ರಂದು ಕಾಯ್ದೆ ಜಾರಿಗೆ ಬಂದಾಗ ಭಾರತವು ಶಿಕ್ಷಣವನ್ನು ಪ್ರತಿ ಮಗುವಿನ ಮೂಲಭೂತ ಹಕ್ಕನ್ನಾಗಿ ಮಾಡಿದ 135 ದೇಶಗಳಲ್ಲಿ ಒಂದಾಯಿತು.

6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳು – ಅಂಗವಿಕಲ ಮಕ್ಕಳು, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ ಮಕ್ಕಳು, ಹಿಂದುಳಿದ ಗುಂಪುಗಳಿಗೆ ಸೇರಿದವರು ಮತ್ತು ಎಲ್ಲಾ ಆದಾಯ ಗುಂಪುಗಳಿಗೆ ಸೇರಿದ ಮಕ್ಕಳು 1 ರಿಂದ 8 ನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕನ್ನು ಹೊಂದಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಮಕ್ಕಳ ಪಟ್ಟಿಯಲ್ಲಿ “ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಮಕ್ಕಳು” ಎಂಬ ಪದವೂ ಸೇರಬೇಕಾಗಿದೆ.

ಸರ್ವ ಶಿಕ್ಷಣ ಅಭಿಯಾನ ಮಕ್ಕಳ ಶಿಕ್ಷಣಕ್ಕೆ ಒಂದು ವರವಾಗಿದೆ. ಅದರಲ್ಲೂ ಇದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದು ಸ್ವಾಗತಾರ್ಹ. ಏಕೆಂದರೆ ಗಂಡು ಮಕ್ಕಳಿಗೆ ಹೋಲಿಸಿದಾಗ ಹೆಣ್ಣು ಮಗುವಿಗೆ ಶಿಕ್ಷಣವನ್ನು ಕೊಡಿಸುವುದರಲ್ಲಿ ಪಾಲಕ ಪೋಷಕರು ನಿರಾಸಕ್ತಿಯನ್ನು ತೋರಿಸುತ್ತಿದ್ದಾರೆ. ಹಾಗಾದರೆ ಹೆಣ್ಣು ಮಗುವಿಗೆ ಹೋಲಿಸಿದಾಗಲೂ ಪಾಲಕ ಪೋಷಕರಿಂದ ಅತಿ ಹೆಚ್ಚು ಅಸಡ್ಡೆಗೆ ಒಳಗಾಗುತ್ತಿರುವ ಮಗು ಯಾವುದು? ಹೆಚ್ಚು ಅಸಮಾನತೆಗೆ ಒಳಗಾಗುತ್ತಿರುವ ಮಗು ಯಾವುದು? ಶೋಷಣೆ, ಹಿಂಸೆಗಳಿಗೆ ಒಳಗಾಗುತ್ತಿರುವ ಮಗು ಯಾವುದು? ಅತ್ಯಂತ ಅಂಚಿಗೆ ತಳ್ಳಲ್ಪಟ್ಟ ಮಗು ಯಾವುದು? ಆ ಮಗು ಯಾರೂ ಅಲ್ಲ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಮಗು (ಟ್ರಾನ್ಸ್‌ಜೆಂಡರ್). ಹಾಗಾದರೆ ಶಿಕ್ಷಣದ ಮೂಲಭೂತ ಹಕ್ಕು ಈ ಮಗುವಿಗೆ ಇಲ್ಲವೇ? ಈ ಮಗುವನ್ನು ಸಾಕ್ಷರಳನ್ನಾಗಿಸುವುದು ನಮ್ಮ ಮತ್ತು ಸರ್ಕಾರಗಳ ಹೊಣೆ ಅಲ್ಲವೇ?

Advertisements

ಖಂಡಿತವಾಗಿಯೂ ಇದು ತಂದೆ -ತಾಯಿ‌, ಸರ್ಕಾರ, ಸಮಾಜದ ಹೊಣೆಗಾರಿಕೆ ಆಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುವ ಹಕ್ಕು ಈ ಮಗುವಿಗೂ ಇದೆ. ಈವರೆಗೆ ಇಂಥ ಮಕ್ಕಳ ದಾಖಲಾತಿ ಮತ್ತು ಶಾಲೆ ಬಿಟ್ಟಿರುವ (ಡ್ರಾಪ್ ಔಟ್ ) ಕುರಿತಾದ ಅಂಕಿ ಅಂಶಗಳು ಸರಕಾರದ ಬಳಿ ಇವೆಯೇ? ಇವರು ಶಾಲೆಯನ್ನು ಬಿಡಲು ಕಾರಣಗಳನ್ನು ಶಿಕ್ಷಣ ಇಲಾಖೆ ತಿಳಿಸಬಲ್ಲದೇ? ಇವರು ಶಿಕ್ಷಣವನ್ನು ಪಡೆಯುವಲ್ಲಿ ಆಗುತ್ತಿರುವ ಶೋಷಣೆ ಹಿಂಸೆ ತಾರತಮ್ಯಗಳ ಬಗ್ಗೆ ಮಾಹಿತಿ ಕೊಡಬಲ್ಲರೇ? ದಾಖಲಾತಿಗಳಿಗಾಗಿ (ಟಿ ಸಿ, ಅಂಕಪಟ್ಟಿ, ಉತ್ತೀರ್ಣ ಪ್ರಮಾಣ ಪತ್ರ, ಹೆಸರು ಬದಲಾವಣೆ, ಲಿಂಗ-ಲಿಂಗತ್ವ ಬದಲಾವಣೆ, ಅಧ್ಯಯನ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಇನ್ನಿತರೆ) ಇವರು ಎದುರಿಸುತ್ತಿರುವ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿವೆಯೇ? ಸುಪ್ರೀಂ ಕೋರ್ಟಿನ ತೀರ್ಪುಗಳಿದ್ದರೂ, ಸರ್ಕಾರದ ಆದೇಶಗಳಿದ್ದರೂ ಅವೆಲ್ಲವೂ ಕಾಗದ ಪತ್ರಗಳಿಗೆ ಅಂಟಿದ ಮಸಿಯಾಗಿವೆಯೇ ಹೊರತು ಅನುಷ್ಠಾನಗೊಳ್ಳುತ್ತಿಲ್ಲ ಎಂಬುವುದು ತಿಳಿದಿದೆಯೇ? ಸರ್ಕಾರವು ಕೊಡ ಮಾಡಿರುವ 1% ಉದ್ಯೋಗ ಮೀಸಲಾತಿಯನ್ನು ಬಳಸಿಕೊಳ್ಳುವಲ್ಲಿರುವ ಅಡೆತಡೆಗಳ ಸಂಖ್ಯೆ ನಿಮಗೆ ಗೊತ್ತೇ?

ಈ ಕುರಿತು ಶೀಘ್ರವೇ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಸಮೀಕ್ಷೆಯೊಂದನ್ನು ಮಾಡಿ ತಾವು ತಿಳಿದುಕೊಂಡು ಮತ್ತು ಸಮಾಜಕ್ಕೆ ತಿಳಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವು ನಮ್ಮ ಸಮುದಾಯದ ಮಗುವಿನ ಜನ್ಮಸಿದ್ಧ ಹಕ್ಕು. ಈ ಹಕ್ಕು ನಮ್ಮ ಸಮುದಾಯದ ಮಗುವಿಗೆ ಸಿಗಲೇಬೇಕು. ಇದಕ್ಕಾಗಿ ಈ ಕೆಳಗಿನ ಪರಿಹಾರೋಪಾಯಗಳು ಸಹಾಯಕವಾಗಲಿವೆ.

ಪರಿಹಾರಗಳು :

  • ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಸಹಭಾಗಿತ್ವ ಕಡ್ಡಾಯ
  • ಎಲ್ಲಾ ಶಾಲಾ ಆಡಳಿತ ಮಂಡಳಿಯಲ್ಲಿ ಒಬ್ಬರಾದರೂ ನಮ್ಮವರಿರಬೇಕು.
  • ಎಲ್ಲಾ ರಾಷ್ಟೀಯ ಹಬ್ಬ ಆಚರಣೆಗೂ ನಮಗೆ ಆಹ್ವಾನವಿರಬೇಕು.
  • ಶಾಲೆಯ ಸಭೆ ಸಮಾರಂಭಗಳು ನಮ್ಮನ್ನು ಒಳಗೊಳ್ಳಬೇಕು.
  • ಪ್ರತಿ ಶಾಲೆಯಲ್ಲಿ ಕನಿಷ್ಠ ಒಬ್ಬ ಶಿಕ್ಷಕರಾದರೂ ನಮ್ಮವರಿರಬೇಕು.
  • ನಮ್ಮ ಪರಿಚಯದ, ಅರಿವು ಮೂಡಿಸುವ ಪಠ್ಯಕ್ರಮ ರಚನೆ ಆಗಬೇಕು.
  • ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳಲ್ಲೂ ನಾವು ಇರಬೇಕು.
  • ಶೈಕ್ಷಣಿಕ ನೀತಿ ರೂಪಿಸುವಲ್ಲಿ ನಮ್ಮನ್ನು ಒಳಗೊಳ್ಳಬೇಕು.
  • ಪಠ್ಯಕ್ರಮ ರಚನಾ ಸಮಿತಿಯಲ್ಲಿ ನಮ್ಮವರಿರಬೇಕು.
  • ಎಲ್ಲಾ ತರಗತಿಯ ಮಕ್ಕಳ ಪಠ್ಯಕ್ರಮದಲ್ಲಿ ನಮ್ಮ ಕುರಿತಾದ ಪದ್ಯಗಳು ಪಾಠಗಳು ಇರಬೇಕು.
  • ಶಿಕ್ಷಕ ವರ್ಗವು ನಮ್ಮ ಕುರಿತಾಗಿ ಪಾಠಗಳನ್ನು ಬೋಧಿಸಲು ನಿರಾಕರಿಸಬಾರದು.
  • ದಾಖಲಾತಿಯಲ್ಲಿ ಹೆಣ್ಣು ಗಂಡು ಎಂದು ದಾಖಲಿಸಿದರೂ ಮಗು 18 ವರುಷಗಳ ನಂತರ ತನ್ನನ್ನು ತಾನು ಏನೆಂದು ಗುರುತಿಸಿಕೊಳ್ಳುತ್ತದೆಯೋ ಅದೇ ಗುರುತಿನಲ್ಲಿ ಆ ಮಗು ಪ್ರಮಾಣ ಪತ್ರವನ್ನು ಪಡೆಯಲು ಅನುಕೂಲವಾಗುವಂತೆ, ದಾಖಲಾತಿ ಸಮಯದಲ್ಲಿ ಮೂರನೇ ಕಾಲಂ ಇಡಬೇಕು.
  • ಮಗುವಿನ ಮೇಲೆ ಆಗುವಂತಹ ಹಿಂಸೆ, ದೌರ್ಜನ್ಯ, ತಾರತಮ್ಯ, ಅವಮಾನ, ತಿರಸ್ಕಾರಗಳ ಕುರಿತಾಗಿ ವಿಶೇಷ ಕಾಳಜಿಯನ್ನು ವಹಿಸಬೇಕು.

    ಇವು ಕನಿಷ್ಠ ಪರಿಹಾರೋಪಾಯಗಳಾಗಿದ್ದು ಸರ್ಕಾರ ಮತ್ತು ಇಲಾಖೆಗಳು ಈ ಕುರಿತು ಸಮೀಕ್ಷೆ ಮತ್ತು ಸಂಶೋಧನೆಗಳನ್ನು ಕೈಗೊಂಡು ಇನ್ನೂ ವಸ್ತುನಿಷ್ಠ, ನಿಖರ, ವೈಜ್ಞಾನಿಕ, ತಾರ್ಕಿಕವಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ‌

    ಇದನ್ನೂ ಓದಿ ಮದುವೆ ಕಡ್ಡಾಯ ಎಂದು ನಮ್ಮ ಸಂವಿಧಾನದ ಯಾವ ವಿಧಿಯಲ್ಲಿ ಹೇಳಲಾಗಿದೆ?
lakshman
ಲಕ್ಷ್ಮಣ್ (ಮಾಳವಿಕ )
+ posts

ಲಿಂಗತ್ವ ಅಲ್ಪಸಂಖ್ಯಾತೆ. ʼಒಂದೆಡೆ ಸಂಸ್ಥೆʼ, ರಾಯಚೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಲಕ್ಷ್ಮಣ್ (ಮಾಳವಿಕ )
ಲಕ್ಷ್ಮಣ್ (ಮಾಳವಿಕ )
ಲಿಂಗತ್ವ ಅಲ್ಪಸಂಖ್ಯಾತೆ. ʼಒಂದೆಡೆ ಸಂಸ್ಥೆʼ, ರಾಯಚೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X