ರಾಹುಲ್ ಗಾಂಧಿ ಸಂಸತ್ತಿನಿಂದ ಅನರ್ಹ | ಹತ್ತು ಗಂಭೀರ ಪ್ರಶ್ನೆಗಳು

Date:

ರಾಹುಲ್ ಗಾಂಧಿ ಈ ಭಾಷಣ ಮಾಡಿದ್ದು ಕರ್ನಾಟಕದ ಕೋಲಾರದಲ್ಲಿ ಆದರೆ ಅವರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಾಗಿದ್ದು ಗುಜರಾತಿನ ಸೂರತ್ ನಗರದಲ್ಲಿ. ಹೌದು, ಪ್ರಕರಣ ಎಲ್ಲಿ ದಾಖಲಾಗಬೇಕು ಎಂಬುದು ಪ್ರಕರಣ ದಾಖಲಿಸುವವನ ಇಚ್ಛೆ ಎಂದು ನೀವು ಹೇಳಬಹುದು. ಆದರೆ ನೆನಪಿಡಿ, ಪ್ರಕರಣ ದಾಖಲಿಸಿದವರು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ, ಅವರು ಬಿಜೆಪಿಯ ಶಾಸಕ ಪೂರ್ಣೇಶ ಮೋದಿ. ಇದರ ಹಿಂದೆ ಏನೋ ಅಡಗಿದೆ ಎಂದು ನಿಮಗೆ ಅನಿಸುತ್ತಿಲ್ಲವಾ?

“ನೀವು ಸುಖಾಸುಮ್ಮನೇ ವಿಷಯಗಳನ್ನು ದೊಡ್ಡದಾಗಿ ಮಾಡ್ತೀರಿ, ವಿಷಯ ತುಂಬಾ ಸರಳವಾಗಿದೆ. ರಾಹುಲ್ ಗಾಂಧಿ ಯಾರಿಗೋ ಅಪಮಾನ ಮಾಡಿದರು. ಅವರ ಮೇಲೆ ಕೇಸ್ ಹಾಕಲಾಯಿತು. ನ್ಯಾಯಾಧೀಶರು ರಾಹುಲ್ ಗಾಂಧಿ ತಪ್ಪಿತಸ್ಥ ಎಂದು ಘೋಷಿಸಿದರು ಹಾಗೂ 2 ವರ್ಷಗಳ ಶಿಕ್ಷೆ ವಿಧಿಸಿದರು. ಇಂತಹ ಶಿಕ್ಷೆ ಸಿಕ್ಕಾಗ ಸಂಸತ್ತಿನ ಸದಸ್ಯತ್ವ ರದ್ದಾಗುತ್ತದೆ, ಹಾಗಾಗಿ ಅನರ್ಹಗೊಳಿಸಲಾಯಿತು. ಇದರಲ್ಲಿ ಮೋದಿ ಸರಕಾರವನ್ನು ದೂರುವಂತಹ ಯಾವ ವಿಷಯವಿದೆ ? ಅದಾನಿಗೂ ಇದಕ್ಕೂ ಏನು ಸಂಬಂಧ? ನೀವು ಕಾರಣವಿಲ್ಲದೇ ಎಲ್ಲಾ ವಿಷಯಗಳಲ್ಲೂ ಪಿತೂರಿ ಹುಡುಕುತ್ತೀರಿ…..!”

- Advertisement -

ಪಾರ್ಕಿನಲ್ಲಿ ನಡೆಯುತ್ತಿದ್ದಾಗ ನನಗೆ ಒಬ್ಬ ವಯಸ್ಕರು ಈ ಪ್ರಶ್ನೆ ಹಾಕಿದರು. ಒಳ್ಳೆಯ ವ್ಯಕ್ತಿ ಅನಿಸಿದರು, ಯಾವುದೇ ಪಕ್ಷದ ಕಾರ್ಯಕರ್ತ ಅಥವಾ ಸಮರ್ಥಕರಾಗಿರಲಿಲ್ಲ. ಪ್ರಶ್ನೆಗಳೂ ಸರಳವಾಗಿದ್ದವು, ಸೂಕ್ತವೂ ಆಗಿದ್ದವು. ಕಾರಣವಿಲ್ಲದೇ ಪಿತೂರಿ ಹುಡುಕಬಾರದು ಎಂಬ ನಿಮ್ಮ ಅಭಿಪ್ರಾಯ ಒಪ್ಪಿಕೊಳ್ಳುತ್ತೇನೆ ಎಂದು ನಾನು ಹೇಳಿದೆ. ಪ್ರತಿಯೊಂದು ಸಣ್ಣಪುಟ್ಟ ವಿಷಯಗಳಲ್ಲೂ ಆಳವಾದ ಪಿತೂರಿಯ ಆರೋಪ ಮಾಡುವುದು ರಾಜಕೀಯದ ರೋಗವಾಗಿದೆ. ನಾವಿದನ್ನು ಮಾಡಬಾರದು. ಆದರೆ ರಾಹುಲ್ ಗಾಂಧಿಯ ಸಂಸತ್ತಿನಿಂದ ಅನರ್ಹಗೊಳಿಸುವ ವಿಷಯದಲ್ಲಿ ಬೊಟ್ಟು ಮಾಡಿ ತೋರಿಸಬಹುದಾದ ಹತ್ತು ವಿಚಿತ್ರ ವಿಷಯಗಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಮೊದಲ ವಿಚಿತ್ರ, ರಾಹುಲ್ ಗಾಂಧಿ ಈ ಭಾಷಣ ಮಾಡಿದ್ದು ಕರ್ನಾಟಕದ ಕೋಲಾರದಲ್ಲಿ ಆದರೆ ಅವರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಾಗಿದ್ದು ಗುಜರಾತಿನ ಸೂರತ್ ನಗರದಲ್ಲಿ. ಹೌದು, ಪ್ರಕರಣ ಎಲ್ಲಿ ದಾಖಲಾಗಬೇಕು ಎಂಬುದು ಪ್ರಕರಣ ದಾಖಲಿಸುವವನ ಇಚ್ಛೆ ಎಂದು ನೀವು ಹೇಳಬಹುದು. ಆದರೆ ನೆನಪಿಡಿ, ಪ್ರಕರಣ ದಾಖಲಿಸಿದವರು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ, ಅವರು ಬಿಜೆಪಿಯ ಶಾಸಕ ಪೂರ್ಣೇಶ ಮೋದಿ. ಇದರ ಹಿಂದೆ ಏನೋ ಅಡಗಿದೆ ಎಂದು ನಿಮಗೆ ಅನಿಸುತ್ತಿಲ್ಲವಾ?

ವಿಚಿತ್ರವೇನೆಂದರೆ, ಪ್ರಕರಣ ಶುರುವಾದ ನಂತರ ಆಗಿನ ನ್ಯಾಯಾಧೀಶರಾಗಿದ್ದ ಕಪಾಡಿಯಾ, ಎಲ್ಲಾ ವಿಚಾರಣೆಗಳ ಸಂದರ್ಭಗಳಲ್ಲಿ ರಾಹುಲ್ ಗಾಂಧಿ ಹಾಜರಿರಬೇಕು ಎಂಬ ಆದೇಶ ನೀಡಲು ನಿರಾಕರಿಸಿದಾಗ, ದೂರು ದಾಖಲಿಸಿದವರೇ ಹೈಕೋರ್ಟಿಗೆ ಹೋಗಿ, ತಮ್ಮ ಪ್ರಕರಣ ನಿಲ್ಲಿಸಿದರು, ಸಾಮಾನ್ಯವಾಗಿ ಆರೋಪಿ ತನ್ನ ವಿರುದ್ಧದ ಪ್ರಕರಣ ನಿಲ್ಲಿಸುವ ಪ್ರಯತ್ನ ಮಾಡುತ್ತಾಳೆ/ನೆ, ದೂರು ದಾಖಲಿಸಿದ ವ್ಯಕ್ತಿ ಈ ರೀತಿ ಮಾಡುವುದಿಲ್ಲ. ಇದರ ಹಿಂದೆ ನ್ಯಾಯಾಧೀಶರ ವರ್ಗಾವಣೆಗೆ ಕಾಯುವ ಇರಾದೆ ಇದ್ದಿರಬಹುದಲ್ಲವೇ?

ಮೂರನೆಯ ವಿಚಿತ್ರ, ಅದಾನಿ ವಿಷಯದಲ್ಲಿ ರಾಹುಲ್ ಗಾಂಧಿಯ ಭಾಷಣ ಮಾಡಿದ ಒಂದು ವಾರದೊಳಗೇ ಅಷ್ಟು ತುರಾತುರಿಯಲ್ಲಿ ಬಿಜೆಪಿಯ ಶಾಸಕರು ವರ್ಷಗಳಿಂದ ತಣ್ಣಗೇ ಕುಳಿತಿದ್ದ ಪ್ರಕರಣವನ್ನು ಮತ್ತೊಮ್ಮೆ ಶುರು ಮಾಡುವ ಪ್ರಕ್ರಿಯೆ ಆರಂಭಿಸಿದರು. ಇದರ ಹಿಂದೆ ಯಾವುದೇ ರಾಜಕೀಯ ನಡೆ ಕಾಣುತ್ತಿಲ್ಲವೇ?

ನಾಲ್ಕನೆಯ ವಿಚಿತ್ರ ಕಾಕತಾಳೀಯ ನೋಡಿ, ದೂರುದಾರ ತನ್ನ ಪ್ರಕರಣ ನಿಲ್ಲಿಸಲು ಬಯಸಿದಾಗ ಹೈಕೋರ್ಟ್ ನಿಲ್ಲಿಸುತ್ತೆ, ಮತ್ತೇ ಶುರು ಮಾಡಲು ಬಯಸಿದಾಗ ಹೈಕೋರ್ಟ್ ಶುರು ಮಾಡುತ್ತೆ. ಸಾಮಾನ್ಯ ಪ್ರಕರಣಗಳಲ್ಲಿಯೂ ಹೈಕೋರ್ಟ್ ಇಷ್ಟು ಉದಾರವಾಗಿರುತ್ತದೆಯೇ?

ಐದನೆಯ ವಿಚಿತ್ರ, ನ್ಯಾಯಾಧೀಶ ಹನಾಮುಖಭಾಯಿ ವರ್ಮಗೆ ಸಂಬಂಧಿಸಿದೆ. ಮತ್ತೆ ಪ್ರಕರಣ ಶುರುವಾದಾಗ ನ್ಯಾಯಾಧೀಶರು ಬದಲಾಗುತ್ತಾರೆ. ಹಾಗೂ ಕಳೆದ ಆರು ತಿಂಗಳಲ್ಲಿ ವರ್ಮಾ ಸಾಹೇಬರಿಗೆ ಒಂದಲ್ಲ ಎರಡು ಬಡ್ತಿ ಸಿಕ್ಕಿವೆ. ನಿಮಗೆ ಇದರಲ್ಲಿ ಅನುಮಾನಾಸ್ಪದ ಕಾಣಿಸುತ್ತಿಲ್ಲವೇ?

ಇದನ್ನು ಓದಿದ್ದೀರಾ? ರಾಜ್ಯ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಇಂದು ಪ್ರಕಟ

ಈಗ ಆರನೆಯ ವಿಚಿತ್ರ ನೋಡಿ. ಪ್ರಕರಣ ಎರಡನೆಯ ಸಲು ಶುರುವಾದ ಒಂದು ತಿಂಗಳೊಳಗೆ ವಿಚಾರಣೆ ಪೂರ್ಣಗೊಳ್ಳುತ್ತದೆ ಹಾಗೂ ತೀರ್ಪನ್ನೂ ಪ್ರಕಟಿಸಲಾಗುತ್ತದೆ. ಈ ದೇಶದ ನ್ಯಾಯಾಲಯಗಳು ಇಷ್ಟು ತ್ವರಿತವಾಗಿ ಬೇರೆ ಯಾವುದೇ ಪ್ರಕರಣಗಳಲ್ಲಿ ವಿಚಾರಣೆ ನಡೆಸುತ್ತವೆಯೇ? ಅಥವಾ ಯಾವುದೋ ಒಂದು ಡೆಡ್‍ಲೈನ್‍ಕಿಂತ ಮುನ್ನ ತೀರ್ಪು ಪ್ರಕಟಿಸುವ ತುರಾತರಿಯಲ್ಲಿದ್ದರೆ?

ಆಯ್ತು, ತೀರ್ಪು ಬೇಗನೇ ಬಂತು ಆದರೆ ಬಂದ ತೀರ್ಪಿಗೆ ಸಂಬಂಧಿಸಿದ ಏಳನೆಯ ವಿಚಿತ್ರ ನೋಡಿ. ರಾಹುಲ್ ಗಾಂಧಿ ಕೆಲವು ಕಳ್ಳರನ್ನು ಹೆಸರಿಸಿ, ಏನು ಎಲ್ಲಾ ಕಳ್ಳರ ಹೆಸರು ಮೋದಿ ಏಕೆ ಎಂದು ಕೇಳಿದ್ದರು. ಆದರೆ ಯಾರ ಹೆಸರು ಮೋದಿ ಎಂತಿದೆಯೋ, ಅವರು ಕಳ್ಳರಾಗಿರುವುದು ಏಕೆ ಎಂದು ಹೇಳಿದ್ದಿಲ್ಲ. ಹಾಗೂ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದ್ದೇನೆಂದರೆ, ಯಾವುದೇ ವರ್ಗ ಅಥವಾ ಸಮುದಾಯದ ಅಪಮಾನ ಆಗಿದೆ ಎಂದ ಮಾತ್ರಕ್ಕೆ ನೀವು ನಿಮ್ಮ ಮಾನನಷ್ಟ ಆಗಿದೆ ಎಂದು ಪ್ರಕರಣ ದಾಖಲಿಸುವಂತಿಲ್ಲ ಎಂದು, ಅದರಲ್ಲಿ ನೇರಾನೇರವಾಗಿ ನಿಮ್ಮ ಕಡೆ ಸೂಚಿಸಿಲ್ಲ ಎಂದರೆ ಪ್ರಕರಣ ದಾಖಲಿಸುವಂತಿಲ್ಲ ಎಂದು. ರಾಹುಲ್ ಗಾಂಧಿಯು ಪೂರ್ಣೇಶ್ ಮೋದಿಯ ಹೆಸರನ್ನೂ ಹೇಳಿಲ್ಲ ಹಾಗೂ ಅವರ ಕಡೆ ಬೊಟ್ಟು ಮಾಡಿ ತೋರಿಸಲೂ ಇಲ್ಲ. ಇಂತಹದ್ದರಲ್ಲಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನವನ್ನು ಕಡೆಗಣಿಸುತ್ತ ಅವರನ್ನು ತಪ್ಪಿತಸ್ಥ ಎಂದು ಹೇಗೆ ತೀರ್ಮಾನಿಸಲಾಗುತ್ತದೆ?

ಎಂಟನೆಯ ವಿಚಿತ್ರ ಕಾಕತಾಳೀಯ ಇದರ ಶಿಕ್ಷೆಯ ಅವಧಿಗೆ ಸಂಬಂಧಿಸದ್ದು. ಮಾನನಷ್ಟ ಮೊಕದ್ದಮೆಯಲ್ಲಿ ಯಾರೊಬ್ಬ ದೋಷಿಗೂ 2 ವರ್ಷದ ಸೆರೆವಾಸ ಸಿಕ್ಕಿದ್ದರ ಬಗ್ಗೆ ದೇಶದ ಯಾವ ದೊಡ್ಡ ವಕೀಲರೂ ಒಂದು ಉದಾಹರಣೆ ನೀಡಲು ಸಾಧ್ಯವಾಗಿಲ್ಲ. ಇಂತಹ ಹಿಂದೆಂದೂ ಕಾಣದಂತಹ ಗರಿಷ್ಠ ಸಂಭ್ಯಾವ್ಯ ಶಿಕ್ಷೆ ರಾಹುಲ್ ಗಾಂಧಿಗೆ ಏಕೆ ವಿಧಿಸಲಾಯಿತು? 2 ವರ್ಷದ ಶಿಕ್ಷೆಯಿಲ್ಲದೇ ಯಾರನ್ನೂ ಸಂಸತ್ತಿನಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ ಎಂಬುದೂ ಕೇವಲ ಕಾಕತಾಳೀಯವೇ?

ಇದನ್ನು ಓದಿದ್ದೀರಾ? ನಮ್ಮ ನಿಜವಾದ ಹೋರಾಟ ಮೋದಿ ವಿರುದ್ಧ, ಸಾವರ್ಕರ್‌ ಅಲ್ಲ: ಶರದ್‌ ಪವಾರ್

ಒಂಬತ್ತನೆಯ ಕಾಕತಾಳೀಯ, ಸೂರತ್‍ನ ನ್ಯಾಯಾಧೀಶ ತೀರ್ಪು ನೀಡಿದ 24 ಗಂಟೆಗಳಿಗೂ ಮುಂಚೆ ಲೋಕಸಭೆಯಲ್ಲಿ ರಾಹುಲ್ ಗಾಂಧಿಯನ್ನು ಅನರ್ಹ ಎಂದು ಘೋಷಿಸುವ ಅಧಿಸೂಚನೆಯನ್ನು ಜಾರಿಗೊಳಿಸಲಾಯಿತು. ಇಲ್ಲಿಯವರೆಗೆ ಆದ ಇಂತಹ ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳಲು ಕನಿಷ್ಠ ಒಂದು ತಿಂಗಳು ಬೇಕಾಗಿದೆ. ಈ ಬಾರಿ ಮಿಂಚಿನ ವೇಗ ಏಕೆ? ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹೋಗಿ ಈ ತೀರ್ಪಿನ ವಿರುದ್ಧ ಸ್ಟೇ ತೆಗೆದುಕೊಂಡು ಬರಬಾರದು ಎಂಬ ಕಾರಣಕ್ಕೆ ಈ ತುರಾತುರಿಯೇ? ಅಂದರೆ ಯಾರೋ ಎಲ್ಲೋ ಮುಂಚೆಯಿಂದಲೇ ಈ ಯೋಜನೆ ಮಾಡಿಟ್ಟಿದ್ದರೆ?

10ನೆಯ ವಿಚಿತ್ರ ಸಂವಿಧಾನಕ್ಕೆ ಸಂಬಂಧಿಸಿದೆ, ಏಕೆಂದರೆ ಸಂವಿಧಾನದ 103ನೆಯ ಅನುಚ್ಛೇದದ ಅನುಗುಣವಾಗಿ ಯಾವುದೇ ಸಂಸದರನ್ನು ಅಯೋಗ್ಯ ಎಂದು ಘೋಷಿಸುವ ಮುನ್ನ ರಾಷ್ಟ್ರಪತಿಯ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಈ ವಿಷಯದಲ್ಲಿ ರಾಷ್ಟ್ರಪತಿಯ ಅಭಿಪ್ರಾಯ ಏಕೆ ತೆಗೆದುಕೊಳ್ಳಲಿಲ್ಲ? ರಾಷ್ಟ್ರಪತಿ ತಮ್ಮ ಅಭಿಪ್ರಾಯ ತೆಗೆದುಕೊಳ್ಳಲು ಚುನಾವಣಾ ಆಯೋಗದ ಅಭಿಪ್ರಾಯ ತೆಗೆದುಕೊಳ್ಳಬೇಕಾಗುತ್ತಿತ್ತು ಹಾಗೂ ಅದರಿಂದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸುವಲ್ಲಿ ತಡವಾಗುತ್ತಿತ್ತು ಎಂಬ ಕಾರಣಕ್ಕೆ ರಾಷ್ಟ್ರಪತಿಯ ಅನುಮತಿ ತೆಗೆದುಕೊಳ್ಳಲು ಮುಂದಾಗಲಿಲ್ಲವೇ?

ನನ್ನ ಎಲ್ಲ ಪ್ರಶ್ನೆಗಳನ್ನು ಕೇಳಿಸಿಕೊಂಡು ಆ ಸಾಹೇಬರು ಹ್ಮೂ ಅಂದು ಸುಮ್ಮನಾದರು. ಈಗ ನೀವೇ ಹೇಳಿ, ಇದು ಒಂದು ಸಾಮಾನ್ಯ ನ್ಯಾಯದ ಪ್ರಕ್ರಿಯೆಯೇ? ಅಥವಾ ಯಾರೋ ಇನ್ನುಮುಂದೆ ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಮಾತನಾಡಲು ಬಿಡಬಾರದು ಎಂದು ತೀರ್ಮಾನಿಸಿದ್ದರೆ? ಅದಾನಿ ವಿರುದ್ಧ ಅವರು ಮಾತನಾಡಿದ್ದಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೇ? ತೀರ್ಮಾನ ಓದುಗರಿಗೆ ಬಿಟ್ಟಿದ್ದು

?s=150&d=mp&r=g
ಯೋಗೇಂದ್ರ ಯಾದವ್‌
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಸತ್ಯಶುದ್ಧವಿಲ್ಲದುದು ಕಾಯಕವಲ್ಲ

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;ಸತ್ಯಶುದ್ಧವಿಲ್ಲದುದು ಕಾಯಕವಲ್ಲ;ಆಸೆಯೆಂಬುದು ಭವದ ಬೀಜ;ನಿರಾಸೆಯೆಂಬುದು ನಿತ್ಯಮುಕ್ತಿ.ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ ವಚನ...

ವಚನ ಕಲ್ಯಾಣ | ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ?

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ? ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ? ಮಾಡ ಬನ್ನಿ...

ವಚನ ಕಲ್ಯಾಣ | ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ?

ಒಬ್ಬರ ಮನವ ನೋಯಿಸಿ, ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ?...

ಧರೆಯ ಗರ್ಭದಿಂದ ಸಂವಿಧಾನದವರೆಗೆ: ಅಸ್ಪೃಶ್ಯತೆಯ ಬೇರು ಸವರಲು ಬಸವ-ಭೀಮ ಮಾರ್ಗ

 ‘ಜೈ ಭೀಮ್’ ಎಂಬುದು ಕೇವಲ ಒಂದು ಘೋಷಣೆಯಲ್ಲ, ಅದು ನಮ್ಮೊಳಗಿನ ಕ್ರಾಂತಿಯ...