ಕಂಗೆಡುತ್ತಿರುವ ಪ್ರಜಾಪ್ರಭುತ್ವ| ರಾಜಕೀಯದ ಬಲಿಪಶುಗಳಾದ ಪಠ್ಯಪುಸ್ತಕಗಳು

Date:

Advertisements
12ನೆಯ ಪಠ್ಯಪುಸ್ತಕಗಳಲ್ಲಿ ಇದ್ದ ಜನಾಂದೋಲನಗಳ ಅಧ್ಯಾಯವನ್ನು ತೆಗೆದುಹಾಕಲಾಗಿದೆ. ಗುಜರಾತಿನ ದಂಗೆಗಳ ಬಗ್ಗೆ ಇದ್ದ ಉಲ್ಲೇಖವನ್ನು  ತೆಗೆದುಹಾಕಲಾಗಿದೆ ಆದರೆ ಸಿಖ್ಖರ ಮಾರಣಹೋಮದ ಭಾಗವನ್ನು ಹಾಗೇ ಉಳಿಸಿಕೊಳ್ಳಲಾಗಿದೆ

ಇತ್ತೀಚಿಗೆ ಎನ್‍ಸಿಆರ್‌ಟಿ ಪಠ್ಯಪುಸ್ತಕಗಳಲ್ಲಿ ಆದ ಏರುಪೇರುಗಳಿಂದ ಸೃಷ್ಟಿಯಾದ ವಿವಾದವು ಒಂದು ದೊಡ್ಡ ಪ್ರಶ್ನೆಯನ್ನು ಮುಂದಿಡುತ್ತದೆ. ಭಾರತವನ್ನು ಪ್ರಜಾಪ್ರಭುತ್ವದ ಜನನಿ ಎಂದು ಸಾಬೀತುಪಡಿಸುವ ಉತ್ಸುಕತೆಯಲ್ಲಿ ಈ ಸರಕಾರ ಭಾರತವನ್ನು ಪ್ರಜಾಪ್ರಭುತ್ವದ ಕೊಲೆಯ ಹೊಸ ಮಾದರಿಯ ಜನನಿ ಎಂದು ಸಾಬಿತುಪಡಿಸುತ್ತಿದೆಯೇ? ಪಠ್ಯಪುಸ್ತಕಗಳಲ್ಲಿ ಯಾವ ರೀತಿಯಲ್ಲಿ ಯಾವ ಪ್ರಕಾರ ಹಾಗೂ ಯಾವ ನೀತಿಯಿಂದ ಕತ್ತರಿ ಹಾಕಲಾಗಿದೆ ಎಂದರೆ ಈ ಕತ್ತರಿ ಪ್ರಯೋಗವಂತು ಮೇಲೆ ಹೇಳಿದ ಅನುಮಾನವನ್ನು ಗಟ್ಟಿಗೊಳಿಸುತ್ತದೆ. ರಾಜಕೀಯ ಶಾಸ್ತ್ರದ ಪುಸ್ತಕಗಳಲ್ಲಿ ಮಾಡಲಾದ ಬದಲಾವಣೆಗಳು ಭಾರತೀಯ ಪ್ರಜಾಪ್ರಭುತ್ವದ ಕುಸಿಯುತ್ತಿರುವ ಆತ್ಮವಿಶ್ವಾಸದ ಚಿನ್ಹೆಯಾಗಿವೆ

ಇಲ್ಲಿ ನಾನು ರಾಜಕೀಯ ಶಾಸ್ತ್ರದ ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳ ಮೇಲೆ ವಿಶೇಷ ಲಕ್ಷ್ಯ ನೀಡುತ್ತಿದ್ದೇನೆ. ಇತಿಹಾಸ ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳು ಎಲ್ಲರ ಗಮನ ಸೆಳೆದಿವೆ ಹಾಗೂ ಇತಿಹಾಸಕಾರರು ವಿಸ್ತಾರವಾಗಿ ಚರ್ಚೆ ನಡೆಸಿದ್ದಾರೆ. ಎನ್‍ಸಿಆರ್‍ಟಿಯದ್ದೇ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕಗಳಲ್ಲಿ ಆದ ಬದಲಾವಣೆಗಳ ಬಗ್ಗೆ ಅಷ್ಟೊಂದು ಚರ್ಚೆ ಆಗಿಲ್ಲ. ನನಗೆ ಇದರಲ್ಲಿ ವಿಶೇಷ ಆಸಕ್ತಿ ಹೊಂದಿರಲು ಇನ್ನೊಂದು ಕಾರಣ, ಪ್ರೊ ಸುಹಾಸ್ ಪಳಶೀಕರ್ ಮತ್ತು ನನಗೆ 9,10,11 ಹಾಗೂ 12ನೆಯ ತರಗತಿಯ ರಾಜಕೀಯ ಶಾಸ್ತ್ರದ ಪುಸ್ತಕಗಳ ಮುಖ್ಯ ಸಲಹಾಕಾರರ ಹೊಣೆಗಾರಿಕೆ ನೀಡಲಾಗಿದೆ. ನಾನು ನನ್ನ ಜೀವನದ ಎರಡು ವರ್ಷಗಳನ್ನು ಭಾರತೀಯ ಪ್ರಜಾಪ್ರಭುತ್ವದಲ್ಲಿ ಮುಂಬರುವ ತಲೆಮಾರಿಗೆ ಪ್ರಜಾಪ್ರಭುತ್ವದ ಬಗ್ಗೆ ಎಂತಹ ಶೀಕ್ಷಣ ನೀಡಬೇಕು, ವಿದ್ಯಾರ್ಥಿಗಳಿಗೆ ರಾಜಕೀಯದಲ್ಲಿ ಹೇಗೆ ಆಸಕ್ತಿ ಕೆರಳಿಸಬೇಕು, ಹೇಗೆ ನಮ್ಮ ಪಠ್ಯಪುಸ್ತಕಗಳು ಆಡಳಿತದಲ್ಲಿರುವ ಪಕ್ಷದ ಅಥವಾ ಅದರ ವಿಚಾರಧಾರೆಯ ವಾಹಕವಾಗದೇ ಪ್ರಜಾಪ್ರಭುತ್ವದ ಮತ್ತು ಸಂವಿಧಾನಿಕ ಮೌಲ್ಯಗಳ ವಾಹಕಗಳಾಗಬಲ್ಲವು ಎಂಬುದರ ಬಗ್ಗೆ ಯೋಚಿಸುವುದರಲ್ಲಿಯೇ ಕಳೆದಿದ್ದೇನೆ.

ರಾಜಕೀಯ ಶಾಸ್ತ್ರದ ಬಗ್ಗೆಯಂತೂ ಈ ಪಠ್ಯ ಪುಸ್ತಕಗಳಲ್ಲಿ ರಾಜಕೀಯ ನಿಷ್ಪಕ್ಷಪಾತದ ನಿಯಮ ಪಾಲಿಸುತ್ತ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ತೊಂದರೆ ಆಗುವಂತಹ ಅನೇಕ ಸತ್ಯಗಳನ್ನು ಹೇಳಿದ್ದೇವೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. 12ನೆಯ ತರಗತಿಯ ಪಠ್ಯಪುಸ್ತಕದಲ್ಲಂತೂ ಇಡೀ ಒಂದು ಅಧ್ಯಾಯದಲ್ಲಿ ತುರ್ತು ಪರಿಸ್ಥಿತಿಯ ಬಗ್ಗೆ ನೇರವಾಗಿ ಸಂಪೂರ್ಣ ಮಾಹಿತಿ ನೀಡಲಾಗಿತ್ತು. ಮೊದಲ ಬಾರಿ ಭಾರತೀಯ ಜನಸಂಘಕ್ಕೆ ಪಠ್ಯಪುಸ್ತಕದಲ್ಲಿ ಜಾಗ ಸಿಕ್ಕಿತು, ಅದರೊಂದಿಗೆ ನಕ್ಸಲ್ ಚಳವಳ ಬಗ್ಗೆಯೂ ಪಠ್ಯಪುಸ್ತಕಗಳಲ್ಲಿ ಉಲ್ಲೇಖ ಕಾಣಿಸಿಕೊಂಡಿತು. ಗುಜರಾತಿನ ದಂಗೆಗಳಲ್ಲಿ ಆದ ಮುಸ್ಲಿಂ ವಿರೋಧಿ ಹಿಂಸೆಯ ಬಗ್ಗೆ ಉಲ್ಲೇಖವಿದ್ದರೆ, 1984ರಲ್ಲಿ ದೆಹಲಿಯಲ್ಲಿ ಸಿಖ್ಖರ ಮಾರಣಹೋಮದ ಉಲ್ಲೇಖವೂ ಇತ್ತು. ಒಂದು ಆರೋಗ್ಯವಂತ ಮತ್ತು ಆತ್ಮವಿಶ್ವಾಸದಿಂದ ಕೂಡಿದ ಪ್ರಜಾಪ್ರಭುತ್ವವು ತನ್ನ ಬೆಳಕಿನಿಂದ ಕೂಡಿದ ಮತ್ತು ಕತ್ತಲೆಯಾವರಿಸಿದ ಎರಡೂ ಅಂಶಗಳ ಬಗ್ಗೆ ಮಾತನಾಡಬಲ್ಲದು, ಆಡಳಿತದಲ್ಲಿರುವ ಶಕ್ತಿಗಳ ಮತ್ತು ವಿಚಾರಗಳನ್ನು ಹೊರತುಪಡಿಸಿ ವಿರೋಧಿ ಶಕ್ತಿಗಳ ಬಗ್ಗೆಯೂ ಮಾತನಾಡಬಲ್ಲದು ಎಂಬ ವಿಶ್ವಾಸದೊಂದಿಗೆ ಈ ಪಠ್ಯಪುಸ್ತಕಗಳನ್ನು ಬರೆಯಲಾಗಿತ್ತು. 

Advertisements

ಈ ಪಠ್ಯಪುಸ್ತಕಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಕತ್ತರಿ ಪ್ರಯೋಗದಿಂದ ಆತ್ಮವಿಶ್ವಾಸದಿಂದ ತುಂಬಿದ ಚಹರೆಯನ್ನು ತಿರುಚಲಾಗಿದೆ. ಕಳೆದ ವಾರ ಎನ್‍ಸಿಆರ್‌ಟಿಯು ಮೊದಲು ಘೋಷಿಸಿದ ಬದಲಾವಣೆಗಳನ್ನು ಹೊರತುಪಡಿಸಿ ಇನ್ನೂ ಅನೇಕ ಅಘೋಷಿತ ರೂಪದಲ್ಲಿ ಈ ಪುಸ್ತಕಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಉದಾಹರಣೆಗೆ ಮಹಾತ್ಮ ಗಾಂಧಿಯ ಹತ್ಯೆಯ ನಂತರ ಆಗಿನ ಗೃಹ ಸಚಿವ ಸರ್ದಾರ್ ಪಟೇಲರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ನಿರ್ಬಂಧ ಹೇರಿದ್ದರು ಎಂಬ ತಥ್ಯವು ಕಾಣೆಯಾಗಿದೆ. ಒಂದು ವೇಳೆ ಈ ಪುಟ್ಟ ಕಳ್ಳತನವನ್ನು ನಿರ್ಲಕ್ಷಿಸಿದರೂ, ಪಠ್ಯಪುಸ್ತಕಗಳ ಬದಲಾವಣೆಗಳ ಬಗ್ಗೆ ಒಂದು ಗಂಭೀರವಾದ ಪ್ರಶ್ನೆ ಉದ್ಭವಿಸುತ್ತದೆ; ಈ ಪಠ್ಯಪುಸ್ತಕಗಳ ಲೇಖಕರ ಅಭಿಪ್ರಾಯ ತೆಗೆದುಕೊಳ್ಳದೇ ಅವುಗಳಲ್ಲಿ ಬದಲಾವಣೆ ಮಾಡುವುದು ನ್ಯಾಯೋಚಿತವೇ? ಅಂದಹಾಗೆ ಇಂದಿಗೂ ಈ ಪಠ್ಯಪುಸ್ತಕಗಳಲ್ಲಿ ನನ್ನ ಹೆಸರು ಮುಖ್ಯ ಸಲಹಾಕಾರರು ಎಂಬ ರೂಪದಲ್ಲಿ ಪ್ರಕಟವಾಗುತ್ತಿದ್ದರೂ, ಕಳೆದ ಒಂಬತ್ತು ವರ್ಷಗಳಲ್ಲಿ ನನ್ನ ಅಥವಾ ಪಠ್ಯಪುಸ್ತಕ ಸಮಿತಿಯ ಇತರ ಸದಸ್ಯರು ಅಥವಾ ಇತರ ಸಲಹಾಕಾರರಿಂದ  ಇದರಲ್ಲಿ ಆದ ಬದಲಾವಣೆಗಳ ಬಗ್ಗೆ ಎಂದೂ ಅಭಿಪ್ರಾಯ ಪಡೆದುಕೊಂಡಿಲ್ಲ. ಯಾವ ಪುಸ್ತಕಗಳನ್ನು ಬರೆಯುವುದರಲ್ಲಿ ದೇಶದ ಹೆಚ್ಚಿನ ಅಗ್ರಗಣ್ಯ ರಾಜಕೀಯಶಾಸ್ತ್ರಜ್ಞರು ಆಳವಾಗಿ ಪರಾಮರ್ಶೆ ಮಾಡಿ, ಪ್ರತಿಯೊಂದು ಅಂಶ, ಪ್ರತಿಯೊಂದು ಕಾಗುಣಿತದ ಅನೇಕ ಬಾರಿ ಸಮೀಕ್ಷೆ ಮಾಡಿ ರಚಿಸಲಾಗಿದೆಯೋ, ಇಂತಹ ಪುಸ್ತಕಗಳನ್ನು ಒಂದೇ ಏಟಿನಲ್ಲಿ ಕೆಲವು ಅಜ್ಞಾತ ಜನರ ಸಮಿತಿಯ ಮೂಲಕ ಯಾವುದೇ ಕಾರಣ ನೀಡದೇ ಬದಲಾವಣೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಯಾವ ಸೂಚನೆ ನೀಡುತ್ತದೆ?

ಬದಲಾವಣೆಯ ಪ್ರಕ್ರಿಯೆಯನ್ನು ಹೊರತುಪಡಿಸಿ ಅದರ ಬದಲಾವಣೆಯ ವಿಷಯವನ್ನು ನೋಡಿದರೆ ಅದು ಕೂಡ ಪ್ರಜಾಪ್ರಭುತ್ವದ ಬಗ್ಗೆ ಇನ್ನೂ ಆಳವಾದ ಗಂಭೀರ ಆತಂಕ ಸೃಷ್ಟಿಸುತ್ತದೆ. ರಾಜಕೀಯ ಶಾಸ್ತ್ರದಲ್ಲಿ ಯಾವ ಅಂಶಗಳನ್ನು ತೆಗೆದುಹಾಕಲಾಗಿದೆಯೋ, ಅವುಗಳು ನೇರಾನೇರ ಆಡಳಿತರೂಢ ಪಕ್ಷ ಮತ್ತು ಅದರ ವಿಚಾರಧಾರೆಯ ಪ್ರತಿಬಿಂಬವಾಗಿವೆ. ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡುವುದು  ಯಾವುದೇ ದೇಶಕ್ಕೆ ಎಷ್ಟು ಘಾತಕವಾಗಬಲ್ಲದು ಎಂಬುದನ್ನು ಹೇಳಲು ಶ್ರೀಲಂಕಾ ಮತ್ತು ಬೆಲ್ಜಿಯಮ್ ದೇಶಗಳ ಉದಾಹರಣೆ ನೀಡಿದ ಲೋಕತಂತ್ರ ಮತ್ತು ವೈವಿಧ್ಯದ ಬಗ್ಗೆ 10ನೆಯ ತರಗತಿಗೆ ಇದ್ದ ಅಧ್ಯಾಯವನ್ನು ತೆಗೆದುಹಾಕಲಾಗಿದೆ. ಅವುಗಳು ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳನ್ನು ಹೊರತುಪಡಿಸಿ ಆಗುವ ಬದಲಾವಣೆಗಳ ಬಗ್ಗೆ ಒತ್ತುನೀಡುವ 10ನೆಯ ಮತ್ತು 12ನೆಯ ಪಠ್ಯಪುಸ್ತಕಗಳಲ್ಲಿ ಇದ್ದ ಜನಾಂದೋಲನಗಳ ಅಧ್ಯಾಯವನ್ನು ತೆಗೆದುಹಾಕಲಾಗಿದೆ. ಗುಜರಾತಿನ ದಂಗೆಗಳ ಬಗ್ಗೆ ಇದ್ದ ಉಲ್ಲೇಖವನ್ನು  ತೆಗೆದುಹಾಕಲಾಗಿದೆ ಆದರೆ ಸಿಕ್ಖರ ಮಾರಣಹೋಮದ ಭಾಗವನ್ನು ಹಾಗೇ ಉಳಿಸಿಕೊಳ್ಳಲಾಗಿದೆ.

ಇದನ್ನು ಓದಿ ಈ ದಿನ ಸಂಪಾದಕೀಯ | ಬಿಜೆಪಿ ಸರ್ಕಾರ ಕೆಎಂಎಫ್ ಅನ್ನು ಮುಗಿಸುತ್ತಿದೆಯೇ? ವಾಸ್ತವವೇನು?

ಅದರೊಂದಿಗೆ ತುರ್ತು ಪರಿಸ್ಥಿತಿಯ ಔಪಚಾರಿಕ ವರ್ಣನೆ ಇದೆ ಆದರೆ ಆ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ನ್ಯಾಯಾಂಗ ಮತ್ತು ಮಾಧ್ಯಮದ ನಾಚಿಕೆಗೇಡಿನ ಪಾತ್ರದ ಬಗ್ಗೆ ಇದ್ದ ಭಾಗವನ್ನು ತೆಗೆದುಹಾಕಲಾಗಿದೆ. ಹಾಗಾಗಿ ಇಂದಿನ ಸರಕಾರ ಯಾವ ಪ್ರಶ್ನೆಗಳಿಂದ ಹೆದರಿಕೊಂಡಿದೆ, ಯಾವ ವಿಷಯಗಳ ಬಗ್ಗೆ ಮೌನವಾಗಿರಲು ಬಯಸುತ್ತದೆ ಎಂಬುದು ಈ ಕತ್ತರಿ ಪ್ರಯೋಗದಿಂದ ಸ್ಪಷ್ಟವಾಗುವುಗುತ್ತದೆ. ಯಾವ ವಿಷಯಗಳ ಬಗ್ಗೆ ಪಠ್ಯ ಪುಸ್ತಕಗಳ ಮೌನವಾಗಿರುತ್ತವೋ, ಆ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರು ಮರೆತುಬಿಡುತ್ತಾರೆ ಅಂತೇನಿಲ್ಲ. ಯಾವುದೇ ಪ್ರಜಾಪ್ರಭುತ್ವದಲ್ಲಿ ಜನರ ರಾಜಕೀಯ ಚಿಂತನೆ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕಗಳ ಆಧಾರದ ಮೇಲೆ ಸೃಷ್ಟಿಯಾಗುವುದಿಲ್ಲ, ವಿಶೇಷವಾಗಿ ಎಲ್ಲಿ ಪ್ರಜಾಪ್ರಭುತ್ವವನ್ನು ಮುಗಿಸುವ ಪ್ರಯತ್ನ ನಡೆದಿದೆಯೋ, ಎಲ್ಲಿ ಆಡಳಿತದಲ್ಲಿರುವ ಶಕ್ತಿಗಳು ಹೆದರಿಕೊಂಡಿರುತ್ತವೋ ಅಲ್ಲಂತು ಖಂಡಿತ ಅಲ್ಲ.

ಇಂತಹ ದೇಶಗಳಲ್ಲಿ ಆಡಳಿತ ವರ್ಗ ಸುಳ್ಳು ಹೇಳುತ್ತಿದೆ ಎಂದು ಜನರಿಗೆ ತಿಳಿದಿರುತ್ತದೆ ಹಾಗೂ ಸತ್ಯವನ್ನು ಅರಿಯಲು ತನ್ನದೇ ಆದ ರೀತಿಗಳನ್ನು ಹುಡುಕಿಕೊಳ್ಳುತ್ತಾರೆ. ಹಾಗಾಗಿಯೇ ರಾಜಕೀಯ ಶಾಸ್ತ್ರದಲ್ಲಿ ಪಠ್ಯಪುಸ್ತಕಗಳಲ್ಲಿ ಆದ ಬದಲಾವಣೆಗಳಿಂದ ಆಡಳಿತದಲ್ಲಿರುವ ಪಕ್ಷ ಮತ್ತು ವಿಚಾರಧಾರೆಗೆ ಲಾಭವಾಗುತ್ತದೆÉ ಎಂಬುದು ಸತ್ಯವಲ್ಲ. ಆದರೆ ಈ ಕಸರತ್ತಿನಿಂದ ಭಾರತೀಯ ಪ್ರಜಾಪ್ರಭುತ್ವ ತನ್ನ ಹಾಗೂ ವಿಶ್ವದ ದೃಷ್ಟಿಯಲ್ಲಿ ಒಂದೆರಡು ಮೆಟ್ಟಿಲು ಕೆಳಗೆ ಕುಸಿದಿರುವುದಂತೂ ಖಂಡಿತ.

?s=150&d=mp&r=g
ಯೋಗೇಂದ್ರ ಯಾದವ್‌
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X